ಮಹಾರಾಷ್ಟ್ರ ಸಿಎಂ ಕಾರಿಗೆ ಬಿತ್ತು ಭಾರೀ ದಂಡ.. ಏಕೆ ಗೊತ್ತಾ.?

By Rahul Ts

ಸಂಚಾರಿ ನಿಮಯಗಳನ್ನು ಉಲ್ಲಂಘಿಸಿದ ಹಿನ್ನೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ ಕಾರಿಗೆ ಮಾಹಾರಾಷ್ಟ್ರ ಟ್ರಾಫಿಕ್ ಪೊಲೀಸರು ದೊಡ್ಡ ಮೊತ್ತದ ದಂಡ ವಿಧಿಸಿದ್ದು, ಮುಖ್ಯಮಂತ್ರಿಗಳ ಬೆಂಗಾವಲು ಪಡೆಯಲ್ಲಿ ಇದ್ದ ಒಂದು ವಾಹನಕ್ಕೆ ಬರೋಬ್ಬರಿ 13 ಸಾವಿರ ದಂಡ ವಿಧಿಸಿದ್ದಾರೆ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ಆದ್ರೆ, ಆಶ್ಚರ್ಯಕರವಾದ ವಿಷಯ ಏನೆಂದರೇ ಈ ದಂಡದ ಮೊತ್ತ ಇದುವರೆಗೂ ಪಾವತಿ ಮಾಡಿಲ್ಲ. ಅಸಲಿಗೆ ಸಿಎಂ ಕಾರಿಗೆ 13 ಸಾವಿರದ ಮೊತ್ತದ ದಂಡವನ್ನು ಏಕೆ ವಿಧಿಸಲಾಯಿತು ಎಂದು ಕೆಳಗಿನ ಸ್ಲೈಡರ್‍‍ಗಳಲ್ಲಿ ತಿಳಿಯಿರಿ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ಮಾಹಿತಿ ಹಕ್ಕು ಕಾಯ್ದೆ ಅಡಿ ಈ ವಿಚಾರ ಬಯಲಿಗೆ ಬಂದಿದ್ದು, ಷಕೀಲ್ ಅಹ್ಮದ್ ಎಂಬುವವರು ಮುಖ್ಯಮಂತ್ರಿಯ ಕಾರು ರಸ್ತೆ ನಿಯಮಗಳನ್ನು ಉಲ್ಲಂಘಿಸಿದ ವಿವಿರಗಳಿಗಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದಾಗ ಈ ವಿಚಾರ ಗೊತ್ತಾಗಿದೆ. ಇದರಿಂದ ಟ್ರಾಫಿಕ್ ಪೊಲೀಸರು ಮುಖ್ಯಮಂತ್ರಿಗಳ ಕಾರಿಗೂ ದಂಡ ವಿಧಿಸಿದ ವಿಷಯವು ಬಹಿರಂಗಗೊಂಡಿದೆ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ಮಹಾರಾಷ್ಟ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಸ್ತೆ ಮಾರ್ಗದ ಪ್ರಯಾಣಕ್ಕಾಗಿ ಸುರಕ್ಷಾ ದೃಷ್ಠಿಯಿಂದ ಬುಲೆಟ್ ಫ್ರೂಫ್ ಟಾಟಾ ಸಫಾರಿ ಎಸ್‍‍ಯುವಿ‍ಗಳನ್ನು ಬಳಸುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಬಳಸುತ್ತಿರುವ ಎಸ್‍‍ಯುವಿ ಕಾರಿನ ಮೇಲೆ ಬರೋಬ್ಬರಿ 13 ಸಾವಿರದ ದಂಡವನ್ನು ವಿಧಿಸಲಾಗಿದೆ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ದಂಡ ವಿಧಿಸಲು ಕಾರಣ ಏನು.?

