ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರುಗಳು ಇದೀಗ ಹೊಸ ಪ್ಯಾಟ್‌ಫಾರ್ಮ್ ಆಧರಿತ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದ್ದು, ಹೊಸ ಕಾರುಗಳು ಈ ಹಿಂದಿಗಿಂತಲೂ ಹೆಚ್ಚು ಬಲಶಾಲಿ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ.

By Praveen Sannamani

2016ರಲ್ಲಿ ಮೊದಲ ಬಾರಿಗೆ ವಿಶ್ವಾದ್ಯಂತ ಬಿಡುಗಡೆಯಾಗಿ ಹೊಸ ಸಂಚಲನ ಸೃಷ್ಠಿಸಿದ್ದ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರುಗಳು ಇದೀಗ ಹೊಸ ಪ್ಯಾಟ್‌ಫಾರ್ಮ್ ಆಧರಿತ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿದ್ದು, ಹೊಸ ಕಾರುಗಳು ಈ ಹಿಂದಿಗಿಂತಲೂ ಹೆಚ್ಚು ಬಲಶಾಲಿ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ.

ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಎಂಜಿನ್ ಸಾಮರ್ಥ್ಯ ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆ ಮತ್ತು ಬಲಿಷ್ಠ ಬಾಡಿ ಕಿಟ್ ಹೊಂದಿರುವ ಪೊಲೊ ಜಿಟಿಐ ಕಾರುಗಳು ನಿಗದಿತ ಮಟ್ಟದ ಮಾರಾಟ ಪ್ರಕ್ರಿಯೆಯನ್ನು ದಾಖಲಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಕಾರಣ ಎಕ್ಸ್‌ಶೋರಂ ಪ್ರಕಾರ ರೂ.26 ಲಕ್ಷ ಬೆಲೆ ಹೊಂದಿರುವ ಪೊಲೊ ಜಿಟಿಐ ಕಾರುಗಳು ಇತರೆ ಹ್ಯಾಚ್‌ಬ್ಯಾಕ್ ಕಾರುಗಳಿಂತಲೂ ಹೆಚ್ಚಿನ ಮಟ್ಟ ಬೆಲೆ ಹೊಂದಿದ್ದು, ಈ ಹಿನ್ನೆಲೆ ಅಗ್ಗದ ಬೆಲೆ ಪೊಲೊ ಜಿಟಿಐ ಅಭಿವೃದ್ಧಿ ಮಾಡಲಾಗುತ್ತಿದೆ.

ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಪೊಲೊ ಜಿಟಿ ಮಾರಾಟ ಕುಂಠಿತಕ್ಕೆ ಮತ್ತೊಂದು ಕಾರಣ, ತ್ರಿ ಡೋರ್ ವಿನ್ಯಾಸ ಹೊಂದಿರುವ ಪೊಲೊ ಜಿಟಿಐ ಕಾರುಗಳು ಭಾರತೀಯ ಗ್ರಾಹಕರ ಅಭಿರುಚಿಗೆ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ 6ನೇ ಜನರೇಷನ್ ವಿನ್ಯಾಸಗಳ ಬದಲಾಗಿ ಎಂಕ್ಯೂಬಿ ಎ0 ಪ್ಯಾಟ್‌ಫ್ಯಾರ್ಮ್ ಆಧಾರದ ಮೇಲೆ 2018ರ ಪೊಲೊ ಕಾರುಗಳು ಅಭಿವೃದ್ಧಿಯಾಗಲಿವೆ.

ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಎಂಕ್ಯೂಬಿ ಎ0 ಪ್ಯಾಟ್‌ಫ್ಯಾರ್ಮ್ ಆಧಾರದ ಮೇಲೆ ಹೊಸ ಕಾರುಗಳು ಮಾರುಕಟ್ಟೆಗೆ ಬಂದಲ್ಲಿ, ಬೆಲೆ ಮತ್ತು ಎಂಜಿನ್ ವಿಭಾಗದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಜೊತೆಗೆ ತ್ರಿ ಡೋರ್ ಬದಲಾಗಿ 5 ಡೋರ್ ವಿನ್ಯಾಸ ಮತ್ತು ಹಳೆಯ ಕಾರಿಗಿಂತ ಹೆಚ್ಚಿನ ಮಟ್ಟದ ಕ್ಯಾಬಿನ್ ವಿನ್ಯಾಸ ಪಡೆಯಲಿದೆ.

ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಪೊಲೊ ಜಿಟಿಐ ಕಾರುಗಳನ್ನು ಅಭಿವೃದ್ಧಿಗೊಳಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಈ ಹಿಂದೆ 1.8-ಲೀಟರ್ ಫೌರ್ ಸಿಲಿಂಡರ್ ಎಂಜಿನ್ ಒದಗಿಸುತ್ತಿದ್ದು, ಇದೀಗ ಹೊಸ ಕಾರುಗಳಲ್ಲಿ 1.8-ಲೀಟರ್ ಟಿಎಸ್ಐ ಮತ್ತು 2.0-ಲೀಟರ್ ಎರಡು ಯುನಿಟ್‌ಗಳನ್ನು ಪರಿಚಯಿಸುವ ಸುಳಿವು ನೀಡಿದೆ.

ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಇನ್ನು ಹೊಸ ಕಾರುಗಳಲ್ಲಿ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಳವಡಿಸುವ ಸಾಧ್ಯತೆಗಳಿದ್ದು, ಫ್ರಂಟ್ ವೀಲ್ಹ್ ಪವರ್ ಸಿಸ್ಟಂ ಸೇರಿಸುವ ಸಾಧ್ಯತೆಗಳಿವೆ. ಈ ಮೂಲಕ ಹೊಸ ಕಾರುಗಳ ಚಾಲನೆಯನ್ನು ಮತ್ತಷ್ಟು ಆರಾಮಗೊಳಿಸಲಿದೆ.

ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಕಾರಿನ ಹೊಸ ವೈಶಿಷ್ಟ್ಯತೆ

ಭಾರತೀಯ ರಸ್ತೆಗಳಿಗೆ ಹೋಂದಾಣಿಕೆ ಆಗುವ ಉದ್ದೇಶದಿಂದ ಹೊಸ ಪೊಲೊ ಜಿಟಿಐ ಕಾರುಗಳಲ್ಲಿ 5-ಸ್ಪೀಕ್ ಅಲಾಯ್ ಚಕ್ರಗಳನ್ನು ಜೋಡಣೆ ಮಾಡಲಾಗುತ್ತಿದ್ದು, ಗ್ರೌಂಡ್ ಕ್ಲಿಯರೆನ್ಸ್ ಯಾವುದೇ ಬದಲಾವಣೆ ತರಲಾಗಿಲ್ಲ.

ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಡ್ಯುಯಲ್ ಎಕ್ಸಾಸ್ಟ್, ಎಲ್‌ಇಡಿ ಟೈಲ್‌ಲ್ಯಾಂಪ್, ಸಿಂಗಲ್ ಜಿಟಿಐ ಬ್ಯಾಡ್ಜ್ ವೈಶಿಷ್ಟ್ಯತೆಗಳು ಹಾಟ್ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲಿದ್ದು, ಔಟ್‌ಗೊಯಿಂಗ್ ಮಾಡೆಲ್‌ಗಿಂತಲೂ ಹೆಚ್ಚಿನ ಗುಣಮಟ್ಟ ಮತ್ತು ಕಡಿಮೆ ಬೆಲೆಯಲ್ಲಿ ಖರೀದಿ ಲಭ್ಯವಾಗುವ ನೀರಿಕ್ಷೆಯಲ್ಲಿದೆ.

ಬರಲಿರುವ ಫೋಕ್ಸ್‌ವ್ಯಾಗನ್ ಅಗ್ಗದ ಬೆಲೆಯ ಪೊಲೊ ಜಿಟಿಐ ಸ್ಪೆಷಲ್ ಏನು?

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ದುಬಾರಿ ಬೆಲೆ ಹಿನ್ನೆಲೆ ಪೊಲೊ ಜಿಟಿಐ ಕಾರುಗಳ ಖರೀದಿ ಆಸೆಯಿದ್ದರೂ ದುಬಾರಿ ಬೆಲೆಯಿಂದಾಗಿ ಖರೀದಿ ಯೋಜನೆಯಿಂದ ಹಿಂದೆ ಸರಿಯುತ್ತಿದ್ದ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಹೊಸ ಕಾರುಗಳು 2019ರ ಕೊನೆಯಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಫೋಕ್ಸ್‌ವ್ಯಾಗನ್ ಸುಳಿವು ನೀಡಿದೆ.

Most Read Articles

Kannada
Read more on volkswagen polo
English summary
New 2018 Volkswagen Polo GTi India Launch In Plans — Pricing Is The Challenge.
Story first published: Wednesday, May 2, 2018, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X