ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ಕುಡಿದು ವಾಹನ ಚಾಲಾಯಿಸುವುದು ತಪ್ಪು ಅದರಲ್ಲಿಯು ಕುಡಿತ ನಿಷೇಧವಾಗಿರುವ ರಾಜ್ಯದಲ್ಲಂತೂ ಮದ್ಯಪಾನ ಮಾಡಿ ವಾಹನ ಚಾಲಯಿಸಿದರೆ ಅಂತವರಿಗೆ ಗಂಭೀರವಾದ ಶಿಕ್ಷೆ ಬೀಳುವುದಂತು ಖಚಿತ. ಇಲ್ಲಿ ನಡೆದಿದ್ದು ಕೂಡಾ ಅದೇ. ಕುಡಿತ ಸಂಪೂರ್ಣವಾಗಿ ನಿಷೇಧವಾಗಿರುವ ಸ್ಥಳದಲ್ಲಿ ಐಷಾರಾಮಿ ಕಾರು ಮಾಲಿಕನೊಬ್ಬ ಸಿಕ್ಕಿಕೊಂಡು ಇದೀಗ ಜೈಲು ಸೇರಿದ್ದಾನೆ.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ಮರ್ಸಿಡೀಸ್ ಬೆಂಝ್ ಜಿಎಲ್ಎಸ್ ಐಷಾರಾಮಿ ಕಾರಿನ ಮಾಲೀಕನೊಬ್ಬ ಕುಡಿದ ಮತ್ತಿನಿಂದ ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿರುವುದನ್ನು ಹೆದ್ದಾರಿ ಗಸ್ತು ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸರು ಗಮನಿಸಿದ್ದು, ಕೊನೆಗು ಅವರನ್ನು ಹಿಡಿದು ಅವರಿಗೆ ಸರಿಯಾದ ಶಿಕ್ಷೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ಅತೀ ವೇಗದಲ್ಲಿ ವಾಹನಗಳು ಚಲಿಸುತ್ತಿರುವ ಅಹ್ಮದಾಬಾದ್‍ನಲ್ಲಿನ ಹೆದ್ದಾರಿಯಲ್ಲಿ ಐಷಾರಾಮಿ ಕಾರಿನ ಮಾಲೀಕ ಗುಜರಾತ್ ರಾಜ್ಯದಲ್ಲಿ ಅನುಮತಿ ಇಲ್ಲದೆ ಮದ್ಯ ಸೇವಿಸುವುದಾಗಲಿ, ಮತ್ತು ಮಾರಾಟಮಾಡುವುದಾಗಲಿ ಅಲ್ಲಿ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ಕಳೆದ ಭಾನುವಾರದ ರಾತ್ರಿ ಹೊತ್ತಿನಲ್ಲಿ ಕಾರಿನ ಮಾಲೀಕರಾದ ಭಾರ್ಗವ್ ಮತ್ತು ತಿಮಿರ್ ಪಟೇಲ್ ಎಂಬುವವರು ಮದ್ಯ ಸೇವಿಸಿ ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಿದ್ದರು. ಕುಡಿದ ಮತ್ತಿನಲ್ಲಿ ತಾವು ತೂಗಾಡುವುದಲ್ಲದೇ ಕಾರನ್ನು ಸಹ ನಿಯಂತ್ರಣವಿಲ್ಲದೇ ಡ್ರೈವ್ ಮಾಡುತ್ತಿದ್ದುದ್ದನ್ನು ಪೊಲೀಸರು ಕಂಡಿದ್ದಾರೆ.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ತಡ ಮಾಡದೆ ಆ ಪೊಲೀಸರು ಆ ಕಾರನ್ನು ಚೇಸ್ ಮಾಡಲು ಶುರು ಮಾಡಿದರು, ಕೊಂಚ ದೂರದ ಚೇಸ್‍ನ ನಂತರ ಮರ್ಸಿಡೀಸ್ ಕಾರನ್ನು ಪಕ್ಕಕ್ಕೆ ನಿಲ್ಲಿಸಿ, ಪೊಲೀಸರು ಕಾರಿನಲ್ಲಿರುವ ಆ ಇಬ್ಬರು ವ್ಯಕ್ತಿಯನ್ನು ಪರಿಶೀಲಿಸಿದರು ಮತ್ತು ಕಾರಿನಲ್ಲಿಯೆ ಮದ್ಯದ ಬಾಟಲಿಗಳನ್ನು ಕೊಂಡೊಯ್ಯುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾದ ವರದಿಗಳು ಹೇಳುತ್ತಿದೆ.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ಅವರನ್ನು ಹಿಡುದು ವಿಚಾರಣೆ ಮಾಡುವ ಹೊತ್ತಿನಲ್ಲಿ ಅವರು ಸರಿಯಾಗಿ ಮಾತನಾಡಲು ಸಹ ಸಾಧ್ಯವಾಗದ ಮತ್ತಿನಲ್ಲಿ ತೇಲಾಡುತ್ತಿದ್ದುದ್ದನ್ನು ಪೊಲೀಸರು ಗಮನಿಸಿ, ಸಮೀಪದಲ್ಲೆ ಇದ್ದ ವಸ್ತ್ರಾಪುರ್‍‍ನಲ್ಲಿನ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ಮೇಲೆ ಎಫ್ಐಆರ್ ದಾಖಲಿಸಿ, ಜೊತೆಗೆ ಮರ್ಸಿಡೀಸ್ ಬೆಂಝ್ ಜಿಎಲ್ಎಸ್ ಕಾರನ್ನು ಸೀಜ್ ಮಾಡಲಾಗಿದೆ.

MOST READ: 'ಮೇಕ್ ಇನ್ ಇಂಡಿಯಾ' ಕಾರುಗಳ ನಿರ್ಮಾಣ ಇನ್ಮುಂದೆ ಹೀಗೆ ಇರಬೇಕಂತೆ..!

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ಡಿಸೆಂಬರ್ ತಿಂಗಳಿನಲಂತೂ ವರ್ಷದ ಕೊನೆಯಾದುದರಿಂದ ಎಲ್ಲರೂ ಪಾರ್ಟಿ ಮೂಡ್‍ನಲ್ಲಿ ಎಂಜಾಯ್ ಮಾಡಲು ತೆರಳುತ್ತಾರೆ. ಇದೇ ನಿಟ್ಟಿನಲ್ಲಿ ಕುಡಿದು ವಾಹನ ಚಲಾಯಿಸುವ ಚಾಲಕರೂ ಕೂಡಾ ಇಂತಹ ಸಮಯದಲ್ಲಿಯೆ ಕಂಟು ಪೂರ್ತಿ ಕುಡಿದು ಡ್ರೈವ್ ಮಾಡುತ್ತಿರುತ್ತಾರೆ ಎಂದು ಪೊಲೀಸರು ರಾತ್ರಿ ಹೊತ್ತಿನಲ್ಲಿ ಸದಾ ಕಾರ್ಯನಿರತರಾಗಿರುತ್ತಾರೆ.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ಕುಡಿದು ವಾಹನ ಚಾಲನೆ - ಬೆಂಗಳೂರಿಗೆ ಅಗ್ರಸ್ಥಾನ

ಬೆಂಗಳೂರು ನಗರದಲ್ಲಿ ವೀಕೆಂಡ್‍ ವೇಳೆ ಕುಡಿದು ವಾಹನ ಚಲಾಯಿಸಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದ್ದು, ಇದರಲ್ಲಿ ಹಲವರು ಯುವಕರು ಹಾಗು ಹೆಣ್ಣುಮಕ್ಕಳು ಕೂಡಾ ಇದ್ದಾರೆ. ಈ ನಿಟ್ಟಿನಲ್ಲಿ ಇದೀಗ ನಗರ ಪೊಲೀಸರು 2018ರಲ್ಲಿ ಎಷ್ಟು ಮಂದಿಯನ್ನು ಡ್ರಿಂಕ್ ಆಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿಕೊಂಡವರ ಸಂಖ್ಯೆಯನ್ನು ಬಹಿರಂಗ ಪಡಿಸಿದ್ದಾರೆ.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

