ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

ಹೊಸ ಕಾರು ಖರೀದಿಸಿದ ನಂತರ ಅದನ್ನು ಖುಷಿಯಿಂದ ಚಲಾಯಿಸಲು ಅತ್ಯುತ್ಸಾಹದಿಂದ ತಯಾರಾಗಿರುತ್ತಾರೆ. ಇದಕ್ಕೆಂದು ಕೆಲವರು ಲಾಂಗ್ ಡ್ರೈವ್‍‍ಗೆ ಕೂಡಾ ಪ್ಲಾನ್ ಮಾಡುತ್ತಾರೆ. ಕುಡಿದ ಅಮಲಿನಲ್ಲಿಯೊ ಅಥವಾ ಕಣ್ಣು ಮಂಜಾಗಿ ಕೆಲವೊಮ್ಮೆ ಡ್ರೈವಿಂಗ್ ತಪ್ಪಿ

By Rahul Ts

ಹೊಸ ಕಾರು ಖರೀದಿಸಿದ ನಂತರ ಅದನ್ನು ಖುಷಿಯಿಂದ ಚಲಾಯಿಸಲು ಅತ್ಯುತ್ಸಾಹದಿಂದ ತಯಾರಾಗಿರುತ್ತಾರೆ. ಇದಕ್ಕೆಂದು ಕೆಲವರು ಲಾಂಗ್ ಡ್ರೈವ್‍‍ಗೆ ಕೂಡಾ ಪ್ಲಾನ್ ಮಾಡುತ್ತಾರೆ. ಕುಡಿದ ಅಮಲಿನಲ್ಲಿಯೊ ಅಥವಾ ಕಣ್ಣು ಮಂಜಾಗಿ ಕೆಲವೊಮ್ಮೆ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗುತ್ತಾರೆ. ಅಂತಹುದೆ ಎಂದು ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

ಮುಂಜಾನೆ ಡ್ರೈವ್‍‍ಗೆಂದು ತೆರಳಿದ್ದ ಹೊಸ ರೋಲ್ಸ್ ರಾಯ್ಸ್ ಗೋಸ್ತ್ ಕಾರು ಕಂಟ್ರೋಲ್ ತಪ್ಪಿ ಮುಂಬೈ‍ನ ನಗರದ ರಸ್ತೆಯ ಪಕ್ಕದಲ್ಲಿನ ಚರಂಡಿಯನ್ನು ಅಪ್ಪಳಿಸಿದೆ. ಪಾಂಡಿಚೆರಿಯಿಂದ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಪಡೆದ ಈ ಕಾರು ಮುಂಬೈ‍ನ ಜುಹುನಲ್ಲಿನ ಸಿಟಿಜನ್ ಹೋಟೆಲ್‍‍ಗೆ ಹೋಗುವ ಹಾದಿಯಲ್ಲಿ ಈ ಘಟನೆಯು ಸಂಭವಿಸಿದೆ.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

ನಿಯಂತ್ರಣ ತಪ್ಪಿ ಬಸ್‍‍ಸ್ಟಾಪ್‍ನ ಪಕ್ಕದಲ್ಲಿದ ಫುಟ್‍ಪಾತ್‍ನ ಮೇಲೆ ಏರಿದ್ದು, ರಸ್ತೆಯ ಚರಂಡಿಗೆ ಬಿದ್ದಿದೆ. ಬಿದ್ದು ಸ್ವಲ್ಪ ಸಮಯದ ನಂತರ ಮಾಲಿಕನು ಟೋ ವೆಹಿಕಲ್‍‍ಗಾಗಿ ಕಾಯ್ದಿರುವ ವೇಳೆ ಆಗಲೇ ಹಲವಾರು ಮಂದಿ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದರು.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

ಸ್ಥಳಕ್ಕೆ ಸರಿಯಾದ ಸಮಯದಲ್ಲಿ ಪೊಲೀಸರು ತಲುಪಿದರು. ಆದರೆ ದುರದೃಷ್ಟವಶಾತ್ ಟೋ ವೆಹಿಕಲ್ ಚರಂಡಿಯಲ್ಲಿ ಬಿದಿದ್ದ ರೋಲ್ಸ್ ರಾಯ್ಸ್ ಕಾರನ್ನು ಎತ್ತಲು ವಿಫಲವಾಯಿದು. ನಿಯಂತ್ರಣ ತಪ್ಪಿದ ಕಾರಿನ ಬಂಪರ್ ಕೊಂಚ ಬಿರುಕುಬಿಟ್ಟಿದ್ದು, ಹರಸಾಹಸದ ನಂತರ ಕಾರನ್ನು ಹೊರತೆಗೆಯಲಾಯಿತು.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

