ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ದಕ್ಷಿಣ ಕೊರಿಯ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ದೇಶಿಯ ಮಾರುಕಟ್ಟೆಗೆ ಕಾಲಿಟ್ಟು 20 ವರ್ಷಗಳಾಗುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ತಮ್ಮ ಜನಪ್ರಿಯ ವೆರ್ನಾ ಸೆಡಾನ್ ಕಾರಿನ ಆನಿವರ್ಸರಿ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ಕಳೆದ ವರ್ಷ ಬಿಡುಗಡೆಗೊಂಡ ವೆರ್ನಾ ಕಾರನ್ನು ನವೀಕರಣಗೊಳಿಸಿ ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರುಗಳು ಕೇವಲ 1000 ಯೂನಿಟ್ ಮಾತ್ರ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 11.69 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು ವೆರ್ನಾ ಕಾರಿನ ಟಾಪ್ ವೇರಿಯಂಟ್ ಆದ ಎಸ್ಎಕ್ಸ್(ಒ) ಅನ್ನು ಆದರಿಸಲಾಗಿದೆ. ಹೊಸ ವೆರ್ನಾ ಸ್ಪೆಷಲ್ ಎಡಿಷನ್ ಕಾರು ಎಸ್ಎಕ್ಸ್ (ಒ) ಪೆಟ್ರೋಲ್ ಎಂಟಿ ಗೇರ್‍‍ಬಾಕ್ಸ್, ಎಸ್ಎಕ್ಸ್ (ಒ) ಡೀಸೆಲ್ ಎಟಿ ಪೆಟ್ರೋಲ್ ಮತ್ತು ಎಸ್ಎಕ್ಸ್ (ಒ) ಡೀಸೆಲ್ ಎಂಟಿ ಎಂಬ ನಾಲು ವೇರಿಯಂಟ್‍‍ಗಳಲ್ಲಿ ಲಭ್ಯವಿದ್ದು, ಬೆಲೆಗಳ ಮಾಹಿತಿಯನ್ನು ಕೇಳಗೆ ನೀಡಲಾಗಿದೆ.

ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..
Variant Price Rs. (Ex-Showroom Delhi)
SX(O) MT Petrol Rs 11,69,413
SX(O) AT Petrol Rs 12,83,413
SX(O) MTDiesel Rs 13,03,413
ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ಲಭ್ಯವಿರುವ ಬಣ್ಣಗಳು

ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು ಮೆರಿನಾ ಬ್ಲೂ ಮತ್ತು ಪೋಲಾರ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ದೊರೆಯಲಿದೆ.

ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ಹೊರ ವಿನ್ಯಾಸ

ವೆರ್ನಾ ಸ್ಪೆಷಲ್ ಎಡಿಷನ್ ಕಾರಿನ ಹೊರಭಾಗದಲ್ಲಿ ಮುಂಭಾಗದ ಮತ್ತು ಹಿಂಭಾಗದ ಬಂಪರ್‍‍ಗೆ ಹೊಸದಾಗಿ ಸಿಲ್ವರ್ ಫೋರ್ಕ್ಸ್, ಸ್ಕಿಡ್ ಪ್ಲೇಟ್ಸ್, ರಿಯರ್ ಸ್ಪ್ಲಾಯ್ಲರ್, ಶಾರ್ಕ್ ಫಿನ್ ಆಂಟೆನಾ ಮತ್ತು ಒಆರ್‍‍ವಿಎಮ್‍‍ಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ಇದಲ್ಲದೇ ಹೊಸದಾಗಿ ಬಿಡುಗಡೆಗೊಂಡ ಹ್ಯುಂಡೈ ವೆರ್ನಾ ಕಾರಿನಲ್ಲಿ ವೈರ್‍‍ಲೆಸ್ ಫೋನ್ ಚಾರ್ಜರ್, ಸ್ಮಾರ್ಟ್ ಲೆಕ್ಟ್ರಿಕ್ ಸನ್‍‍ರೂಫ್, ಸ್ಪೋರ್ಟಿ ಆಲ್ ಬ್ಲಾಕ್ ಇಂಟೀರಿಯರ್, ಎಸಿ ವೆಂಟ್ಸ್ ನ ಸುತ್ತ ಬ್ಲೂ ಬಣ್ಣವನ್ನು ನೀಡಲಾಗಿದೆ, ಮುಂಭಾಗದಲ್ಲಿ ಸೀಟ್ ವೆಂಟಿಲೇಷನ್ ಮತ್ತು ಹಿಂಭಾಗದಲ್ಲಿ ಆನಿವರ್ಸರಿ ಎಡಿಷನ್ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು 1.6 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿರಲಿದೆ. ಪೆಟ್ರೋಲ್ ಆಧಾರಿತ ಕಾರುಗಳು 123ಬಿಹೆಚ್‍‍ಪಿ ಮತ್ತು 151ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ಇನ್ನು ಡೀಸೆಲ್ ಆಧಾರಿತ ವೆರ್ನಾ ಆನಿವರ್ಸರಿ ಎಡಿಷನ್ ಕಾರುಗಳು 128ಬಿಹೆಚ್‍‍ಪಿ ಮತ್ತು 260ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎರಡೂ ಎಂಜಿನ್‍‍ಗಳನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಹೊಸ ಹ್ಯುಂಡೈ ವೆರ್ನಾ ಆನಿವರ್ಸರಿ ಎಡಿಷನ್ ಕಾರು..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ತಮ್ಮ ವೆರ್ನಾ ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಒಂದು ವರ್ಷವಾಗಿದ್ದು, ಈ ನಿಟ್ಟಿನಲ್ಲಿ ಆನಿವರ್ಸರಿ ಲಿಮಿಟೆಡ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದೆ. ನವೀಕರಣವನ್ನು ಪಡೆದಿದ್ದು, ಹೊಸ ವೈಶಿಷ್ಟ್ಯತೆ ಮತ್ತು ಹೊಸ ಬಣ್ಣಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Hyundai Verna Anniversary Edition Launched In India.
Story first published: Friday, September 14, 2018, 13:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X