ಮುಖ್ಯಮಂತ್ರಿ ಪ್ರಯಾಣಿಸಿದ ವಾಹನವು ಮುಂಬೈ‍ನ ಬಾಂದ್ರಾ ಮತ್ತು ವೋರ್ಲಿ ಪ್ರಾಂತ್ಯಗಳನ್ನು ಒಂದಾಗಿಸುವ ಸಮುದ್ರದ ಸೇತುವೆಯ ಮೇಲೆ ಮಿತಿಗೆ ಮೀರಿದ ವೇಗದಲ್ಲಿ ವಾಹನ ಚಲಾಯಿಸಿದ ಕಾರಣ ಚಲನ್ ವಿಧಿಸಲಾಗಿತ್ತು.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ಓವರ್ ಸ್ಪೀಡಿಂಗ್ ಕೇಸ್‍‍ಗಳನ್ನು ಮತ್ತು ರಸ್ತೆ ನಿಯಮಗಳನ್ನು ಉಲ್ಲಂಘಿಸಿದವರನ್ನು ಶಿಕ್ಷಿಸಲು ಬಾಂದ್ರಾ-ವೋರ್ಲಿ ಸಮುದ್ರ ಸೇತುವೆಯ ಮೇಲೆ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇವು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳನ್ನು ಗುರುತಿಸಿ ಆಟೋಮ್ಯಾಟಿಕ್ ಆಗಿ ಇ-ಚಲನ್ ಕಳುಹಿಸುತ್ತವೆ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ಈ ವರ್ಷದ ಜನವರಿ ತಿಂಗಳಿನಿಂದ ಆಗಸ್ಟ್ ಮಧ್ಯ ಕಾಲದಲ್ಲಿ ಮುಖ್ಯಮಂತ್ರಿ ಪ್ರಯಾಣದ ವಾಹನವು 5 ಬಾರಿ ಸ್ಪೀಡ್ ಲಿಮಿಟ್ ಅನ್ನು ಕ್ರಾಸ್ ಮಾಡಿದೆ. ಮುಖ್ಯಮಂತ್ರಿ ಬೆಂಗಾವಲು ಪಡೆಯಲ್ಲಿರುವ ಮತ್ತೊಂದು ವಾಹನವು 8 ಬಾರಿ ನಿಯಮವನ್ನು ಉಲ್ಲಂಘಿಸಿದ್ದು ಪತ್ತೆಯಾಗಿದೆ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ಮೊತ್ತದಲ್ಲಿ 13 ಬಾರಿ ಸ್ಪೀಡ್ ಲಿಮಿಟ್ ಅನ್ನು ಉಲ್ಲಂಘಿಸಿದಕ್ಕಾಗಿ ಒಂದೊಂದು ಕೇಸ್‍‍ಗೆ ರೂ.1,000 ಸಾವಿರದ ಲೆಕ್ಕದಲ್ಲಿ 13 ಕೇಸ್‍‍ಗೆ 13 ಸಾವಿರ ದಂಡವನ್ನು ವಿಧಿಸಲಾಗಿದ್ದು, ಹೀಗಿದ್ದರೂ ಈ ದಂಡದ ಮೊತ್ತವನ್ನು ಇಲ್ಲಿಯವರೆಗೂ ಪಾವತಿಸಲಿಲ್ಲ. ದಂಡದ ಮೊತ್ತವನ್ನು ಏಕೆ ಪಾವತಿಸಲಿಲ್ಲ ಎಂಬುದಕ್ಕೆ ಕೂಡಾ ಒಂದು ಕಾರಣವಿದೆ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ದಂಡದ ಮೊತ್ತವನ್ನು ಪಾವತಿಸದೇ ಇರಲು ಕಾರಣ ಏನು?

ಮುಂಬೈ ಟ್ರಾಫಿಕ್ ಪೊಲೀಸರ ಪ್ರಕಾರ, ಮುಖ್ಯಮಂತ್ರಿ ಬೆಂಗಾವಲು ವಾಹನವುಈ ಸ್ಪೀಡ್ ಲಿಮಿಟ್ ನಿಯಮವು ಅನ್ವಯವಾಗುದಿಲ್ಲ. ಆದ್ರೆ ಸಾಧಾರಣ ವ್ಯಕ್ತಿಗಳಿಗೆ ಈ ನಿಯಮವು ಅನ್ವಯವಾಗುತಂತೆ. ಸಿಎಂ ಭದ್ರತಾ ದೃಷ್ಟಿಯಲ್ಲಿ ಮುಖ್ಯಮಂತ್ರಿ ಬೆಂಗಾವಲು ವಾಹನಕ್ಕೆ ದಂಡ ವಿಧಿಸಲು ಸಾಧ್ಯವಿಲ್ಲ ಎನ್ನುವ ಬಗ್ಗೆ ಮುಂಬೈ ಪೋಲಿಸರು ಸ್ಪಷ್ಟನೆ ನೀಡಿದ್ದಾರೆ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ಬಾಂದ್ರಾ-ವೋರ್ಲಿ ಸಮುದ್ರ ಸೇತುವೆಯ ಮೇಲೆ ಓವರ್ ಸ್ಪೀಡಿಂಗ್ ಕಾರಣವಾಗಿ ಅಪಘಾತಗಳು ಅಧಿಕವಾಗುತ್ತಿರುವ ಕಾರಣ ಈ ವರ್ಷ ಮುಂಬೈ ಪೊಲೀಸರು ಸರಿಸುಮಾರು 40 ಹೈಟೆಕ್ನಾಲಜಿ ಕ್ಯಾಮೆರಾಗಳನ್ನು ಅಲ್ಲಿ ಅಳವಡಿಸಿ ಓವರ್ ಸ್ಪೀಡಿಂಗ್ ವಿರುದ್ಧ ಭಾರೀ ಮೊತ್ತದ ದಂಡ ವಸೂಲಿ ಮಾಡಲಾಗುತ್ತಿದೆ.

ಮಹಾರಾಷ್ಟ್ರ ಸಿಎಮ್ ಕಾರಿಗೆ ಬಿತ್ತು ಭಾರಿ ದಂಡ.. ಏಕೆ ಗೊತ್ತಾ.?

ಈ ಕ್ಯಾಮೆರಾಗಳು ಸ್ಪೀಡ್ ಲಿಮಿಟ್ ಅನ್ನು ಕ್ರಾಸ್ ಮಾಡುವ ವಾಹನಗಳ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಗುರುತಿಸಿ, ಆಟೋಮ್ಯಾಟಿಕ್ ಆಗಿ ಆ ವಾಹನಗಳ ಮಾಲಿಕರಿಗೆ ಇ-ಚಲನ್ ಅನ್ನು ತಯಾರಿಸುವ ಹಾಗೆ ಹೊಸ ಸಾಫ್ಟ್ ವೇರ್ ಅನ್ನು ಕೂಡಾ ಅದರಲ್ಲಿ ಅಳವಡಿಸಲಾಗಿದೆ. ಇದರ ಭಾಗವಾಗಿ ಮುಖ್ಯಮಂತ್ರಿ ಬೆಂಗಾವಲು ವಾಹನಕ್ಕೂ ಭಾರೀ ಮೊತ್ತದ ದಂಡ ಬಂದಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Kannada
English summary
Maharashtra cm devendra fadnavis tata safari suvs fined 13000 rupees heres why.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more