ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲು ಸಿದ್ಧಗೊಂಡಿರುವ 2018ರ ಸ್ವಿಫ್ಟ್ ಹೊಸ ಕಾರು ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ದಾಖಲೆ ನಿರ್ಮಿಸಿದೆ.

By Praveen

Recommended Video

Auto Rickshaw Explodes In Broad Daylight

ದೇಶದ ಅಗ್ರ ಪ್ರಯಾಣಿಕ ಕಾರು ನಿರ್ಮಾಣ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಅತಿ ನೂತನ ಸ್ವಿಫ್ಟ್ ಕಾರನ್ನು ಇದೇ ತಿಂಗಳು 7ರಂದು ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡುತ್ತಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲು ಸಿದ್ಧಗೊಂಡಿರುವ ಹೊಸ ಕಾರು ಬಿಡುಗಡೆಗೂ ಮುನ್ನವೇ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ದಾಖಲೆ ನಿರ್ಮಿಸಿದೆ.

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಕಳೆದ ವಾರವಷ್ಟೇ ಹೊಸ ಸ್ವಿಫ್ಟ್ ಕಾರು ಖರೀದಿಸಲು ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಗೊಳಿಸಲಾಗಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿರುವ 2018ರ ಸ್ವಿಫ್ಟ್ ಕಾರುಗಳ ಖರೀದಿಗಾಗಿ ಬರೋಬ್ಬರಿ 32 ಸಾವಿರ ಬುಕ್ಕಿಂಗ್ ಪಡೆಯಲಾಗಿದೆ.

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಸುಧಾರಿತ ತಂತ್ರಜ್ಞಾನಗಳ ತಳಹದಿಯಲ್ಲಿ ನಿರ್ಮಾಣವಾಗಿರುವ 2018 ಸ್ವಿಫ್ಟ್, ಭಾರತೀಯ ಕಾರು ವಿಭಾಗದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ. ಯುವ ಹಾಗೂ ಹಿರಿಯ ವಾಹನ ಪ್ರೇಮಿಗಳು ಒಂದೇ ರೀತಿಯಲ್ಲಿ ಇಷ್ಟಪಡುವ ಕಾರು ಇದಾಗಿದೆ.

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಐದನೇ ತಲೆಮಾರಿನ ಹರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಹ್ಯಾಚ್‌ಬ್ಯಾಕ್ ಕಾರು ಪ್ರಿಯರ ಹಾಟ್ ಫೇವರಿಟ್ ಎಂದೇ ಬಿಂಬಿತವಾಗಿರುವ ಥರ್ಡ್ ಜನರೇಷನ್ ಸ್ವಿಫ್ಟ್ ಕಾರಿನ ಬೆಲೆಗಳನ್ನು ಕೂಡಾ ರಿವಿಲ್ ಮಾಡಲಾಗಿದ್ದು, ಹೊಸ ಕಾರಿನ ಆರಂಭಿಕ ಬೆಲೆ 4.99 ಲಕ್ಷ ಮತ್ತು ಟಾಪ್ ವೆರಿಯಂಟ್ ಬೆಲೆಯು 7.99 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Trending On DriveSpark Kannada:

ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಈ ಹಿಂದೆಯೇ ಮಾತನಾಡಿದ್ದ ಮಾರುತಿ ಸುಜುಕಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಎಸ್. ಕೈಲಾಸಿ ಅವರೇ ಹೊಸ ಕಾರಿನ ಬೆಲೆಯನ್ನು ಬಹಿರಂಗಗೊಳಿಸಿದ್ದರು.

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ತಂತ್ರರೂಪಿಸಿರುವ ಮಾರುತಿ ಸುಜುಕಿ, ಹ್ಯುಂಡೈ ಗ್ರ್ಯಾಂಡ್ ಐ10, ಫೋರ್ಕ್ಸ್‌ವ್ಯಾಗನ್ ಪೊಲೊ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ತ್ರೀವ ಹೊಡೆತ ನೀಡುವ ಬಗ್ಗೆ ಸುಳಿವು ನೀಡಿದೆ.

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಇನ್ನು ಬಿಡುಗಡೆಗೊಳ್ಳಲಿರುವ 2018ರ ಸ್ವಿಫ್ಟ್ ಆವೃತ್ತಿಯು ಪ್ರಸಕ್ತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಆವೃತ್ತಿಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿರುವುದು ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಬಹಿರಂಗಗೊಂಡಿದೆ.

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಹೀಗಾಗಿ ಹಿಂದಿನ ಮಾದರಿಗಿಂತ ಹೊಸ ಆವೃತ್ತಿಯಲ್ಲಿ 50 ಕೆ.ಜಿ ತೂಕವನ್ನು ಕಡಿತಗೊಳಿಸಲಾಗಿದ್ದು, ಡಿಜೈರ್ ಕಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮಾದರಿಯಲ್ಲೇ ಹೊರ ವಿನ್ಯಾಸಗಳನ್ನು ಜೋಡಿಸುವ ಮೂಲಕ ಮಾರುತಿ ಸುಜುಕಿ ಪ್ರಿಯರಿಗೆ ಡಬಲ್ ಧಮಾಕಾ ನೀಡಲಾಗುತ್ತಿದೆ.

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಹಾಗೂ 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಆವೃತ್ತಿಯು, ಡೀಸೆಲ್ ಮಾದರಿಯಲ್ಲಿ 82-ಬಿಎಚ್‌ಪಿ ಹಾಗೂ 75-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

Trending On DriveSpark Kannada:

ಟಿಬೆಟ್ ಮಾರ್ಗವಾಗಿ ವಿಮಾನಗಳ ಹಾರಾಟ ನಿಷಿದ್ಧವಾಗಿರುವುದು ಏಕೆ ಅಂತಾ ಗೊತ್ತಾ?

100 ಸಿಸಿ ಬೈಕ್ ಎಂಜಿನ್‌ನಲ್ಲಿ ದುಬಾರಿ ಬೆಲೆಯ ಲಂಬೋರ್ಗಿನಿ ಕಾರು ನಿರ್ಮಾಣ ಮಾಡಿದ ರೈತ...!!

ಬಿಡುಗಡೆಗೂ ಮುನ್ನ ದಾಖಲೆ ಪ್ರಮಾಣದ ಬುಕ್ಕಿಂಗ್ ಗಿಟ್ಟಿಸಿಕೊಂಡ 2018ರ ಸ್ವಿಫ್ಟ್

ಬಿಡುಗಡೆ ಯಾವಾಗ?

ನಾಳೆಯಿಂದ ನೋಯ್ಡಾದಲ್ಲಿ ಆರಂಭಗೊಳ್ಳಲಿರುವ 2018ರ ದೆಹಲಿ ಆಟೋ ಎಕ್ಸ್‌ಪೋ ಅನಾವರಣಗೊಳ್ಳಲಿರುವ ಹೊಸ ಸ್ವಿಫ್ಟ್ ಕಾರುಗಳು, ಫೆಬ್ರುವರಿ ತಿಂಗಳಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ.

Most Read Articles

Kannada
English summary
Read In Kannada: 2018 all-new Maruti Swift hatchback races to 30,000 bookings in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X