'ಮೇಕ್ ಇನ್ ಇಂಡಿಯಾ' ಕಾರುಗಳ ನಿರ್ಮಾಣ ಇನ್ಮುಂದೆ ಹೀಗೆ ಇರಬೇಕಂತೆ..!

ಆಟೋ ಉತ್ಪಾದನಾ ವಲಯದಲ್ಲಿ ಕಳೆದ 2 ವರ್ಷಗಳಿಂದ ಈಚೆಗೆ ಭಾರೀ ಪ್ರಮಾಣದ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇದು ಮುಂಬರುವ ದಿನಗಳನ್ನು ಬದಲಾವಣೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಯಾಕೆಂದ್ರೆ ವಾಹನ ಉತ್ಪಾದನೆಯಲ್ಲಿ ಹೊಸ ಹೊಸ ರೂಲ್ಸ್‌ಗಳನ್ನು ತರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಇದೀಗ ಮತ್ತೊಂದು ಕಡ್ಡಾಯ ನಿಯಮವನ್ನು ಜಾರಿ ತರಲು ಮುಂದಾಗಿದೆ.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಮೇಕ್ ಇನ್ ಇಂಡಿಯಾ ಆರಂಭವಾದ ನಂತರ ದೇಶದ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದಲ್ಲದೇ ಕೇಂದ್ರದ ಸರ್ಕಾರದ ಮಾರ್ಗಸೂಚಿಯಂತೆ ಹೊಸ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ದೊಡ್ಡಮಟ್ಟದಲ್ಲಿ ಉತ್ಪಾದನೆ ಮಾಡುವ ಗುರಿಹೊಂದಿದ್ದವು. ಆದ್ರೆ ಇದೀಗ ಜಾರಿಗೆ ತರಲಾಗುತ್ತಿರುವ ಹೊಸ ಕಾಯ್ದೆಯಿಂದಾಗಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸಂಕಷ್ಟ ಎದುರಾಗಿದೆ.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಹೌದು, ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿಯೇ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ವಾಹನ ನಿರ್ಮಾಣ ಮಾಡುತ್ತಿದ್ದರೂ ಸಹ ವಾಹನಗಳ ನಿರ್ಮಾಣಕ್ಕೆ ಬಳಕೆ ಮಾಡುವ ಬಿಡಿಭಾಗಗಳು ಮಾತ್ರ ವಿದೇಶಿ ಮಾರುಕಟ್ಟೆಯಿಂದಲೇ ಆಮದುಕೊಂಡಿಕೊಂಡು ಇಲ್ಲಿ ಜೋಡಣೆ ಮಾಡಿ ಮಾರಾಟ ಮಾಡುತ್ತಿವೆ.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಹೀಗಿರುವಾಗ ಇದು ಮೇಕ್ ಇನ್ ಇಂಡಿಯಾ ಕಾರು ಅಂತಾ ಹೇಗೆ ಅನ್ನಿಸಿಕೊಳ್ಳುತ್ತೆ ಹೇಳಿ. ಇದೇ ಕಾರಣಕ್ಕಾಗಿ ಹೊಸ ಕಾಯ್ದೆ ಹೊರಡಿಸಿರುವ ಕೇಂದ್ರ ಸರ್ಕಾರವು ಇನ್ಮುಂದೆ ಭಾರತದಲ್ಲಿ ನಿರ್ಮಾಣವಾಗುವ ಪ್ರತಿ ವಾಹನವು ಪ್ರತಿಶತ 65 ರಷ್ಟು ಸ್ಥಳೀಯವಾಗಿ ಸಿದ್ದವಾದ ಬಿಡಿಭಾಗಗಳನ್ನೇ ಹೊಂದಿರಬೇಕಿಂದೆ.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಅಂದ್ರೆ, ಒಂದು ಕಾರು ಸಂಸ್ಥೆಯು ನಿರ್ಮಾಣ ಮಾಡುವ ಹೊಸ ಕಾರಿನ ಶೇ.65ರಷ್ಟು ಬಿಡಿಭಾಗಗಳು ಸ್ಥಳೀಯವಾಗಿ ನಿರ್ಮಾಣ ಮಾಡಿದ ಬಿಡಿಭಾಗಗಳನ್ನೇ ಹೊಂದಿರಬೇಕೆಂಬ ನಿಯಮ ಇದಾಗಿದ್ದು, ಕೇಂದ್ರಕ್ಕೆ ಇದರಿಂದ ಭಾರೀ ಆದಾಯ ಬರುವುದಲ್ಲದೇ ಸ್ಥಳೀಯವಾಗಿ ಕೈಗಾರಿಕೆಗಳ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಸದ್ಯ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಶೇ. 20 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮಾತ್ರ ಸ್ಥಳೀಯವಾಗಿ ನಿರ್ಮಾಣವಾದ ಬಿಡಿಭಾಗಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಉಳಿದ ಪ್ರಮಾಣವನ್ನು ವಿದೇಶಿ ಮಾರುಕಟ್ಟೆಗಳಿಂದಲೇ ಹೆಚ್ಚಾಗಿ ಆಮದುಮಾಡಿಕೊಳ್ಳುತ್ತಿವೆ.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಇದಕ್ಕಾಗಿ ಆಟೋ ಸಂಸ್ಥೆಗಳಿಗೆ ಸ್ಥಳೀಯವಾಗಿ ಪೂರ್ಣ ಪ್ರಮಾಣದಲ್ಲಿ ಬೀಡಿಭಾಗಗಳು ದೊರೆಯುವಂತೆ ಮಾಡಲು ಹೊಸ ಕೈಗಾರಿಕೆಗಳ ಅಭಿವೃದ್ದಿಗೂ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಕ್ರಮಕೈಗೊಳ್ಳಲಾಗಿದ್ದು, ಮುಂಬರುವ 2019ರ ಎಪ್ರಿಲ್ 1ರಿಂದಲೇ ಹೊಸ ಆದೇಶವನ್ನು ಪಾಲಿಸುವಂತೆ ಆದೇಶ ನೀಡಲಾಗಿದೆ.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಹಲವಾರು ಲಾಭ ಪಡೆಯುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳು ಸ್ಥಳೀಯ ಬಿಡಿಭಾಗಗಳ ಬಳಕೆ ಮಾಡುವುದನ್ನು ಬಿಟ್ಟು ವಿದೇಶಿ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿರುವದನ್ನು ತಪ್ಪಿಸಲು ಇದು ಸಾಕಷ್ಟು ಸಹಕಾರಿಯಾಗಲಿದೆ.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಇದರ ಜೊತೆಗೆ ಪ್ರಧಾನಿ ಮೋದಿಯವರ ಕನಸಿನ 'ಮೇಕ್ ಇನ್ ಇಂಡಿಯಾ' ಯೋಜನೆಯು ಇಂದು ದೇಶದ ಆರ್ಥಿಕ ಕ್ಷೇತ್ರದಲ್ಲಿ ಹಲವು ಹೊಸತನಗಳಿಗೆ ಕಾರಣವಾಗಿದೆ. ಅದರಲ್ಲೂ ಉತ್ಪಾದನಾ ಕ್ಷೇತ್ರದಲ್ಲಿ ಆದ ಕ್ರಾಂತಿಕಾರಿ ಬದಲಾವಣೆಯು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಭಾರತದ ಪಾಲಿಗೆ ಹೆಮ್ಮೆಯ ವಿಚಾರ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

