ಮಾರುತಿ ಸುಜುಕಿ ಸ್ವಿಫ್ಟ್ ಕಾರು ಖರೀದಿ ಮಾಡುವ ಯೋಜನೆ ಇದ್ಯಾ.? ಹಾಗಾದ್ರೆ ಈ ಸ್ಟೋರಿ ಓದಿ

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯು ತನ್ನ ಜನಪ್ರಿಯ ಹ್ಯಾಚ್‍‍ಬ್ಯಾಕ್ ಕಾರು ಮಾದರಿಯಾದ ಸ್ವಿಫ್ಟ್ ಕ್ರ್ಯಾಶ್ ಟೆಸ್ಟಿಂಗ್‍ನ ವೇಳೆ ಅತಿ ಕಡಿಮೆ ರೇಟಿಂಗ್ ಪಡೆದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾದ್ರೆ ಕ್ರ್ಯಾಶ್ ಟೆಸ್ಟಿಂಗ್ ವೇಳೆ ಮಾರುತಿ ಸುಜುಕಿ ಸ್ವಿಫ್ಟ್ ಪಡೆದ ಅಂಕ ಎಷ್ಟು ಎಂದು ತಿಳಿಯಲು ಮುಂದಕ್ಕೆ ಓದಿರಿ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಖರೀದಿ ಮಾಡುವ ಯೋಜನೆ ಇದ್ಯಾ.? ಹಾಗಾದ್ರೆ ಈ ಸ್ಟೋರಿ ಓದಿ

ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಹ್ಯಾಚ್‍‍ಬ್ಯಾಕ್ ಕಾರುಗಳಲ್ಲಿ ಒಂದಾಗಿದ್ದು, ಇದೇ ಫೆಬ್ರವರಿ ತಿಂಗಳಿನಲ್ಲಿ ಹೊಸ ತಲೆಮಾರಿನ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಇದೀಗ ಈ ಕಾರಿನ ಕ್ರ್ಯಾಶ್ ಟೆಸ್ಟ್ ವರದಿಯು ಬಹಿರಂಗಗೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಖರೀದಿ ಮಾಡುವ ಯೋಜನೆ ಇದ್ಯಾ.? ಹಾಗಾದ್ರೆ ಈ ಸ್ಟೋರಿ ಓದಿ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ಕಾರನ್ನೇ ಕ್ರ್ಯಾಶ್ ಟೆಸ್ಟ್ ಅನ್ನು ಮಾಡಲಾಗಿದ್ದು, ಈ ಕಾರನ್ನು ಸ್ವತಃ ಭಾರತದಲ್ಲಿಯೆ ತಯಾರಿಸಲಾಗಿದೆ. ಸ್ವಿಫ್ಟ್ ಕಾರು ಕ್ರ್ಯಾಷ್ ಟೆಸ್ಟ್ ನಲ್ಲಿ 5 ಅಂಕಗಳಿಗೆ ಕೇವಲ 2 ಅಂಕಗಳನ್ನು ಪಡೆದುಕೊಂಡಿದ್ದು, ಗ್ರಾಹರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಖರೀದಿ ಮಾಡುವ ಯೋಜನೆ ಇದ್ಯಾ.? ಹಾಗಾದ್ರೆ ಈ ಸ್ಟೋರಿ ಓದಿ

ಕ್ರ್ಯಾಶ್ ಟೆಸ್ಟಿಂಗ್‍ನ ವೇಳೆ ಕಾರಿನಲ್ಲಿ ಎರಡು ಏರ್‍‍ಬ್ಯಾಗ್ ಮತ್ತು 1,079 ಕಿಲೋಗ್ರಾಂನ ತೂಕವನ್ನು ಇರಿಸಲಾಗಿದ್ದು, ಸುರಕ್ಷತೆಯ ಪರವಾಗಿ ಕೆವಲ ಎರಡು ಅಂಕಗಳನ್ನು ಪಡೆದುಕೊಂಡಿದೆ. ಆದರೆ ಇತರೇ ದೇಶಗಳಿಗೆ ರಫ್ತು ಮಾಡಲಾಗುತ್ತಿರುವ ಸ್ವಿಫ್ಟ್ ಕಾರುಗಳು 5ಕ್ಕೆ 3 ಅಂಕಗಳನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಖರೀದಿ ಮಾಡುವ ಯೋಜನೆ ಇದ್ಯಾ.? ಹಾಗಾದ್ರೆ ಈ ಸ್ಟೋರಿ ಓದಿ

ಕ್ರ್ಯಾಶ್ ಟೆಸ್ಟಿಂಗ್‍ನ ಕುರಿತಾಗಿ ಗ್ಲೋಬಲ್ ಎನ್‍ಸಿಎಪಿ " ಪರೀಕ್ಷೆಯಲ್ಲಿ ಇಬ್ಬರು ಪ್ರಾಯದ ವಯಸ್ಕರ ಎದೆ ಭಾಗಕ್ಕೆ ಹೆಚ್ಚು ಗಾಯವನ್ನು ಉಂಟು ಮಾಡಿದ ಪರಿಣಾಮ ಕೇವಲ ಎರಡು ಅಂಕಿಗಳನ್ನು ನೀಡಲಾಗಿದೆ. ಜೊತೆಗೆ ಈ ಕಾರು ಕಳಪೆ ಗುಣಮಟ್ಟದ ರಕ್ಷಣಾ ಉಪಕರಣಗಳನ್ನು ಪಡೆದುಕೊಂಡಿರುವುದರಿಂದ ಡ್ರೈವರ್ ಹಾಗೂ ಮುಂಭಾಗದಲ್ಲಿ ಕೂರುವ ಪ್ರಯಾಣಿಕರ ಮೊಣಕಾಲುಗಳಿಗೂ ಕೂಡಾ ರಕ್ಷಣೆ ಇಲ್ಲ ಎಂದು ಹೇಳಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಖರೀದಿ ಮಾಡುವ ಯೋಜನೆ ಇದ್ಯಾ.? ಹಾಗಾದ್ರೆ ಈ ಸ್ಟೋರಿ ಓದಿ

ಯುರೋಪಿಯನ್ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಮಾರಾಟಗೊಳ್ಳುತ್ತಿರುವ ಸ್ಬಿಫ್ಟ್ ಕಾರಿಗೆ ಹೋಲಿಸಿದರೆ ದೇಶದಲ್ಲಿ ಮಾರಾಟಗೊಳ್ಳುತ್ತಿರುವ ಕಾರು ಕ್ರ್ಯಾಷ್ ಟೆಸ್ಟಿಂಗ್‍ನಲ್ಲಿ ಕಡಿಮೆ ಅಂಕವನ್ನು ಪಡೆದುಕೊಂಡಿದ್ದು, ವಿದೇಶಿಗಳಿಗೆ ರಫ್ತು ಮಾಡಲಾಗುತ್ತಿರುವ ಕಾರುಗಳಲ್ಲಿ ಕರ್ಟೈನ್ ಏರ್‍‍ಬ್ಯಾಗ್‍‍ಗಳು ಮತ್ತು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಎಂಬ ಸುರಕ್ಷಾ ವೈಶಿಷ್ಟ್ಯತೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಆದರೆ ನಮ್ಮ ದೇಶದಲ್ಲಿ ಮಾರಾಟಗೊಳ್ಳುತ್ತಿರುವ ಕಾರಿನಲ್ಲಿ ಆಯ್ಕೆಯನ್ನಾಗಿ ಕೂಡಾ ನೀಡಲಿಲ್ಲ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಖರೀದಿ ಮಾಡುವ ಯೋಜನೆ ಇದ್ಯಾ.? ಹಾಗಾದ್ರೆ ಈ ಸ್ಟೋರಿ ಓದಿ

ಹೊಸ ತಲೆಮಾರಿನ ಸ್ವಿಫ್ಟ್ ಕಾರುಗಳಿಗೆ ಡ್ಯುಯಲ್ ಎರ್‌ಬ್ಯಾಗ್‍ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿರುವುದು ಉತ್ತಮ ನಡೆಯಾಗಿದ್ದು, ಇದು ಭಾರತೀಯ ಸರ್ಕಾರದ ಹೊಸ ಕ್ರ್ಯಾಷ್ ಟೆಸ್ಟ್ ನಿಯಮಗಳ ಪ್ರಯೋಜನಕಾರಿ ಪರಿಣಾಮವನ್ನು ಖಚಿತಪಡಿಸುತ್ತದೆ.

ಆದರೆ ಯೂರೋಪ್ ಹಾಗೂ ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ಕಾರುಗಳಲ್ಲಿ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ಸ್ವಿಫ್ಟ್ ಕಾರನ್ನು ಮತ್ತಷ್ಟು ಸುರಕ್ಷಾ ವೈಶಿಷ್ಟ್ಯತೆಗಳೊಂದಿಗೆ ಅಭಿವೃಧಿಗೊಳಿಸಲಿದೆ ಎಂಬ ಭರವಸೆ ಇದೆ.

Most Read Articles

Kannada
English summary
New maruti swift crash test report released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X