ಟಂ ಟಂ ರಿಕ್ಷಾಗೆ ಗುದ್ದಿದ ಹೊಸ ಹ್ಯುಂಡೈ ಕ್ರೇಟಾ ಪೀಸ್ ಪೀಸ್....

Written By:

ರಸ್ತೆ ಬದಿ ನಿಂತಿದ್ದ ಟಂ ಟಂ ರಿಕ್ಷಾಗೆ ಹೊಸ ಹ್ಯುಂಡೈ ಕ್ರೇಟಾಯೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕ್ರೇಟಾ ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.

ಟಂ ಟಂ ರಿಕ್ಷಾಗೆ ಗುದ್ದಿದ ಹೊಸ ಹ್ಯುಂಡೈ ಕ್ರೇಟಾ ಪೀಸ್ ಪೀಸ್....

ಕೇರಳದ ಕೋಳಿಕೋಡ್‌ನಲ್ಲಿ ಈ ಘಟನೆ ನಡೆದಿದ್ದು, ಎರ್ನಾಕುಲಂ ನೋಂದಣಿಯ ಹ್ಯುಂಡೈ ಕ್ರೇಟಾ ಕಾರು ಟಂ ಟಂ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಹಿನ್ನೆಲೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಬಾಲಕನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Recommended Video - Watch Now!
New Maruti Swift Launch: Price; Mileage; Specifications; Features; Changes
ಟಂ ಟಂ ರಿಕ್ಷಾಗೆ ಗುದ್ದಿದ ಹೊಸ ಹ್ಯುಂಡೈ ಕ್ರೇಟಾ ಪೀಸ್ ಪೀಸ್....

ಇನ್ನು ಘಟನೆಯ ದೃಶ್ಯಗಳು ಹೋಟೆಲ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಿಯಂತ್ರಣ ತಪ್ಪಿದ ಕ್ರೇಟಾ ಕಾರು ಚಾಲಕ ರಿಕ್ಷಾ ನಿಲ್ದಾಣದತ್ತ ನುಗ್ಗಿಬಂದಿದ್ದಾನೆ. ಟಂ ಟಂ ರಿಕ್ಷಾಗೆ ಡಿಕ್ಕಿ ಹೊಡೆದ ನಂತರ ರಿಕ್ಷಾ ನಿಲ್ದಾಣ ಬಳಿಯ ಮೋರಿಗೂ ಗುದ್ದಿದ್ದಾನೆ.

ಟಂ ಟಂ ರಿಕ್ಷಾಗೆ ಗುದ್ದಿದ ಹೊಸ ಹ್ಯುಂಡೈ ಕ್ರೇಟಾ ಪೀಸ್ ಪೀಸ್....

ಪರಿಣಾಮ ಕಾರಿನ ಬ್ಯಾನೆಟ್ ಕಿತ್ತು ಹೊಗಿದ್ದು, ಟಂ ಟಂ ರಿಕ್ಷಾದ ಹಿಂಭಾಗವು ಕೂಡಾ ಭಾಗಶಃ ಜಖಂಗೊಂಡಿದೆ. ಇದೇ ವೇಳೆ ಟಂ ಟಂ ರಿಕ್ಷಾ ಹತ್ತಲು ಬಂದಿದ್ದ ಬಾಲಕ ಮತ್ತು ಓರ್ವ ವ್ಯಕ್ತಿ ಸಿನಿಮಿಯ ರೀತಿಯಲ್ಲಿ ಪಾರಾಗಿದ್ದಾರೆ.

ಟಂ ಟಂ ರಿಕ್ಷಾಗೆ ಗುದ್ದಿದ ಹೊಸ ಹ್ಯುಂಡೈ ಕ್ರೇಟಾ ಪೀಸ್ ಪೀಸ್....

ಇನ್ನು ಕಾರು ಮಾಲೀಕ ಕೂಡಾ ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಟಂ ಟಂ ರಿಕ್ಷಾದಲ್ಲಿದ್ದವರ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲವಾದರೂ ಘಟನಾ ಸ್ಥಳದಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಟಂ ಟಂ ರಿಕ್ಷಾಗೆ ಗುದ್ದಿದ ಹೊಸ ಹ್ಯುಂಡೈ ಕ್ರೇಟಾ ಪೀಸ್ ಪೀಸ್....

ಇನ್ನು ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಕಾರು ಮಾಲೀಕನ ವಿರುದ್ಧವೇ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದು, ಘಟನೆಗೆ ನಿಖರ ಕಾರಣ ಏನು ಎನ್ನುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಟಂ ಟಂ ರಿಕ್ಷಾಗೆ ಗುದ್ದಿದ ಹೊಸ ಹ್ಯುಂಡೈ ಕ್ರೇಟಾ ಪೀಸ್ ಪೀಸ್....

ಕೆಲ ಮಾಹಿತಿಗಳ ಪ್ರಕಾರ ಘಟನೆಯಲ್ಲಿ ಸಂಪೂರ್ಣ ಜಖಂಗೊಂಡ ಕ್ರೇಟಾ ಕಾರನ್ನು ಕಳೆದ ವಾರವಷ್ಟೇ ಖರೀದಿ ಮಾಡಲಾಗಿತ್ತು ಎನ್ನಲಾಗಿದ್ದು, ಕಾರಿನಲ್ಲಿರುವ ತಾಂತ್ರಿಕ ಅಂಶಗಳು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಈ ಘಟನೆ ನಡೆದಿರಬಹುದು ಎನ್ನಲಾಗುತ್ತಿದೆ.

Read more on accident ಅಪಘಾತ
English summary
hyundai creta hits auto rikshaw in kerala.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark