TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ರಸ್ತೆ ಗುಂಡಿಗೆ ಬಲಿಯಾದ ವೃದ್ಧ - ಮೂವರು ಅಧಿಕಾರಿಗಳು ಅರೆಸ್ಟ್
ದೇಶದಲ್ಲಿನ ಹಲವಾರು ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಳ ಪರಿಸ್ಥಿತಿ ಕಳಪೆ ಮಟ್ಟಕೆ ಇಳಿಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿ ಕೂಡಾ ಕಳಪೆ ಗುಣಮಟ್ಟದ ರಸ್ತೆಗಳು ಇವೆ. ಈ ಕಳಪೆ ಮಟ್ಟದಲ್ಲಿ ತಯಾರಾದ ರಸ್ತೆಯ ಮೇಲೆ ಪ್ರಯಾಣಿಸುತ್ತಿದ್ದಾಗ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ಇಂತಹ ಘಟನೆಯೆ ಪುಣೆ ನಗರದ ಸಮೀಪದಲ್ಲಿ ಕೂಡಾ ಸಂಭವಿಸಿದ್ದು, ಸುಮಾರು 60ವರ್ಷ ದಾಟಿದ ವ್ಯಾಪಾರಿಯೊಬ್ಬರು ಅಲ್ಲಿನ ಕಳಪೆ ರಸ್ತೆಯಲ್ಲಿ ವಾಹನ ಚಲಾಯಿಸಿ ಪ್ರಾಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಇದೀಗ ಆತನ ಕುಟುಂದವರು ಕಣ್ಣೀರು ಹಾಕುತ್ತಿದ್ದಾರೆ.
ರಶೀದ್ ರುಸ್ತಂ ಇರಾನಿ ಎಂಬ ಹಿರಿಯ ನಾಗರೀಕರೊಬ್ಬರು, ಪುಣೆಯ ತಡಿಗುಟ್ಟ ಚೌಕ್‍ನಲ್ಲಿನ ತಮ್ಮ ಕೇಫ್‍ನಿಂದ ಮನೆಗೆ ತೆರಳುವ ಸಮಯದಲ್ಲಿ, ಕಳಪೆ ಗುಣಮಟ್ಟದ ರಸ್ತೆಯ ಮೇಲೆ ಪ್ರಯಾಣಿಸುವಾಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು, ಸಾವನಪ್ಪಿದ್ದಾರೆ.
ಹೋಂಡಾ ಆಕ್ಟೀವಾ ಮಾಲೀಕರಾದ ಇರಾನಿಯವರು ಸಂಜೆ ಸುಮಾರು 6.30ರ ವೇಳೆಯಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದಾಗ, ನಿಯಂತ್ರಣ ತಪ್ಪಿ ಅವರು ಪಕ್ಕದಲ್ಲೆ ಇದ್ದ ಗುಂಡಿಯಲ್ಲಿ ಬಿದ್ದಿದ್ದಾರೆ. ಹೆಲ್ಮೆಟ್ ಹಾಕದೆಯೆ ವಾಹನ ಚಲಾಯಿಸುತ್ತಿದ್ದ ಅವರು ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರಣ ಅವರ ತೆಲೆಗೆ ಬಲವಾದ ಪೆಟ್ಟಿನಿಂದಾಗಿ ಅಲ್ಲಿಯೆ ಸಾವನಪ್ಪಿದ್ದಾರೆ.
ಒಬ್ಬ ವಯಸ್ಕರ ಸಾವಿಗೆ ಯಮನಾದ ಆ ಕಳಪೆ ಗುಣಮಟ್ಟದ ರಸ್ತೆಯನ್ನು ಸರಿ ಮಾಡಲು ವಿಫಲರಾದ ಪುಣೆ ಪುರಸಭೆಯ ನೀರಿನ ವಿತರಣಾ ಇಲಾಖೆಯ ಮೂವರು ವ್ಯಕ್ತಿಗಳು ಮತ್ತು ಕಿರಿಯ ಎಂಜಿನಿಯರ್ ಅವರನ್ನು ಇದೀಗ ಬಂಧಿಸಲಾಗಿದೆ.
