ಅಕ್ಟೋಬರ್ 9ಕ್ಕೆ ಬಿಡುಗಡೆಯಾಗಲಿದೆ ಹೋಂಡಾ ಸಿಆರ್-ವಿ ನ್ಯೂ ವರ್ಷನ್
ಜಪಾನ್ ಮೂಲದ ಜನಪ್ರಿಯ ಮೋಟಾರ್ಸ್ ಸಂಸ್ಥೆಯಾದ ಹೋಂಡಾ ತನ್ನ ಬಹುನೀರಿಕ್ಷಿತ ಸಿಆರ್-ವಿ ಡೀಸೆಲ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, 7-ಸೀಟರ್ ಮಾದರಿಯಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುವ ಹೊಸ ಎಸ್‌ಯುವಿ ಕಾರು ಮುಂದಿನ ತಿಂಗಳು 9ರಂದು ಖರೀದಿಗೆ ಅಧಿಕೃತ ಚಾಲನೆ ಸಿಗುವುದು ಖಚಿತಗೊಂಡಿದೆ.

ಐಷಾರಾಮಿ ಎಸ್‌ಯುವಿಗಳಲ್ಲಿ ಮುನ್ನಡೆ ಸಾಧಿಸುತ್ತಿರುವ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಡೀಸೆಲ್ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಹೋಂಡಾ ಸಂಸ್ಥೆಯು ತನ್ನ ಜನಪ್ರಿಯ ಸಿಆರ್-ವಿ ಆವೃತ್ತಿಯನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸುತ್ತಿದ್ದು, ಪೆಟ್ರೋಲ್ ವರ್ಷನ್ ಜೊತೆ ಜೊತೆಗೆ ಪ್ರಮುಖ ಎರಡು ಮಾದರಿಯ ಡೀಸೆಲ್ ಆವೃತ್ತಿಗಳನ್ನು ಪರಿಚಯಿಸುವ ಸುಳಿವು ನೀಡಿದೆ.

ವರದಿಗಳ ಪ್ರಕಾರ, ಹೋಂಡಾ ಸಂಸ್ಥೆಯು ಡೀಸೆಲ್ ವರ್ಷನ್‌ಗಳಲ್ಲಿ 120-ಬಿಎಚ್‌ಪಿ ಪ್ರೇರಿತ ಸಿಂಗಲ್ ಟರ್ಬೋ ಎಂಜಿನ್ ಮತ್ತು 160-ಬಿಎಚ್‌ಪಿ ಪ್ರೇರಿತ ಟ್ವಿನ್ ಟರ್ಬೋ ಎಂಜಿನ್ ಪರಿಚಯಿಸುವ ಸಾಧ್ಯತೆಗಳಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ವಿವಿಧ ಮಾದರಿಗಳನ್ನು ಖರೀದಿಸಬಹುದಾದ ಆಯ್ಕೆ ನೀಡುತ್ತಿದೆ.

ಇನ್ನು ಥಾಯ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿರುವ 2018ರ ಹೋಂಡಾ ಸಿಆರ್-ವಿ ಕಾರುಗಳು 158-ಬಿಹೆಚ್‍ಪಿ ಶಕ್ತಿ ಪಡೆಯಬಲ್ಲ 1.6-ಲೀಟರ್ ಅರ್ಥ್ ಡ್ರೀಮ್ಸ್ ಡೀಸೆಲ್ ಎಂಜಿನ್ ಮಾದರಿಯನ್ನ ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಭಾರತೀಯ ಗ್ರಾಹಕರ ಬೇಡಿಕೆಯ ಮೇರೆಗೆ ಡೀಸೆಲ್ ವಿಶೇಷಣಗಳನ್ನೊಳಗೊಂಡ ಡಿ ಟ್ಯೂನ್ಡ್ ವರ್ಷನ್ ಬಿಡುಗಡೆ ಮಾಡಲಾಗುತ್ತಿದೆ.

ಇದರ ಜೊತೆಗೆ ಫಿಲಿಫೈನ್ಸ್ ನಲ್ಲಿ ಮಾರಾಟಗೊಳ್ಳುತ್ತಿರುವ ಸಿಆರ್-ವಿ 118-ಬಿಹೆಚ್‍ಪಿ ಡೀಸೆಲ್ ಆವೃತ್ತಿಯು ಸಹ ಭಾರತದಲ್ಲೂ ಪರಿಚಯಿಸಲಾಗುತ್ತಿದ್ದು, ಸಿಂಗಲ್ ಟರ್ಬೋ ಎಂಜಿನ್‌ಗಳು 300-ನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಟ್ವಿನ್ ಟರ್ಬೋ ಎಂಜಿನ್‌ಗಳು 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರುತ್ತದೆ.
MOST READ: ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು

ಹೀಗಾಗಿ ಕಾರಿನ ಸಿಂಗಲ್ ಟರ್ಬೋ ಎಂಜಿನ್‌ಗಳು 11.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಸಾಧಿಸಿದ್ದಲ್ಲಿ ಟ್ವಿನ್ ಟರ್ಬೋ ಡೀಸೆಲ್ ಯುನಿಟ್‌ಗಳು 9.7 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಸ್ಪೀಡ್‍ನಲ್ಲಿ ಚಲಾಯಿಸಬಹುದಾದ ಸಾಮರ್ಥ್ಯ ಪಡೆಯಲಿದ್ದು, ಎರಡೂ ಎಂಜಿನ್ ಆವೃತ್ತಿಯನ್ನು ಸಹ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಿರುವ ಪೆಟ್ರೋಲ್ ವರ್ಷನ್‌ಗಳಿಂತಲೂ ಉದ್ದಳತೆಯಲ್ಲಿ ದೊಡ್ಡದಾಗಿರುವ ಡಿಸೇಲ್ ಆವೃತ್ತಿಗಳು, 9 ಏರ್‌ಬ್ಯಾಗ್, ಎಬಿಎಸ್, 2 ವೀಲ್ಹ್ ಡ್ರೈವ್ ಮತ್ತು 4 ವೀಲ್ಹ್ ಡ್ರೈವ್ ಟೆಕ್ನಾಲಜಿ ಆಯ್ಕೆಯೊಂದಿಗೆ ಆಪ್ ರೋಡ್‌ನಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲವು.

ಕಾರಿನ ಉದ್ದಳತೆ
2,662-ಎಂಎಂ ವೀಲ್ಹ್ ಬೆಸ್ ಹೊಂದಿರುವ ಹೋಂಡಾ ಸಿಆರ್-ವಿ ಹೊಸ ಕಾರುಗಳು 4,571-ಎಂಎಂ ಉದ್ದ, 1,885-ಎಂಎಂ ಅಗಲ ಮತ್ತು 1,667-ಎಂಎಂ ಎತ್ತರ ಪಡೆದುಕೊಂಡಿದ್ದು, ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಕಾರಿನ ಬೆಲೆ ಮತ್ತು ಬಿಡುಗಡೆ
ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿರುವ ಸಿಆರ್-ವಿ ಡೀಸೆಲ್ ವರ್ಷನ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.26 ಲಕ್ಷದಿಂದ ರೂ.30 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.
MOST READ: ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?


Click it and Unblock the Notifications








