ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

Written By:

ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಸದ್ಯದಲ್ಲೇ ತನ್ನ ಕರೊಲ್ಲಾ ಸರಣಿಯಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಎಂಜಿನ್ ಆಯ್ಕೆ ಮತ್ತು ಕಾರಿನ ವಿನ್ಯಾಸಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಕರೊಲ್ಲಾ ಸೆಡಾನ್ ಕಾರುಗಳು ಅತಿಹೆಚ್ಚು ಜನಪ್ರಿಯವಾಗುತ್ತಿದ್ದು, ಇದರ ಬೆನ್ನಲ್ಲೇ ಕರೊಲ್ಲಾ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಸಹ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಟೊಯೊಟಾ ಸಂಸ್ಥೆಯು ಸುಳಿವು ನೀಡಿದೆ.

ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

ಟಿಎನ್‌ಜಿಎ ಪ್ಲ್ಯಾಟ್ ಫಾರ್ಮ್ ಆಧರಿತ ವಿನ್ಯಾಸಗಳೊಂದಿಗೆ ಕರೊಲ್ಲಾ ಹ್ಯಾಚ್‌ಬ್ಯಾಕ್‌ಗಳು ಅಭಿವೃದ್ಧಿಗೊಳಿಸುತ್ತಿರುವ ಟೊಯೊಟಾ, ಹೊಸ ಕಾರುಗಳನ್ನು 2019ಕ್ಕೆ ನಡೆಯಲಿರುವ ನ್ಯೂಯಾರ್ಕ್ ಆಟೋ ಮೇಳದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳಿಸುವ ಯೋಜನೆಯಲ್ಲಿದೆ.

ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

ತದನಂತರವಷ್ಟೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಾಗುವ ಕರೊಲ್ಲಾ ಹ್ಯಾಚ್‌ಬ್ಯಾಕ್ ಕಾರುಗಳು, ಸ್ಪೋರ್ಟಿ ಮತ್ತು ಕ್ಲಾಸಿಕ್ ಲುಕ್‌ಗಳೊಂದಿಗೆ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಮೋಡಿ ಮಾಡಲಿವೆ.

ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

ಇನ್ನು ಕರೊಲ್ಲಾ ಹ್ಯಾಚ್‌ಬ್ಯಾಕ್ ಕಾರುಗಳು ಮುಂಭಾಗದಲ್ಲಿ ವಿಸ್ತರಿತ ಗ್ರಿಲ್, ನ್ಯೂ ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್‌ ಲೈಟ್, ರೂಫ್ ಮೌಂಟೆಂಡ್ ಮತ್ತು ಶಾರ್ಕ್ ಫೀನ್ ಆಂಟೆನಾಗಳನ್ನು ಹೊಂದಿರಲಿವೆ.

ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

ಜೊತೆಗೆ ಕಾರಿನ ಒಳಭಾಗದಲ್ಲಿ ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಜೋಡಣೆ ಮಾಡಲಾಗಿದ್ದು, ಲಾರ್ಜ್ ಪ್ಲೋಟರಿಂಗ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸ್ಪೋರ್ಟಿ ಕ್ಯಾಬಿನ್, ಆಲ್ ಬ್ಲ್ಯಾಕ್ ಥೀಮ್ ವಿನ್ಯಾಸಗಳನ್ನು ಪಡೆದುಕೊಂಡಿವೆ.

ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

ಎಂಜಿನ್ ಸಾಮರ್ಥ್ಯ

ಕರೊಲ್ಲಾ ಕಾರುಗಳು 2.0 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಥವಾ 1.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿವೆ.

ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

ಕಾರಿನಲ್ಲಿ ಸುರಕ್ಷತೆ 7 ಏರ್‌ಬ್ಯಾಗ್ ಒದಗಿಸಲಾಗಿದ್ದು, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟಂಟ್, ಲೈನ್ ಡಿಪಾರ್ಚರ್ ವಾರ್ನಿಂಗ್, ಡೈಮಾನಿಕ್ ರಡಾರ್ ಕ್ರೂಸ್ ಕಂಟ್ರೊಲರ್ ಮತ್ತು ಹೈ ಆಟೋ ಬೀಮ್ಸ್ ಅಳವಡಿಸಲಾಗಿದೆ.

ಮಧ್ಯಮ ಗಾತ್ರದ ಕರೊಲ್ಲಾ ಹ್ಯಾಚ್‌ಬ್ಯಾಕ್ ಪರಿಚಯಿಸಲಿದೆ ಟೊಯೊಟಾ

ಒಟ್ಟಿನಲ್ಲಿ ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳಲ್ಲಿ ತುಸು ದುಬಾರಿ ಎನ್ನಿಸಿದರೂ ಸ್ಪೋರ್ಟಿ ಲುಕ್ ಕಾರು ಪ್ರಿಯರನ್ನು ಸೆಳೆಯಲಿರುವ ಕರೊಲ್ಲಾ ಹ್ಯಾಚ್‌ಬ್ಯಾಕ್, ಭಾರತೀಯ ಮಾರುಕಟ್ಟೆಯಲ್ಲಿ ಯಾವಗ ಬಿಡುಗಡೆ ಆಗುತ್ತೆ ಎನ್ನುವ ಬಗ್ಗೆ ಇದುವರಿಗೂ ಯಾವುದೇ ನಿಖರ ಮಾಹಿತಿಗಳು ಲಭ್ಯವಾಗಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು...

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Read more on toyota hatchback
English summary
2019 Toyota Corolla Hatchback Revealed.
Story first published: Monday, March 26, 2018, 12:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark