ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

By Praveen Sannamani

ಕಳೆದ ವರ್ಷ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿರುವ ನ್ಯೂ ಜನರೇಷನ್ ಮಿಟ್ಸುಬಿಸಿ ಎಂಪಿವಿ ಕಾರುಗಳು ಸದ್ಯ ಫಿಲಿಫೈನ್ಸ್‌ನಲ್ಲೂ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿದೆ. ಹೀಗಾಗಿ ಮಿಟ್ಸುಬಿಸಿ ಸಂಸ್ಥೆಯು ಇದೇ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಬಹುದು ಎನ್ನುವ ಬಗ್ಗೆ ಹಲವು ಸುದ್ದಿಮಾಧ್ಯಮಗಳು ವರದಿ ಮಾಡಿವೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ಮಿಟ್ಸುಬಿಸಿ ನಿರ್ಮಾಣದ ಎಕ್ಸ್‌ಪ್ಯಾಂಡರ್ ಕಾರುಗಳು 7 ಸೀಟರ್ ಮಾದರಿಯಾಗಿದ್ದು, ಇದು ಟೊಯೊಟಾ ಇನೋವಾ ಮಾದರಿಯಲ್ಲೇ ನಿರ್ಮಾಣಗೊಂಡಿದೆ. ಹೀಗಾಗಿಯೇ ಈ ಹೊಸ ಕಾರು ಭಾರತದಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಕಾರಿನ ಬೆಲೆಗಳು ಸಹ ಆಕರ್ಷಕವಾಗಿವೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ವಿಶೇಷ ಹೊರವಿನ್ಯಾಸಗಳನ್ನು ಹೊಂದಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಆವೃತ್ತಿಗಳು ಜಕಾರ್ತ್ ಆಟೋ ಶೋದಲ್ಲಿ ಭಾಗಿಯಾದ ನಂತರ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊರ ಮತ್ತು ಒಳ ವಿನ್ಯಾಸಗಳು ಅಂತಾರಾಷ್ಟ್ರೀಯ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ಪೂರ್ಣಪ್ರಮಾಣದಲ್ಲಿ ಎಲ್‌ಇಡಿ ಲೈಟ್‌ಗಳ ವ್ಯವಸ್ಥೆಯನ್ನು ಇರಿಸಲಾಗಿದ್ದು, ಡೇ ರನ್ನಿಂಗ್ ಲೈಟ್, ಮಲ್ಟಿಪಲ್ ಸ್ಲಾಟ್ ಗ್ರೀಲ್ ಮತ್ತು ಹೊಚ್ಚ ಹೊಸ ವಿನ್ಯಾಸದ ಎಂಪಿವಿ ಚಿಹ್ನೆಯನ್ನು ಇರಿಸಲಾಗಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಮಾದರಿಯೂ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಲಭ್ಯವಿರಲಿದ್ದು, 1.5-ಲೀಟರ್ ಎಂಜಿನ್ ಸಾಮರ್ಥ್ಯದೊಂದಿದೆ ಅಭಿವೃದ್ಧಿ ಹೊಂದಿದೆ. ಇದು ಎಂಪಿವಿ ಕಾರುಗಳಲ್ಲೇ ಹೆಚ್ಚಿನ ಮಟ್ಟದ ಹಾರ್ಸ್ ಪವರ್ ಉತ್ಪಾದನಾ ಮಾದರಿ ಕೂಡಾ ಆಗಿರಲಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ಮಧ್ಯಮ ಗಾತ್ರದ ಎಂಪಿವಿ ಮಾದರಿಗಳಲ್ಲೇ ಅತಿ ಹೆಚ್ಚ ಒಳ ವಿನ್ಯಾಸವನ್ನು ಪಡೆದುಕೊಂಡಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಆವೃತ್ತಿಯು, 7 ರಿಂದ 8 ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ಭಾರತದಲ್ಲಿ ಬಿಡುಗಡೆ ಆಗುತ್ತಾ?

ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಮಿಟ್ಸುಬಿಸಿ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದ್ದು, ಎಕ್ಸ್‌ಪ್ಯಾಂಡರ್ ಎಂಪಿವಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ಇನ್ನೊಂದು ವಿಶೇಷ ಅಂದ್ರೆ ಈ ಕಾರುಗಳು ಬೆಲೆಯಲ್ಲೂ ಗ್ರಾಹಕರನ್ನು ಆಕರ್ಷಣೆ ಮಾಡುವ ಸಾಧ್ಯತೆಗಳಿದ್ದು, ಭಾರತದಲ್ಲಿ ಈ ಕಾರಿನ ಬೆಲೆಯು ರೂ.11 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ಹೀಗಾಗಿ ಎಕ್ಸ್‌ಪ್ಯಾಂಡರ್ ಕಾರುಗಳು ಭಾರತದಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ರೆನಾಲ್ಟ್ ಲೊಡ್ಜಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದ್ದು, ಪರ್ಸಲ್ ಮತ್ತು ಟೂರಿಸ್ಟ್ ವಿಭಾಗದಲ್ಲೂ ಈ ಕಾರುಗಳಿಗೆ ಉತ್ತಮ ಬೇಡಿಕೆ ಉಂಟಾಗಬಹುದು.

Source: carblogindia

ಭಾರತದಲ್ಲೂ ಬಿಡುಗಡೆಯಾಗುತ್ತಾ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಹೊಸ ಎಂಪಿವಿ?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಲಿಫ್ಟ್ ಕೊಟ್ಟ ತಪ್ಪಿಗೆ ಕೋರ್ಟ್‌ನಲ್ಲಿ ದಂಡ ಕಟ್ಟಿದ ಕಾರು ಮಾಲೀಕ..

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಲೆಕ್ಸಸ್ ವಿನ್ಯಾಸದಲ್ಲಿ ಮಿಂಚಿದ ಮಾಡಿಫೈ ಇನೋವಾ ಕ್ರಿಸ್ಟಾ

ನ್ಯೂ ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ v/s ಮಹೀಂದ್ರಾ ಥಾರ್.. ಯಾವುದು ಬೆಸ್ಟ್?

ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍‍ಗಳನ್ನಾಗಿ ಪರಿವರ್ತಿಸಿದ ರೈತರು..!!

Most Read Articles

Kannada
Read more on mitsubishi mpv
English summary
Mitsubishi Expander MPV India Launch On The Cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X