2018ರ ವರ್ಷದಲ್ಲಿ ಈ ವರೆಗು ಮಧ್ಯಸೇವಿಸಿ ವಾಹನ ಚಲಾಯಿಸುತ್ತಿರುವವರು ನಗರ ಬೀದಿಗಳಲ್ಲಿ ಗರಿಷ್ಠ ರಕ್ತವನ್ನು ಚೆಲ್ಲುತ್ತಿದ್ದಾರೆ ಎಂದು ತೋರುತ್ತದೆ. ಟ್ರಾಫಿಕ್ ಪೋಲೀಸರ ಅಂಕಿ ಅಂಶಗಳ ಪ್ರಕಾರ, 2017 ರಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದರೆ ಇನ್ನು 2018ರಲ್ಲಿ ಈ ಸಂಖ್ಯೆಯು 17ಕ್ಕೆ ಏರಿದೆ.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

2018ರ ಜನವರಿ ಇಂದ ಸೆಪ್ಟೆಂಬರ್ ಅವಧಿಯಲ್ಲಿ ನಗರದ ಟ್ರಾಫಿಕ್ ಪೊಲೀಸರು ಸುಮಾರು 33,234 ಮಂದಿಯನ್ನು ಡ್ರಿಂಕ್ ಆಂಡ್ ಡ್ರೈವ್ ಕೇಸ್‍ನಲ್ಲಿ ದಾಖಲು ಮಾಡಿದ್ದಾರೆ. 2017ರ ವರ್ಷದಲ್ಲಿ 73,741 ಮಂದಿಯನ್ನು ದಾಖಲು ಮಾಡಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತಾ ಈ ವರ್ಷ ಕುಡಿದು ವಾಹನ ಚಲಾಯಿಸುವವರ ಸಂಖ್ಯೆಯು ಕೊಂಚ ಕಡಿಮೆಯಾಗಿದೆ ಎಂದು ಹೇಳಬಹುದು.

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ದಯವಿಟ್ಟು ಕುಡಿದು ವಾಹನ ಚಾಲನೆ ಮಾಡಬೇಡಿ

ಇಡೀ ಜಗತ್ತಿನಲ್ಲಿ ನಡೆಯುವ ಹೆಚ್ಚಿನ ವಾಹನ ಅಪಘಾತಗಳ ಹಿಂದಿರುವ ಪ್ರಮುಖ ಶಕ್ತಿ ಆಲ್ಕೋಹಾಲ್. ನಿಶೆಯಲ್ಲಿ ವಾಹನ ಚಲಾಯಿಸಿ ಸಾವಿರಾರು ಜನರು ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಕುಡಿದು ಚಾಲನೆ ಮಾಡುತ್ತಿದ್ದ ಬೆಂಝ್ ಕಾರು ಮಾಲೀಕನ ಮೇಲೆ ಎಫ್ಐಆರ್

ಕುಡಿದಿದ್ದರೆ ಖಂಡಿತವಾಗಿಯೂ ಸ್ಟಿಯರಿಂಗ್ ಮುಟ್ಟಬೇಡಿ. ಬಾರ್ ಅಥವಾ ಪಬ್ ಗೆ ಹೋಗಿದ್ದರೆ ಕುಡಿಯದ ವ್ಯಕ್ತಿಯೊಬ್ಬ ನಿಮ್ಮ ಜೊತೆಗಿರಲಿ. ಆತ ನಿಮ್ಮನ್ನು ಮನೆಯವರೆಗೆ ಸುರಕ್ಷಿತವಾಗಿ ತಲುಪಿಸಬಲ್ಲ. ಅದು ಸಾಧ್ಯವಾಗದಿದ್ದರೆ ಕಾರನ್ನು ಅಲ್ಲೇ ಬಿಟ್ಟು ಟ್ಯಾಕ್ಸಿ ಹತ್ತಿ.

Most Read Articles

Kannada
English summary
Mercedes Benz GLA SEIZED after owner was found drinking in it. Read In Kannada
Story first published: Friday, December 14, 2018, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more