'ಮೇಕ್ ಇನ್ ಇಂಡಿಯಾ' ನೀತಿ ಅನುಸರಿಸಿ ಸ್ಥಳೀಯವಾಗಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿರುವ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ವಾಹನ ಉತ್ಪಾದನಾ ಸಂಸ್ಥೆಗಳಿಗೂ ಸಹ ಭರ್ಜರಿ ಆಫರ್ ನೀಡಲಾಗುತ್ತಿರುವುದು ಮತ್ತಷ್ಟು ಬದಲಾವಣೆ ಕಾರಣವಾಗಿದೆ ಎನ್ನಬಹುದು.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಭಾರತದಲ್ಲೇ ನಿರ್ಮಾಣ ಮಾಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ಸ್ಥಳೀಯವಾಗಿ ವಾಹನಗಳ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಸಂಸ್ಥೆಗಳಿಗೆ ಹೊಸ ಆಫರ್ ನೀಡಿರುವ ಕೇಂದ್ರ ಸರ್ಕಾರವು, ಸರ್ಕಾರಿ ವಲಯದ ಅಧಿಕಾರಿಗಳು 'ಮೇಕ್ ಇನ್ ಇಂಡಿಯಾ' ನಿರ್ಮಾಣದ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವಂತೆ ಈ ಹಿಂದೆಯೇ ಸುತ್ತೊಲೆ ಹೊರಡಿಸಿತ್ತು.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಇದರ ಪರಿಣಾಮವಾಗಿ ಇಂದು ಮೇಡ್ ಇನ್ ಇಂಡಿಯಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ವಾಹನಗಳನ್ನೇ ಸರ್ಕಾರಿ ಅಧಿಕಾರಿಗಳಿಗೆ ಒದಗಿಸಲಾಗುತ್ತಿದ್ದು, ಸ್ವದೇಶಿ ನಿರ್ಮಿತ ವಾಹನಗಳ ಬಳಕೆಗೆ ಇಷ್ಟು ಮಹತ್ವ ನೀಡಿರುವುದು ಇದೇ ಮೊದಲು.

