ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಇದಕ್ಕೂ ಮುನ್ನ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿರುವ ಮೊದಲ ಎಸ್‌ಯುವಿ ಕಾರು ಮಾದರಿಯನ್ನು ಅನಾವರಣಗೊಳಿಸಿದೆ.

By Praveen

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಇದಕ್ಕೂ ಮುನ್ನ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿರುವ ಮೊದಲ ಎಸ್‌ಯುವಿ ಕಾರು ಮಾದರಿಯನ್ನು ಅನಾವರಣಗೊಳಿಸಿದೆ.

ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

2018ರ ಆಟೋ ಎಕ್ಸ್ ಪೋದಲ್ಲಿ ತನ್ನ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿಯನ್ನು ಪ್ರದರ್ಶನ ಮಾಡಿದ ಕಿಯಾ ಮೋಟಾರ್ಸ್, ಭವಿಷ್ಯದಲ್ಲಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಧಿಪತ್ಯ ಸಾಧಿಸುವ ಎಲ್ಲಾ ಭರವಸೆಗಳನ್ನು ಹುಟ್ಟುಹಾಕಿದೆ.

ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

ಪ್ರಮುಖವಾಗಿಯೂ ಭಾರತೀಯ ವಾಹನ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ನೂತನ ಕಿಯಾ ಮೋಟಾರ್ಸ್ ಎಸ್‌ಯುವಿ ಕಾರು 2019ನೇ ಸಾಲಿನಲ್ಲಿ ದೇಶದ ರಸ್ತೆಯನ್ನು ಪ್ರವೇಶಿಸಲಿದೆ.

ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

ಮೊದಲ ಹಂತವಾಗಿ ಎಸ್‌ಯುವಿ ಕಾರು ಮಾದರಿಯನ್ನೇ ಬಿಡುಗಡೆ ಮಾಡಲು ಉದ್ದೇಶಿಸಿರುವ ಕಿಯಾ ಮೋಟಾರ್ಸ್, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹ್ಯುಂಡೈ ಕ್ರೇಟಾ, ಮಾರುತಿ ಸುಜುಕಿ ವಿಟಾರಾ ಬ್ರೇಝಾ ಮತ್ತು ರೆನಾಲ್ಟ್ ಡಸ್ಟರ್ ಮಾದರಿಗಳಿಗೆ ಸಮನಾಗಿ ಹೊಸ ಕಾರು ಅಭಿವೃದ್ಧಿ ಮಾಡಿದೆ.

ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

ಕಿಯಾ ಹೊಸ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಡೀಸೆಲ್ ಆವೃತ್ತಿಯು 1.6-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

ಹ್ಯುಂಡೈ ಕಾರುಗಳ ತಳಹದಿಯಲ್ಲಿ ಚಾಸೀ, ಎಂಜಿನ್ ಮತ್ತು ಗೇರ್ ಬಾಕ್ಸ್ ಗಳನ್ನು ಹಂಚಿಕೊಂಡರೂ ಕಿಯಾ ಕಾರುಗಳು ವಿಭಿನ್ನವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

ಜೊತೆಗೆ ರೇಂಜ್ ರೋವರ್ ಇವೋಕ್ ಮಾದರಿಯಲ್ಲೇ ಬಾಡಿ ವಿನ್ಯಾಸ ಹೊಂದಿರುವ ಎಸ್‌ಪಿ ಕಾನ್ಸೆಪ್ಟ್ ಮಾದರಿಗಳು ಅಲಾಯ್ ಚಕ್ರ, ಎಲ್‌ಇಡಿ ಟೈಲ್ ಲೈಟ್ ಹೊಂದಿರುವುದನ್ನು ಹೊರತುಪಡಿಸಿ ಯಾವುದೇ ರೀತಿಯ ಹೆಚ್ಚುವರಿ ತಾಂತ್ರಿಕ ಮಾಹಿತಿಗಳು ಲಭ್ಯವಾಗಿಲ್ಲ.

ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

ಹೀಗಾಗಿ ಕಿಯಾ ಮೋಟಾರ್ಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಎಸ್‌ಪಿ ಕಾನ್ಸೆಪ್ಟ್ ಕಾರು ಮಾದರಿಗಳ ಮೇಲೆ ಸಾಕಷ್ಟು ನೀರಿಕ್ಷೆಗಳಿದ್ದು, ಹೊಸ ನಮೂನೆಯ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಲೆಕ್ಟ್ರಿಕ್ ಕಾರುಗಳು ಸಹ ಮುಂಬರುವ ದಿನಗಳಲ್ಲಿ ಬಿಡುಗಡೆಗಾಗಿ ಸಿದ್ಧಗೊಂಡಿವೆ.

ಆಟೋ ಎಕ್ಸ್ ಪೋ 2018: ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 5ಜಿ ವಿಶೇಷತೆ ಏನು?

ಆಟೋ ಎಕ್ಸ್ ಪೋ 2018: ಭಾರತೀಯ ಗ್ರಾಹಕರನ್ನು ಸೆಳೆದ ಕಿಯಾ ಮೋಟಾರ್ಸ್ ಎಸ್‌ಪಿ ಎಸ್‌ಯುವಿ

ಈ ಮೂಲಕ ಭಾರತದಲ್ಲಿ ಕ್ರೇಟಾ, ವಿಟಾರಾ ಬ್ರೇಝಾ ಮತ್ತು ಡಸ್ಟರ್ ಎಸ್‌ಯುವಿ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ದಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು, ದೇಶಿಯ ಗ್ರಾಹಕರಿಗಾಗಿ ವಿವಿಧ ಕಾರುಗಳನ್ನು ಉತ್ಪಾದನೆ ಮಾಡಲು ಬರೋಬ್ಬರಿ 10 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

Most Read Articles

Kannada
English summary
Auto Expo 2018: Kia SP Concept Unveiled — Expected Launch Date And Images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X