ಇನ್ನು ರೋಲ್ಸ್ ರಾಯ್ಸ್ ಗೋಸ್ಟ್ ಕಾರಿನ ಬಗ್ಗೆ ಹೇಳುವುದಾದರೆ ಸುಮಾರು 7 ಕೋಟಿ ರುಪಾಯಿಗೆ ಮಾರಟಗೊಳ್ಳುತ್ತಿರುವ ಈ ಕಾರು ಹಲವಾರು ಸೆಲೆಬ್ರಿಟಿಗಳಿಗೆ ಮತ್ತು ರಾಜಕಾರಣಿಗಳಿಗೆ ನೆಚ್ಚಿನ ಕಾರು ಇದಾಗಿದೆ. ಈ ಕಾರು 5399ಎಮ್ಎಮ್ ಉದ್ದ, 1948ಎಮ್ಎಮ್ ಅಗಲ, 1550ಎಮ್ಎಮ್ ಎತ್ತರ ಮತ್ತು 150ಎಮ್ಎಮ್‍‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

ರೋಲ್ಸ್ ರಾಯ್ಸ್ ಗೋಸ್ಟ್ ಕಾರಿನ ಮುಂಭಾಗದಲ್ಲಿ ಫಾಗ್ ಲ್ಯಾಂಪ್ಸ್, ಪವರ್ ಅಡ್ಜಸ್ಟಬಲ್ ಎಕ್ಸ್ಟೀರಿಯರ್ ಮಿರರ್ಸ್, ಅಡ್ಜಸ್ಟಬಲ್ ಹೆಡ್‍‍ಲೈಟ್, ಸ್ಮೋಕ್ ಹೆಡ್‍‍ಲ್ಯಾಂಪ್ಸ್, ಟಿಂಟೆಡ್ ಗ್ಲಾಸ್, ಸನ್ ರೂಫ್, ಇಂಟಿಗ್ರೇಟೆಡ್ ಆಂಟೆನ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

5 ಜನ ಕೂರಬಹುದಾದ ಈ ಕಾರಿಗೆ 19 ಇಂಚಿನ ಅಲಾಯ್ ಚಕ್ರಗಳನ್ನು ಒದಗಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ರೋಲ್ಸ್ ರಾಯ್ಸ್ ಗೋಸ್ತ್ ಕಾರಿನಲ್ಲಿ ಆಂತಿ ಲಾಕ್ ಬ್ರೇಕಿಂಗ್, ಪಾರ್ಕಿಂಗ್ ಸೆನಾರ್ಸ್, ಬ್ರೇಕ್ ಅಸಿಸ್ಟ್, ಚೈಲ್ಡ್ ಸೇಫ್ಟಿ ಲಾಕ್ಸ್, ಪ್ಯಾಸ್ಸೆಂಜರ್ ಏರ್‍‍ಬ್ಯಾಗ್, ಡ್ರೈವರ್ ಏರ್‍‍ಬ್ಯಾಗ್, ಸೈಡ್ ಏರ್‍‍ಬ್ಯಾಗ್, ಪವರ್ ಡೋರ್ ಲಾಕ್ ಮತ್ತು ಇನ್ನಿತರೆ ಸುರಕ್ಷಾ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

ರೋಲ್ಸ್ ರಾಯ್ಸ್ ಗೋಸ್ಟ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍‍ಬೋರ್ಡ್, ಲೆದರ್ ಸೀಟ್‍‍ಗಳು, ರಿಯರ್ ಸೀಟ್ ಹೆಡ್‍‍ರೆಸ್ಟ್, ಎಸಿ ವೆಂಟ್ಸ್, ಕಪ್ ಹೋಲ್ಡರ್‍‍ಗಳು, ಫ್ರಂಟ್ ಆಂಡ್ ರಿಯರ್ ಸ್ಪೀಕರ್ಸ್, ಆಡಿಯೊ ಕಂಟ್ರೋಲ್, ಡ್ಯುಯಲ್ ಟ್ರಿಪ್ ಮೀಟರ್, ಟಚ್‍‍ಸ್ಕ್ರೀನ್ ಡಿಸ್ಪ್ಲೆ ಮತ್ತು ಇನ್ನಿತರೆ ಐಷಾರಾಮಿ ಸೌಲತ್ತುಗಳನ್ನು ಈ ಕಾರಿನಲ್ಲಿ ಒದಗಿಸಲಾಗಿದೆ.

ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಚರಂಡಿಗೆ ಜಾರಿದ ಹೊಸ ರೋಲ್ಸ್ ರಾಯ್ಸ್ ಕಾರು..

ಎಂಜಿನ್ ಸಾಮರ್ಥ್ಯ

ರೋಲ್ಸ್ ರಾಯ್ಸ್ ಗೋಸ್ಟ್ ಕಾರುಗಳು 6.6 ಲೀಟರ್ 48ವಿ ವಿ12 ಪೆಟ್ರೋಲ್ ಎಂಜಿನ್ ಸಹಾಯದಿಂದ 603ಬಿಹೆಚ್‍‍ಪಿ ಮತ್ತು 840ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಆಟೊಮ್ಯಾಟಿಕ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ.

Most Read Articles

Kannada
English summary
New Rolls Royce Ghost crashes into a Mumbai footpath during first drive.
Story first published: Saturday, September 8, 2018, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X