ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಮಾರುತಿ ಸುಜುಕಿ ಈ ವರ್ಷ ಬಿಡುಗಡೆ ಮಾಡಲಿರುವ ಪ್ರಮುಖ ಕಾರುಗಳಲ್ಲಿ 2018ರ ವ್ಯಾಗನ್ ಆರ್ ಕೂಡಾ ಹೊಸ ಭರವಸೆ ಹುಟ್ಟುಹಾಕಿದ್ದು, ಈ ಮಧ್ಯೆ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

By Praveen

ವಿಶೇಷ ಎಂಜಿನ್ ಆಯ್ಕೆ ನೀಡುವ ಮೂಲಕ ಸಿಎನ್‍ಜಿ ಮತ್ತು ಎಲ್‌ಪಿಜಿ ಎರಡನ್ನು ಬಳಕೆ ಮಾಡಬಹುದಾದ ವ್ಯವಸ್ಥೆಯನ್ನು ಹೊಸ ಮಾದರಿಯ ವ್ಯಾಗನ್ ಆರ್ ಕಾರುಗಳಲ್ಲಿ ಒದಗಿಸಲಾಗಿದ್ದು, ಅಕ್ಟೋಬರ್ ಇಲ್ಲವೇ ನವೆಂಬರ್‌ನಲ್ಲಿ ಹೊಸ ವ್ಯಾಗನ್ ಆರ್ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

Recommended Video

New Maruti Swift Launch: Price; Mileage; Specifications; Features; Changes
ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಮೊನ್ನೆಯಷ್ಟೇ ಬಿಡುಗಡೆಯಾದ ನ್ಯೂ ಜನರೇಷನ್ ಸ್ವಿಫ್ಟ್ ಫ್ಯಾಟ್‌ಫಾರ್ಮ್ ಅಡಿಯಲ್ಲೇ ವ್ಯಾಗನ್ ಆರ್ ಕೂಡಾ ಅಭಿವೃದ್ಧಿಗೊಂಡಿದ್ದು, ವ್ಯಾರ್ಪ್ ಮಾದರಿಯ ಹೆಡ್‌ಲ್ಯಾಂಪ್, ತ್ರಿ ಸ್ಲೈಟ್ ಕ್ರೋಮ್ ಗ್ರಿಲ್, ಸ್ಟೀಲ್ ಚಕ್ರಗಳು, ಎಲ್ಇಡಿ ಟೈಲ್ ಲೈಟ್ಸ್‌ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಇನ್ನು ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ಕಾರಿನ ಹೊರ ಭಾಗದ ವಿನ್ಯಾಸಗಳನ್ನು ಮಾತ್ರ ಸೆರೆಹಿಡಿಯಲಾಗಿದ್ದು, ಕಾರಿನ ಇಂಟಿರಿಯರ್ ಡಿಸೈನ್ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಆದರೂ ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಶಾರ್ಪ್ ಎಡ್ಜ್‌ಗಳು ಮತ್ತು ಸುರಕ್ಷೆತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಎಂಜಿನ್ ಸಾಮರ್ಥ್ಯ

1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ವ್ಯಾಗನ್ ಆರ್ ಕಾರುಗಳು 67-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಹಿಂದಿನ ವ್ಯಾಗನ್ ಆರ್ ಮಾದರಿಯಲ್ಲೇ ಹೊಸ ವ್ಯಾಗನ್ ಆರ್ ಕಾರುಗಳಲ್ಲೂ ಒಂದೇ ರೀತಿಯಾದ ತಾಂತ್ರಿಕ ಅಂಶಗಳನ್ನು ಮುಂದುವರಿಸಲಾಗಿದ್ದರು, ಕಾರಿನ ಹೊರ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವುದು ಸ್ಪೈ ಚಿತ್ರಗಳಲ್ಲಿ ನೋಡಬಹುದಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಈ ಮೂಲಕ ಹೊಸ ವ್ಯಾಗನ್ ಆರ್ ಕಾರುಗಳಲ್ಲಿ ಸುರಕ್ಷತೆ ಮತ್ತು ಮತ್ತು ವಿನ್ಯಾಸಗಳಿಗೆ ಹೆಚ್ಚಿನ ಒತ್ತುನೀಡಲಾಗಿದ್ದು, ಉತ್ತಮ ಮಾದರಿಯ ಎಂಟ್ರಿ ಲೆವಲ್ ಕಾರು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಆಕರ್ಷಣೆಯಾಗಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಬೆಲೆ(ಅಂದಾಜು)

ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೆಚ್ಚಿಸಿರುವ ಹಿನ್ನೆಲೆ ಹೊಸ ಕಾರಿನ ಬೆಲೆಯನ್ನು 4.50 ಲಕ್ಷದಿಂದ 5 ಲಕ್ಷಕ್ಕೆ ನಿಗದಿ ಮಾಡಬಹುದೆಂದು ಅಂದಾಜಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಹುನೀರಿಕ್ಷಿತ ಮಾರುತಿ ಸುಜುಕಿ ವಿನೂತನ ವ್ಯಾಗನ್ ಆರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ 20 ವರ್ಷಗಳ ಹಿಂದೆಯೇ ಭಾರತದಲ್ಲಿ ಬಿಡುಗಡೆಯಾಗಿ ಇದುವರೆಗೂ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ ವ್ಯಾಗನ್ ಆರ್ ಕಾರುಗಳು ಕಾಲಕ್ಕೆ ತಕ್ಕಂತೆ ಮಹತ್ತರ ಬದಲಾವಣೆ ಕಂಡುಕೊಂಡು ಬರುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಕಾರಿನಲ್ಲಿರುವ ಸುರಕ್ಷತೆಗೆ ಗ್ರಾಹಕರು ಹೆಚ್ಚಿನ ಒತ್ತು ನೀಡುತ್ತಿದ್ದು, 2018ರ ವ್ಯಾಗನ್ ಆರ್ ಹ್ಯಾಚ್‌ಬ್ಯಾಕ್ ಉತ್ತಮ ಆಯ್ಕೆಯಾಗಿರಲಿದೆ.

Trending On DriveSpark Kannada:

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

Most Read Articles

Kannada
English summary
New Maruti Wagon R 2018 Spied Without Camouflage.
Story first published: Saturday, February 17, 2018, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X