ಈ ಅಪಘಾತವು ನಡಿಯುವ ಮುನ್ನವೇ ಹಲವಾರು ಬಾರಿ ಆ ಕಾಂಟ್ರಾಕ್ಟರ್‍ಗೆ ಸ್ಥಳೀಯ ಪೊಲೀಸರು ರಸ್ತೆಯನ್ನು ಸರಿ ಮಾಡಲು ಹೇಳಲಾಗಿದ್ದು, ಎಷ್ಟು ಬಾರಿ ಎಚ್ಚರಿಕೆಗಳನ್ನು ನೀಡಿದ್ದರು ಕಾಂಟ್ರ್ಯಾಕ್ಟರ್ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಅಲ್ಲಿನ ಗುಂಡಿಗಳನ್ನು ರಿಪೇರಿ ಮಾಡಲು ರಾತ್ರಿ 10 ರಿಂದ ಮುಂಜಾವು 3 ಗಂಟೆಯೆ ವರೆಗು ಕಾರ್ಯ ನಡೆಯುತಿತ್ತು. ಸ್ಥಳೀಯರು ಮತ್ತು ಆ ರಸ್ತೆಯಲ್ಲಿ ಪ್ರಯಾಣಿಸುವವರು ಆ ಎರಡು ಗುಂಡಿಗಳಿಂದ ಆಗುವ ಅಪಘಾತವನ್ನು ತಪ್ಪಿಸಲು, ಬ್ಯಾರಿಕೇಡ್ ಮತ್ತು ಪ್ರತಿಫಲಿತ ಜಾಕೆಟ್ (ರಿಫ್ಲೆಕ್ಟಿವ್ ಜ್ಯಾಕೆಟ್) ಅನ್ನು ಇಡಲು ಎಚ್ಚರಿಸಿದರು.
ಆದರೆ ರಸ್ತೆಯಲ್ಲಿನ ಎರಡು ಗುಂಡಿಗಳಲ್ಲಿ ಒಂದಕ್ಕೆ ಮಾತ್ರ ಅಲ್ಲಿನ ಕಾರ್ಮಿಕರು ಚಿಹ್ನೆ ಫಲಕವನ್ನು ಇಟ್ಟು, ಇರಾನಿಯವರ ಸಾವಿಗೆ ಕಾರಣವಾದ ಗುಂಡಿಗೆ ಮಾತ್ರ ಕೇವಲ ಮರದ ರೆಂಬೆಯನ್ನು ನಿಲ್ಲಿಸಿದ್ದರು.
ಮುಂಧ್ವಾ ಪೊಲೀಸ್ ಸ್ಟೇಷನ್‍ನ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಪಂಡಿತ್ ರೆಜಿತ್‍ವಾಡ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಅಮಿತ್ ವಾಲ್ಕೆ ಅವರು ಈ ಕೇಸ್‍ನ ಬಗ್ಗೆ ತನಿಖೆಯನ್ನು ನಡೆಸುತಿದ್ದು, ಕಂಟ್ರ್ಯಾಕ್ಟರ್ ಶಾಹುರಾವ್, ನೀರು ಸರಬರಾಜು ಇಲಾಖೆಯ ಜೂನಿಯರ್ ಇಂಜಿನಿಯರ್ ಇಂದ್ರಜಿತ್ ದೇಷ್‍ಮುಕ್ ಮತ್ತು ಸೂಪರ್‍ವೈಸರ್ ಮೋಹನ್ ನರ್‍ಶಿಂಘೆ ಅವರನ್ನು ಕಳೆದ ಶುಕ್ರವಾರ ಐಪಿಸಿ ಸೆಕ್ಷನ್ 306 (ಎ)ನ ಆಧಾರದ ಮೇಲೆ ಬಂಧಿಸಲಾಗಿದೆ.
ನಾಗರೀಕರು ಮತ್ತು ಪೊಲೀಸರು ಹಲವಾರು ಬಾರಿ ಎಚ್ಚರಿಕೆಗಳನ್ನು ನೀಡಿದರು, ಅಧಿಕಾರಿಗಳನ್ನು ಇದನ್ನು ಲೆಕ್ಕಿಸದೇ ಹೋದ ಕಾರಣ ಒಂದು ಜೀವ ಬಲಿಯಾಗಿದೆ. ವಯಸ್ಕರಾದ ಇರಾನಿಯವರು ಒಂದು ಕೇಫ್ ಅನ್ನು ನಡೆಸಿ ತಮ್ಮ ಕುಟುಂಬವನ್ನು ಸಾಗಿಸುತ್ತಿದ್ದರು. ಇದೀಗ ಇರಾನಿಯವರನ್ನು ಕಳೆದುಕೊಂಡ ತನ್ನ ಕುಟುಂಬವು ಶೋಕದಲ್ಲಿ ಮುಳುಗಿದೆ.
Source: TimesOfIndia