ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ನಮ್ಮ ಬೆಂಗಳೂರಿನಲ್ಲಿ ಇಂದಿನಿಂದ ಆರಂಭಗೊಂಡಿರುವ 'ಬಸ್ ವರ್ಲ್ಡ್' ವಾಣಿಜ್ಯ ವಾಹನಗಳ ಪ್ರದರ್ಶನವು ಹಲವು ವಿಶೇಷಗಳಿಗೆ ಕಾರಣವಾಗಿದ್ದು, ಹಲವು ಹೊಸ ಹೊಸ ವಾಣಿಜ್ಯ ಬಳಕೆಯ ವಾಹನಗಳು ಖರೀದಿಗೆ ಸಿದ್ದವಾಗಿ ನಿಂತಿವೆ. ಇವುಗಳಲ್ಲಿ ಎಂಜಿ ಗ್ರೂಪ್ ನಿರ್ಮಾಣದ ಐಷಾರಾಮಿ ಬಸ್‌ಗಳಂತೂ ನೋಡುಗರನ್ನು ಅಚ್ಚರಿಗೊಳಿಸಿದ್ದು ಮಾತ್ರ ಸುಳ್ಳಲ್ಲ.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಭಾರತದಲ್ಲಿ ಐಷಾರಾಮಿ ಬಸ್‌ಗಳನ್ನು ನಿರ್ಮಾಣ ಮಾಡುವಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಎಂಜಿ ಗ್ರೂಪ್ ಸಂಸ್ಥೆಯು ಭಾರತ್ ಬೆಂಝ್ ಸಂಸ್ಥೆಯ ಜೊತೆಗೂಡಿ ಮೂರು ವಿನೂತನ ಮಾದರಿಯ ಬಸ್‌ಗಳನ್ನು ಪ್ರದರ್ಶನ ಮಾಡಿದ್ದಲ್ಲದೇ ಇದೇ ವೇಳೆ ಹೊಸ ಬಸ್‌ಗಳ ಅಧಿಕೃತ ಮಾರಾಟಕ್ಕೂ ಹಸಿರು ನಿಶಾನೆ ತೊರಿತು.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಎಂಜಿ ಗ್ರೂಪ್ ಸಂಸ್ಥೆಯು ಗ್ರಾಹಕರ ಬೇಡಿಕೆ ಅನುಗುಣವಾಗಿ ಗ್ಲಿಡರ್, ಗ್ಲಿಡರ್ಜ್ ಮತ್ತು ಡ್ರಿಮ್ಜ್ ಎನ್ನುವ ಮೂರು ಐಷಾರಾಮಿ ಬಸ್‌ಗಳನ್ನು ಪರಿಚಯಿಸಿದ್ದು, ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಬಸ್‌ಗಳು ಹತ್ತು ಹಲವು ಹೊಸ ಸೌಲಭ್ಯಗಳನ್ನು ಹೊಂದಿವೆ.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಇವುಗಳಲ್ಲಿ ಗ್ಲಿಡರ್ ಬಸ್‌ಗಳು 2x2 ಸೀಟಿಂಗ್ ವಿನ್ಯಾಸದೊಂದಿಗೆ 43 ಜನ ಪ್ರಯಾಣಿಕರು ಅರಾಮವಾಗಿ ಕುಳಿತು ಪ್ರಯಾಣಿಸಬಹುದಾದ ಸೌಲಭ್ಯ ಹೊಂದಿದ್ದು, ಪ್ರತಿ ಸೀಟಿನಲ್ಲೂ ಯುಎಸ್‍‌ಬಿ ಚಾರ್ಜಿಂಗ್ ಪಾಯಿಂಟ್, ಏರ್ ಕಂಡಿಷನ್ ಮತ್ತು ರೀಡಿಂಗ್ ಲ್ಯಾಂಪ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯ ಪಡೆದಿದೆ.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಹೊಸ ಬಸ್‌ಗಳ ಬೆಲೆಯ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಅವುಗಳು ಬಸ್‌ನಲ್ಲಿ ಒದಗಿಸುವ ಸೌಲಭ್ಯಗಳ ಆಧಾರ ಮೇಲೆ ಬೆಲೆ ನಿಗದಿಗೊಳಿಸಲಾಗುತ್ತೆ. ಅಂದರೆ, ಹೊಸ ಬಸ್‌ಗಳನ್ನು ಗ್ರಾಹಕರು ಖರೀದಿಸಿದ ನಂತರ ಅವರ ಅಗತ್ಯಕ್ಕೆ ತಕ್ಕಂತೆ ಒಳವಿನ್ಯಾಸ ಮಾರ್ಪಾಡು ಮಾಡುವ ವಾಹನ ಉತ್ಪಾದನಾ ಸಂಸ್ಥೆಗಳು ನಂತರವೇ ಬೆಲೆ ನಿಗದಿ ಮಾಡುತ್ತಾರೆ.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಎಂಜಿನ್ ಸಾಮರ್ಥ್ಯ

