ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲೂ ಲಭ್ಯವಿರಲಿದೆ ಇವಿ ಚಾರ್ಜಿಂಗ್ ಸೌಲಭ್ಯ..

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು ಹತ್ತಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇನ್ಮುಂದೆ ಆಯ್ದ ರೈಲು ನಿಲ್ದಾಣಗಳಲ್ಲಿ ಇವಿಗಳಿಗಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ಮುಂದಾಗಿದೆ.

By Praveen

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು ಹತ್ತಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇನ್ಮುಂದೆ ಆಯ್ದ ರೈಲು ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಕಾರುಗಳಿಗಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ಮುಂದಾಗಿದೆ.

ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲೂ ಲಭ್ಯವಿರಲಿದೆ ಇವಿ ಚಾರ್ಜಿಂಗ್ ಸೌಲಭ್ಯ..

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ 2030ರ ವೇಳೆಗೆ ಶೇ.100 ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಸುವ ಉದ್ದೇಶದಿಂದ ವಿಶ್ವಾದ್ಯಂತ ಎಲ್ಲಾ ಕಾರು ಉತ್ಪಾದನಾ ಸಂಸ್ಥೆಗಳು ಇವಿ ವಾಹನಗಳ ವಿಶೇಷ ಆಸಕ್ತಿ ತೊರುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಕೂಡಾ ಗ್ರಾಹಕರನ್ನು ಉತ್ತೇಜಿಸುವ ಯೋಜನೆಗಳಿಗೆ ಸಾಥ್ ನೀಡುತ್ತಿದೆ.

Recommended Video

New Maruti Swift Launch: Price; Mileage; Specifications; Features; Changes
ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲೂ ಲಭ್ಯವಿರಲಿದೆ ಇವಿ ಚಾರ್ಜಿಂಗ್ ಸೌಲಭ್ಯ..

ಇದಕ್ಕಾಗಿಯೇ ಪ್ರಾಯೋಗಿಕವಾಗಿ ದೆಹಲಿ ಮತ್ತು ನಿಜಾಮುದ್ದಿನ್ ರೈಲ್ವೆ ನಿಲ್ದಾಣಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲಾಗಿದ್ದು, ಒಂದು ಬಾರಿಗೆ ಹತ್ತು ಎಲೆಕ್ಟ್ರಿಕ್ ಕಾರುಗಳು ಚಾರ್ಜಿಂಗ್ ಮಾಡಿಕೊಳ್ಳಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲೂ ಲಭ್ಯವಿರಲಿದೆ ಇವಿ ಚಾರ್ಜಿಂಗ್ ಸೌಲಭ್ಯ..

ಸಾಮಾನ್ಯವಾಗಿ ಒಂದು ಎಲೆಕ್ಟ್ರಿಕ್ ಕಾರು ಪೂರ್ಣ ಪ್ರಮಾಣದ ಚಾರ್ಜಿಂಗ್ ಪಡೆದುಕೊಳ್ಳಲು 40 ರಿಂದ 60 ನಿಮಿಷ ಕಾಲ ತೆಗೆದುಕೊಳ್ಳಲಿದ್ದು, ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಹೆಚ್ಚಿದಂತೆ ಚಾರ್ಜಿಂಗ್ ಪಾಯಿಂಟ್‌ಗಳ ಸಂಖ್ಯೆಯನ್ನು ಕೂಡಾ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲೂ ಲಭ್ಯವಿರಲಿದೆ ಇವಿ ಚಾರ್ಜಿಂಗ್ ಸೌಲಭ್ಯ..

ಈ ಬಗ್ಗೆ ಇಂಡಿಯನ್ ರೈಲ್ವೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ಆಟೋಗಳಿಗೆ ಪ್ರಯೋಜನವಾಗಿದ್ದು, ಪರಿಸರಕ್ಕೆ ಪೂರಕವಾಗಿ ಈ ಬೃಹತ್ ಯೋಜನೆಯು ಸದ್ಯದಲ್ಲೇ ದೇಶದ ಪ್ರಮುಖ ನಿಲ್ದಾಣಗಳಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.

ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲೂ ಲಭ್ಯವಿರಲಿದೆ ಇವಿ ಚಾರ್ಜಿಂಗ್ ಸೌಲಭ್ಯ..

ಇನ್ನು ರೈಲ್ವೆ ನಿಲ್ದಾಣಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್ ತೆರೆಯಲು ಬಿಆರ್‌ಪಿಎಲ್(ರಾಜಧಾನಿ ಪವರ್ ಲಿಮಿಟೆಡ್) ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಪ್ರತಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ಬರೋಬ್ಬರಿ ರೂ. 15 ಲಕ್ಷ ಖರ್ಚು ಮಾಡಲಿದೆ.

ಇನ್ಮುಂದೆ ರೈಲ್ವೆ ನಿಲ್ದಾಣಗಳಲ್ಲೂ ಲಭ್ಯವಿರಲಿದೆ ಇವಿ ಚಾರ್ಜಿಂಗ್ ಸೌಲಭ್ಯ..

ಈ ಮೂಲಕ ದೆಹಲಿ ಎಲೆಕ್ಟ್ರಿಕ್ ರೆಗ್ಯುಲೆಟರಿ ಕಮಿಷನರ್ ನಿಯಮದಡಿ ರಿಯಾಯ್ತಿ ದರದಲ್ಲಿ ಎಲೆಕ್ಟ್ರಿಕ್ ಕಾರುಗಳಿಂದ ಶುಲ್ಕ ವಸೂಲಿ ಮಾಡಲಿರುವ ಬಿಆರ್‌ಪಿಎಲ್ ಸಂಸ್ಥೆಯು, ಇಂತಿಷ್ಟು ಪ್ರಮಾಣದಲ್ಲಿ ರೈಲ್ವೆ ಇಲಾಖೆಗೂ ಆದಾಯ ಹಂಚಿಕೆ ಮಾಡಲಿದೆ.

Trending On DriveSpark Kannada:

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

Most Read Articles

Kannada
Read more on auto news electric cars
English summary
Indian Railway Stations To Get Electric Vehicle Charging Points.
Story first published: Monday, February 19, 2018, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X