MOST READ: 2018ರಲ್ಲಿ ಬಿಡುಗಡೆಯಾದ ಟಾಪ್ 10 ಬೆಸ್ಟ್ ಕಾರುಗಳಿವು..!

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಇದಷ್ಟೇ ಅಲ್ಲದೇ ಭಾರತೀಯ ಸೇನಾಪಡೆಯಲ್ಲೂ ಸಾಕಷ್ಟು ಬದಲಾವಣೆ ತಂದಿರುವ ಕೇಂದ್ರ ಸರ್ಕಾರವು ಕಳೆದ ತಿಂಗಳು ಹಿಂದಷ್ಟೇ 3 ಸಾವಿರ ಕೋಟಿ ವೆಚ್ಚದಲ್ಲಿ ಮೇಡ್ ಇನ್ ಇಂಡಿಯಾ ನಿರ್ಮಿತ ವಿವಿಧ ಮಾದರಿಯ 4 ಸಾವಿರಕ್ಕೂ ಹೆಚ್ಚು ಸೇನಾ ವಾಹನಗಳನ್ನು ಖರೀದಿ ಮಾಡಿತ್ತು.

'ಮೇಕ್ ಇನ್ ಇಂಡಿಯಾ' ಕಾರುಗಳು ಇನ್ಮುಂದೆ ಹೀಗೆ ಇರಬೇಕಂತೆ..!

ಹೀಗಾಗಿ ಪ್ರಧಾನಿಯವರ ಕನಸಿನ ಯೋಜನೆಯು ಇಂದು ಫಲನೀಡುತ್ತಿದ್ದು, ಭಾರತೀಯ ಸಂಸ್ಥೆಗಳಿಗೆ ದೇಶದಲ್ಲಿ ಹೆಚ್ಚಿನ ಪ್ರಾಶಸ್ತ್ಯದ ನೀಡುತ್ತಿರುವ ಉತ್ತಮ ಬೆಳವಣಿಗೆಯಾಗಿದೆ. ಜೊತೆಗೆ ಕಾರುಗಳ ನಿರ್ಮಾಣದಲ್ಲಿ ಇಂತದೊಂದು ಕ್ರಾಂತಿಕಾರಿ ಬೆಳವಣಿಗೆ ಹೆಮ್ಮೆಯ ವಿಚಾರವೇ ಎನ್ನಬಹುದು.

Most Read Articles

Kannada
English summary
Government has mandated preference local content in new vehicles. Read in Kannada.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more