6,373-ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ ಗ್ಲಿಡರ್ ಮತ್ತು ಗ್ಲಿಡರ್ಜ್ ಬಸ್‌ಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 231-ಬಿಎಚ್‌ಪಿ ಮತ್ತು 850-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಜೊತೆಗೆ ಆರಾಯದಾಯಕ ಚಾಲನೆಗಾಗಿ ಏರ್ ಸಸ್ಷೆನ್, ಟಿಲ್ ಟೆಬಲ್ ಪವರ್ ಸ್ಟೀರಿಂಗ್ ಸೇರಿದಂತೆ ಪ್ರಯಾಣಿಕರ ಸುರಕ್ಷೆತೆಗಾಗಿ ಸಿಸಿಟಿವಿ, ತುರ್ತು ಸಂದರ್ಭಗಳಲ್ಲಿ ಬಸ್ಸಿನಿಂದ ನಿರ್ಗಮಿಸಲು ಹಿಂಬಾಗಿಲು ವ್ಯವಸ್ಥೆ, ರಿವರ್ಸ್ ಕ್ಯಾಮೆರಾ ಸೇರಿದಂತೆ ಹಲವು ಬಿಡಿಭಾಗಗಳನ್ನು ಜೋಡಿಸಲಾಗಿದೆ.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಹಾಗೆಯೇ ಎಂಜಿ ಗ್ರೂಪ್ ನಿರ್ಮಾಣದ ಗ್ಲಿಡರ್ಜ್ ಬಸ್ ಕೂಡಾ 12-ಲೀಟರ್ ಉದ್ದದ ಕೋಚ್ ಜೊತೆಗೆ 30 ಪ್ರಯಾಣಿಕರು ಅರಾಮದಾಯಕವಾಗಿ ಪ್ರಯಾಣಿಸಬಹುದಾದ ವ್ಯವಸ್ಥೆ ಹೊಂದಿದ್ದು, ಮೇಲೆ ಹೇಳಲಾಳದ ಸುರಕ್ಷಾ ಸೌಲಭ್ಯಗಳೊಂದಿಗೆ ಎಲ್‌ಇಡಿ ರೂಫ್ ಲ್ಯಾಂಪ್ ಸೌಲಭ್ಯದೊಂದಿಗೆ ಪ್ರೀಮಿಯಂ ವಿನ್ಯಾಸಗಳನ್ನು ಜೋಡಿಸಲಾಗಿದೆ.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಇವುಗಳಲ್ಲಿ ಕೊನೆಯದಾಗಿ ಡ್ರಿಮ್ಜ್ ಬಸ್ ಅತಿ ಐಷಾರಾಮಿ ಬಸ್ ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಇದರ ಚಾರ್ಸಿ ಉದ್ದವೇ 14.95 ಮೀಟರ್. 2x1 ಅಪ್ಪರ್ ಆ್ಯಂಡ್ ಲೋವರ್ ಸಿಪ್ಪರ್ ಬರ್ತ್ ಜೊತೆಗೆ 40 ಪ್ರಯಾಣಿಕ ಆಸನಗಳನ್ನು ಪಡೆದುಕೊಂಡಿದೆ.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಗ್ಲಿಡರ್ ಮತ್ತು ಗ್ಲಿಡರ್ಜ್ ಬಸ್ ಎಂಜಿನ್‌ಗಿಂತಲೂ ಅತ್ಯಾಧುನಿಕ Om457 ಇನ್ ಲೈನ್, ಸಿಕ್ಸ್ ಸಿಲಿಂಡರ್ ಎಂಜಿನ್ ಹೊಂದಿರುವ ಡ್ರಿಮ್ಜ್ ಬಸ್‌ಗಳು, 402-ಬಿಎಚ್‌ಪಿ ಮತ್ತು 1,900-ಎನ್ಎಂ ಟಾರ್ಕ್‌ ಉತ್ಪಾದನೆಯೊಂದಿಗೆ ಎಬಿಎಸ್ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ಡ್ ಏರ್ ಸಸ್ಷೆನ್ ಸೌಲಭ್ಯ ಪಡೆದಿದೆ.

ಭಾರತ್ ಬೆಂಝ್ ಜೊತೆಗೂಡಿ ಮೂರು ವಿನೂತನ ಐಷಾರಾಮಿ ಬಸ್‌ ಬಿಡುಗಡೆ ಮಾಡಿದ ಎಂಜಿ ಗ್ರೂಪ್

ಪ್ರಯಾಣಿಕ ಸುರಕ್ಷತೆಗಾಗಿ ಸಿಸಿಟಿವಿ, ಪ್ರತಿ ಸೀಟಿಗೂ ಮೊಬೈಲ್ ಚಾರ್ಚಿಂಗ್ ಪಾಯಿಂಟ್, ಎಸಿ, ಗ್ಲ್ಯಾಸ್ ಬ್ರೇಕಿಂಗ್ ಹ್ಯಾಮರ್‌ಗಳನ್ನು ಇರಿಸಲಾಗಿದ್ದು, ಐಷಾರಾಮಿ ಸೌಲಭ್ಯಗಳೊಂದಿಗೆ ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷೆ ನೀಡಿರುವುದು ಈ ಬಸ್‌ಗಳ ವಿಶೇಷತೆ ಎನ್ನಬಹುದು.

Most Read Articles

Kannada
Read more on commercial vehicles bus
English summary
MG Group Launches Three New Luxury Buses At Bus World India 2018.
Story first published: Wednesday, August 29, 2018, 17:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X