TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ದುಬಾರಿ ಬೆಲೆಯಲ್ಲಿ ಬಿಡುಗಡೆಗೊಳ್ಳಲಿದೆ ಪೋರ್ಷೆ ಜಿಟಿ2 ಆರ್‍ಎಸ್ ಕಾರು..
ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಪೋರ್ಷೆ ತಮ್ಮ 911 ಜಿಟಿ2 ಆರ್‍ಎಸ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಇದೇ ಜುಲೈ 10ರಂದು ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. ಹೊಸದಾಗಿ ಬಿಡುಗಡೆಗೊಳ್ಳಲಿರುವ ಈ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 3.88 ಕೋಟಿಗೆ ