ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

Written By: Rahul TS

ದೇಶಿಯ ಮಾರುಕಟ್ಟೆಯಲ್ಲಿ ದಶಕಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ಹೋಂಡಾ ಸಂಸ್ಥೆಯು WR-V ಕಾರಿನ ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದು, ಅಂತ್ಯಂತ ಕಡಿಮೆ ಅವಧಿಯಲ್ಲಿ ಹೊಸ ದಾಖಲೆ ಮಾಡಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಹೋಂಡಾ ಸಂಸ್ಥೆಯ WR-V ಕ್ರಾಸ್ ಓವರ್ ಕಾರು ಬಿಡುಗಡೆಗೊಂಡ ಒಂದು ವರ್ಷದಲ್ಲಿ ಸುಮಾರು 50,000ಕ್ಕಿಂತ ಹೆಚ್ಚು ಕಾರುಗಳು ಮಾರಾಟಗೊಂಡು ದಾಖಲೆ ಸೃಷ್ಠಿಸಿದ್ದು, ಈ ಮೂಲಕ ಹೋಂಡಾ ಸಂಸ್ಥೆಯ ಕಾರು ಮಾರಾಟ ಪ್ರಮಾಣದಲ್ಲಿ ಶೇಕಡಾ 28ರಷ್ಟು ಮಾರಾಟ ಪಾಲನ್ನು ತನ್ನದಾಗಿಸಿಕೊಂಡಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಹೊಸ ಮಾದರಿಯ ವೈಶಿಷ್ಟ್ಯತೆಗಳೊಂದಿಗೆ WR-V ಕಾರುಗಳು ಎಸ್ ಮತ್ತು ವಿಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾ ವಿಎಕ್ಸ್ ಮಾದರಿಗಳು ಶೇಕಡಾ 80ರಷ್ಟು ಮಾರಾಟಗೊಂಡಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಟಾಪ್ ಎಂಡ್ ವಿಎಕ್ಸ್ ಮಾದರಿಯು ವಿನೂತನ ವೈಶಿಷ್ಟ್ಯತೆಗಳನ್ನು ಹೊಂದಿರುವುದಲ್ಲದೇ, ಸನ್‍ರೂಫ್, 1.5 ಜಿಬಿ ಇಂಟರ್ನಲ್ ಮೆಮೊರಿ ಹೊಂದಿರುವ ಇನ್ಫೋಟೈನ್ಮೆಂಟ್ ಸಿಸ್ಟಂ, ನ್ಯಾವಿಗೇಷನ್, ರಿಯರ್ ರೀಕ್ಲೈನಿಂಗ್ ಸೀಟ್ಸ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ ಸಹ ಪಡೆದುಕೊಂಡಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಹೋಂಡಾ ಸಂಸ್ಥೆಯ WR-V ಕಾರುಗಳು ಒಟ್ಟಾರೆ ಶೇ.58ರಷ್ಟು ಡೀಸೆಲ್ ಆವೃತ್ತಿ ಮಾರಾಟಗೊಂಡಲ್ಲಿ ಇನ್ನುಳಿದ ಶೇಕಡಾ 42ರಷ್ಟು ಪೆಟ್ರೋಲ್ ಮಾದರಿಗಳು ಮಾರಾಟಗೊಂಡಿದ್ದು, ಗ್ರಾಹಕರ ಆಯ್ಕೆಯಲ್ಲಿ ಡಿಸೇಲ್ ಕಾರುಗಳು ಹೆಚ್ಚಿನ ಮನ್ನಣೆ ಸಿಕ್ಕಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಇದಲ್ಲದೆ ಹೋಂಡಾ ಸಂಸ್ಥೆಯ WR-V ಕಾರುಗಳು ಟಿಯರ್-1 ನಗರಗಳಲ್ಲಿ ಶೇಕಡಾ 38ರಷ್ಟು, ಟಿಯರ್-2 ನಗರಗಳಲ್ಲಿ ಶೇಕಡಾ 30 ರಷ್ಟು, ಮತ್ತು ಟಿಯರ್-3 ನಗರಗಳಲ್ಲಿ ಶೇಕಡಾ 32 ರಷ್ಟು ಮಾರಾಟಗೊಂಡಿದೆ ಎಂದು ಹೇಳಲಾಗಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಇನ್ನು ಪ್ರಾಂತ್ಯಗಳ ಲೆಕ್ಕಾಚಾರದಲ್ಲಿ ಉತ್ತರ ಭಾರತದಲ್ಲಿ ಶೇಕಡಾ 30ರಷ್ಟು, ಪಶ್ಚಿಮ ಭಾಗದಲ್ಲಿ ಶೇಕಡಾ 28ರಷ್ಟು, ದಕ್ಷಿಣ ಭಾಗದಲ್ಲಿ ಶೇಕಡಾ 27ರಷ್ಟು ಮತ್ತು ಪೂರ್ವದಲ್ಲಿ ಶೇಕಡಾ 15ರಷ್ಟು WR-V ಕಾರುಗಳು ಮಾರಾಟಗೊಂಡಿವೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಇದರ ಎಂಜಿನ್ ಬಗ್ಗೆ ಹೇಳುವುದಾದರೆೇ, 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇವುಗಳು 90ಬಿಹೆಚ್‍ಪಿ ಮತ್ತು 110ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಇನ್ನು 1.5 ಲೀಟರ್ ಡಿಟೆಕ್ ಎಂಜಿನ್‌ಗಳು 100-ಬಿಹೆಚ್‍ಪಿ ಮತ್ತು 200-ಎನ್ಎಂ ಟಾರ್ಕ್ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪಟ್ರೋಲ್ ಎಂಜಿನ್ ಅನ್ನು 5 - ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಟ್ರಾನ್ಸ್ ಮಿಷನ್‍ನೊಂದಿಗೆ ಜೋಡಿಸಲಾಗಿದೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಈ ಬಗ್ಗೆ ಮಾತನಾಡಿರುವ ಹೋಂಡಾ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಒ ಯೋಇಚಿರೊ ಉಎನೊ ಅವರು, WR-V ಕಾರಿನಲ್ಲಿರುವ ವಿಶೇಷ ಗುಣಲಕ್ಷಣಗಳೇ ಕಾರಿನ ಮಾರಾಟಕ್ಕೆ ಸಹಕಾರಿಯಾಗಿದ್ದು, ಕೇವಲ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 50 ಸಾವಿರ ಕಾರುಗಳು ಮಾರಾಟವಾಗಿರುವುದು ನಿಜಕ್ಕೂ ಖುಷಿ ವಿಚಾರವೆಂದಿದ್ದಾರೆ.

ಮಾರಾಟದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಹೋಂಡಾ WR-V

ಇದಲ್ಲದೇ ಪ್ರಸ್ತುತ ಹೋಂಡಾ ಕಾರುಗಳಲ್ಲೇ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿರುವ WR-V ಕಾರುಗಳು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋರ್ಡ್ ಫ್ರೀ ಸ್ಟೈಲ್.

2. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ.!

3. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

4. ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

5. ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು..

Read more on honda
English summary
WR-V Records Highest Sales Figures For Honda — Accounts For 28 Percent.
Story first published: Wednesday, March 28, 2018, 16:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark