2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಈ ಬಾರಿಯ ಆಟೋ ಮೇಳವು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಮಧ್ಯಮ ಗಾತ್ರದಿಂದ ಹಿಡಿದು ಹಲವಾರು ಐಷಾರಾಮಿ, ಸ್ಪೋರ್ಟ್, ಸೂಪರ್ ಕಾರುಗಳು ಪ್ರದರ್ಶನಗೊಂಡಿದ್ದಲ್ಲದೇ ಕೆಲವು ಬಹುನೀರಿಕ್ಷಿತ ಕಾರುಗಳನ್ನು ಬಿಡುಗಡೆ ಮಾಡಲಾಯ್ತು.

By Praveen

ರಾಜಧಾನಿ ದೆಹಲಿಯಲ್ಲಿ ನಡೆದಿರುವ ಈ ಬಾರಿಯ ಆಟೋ ಮೇಳವು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಮಧ್ಯಮ ಗಾತ್ರದಿಂದ ಹಿಡಿದು ಹಲವಾರು ಐಷಾರಾಮಿ, ಸ್ಪೋರ್ಟ್, ಸೂಪರ್ ಕಾರುಗಳು ಪ್ರದರ್ಶನಗೊಂಡಿದ್ದಲ್ಲದೇ ಕೆಲವು ಬಹುನೀರಿಕ್ಷಿತ ಕಾರುಗಳನ್ನು ಬಿಡುಗಡೆ ಮಾಡಲಾಯ್ತು.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಹೀಗಾಗಿ ಪ್ರದರ್ಶನಗೊಂಡ ಮತ್ತು ಬಿಡುಗಡೆಯಾದ ಟಾಪ್ 10 ಕಾರುಗಳ ಬಗೆಗೆ ಇಲ್ಲಿ ಮಾಹಿತಿ ನೀಡಲಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಹೊಸ ಕಾರುಗಳ ವಿನ್ಯಾಸ ಮತ್ತು ಕಾರಿನ ಬೆಲೆಗಳ ಬಗೆಗೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

01. ಮಾರುತಿ ಸುಜುಕಿ 2018ರ ಸ್ವಿಫ್ಟ್

ದೇಶದ ಅಗ್ರ ಪ್ರಯಾಣಿಕ ಕಾರು ನಿರ್ಮಾಣ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ತನ್ನ ಅತಿ ನೂತನ ಸ್ವಿಫ್ಟ್ ಕಾರನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರಿಗೆ ಬಿಗ್ ಧಮಾಕಾ ನೀಡಿದೆ ಎಂದರೇ ತಪ್ಪಾಗಲಾರದು.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಗ್ರಾಹಕರ ನೀರಿಕ್ಷೆಯಂತೆ 2018ರ ಸ್ವಿಫ್ಟ್ ಕಾರಿನ ಬೆಲೆಗಳನ್ನು ಸಹ ದೆಹಲಿ ಎಕ್ಸ್ ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯನ್ನು ರೂ.4.99 ಲಕ್ಷಕ್ಕೆ ಮತ್ತು ಟಾಪ್ ಕಾರು ಮಾದರಿಯನ್ನು ರೂ.8.39 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರುಗಳನ್ನು ಅಭಿವೃದ್ಧಿ ಮಾಡಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಐದನೇ ತಲೆಮಾರಿನ ಹರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

02. ಮಾರುತಿ ಸುಜುಕಿ ಫ್ಯೂಚರ್ ಎಸ್ ಕಾನ್ಸೆಪ್ಟ್

ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ವಿನೂತನ ಎಸ್‌ಯುವಿ ಮಾದರಿಯಾದ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, '2018ರ ಆಟೋ ಎಕ್ಸ್ ಪೋ'ದ ಪ್ರಮುಖ ಆಕರ್ಷಣೆಯಾಗಿದ್ದು ಮಾತ್ರ ಸುಳ್ಳಲ್ಲ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

2020ರ ವೇಳೆಗೆ ಫ್ಯೂಚರ್ ಎಸ್ ಎಸ್‌ಯುವಿ ಕಾರುಗಳ ಉತ್ಪಾದನೆ ಕೈಗೊಳ್ಳಲಿರುವ ಮಾರುತಿ ಸುಜುಕಿಯ ತ್ರಿ ಡೋರ್ ಮಾದರಿಯಲ್ಲಿ ಹೊಸ ಕಾರನ್ನು ಸಿದ್ಧಗೊಳಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ಬೇಡಿಕೆ ಪಡೆಯುವ ತವಕದಲ್ಲಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಇನ್ನು ಮಾರುತಿ ಸುಜುಕಿ ಪರಿಚಯಿಸಲಿರುವ ಕಾನ್ಸೆಪ್ಟ್ ಫ್ಯೂಚರ್ ಎಸ್ ಮಾದರಿಗಳು ಸಿಕ್ ಗ್ರಿಲ್ ಕೂಡಾ ಹೊಂದಿದ್ದು, ಹೊಸ ಕಾರುಗಳು ಎಲ್ಇಡಿ ಹೆಡ್‌ಲೈಟ್ಸ್, ವಿಂಡ್ ಬಾರ್ಡರ್‌ಗಳಲ್ಲಿ ಬಿಳಿ ಬಣ್ಣದ ಪಟ್ಟಿಗಳು ಕಾರಿನ ಲುಕ್ ಮತ್ತಷ್ಟು ಹೆಚ್ಚಿಸಿವೆ.

ಬಿಡುಗಡೆ(ಅಂದಾಜು)- 2019ರ ಮಧ್ಯಂತರ

ಬೆಲೆ(ಅಂದಾಜು)- 8 ರಿಂದ 10 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

03. ಟಾಟಾ ಹೆಚ್5ಎಕ್ಸ್ ಕಾನ್ಸೆಪ್ಟ್

ದೇಶಿಯ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಈ ಬಾರಿಯ 2018ರ ಆಟೋ ಎಕ್ಸ್ ಪೋದಲ್ಲಿ ವಿನೂತನ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿದ್ದು, ಎಸ್‌ಯುವಿ ವಿಭಾಗಕ್ಕೆ ಪರಿಚಯಿಸಲಾಗುತ್ತಿರುವ ಹೆಕ್ಸ್5ಎಕ್ಸ್ ಭಾರೀ ಚರ್ಚೆಗೆ ಕಾರಣವಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ವಿವಿಧ ನಮೂನೆಯ ಕಾರುಗಳ ಉತ್ಪಾದನೆಯಲ್ಲಿ ಸ್ವಾಯತ್ತತೆ ಕಾಯ್ದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಹೊಸ ಬಗೆಯ ವಿನ್ಯಾಸ ಮತ್ತು ಅದ್ಭುತ ಲುಕ್ ಹೊಂದಿರುವ ಹೆಚ್5ಎಕ್ಸ್ ಕಾರು ಟಾಟಾ ಸಂಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹೆಚ್5ಎಕ್ಸ್ ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಬಿಡುಗಡೆ(ಅಂದಾಜು)- 2019ರ ಮಧ್ಯಂತರ

ಬಿಡುಗಡೆ- 18ರಿಂದ 22 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

04. ಮಹೀಂದ್ರಾ ಟಿಯುವಿ300 ಸ್ಟಿಂಗರ್

ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಹೊಸ ಪರಿಕಲ್ಪನೆಗಳನ್ನು ಅಭಿವೃದ್ಧಿ ಮಾಡುತ್ತಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು 2018ರ ಆಟೋ ಎಕ್ಸ್ ಪೋದಲ್ಲಿ ವಿನೂತನ ಕನ್ವರ್ಟಬಲ್ ಡ್ರಾಪ್ ಟಾಪ್ ಎಸ್‌ಯುವಿ ಮಾದರಿಯೊಂದನ್ನು ಪ್ರದರ್ಶನಗೊಳಿಸಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಮಹೀಂದ್ರಾ ಹೇಳಿಕೊಂಡಿರುವ ಪ್ರಕಾರ ಎಸ್‌ಯುವಿ ಮಾದರಿಗಳಲ್ಲೇ ಇದೊಂದು ವಿಶೇಷ ಡ್ರಾಪ್ ಟಾಪ್ ಕಾರು ಆವೃತ್ತಿಗಳಾಗಿದ್ದು, ಕೇವಲ ಸೆಡಾನ್‌ ಕಾರುಗಳಲ್ಲಿ ಅಷ್ಟೇ ಅಲ್ಲದೇ ಎಸ್‌ಯುವಿ ಆವೃತ್ತಿಯಲ್ಲೂ ಡ್ರಾಪ್ ಟಾಪ್ ವರ್ಷನ್‌ಗಳನ್ನು ಹೇಗೆ ನಿರ್ಮಾಣ ಮಾಡಬಹುದು ಎಂಬುವುದು ಮಹೀಂದ್ರಾ ತೊರಿಸಿಕೊಟ್ಟಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಹೀಗಾಗಿ ಲೈಫ್ ಸ್ಟೈಲ್ ಗ್ರಾಹಕರಿಗೆ ಇದೊಂದು ಆಯ್ಕೆಯಾಗಲಿದ್ದು, ಈ ಹಿಂದಿನ ಟಿಯುವಿ ಎಸ್‌ಯುವಿ ಸರಣಿಯ ಎಂ-ಹ್ವಾಕ್ ಟರ್ಬೋ ಡೀಸೆಲ್ ಎಂಜಿನ್‌ಗಳನ್ನು ಈ ಹೊಸ ಕಾರಿನಲ್ಲೂ ಬಳಕೆ ಮಾಡಲಾಗಿದೆ.

ಬಿಡುಗಡೆ(ಅಂದಾಜು)- 2018ರ ಅಂತ್ಯಕ್ಕೆ

ಬೆಲೆ(ಅಂದಾಜು)- 12 ರಿಂದ 16 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

05. ಟಯೊಟಾ ಯಾರಿಸ್

ಮಧ್ಯಮ ಗಾತ್ರದ ಸೆಡಾನ್ ಮಾರಾಟದಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಇಟಿಯಾಸ್ ಆವೃತ್ತಿಯನ್ನು ಕೈಬಿಡಲು ನಿರ್ಧರಿಸಿರುವ ಟೊಯೊಟಾ ಇಂಡಿಯಾ ಸಂಸ್ಥೆಯು ಅದೇ ವಿನ್ಯಾಸಗಳನ್ನೇ ಹೊಂದಿರುವ ಹೊಚ್ಚ ಹೊಸ ಯಾರಿಸ್ ಸೆಡಾನ್ ಪರಿಚಯಿಸಲು ಮುಂದಾಗಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಈ ಬಗ್ಗೆ ಬಗ್ಗೆ ಅಧಿಕೃತವಾಗಿ ಹೇಳಿಲ್ಲವಾದರೂ ಇಟಿಯಾಸ್ ಕಾರುಗಳನ್ನು ಉನ್ನತಿಕರಿಸುವ ಬಗ್ಗೆ ಸುಳಿವು ನೀಡಿರುವ ಟೊಯೊಟಾ ಸಂಸ್ಥೆಯು, ತನ್ನ ಹೊಸ ಕಾರು ಮಾದರಿಯನ್ನು 2018ರ ಆಟೋ ಎಕ್ಸ್ ಪೋ ದಲ್ಲಿ ಪ್ರದರ್ಶನಗೊಳಿಸುವ ಮೂಲಕ ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸ ವ್ಯಕ್ತಪಡಿಸಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಇದರಿಂದ ಸೆಡಾನ್ ಆವೃತ್ತಿಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹೋಂಡಾ ಸಿಟಿ, ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ, ನಿಸ್ಸಾನ್ ಸನ್ನಿ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಯಾರಿಸ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರಲಿದೆ.

ಬಿಡುಗಡೆ(ಅಂದಾಜು)- 2018ರ ಅಂತ್ಯಕ್ಕೆ

ಬೆಲೆ(ಅಂದಾಜು)- 10 ರಿಂದ 14 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

06. ಕಿಯಾ ಎಸ್‌ಪಿ ಕಾನ್ಸೆಪ್ಟ್

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಇದಕ್ಕೂ ಮುನ್ನ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿರುವ ಮೊದಲ ಎಸ್‌ಯುವಿ ಕಾರು ಮಾದರಿಯನ್ನು ಅನಾವರಣಗೊಳಿಸಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

2018ರ ಆಟೋ ಎಕ್ಸ್ ಪೋದಲ್ಲಿ ತನ್ನ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿಯನ್ನು ಪ್ರದರ್ಶನ ಮಾಡಿದ ಕಿಯಾ ಮೋಟಾರ್ಸ್, ಭವಿಷ್ಯದಲ್ಲಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಧಿಪತ್ಯ ಸಾಧಿಸುವ ಎಲ್ಲಾ ಭರವಸೆಗಳನ್ನು ಹುಟ್ಟುಹಾಕಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಮೊದಲ ಹಂತವಾಗಿ ಎಸ್‌ಯುವಿ ಕಾರು ಮಾದರಿಯನ್ನೇ ಬಿಡುಗಡೆ ಮಾಡಲು ಉದ್ದೇಶಿಸಿರುವ ಕಿಯಾ ಮೋಟಾರ್ಸ್, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹ್ಯುಂಡೈ ಕ್ರೇಟಾ, ಮಾರುತಿ ಸುಜುಕಿ ವಿಟಾರಾ ಬ್ರೇಝಾ ಮತ್ತು ರೆನಾಲ್ಟ್ ಡಸ್ಟರ್ ಮಾದರಿಗಳಿಗೆ ಸಮನಾಗಿ ಹೊಸ ಕಾರು ಅಭಿವೃದ್ಧಿ ಮಾಡಿದೆ.

ಬಿಡುಗಡೆ(ಅಂದಾಜು)- 2018ರ ಅಂತ್ಯಕ್ಕೆ

ಬೆಲೆ(ಅಂದಾಜು)- 12 ರಿಂದ 16 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

07. ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸಿರುವ ಏಕೈಕ ಸಂಸ್ಥೆಯಾದ ಮಹೀಂದ್ರಾ ಸದ್ಯದಲ್ಲೇ ಮತ್ತೊಂದು ವಿನೂತನ ಎಲೆಕ್ಟ್ರಿಕ್ ಕಾರನ್ನು ಹೊರತರುತ್ತಿದ್ದು, ಜನಪ್ರಿಯ ಕೆಯುವಿ100 ಎಸ್‌ಯುವಿ ಆವೃತ್ತಿಯನ್ನು ಎಲೆಕ್ಟ್ರಿಕ್ ಆವೃತ್ತಿಯನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣ ಮಾಡಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಸದ್ಯ ಮಹೀಂದ್ರಾ ಸಂಸ್ಥೆಯು ಇ ವೆರಿಟೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಇನ್ನು ಎಲೆಕ್ಟ್ರಿಕ್ ಕೆಯುವಿ100 ಕಾರು ಸಾಮಾನ್ಯ ಕೆಯುವಿ100 ಮಾದರಿಗೆ ಹೋಲಿಕೆ ಇದ್ದು, ಎಂಜಿನ್ ವಿಭಾಗದಲ್ಲಿ ಮಹತ್ವರ ಬದಲಾವಣೆ ಮಾಡುತ್ತಿದೆ. ಈ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಆಯ್ಕೆ ಮಾಡುವ ಗ್ರಾಹಕರಿಗೆ ಉತ್ತಮ ಆಯ್ಕೆ ನೀಡುತ್ತಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಎಂಜಿನ್ ವೈಶಿಷ್ಟ್ಯತೆ

30 ಕೆಡಬ್ಲ್ಯು ಮೋಟಾರ್ ಮತ್ತು ಲಿಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಕೆಯುವಿ100 ಇವಿ ಕಾರುಗಳು ಪ್ರತಿ ಚಾರ್ಜಿಂಗ್‌ಗೆ 140 ಕಿಮಿ ಮೈಲೇಜ್ ನೀಡಬಲ್ಲ ಗುಣ ಹೊಂದಿವೆ.

ಬಿಡುಗಡೆ(ಅಂದಾಜು)- 2018ರ ಅಂತ್ಯಕ್ಕೆ

ಬೆಲೆ(ಅಂದಾಜು)- 6 ರಿಂದ 8 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

08. ಟಾಟಾ 45ಎಕ್ಸ್ ಕಾನ್ಸೆಪ್ಟ್

ಟಾಟಾ ಮೋಟಾರ್ಸ್ ಸಂಸ್ಥೆಯು ಪ್ರಿಯಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯದಲ್ಲೇ 45ಎಕ್ಸ್ ಕಾನ್ಸೆಪ್ಟ್ ಮಾದರಿಯನ್ನು ಅಭಿವೃದ್ದಿಗೊಳಿಸುವ ಯೋಜನೆ ಚಾಲನೆ ನೀಡಲಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಇಂಪ್ಯಾಕ್ಟ್ ಡಿಸೈನ್ 2.0 ಸಿದ್ದಾಂತ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸಗಳನ್ನು ಹೊಸ ಕಾರಿನಲ್ಲಿ ನೀಡಲಾಗಿದ್ದು, ಶಾರ್ಪ್ ಎಡ್ಜ್‌ಗಳು ಮತ್ತು ಸ್ಪೋರ್ಟಿ ಲುಕ್ ಕಾರಿನ ಹೊರ ನೋಟವನ್ನು ಮತ್ತಷ್ಟು ಹೆಚ್ಚಿಸಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಆದರೇ, ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳನ್ನು ಹೊರತರುವ ಯೋಜನೆ ಹೊಂದಿದೆ.

ಬಿಡುಗಡೆ(ಅಂದಾಜು)- 2019ರ ಅಂತ್ಯಕ್ಕೆ

ಬೆಲೆ(ಅಂದಾಜು)- 9 ರಿಂದ 12 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

09. ಹೋಂಡಾ ಅಮೇಜ್(ನ್ಯೂ ಜನರೇಷನ್)

ಹೋಂಡಾ ಇಂಡಿಯಾ ಸಂಸ್ಥೆಯು ತನ್ನ ಮುಂದಿನ ಪೀಳಿಗೆಯ ಅಮೇಜ್ ಆವೃತ್ತಿಗಳನ್ನು 2018ರ ಅಟೋ ಎಕ್ಸ್‌ ಪೋದಲ್ಲಿ ಭರ್ಜರಿಯಾಗಿ ಪ್ರದರ್ಶನ ಮಾಡಿದ್ದು, ಥೈಲ್ಯಾಂಡ್‌ನಲ್ಲಿರುವ ಹೋಂಡಾದ ಸಂಶೋಧನಾ ಮತ್ತು ಅಭಿವೃದ್ಧಿ ಘಟಕದಲ್ಲಿ ಹೊಸ ಆವೃತ್ತಿಗಳನ್ನು ಅಭಿವೃದ್ಧಿ ಪಡಿಸಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಸೆಡಾನ್ ಆವೃತ್ತಿಗಳಲ್ಲಿರುವ ತನ್ನ ಕಾರು ಮಾದರಿಗಳ ಉನ್ನತ್ತೀಕರಣಕ್ಕಾಗಿ ವಿಶೇಷ ಯೋಜನೆ ರೂಪಿಸುತ್ತಿರುವ ಹೋಂಡಾ ಸಂಸ್ಥೆಯು ಅಮೇಜ್ ಸೇರಿದಂತೆ ಎಲ್ಲಾ ಮಾದರಿಗಳಲ್ಲೂ ವಿನೂತನ ತಂತ್ರಜ್ಞಾನ ಪರಿಚಯಿಸುವ ಮೂಲಕ ಸೆಡಾನ್ ಪ್ರಿಯರಿಗೆ ಹೊಸ ಚಾಲನಾ ಅನುಭವ ಒದಗಿಸುತ್ತಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಇದು ಸ್ಮಾರ್ಟ್‌ಫೋನ್‌ ಇಂಟಿಗ್ರೇಷನ್‌, ನೇವಿಗೇಶನ್‌ ಸೇರಿದಂತೆ ಹಲವಾರು ಫೀಚರ್‌ಗಳಿಗೆ ಅನುಕೂಲ ಮಾಡಿಕೊಡಲಿದ್ದು, ಹೋಂಡಾ ಸಿಟಿಯ ವಿನ್ಯಾಸವನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಿದ್ದರೂ, ಇನ್ನಷ್ಟು ಆಕರ್ಷಕವಾಗಿದೆ.

ಬಿಡುಗಡೆ(ಅಂದಾಜು)- 2018ರ 2ನೇ ತ್ರೈಮಾಸಿಕ ಅವಧಿಗೆ

ಬೆಲೆ(ಅಂದಾಜು)- 7 ರಿಂದ 9 ಲಕ್ಷ

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

10. ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ 2018ರ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಹೊಸ ಕಾರಿನ ಬೆಲೆಗಳು ರೂ. 5.35 ಲಕ್ಷದಿಂದ ಆರಂಭವಾಗಿ ಟಾಪ್ ವೆರಿಯಂಟ್‌ಗಳು ರೂ. 9.15 ಲಕ್ಷ ಬೆಲೆ ಹೊಂದಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಸ್ಟೈಲಿಶ್ ಬಂಪರ್, ನ್ಯೂ ಅಲಾಯ್ ಚಕ್ರಗಳು, ದೊಡ್ಡದಾದ ಟೈಲ್‌ಲ್ಯಾಂಪ್, ನ್ಯೂ ಟೈಲ್‌ಗೇಟ್‌ಗಳು 2018ರ ಎಲೈಟ್ ಐ20 ಪ್ರಮುಖಾಂಶಗಳಾಗಿದ್ದು, ಹೊಸ ನಮೂನೆಯ ಇಂಟಿರಿಯರ್ ಮತ್ತು ಇನ್ಪೋಟೈನ್‍‌ಮೆಂಟ್ ಕೂಡಾ ಗ್ರಾಹಕರನ್ನು ಸೆಳೆಯಲಿವೆ.

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಹಾಗೂ ಬಿಡುಗಡೆಗೊಂಡ ಟಾಪ್ 10 ಕಾರುಗಳು ಯಾವವು?

ಎಂಜಿನ್ ಸಾಮರ್ಥ್ಯ

ಎಲೈಟ್ ಐ20 ಕಾರು ಮಾದರಿಗಳಲ್ಲಿ ಪ್ರಮುಖವಾಗಿ ಮೂರು ಮಾದರಿಗಳನ್ನು ಪರಿಚಯಿಸಲಾಗಿದ್ದು, ಗ್ರಾಹಕರ ಆಯ್ಕೆಗೆ ಅನುಗುಣವಾಗಿ 1.2-ಲೀಟರ್ ಪೆಟ್ರೋಲ್ ಎಂಜಿನ್, 1.4-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಪರಿಚಯಿಸಲಾಗಿದೆ.

Most Read Articles

Kannada
Read more on auto expo 2018 top 10
English summary
Top 10 Best Cars At Auto Expo 2018 - Launches, Unveils And Concepts.
Story first published: Monday, February 12, 2018, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X