ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಹ್ಯುಂಡೈ ಸಂಸ್ಥೆಯು ಕೊನೆಗು ತಮ್ಮ ಬಹುನಿರೀಕ್ಷಿತ ಹೊಸ ತಲೆಮಾರಿನ ಸ್ಯಾಂಟ್ರೋ ಕಾರನ್ನು ಇದೇ ತಿಂಗಳ 23ರಂದು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದ್ದು, ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಕಾರು ಸರಣಿಯಲ್ಲಿ ಮತ್ತೆ ಸದ್ದು ಮಾಡುವ ತವಕದಲ್ಲಿದೆ. ಮಾಹಿತಿಗಳ ಪ್ರಕಾರ ಹೊಸ ಸ್ಯಾಂಟ್ರೋ ಕಾರು ಎಕ್ಸ್ ಶೋರಂ ಪ್ರಕಾರ ತರೂ. 3.87 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಟಾಲ್ ಬಾಯ್ ವಿನ್ಯಾಸದಲ್ಲಿ ಮಾರುಕಟ್ಟೆಗೆ ರೀ ಎಂಟ್ರಿ ನೀಡಲಿರುವ ಹ್ಯುಂಡೈ ಸ್ಯಾಂಟ್ರೋ ಕಾರು ಇದೀಗ ಡೀಲರ್‍‍ಗಳ ಯಾರ್ಡ್ ಅನ್ನು ತಲುಪುತ್ತಿದೆ. ಹೊಸ ಕಾರಿನ ಖರೀದಿಗಾಗಿ ಆಸಕ್ತ ಗ್ರಾಹಕರು ಹ್ಯುಂಡೈ ಸಂಸ್ಥೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಹ್ಯುಂಡೈ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಸ್ಯಾಂಟ್ರೋ ಕಾರುಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸಿದ್ದು, ಹೊಸ ಕಾರನ್ನು ಬಿಡುಗಡೆಗೊಳಿಸಲು ಸಹ ವೇದಿಕೆ ಸಿದ್ದಮಾಡಿಕೊಳ್ಳುತ್ತಿದೆ. ಹೀಗಿರುವಾಗಲೇ ಸ್ಯಾಂಟ್ರೋ ಕಾರಿನ ಬೆಲೆ ಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಶಾರ್ಪ್ ಡಿಸೈನ್ ಹೊಂದಿರುವ ಹೊಸ ಸ್ಯಾಂಟ್ರೊ ಕಾರುಗಳು ಈಗಾಗಲೇ ಸ್ಟಾಟ್ ಟೆಸ್ಟಿಂಗ್ ವೇಳೆ ಅತ್ಯುತ್ತಮ ಮಾದರಿಯಲ್ಲಿ ಎಂಜಿನ್ ಕಾರ್ಯಕ್ಷಮತೆ ಪ್ರದರ್ಶನ ತೋರಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಹಳೆಯ ಮಾದರಿಯ ಸ್ಯಾಂಟ್ರೋ ಕಾರುಗಳಿಗೂ ಮತ್ತು ಹೊಸ ಸ್ಯಾಂಟ್ರೋ‌ ಕಾರುಗಳಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡಿರುವ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೋ ಕಾರುಗಳು ಹೊಸ ಡಿಸೈನ್ ಪ್ರೇರಿತ ಬ್ಲ್ಯಾಕ್ ಗ್ರಿಲ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಹೊಸ ಸ್ಯಾಂಟ್ರೋ ಕಾರು ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಜುಕಿ ಸೆಲೆರಿಯೊ ಕಾರುಗಳಿಂತಲೂ ಉತ್ತಮ ವೀಲ್ಹ್ ಬೆಸ್ ಹೊಂದಿದ್ದು, 3610ಎಂಎಂ ಉದ್ದ, 1645ಎಂಎಂ ಅಗಲ, 1560ಎಂಎಂ ಎತ್ತರ ಮತ್ತು 160ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿದೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಹೊಸ ಮಾಹಿತಿಗಳ ಪ್ರಕಾರ ಸ್ಯಾಂಟ್ರೋ ಕಾರಿನ ಇಂಟಿರಿಯರ್ ವಿನ್ಯಾಸಗಳ ಕುರಿತಾದ ಮಾಹಿತಿ ಲಭ್ಯವಾಗಿದ್ದು, ಪ್ರೀಮಿಯಂ ವಿನ್ಯಾಸಗಳಾದ ಡ್ಯುಯಲ್ ಟೋನ್ ಥೀಮ್, ಗ್ಲೋ ಬಾಕ್ಸ್, ಡೋರ್ ಟ್ರೀಮ್ಸ್, ಟಾಪ್ ಎಂಡ್‌ಗಳಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಪಡೆದುಕೊಳ್ಳಲಿದೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಹಾಗೆಯೇ ಗ್ರಾಂಡ್ ಐ10 ಮಾದರಿಯಲ್ಲೇ ಸ್ಟ್ರೀರಿಂಗ್ ವೀಲ್ಹ್, ಸಿಲ್ವರ್ ಅಕ್ಸೆಂಟ್ ಸೇರಿದಂತೆ ಮಿರರ್ ಲಿಂಕ್, ಕಾರಿನ ಮಧ್ಯದಲ್ಲಿ ಎಸಿ ವೆಂಟ್ಸ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಸೇರಿದಂತೆ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳು ಇದರಲ್ಲಿವೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಅಲಾಯ್ ಚಕ್ರಗಳು, ಪಾರ್ಕಿಂಗ್ ಸೆನ್ಸಾರ್ ಮತ್ತು ವಿಶೇಷ ವಿನ್ಯಾಸದ ಟಾಲ್ ಬಾಯ್ ಡಿಸೈನ್ ಹೊಂದಿರಲಿವೆ.

ಎಂಜಿನ್ ಸಾಮರ್ಥ್ಯ

ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು 1.1-ಲೀಟರ್(1,100 ಸಿಸಿ) ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವು ಆಯ್ಕೆ ರೂಪದಲ್ಲಿ ದೊರೆಯಲಿವೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಇದಲ್ಲದೇ ಹೊಸ ಸ್ಯಾಂಟ್ರೋ ಕಾರುಗಳಲ್ಲಿ ಮ್ಯಾಗ್ಮಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಎಂಜಿನ್ ಲಭ್ಯವಿರಲಿದ್ದು, ಇದು ಅತ್ಯುತ್ತಮ ಮೈಲೇಜ್ ನೀಡಬಲ್ಲ ಕಾರು ಮಾದರಿಯಾಗಿ ಮತ್ತಷ್ಟು ಜನಪ್ರಿಯತೆ ಹೊಂದಲಿದೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಲಭ್ಯವಿರುವ ಬಣ್ಣಗಳು

ಗ್ರೀನ್, ಫೈರ್ಲಿ ರೆಡ್, ಇಂಪಿರಿಯರ್ ಬ್ಲಿಜ್, ಮರಿಯನ್ ಬ್ಲ್ಯೂ, ಸ್ಟಾರ್ ಡಸ್ಟ್, ಟೈಫೂನ್ ಸಿಲ್ವರ್ ಮತ್ತು ಪೊಲಾರ್ ವೈಟ್ ಬಣ್ಣಗಳಲ್ಲಿ ಹೊಸ ಸ್ಯಾಂಟ್ರೋ ಲಭ್ಯವಾಗಲಿದೆ.

ಡೀಲರ್‍ ಯಾರ್ಡ್ ತಲುಪಿದ ಹೊಸ ಸ್ಯಾಂಟ್ರೋ - ಬಿಡುಗಡೆಗೆ ದಿನಗಣನೆ ಶುರು

ಈ ಮೂಲಕ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಗೆ ಪೈಪೋಟಿ ನೀಡಲಿರುವ ಹ್ಯುಂಡೈ ಸಂಸ್ಥೆಯು ಮಾರುತಿ ಆಲ್ಟೊ 800, ಸೆಲೆರಿಯೊ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೊ ಕಾರುಗಳ ಮಾರಾಟಕ್ಕೆ ಟಕ್ಕರ್ ನೀಡಲಿದೆ.

Most Read Articles

Kannada
Read more on hyundai new car santro
English summary
Hyundai Santro arrives at dealer.
Story first published: Wednesday, October 17, 2018, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X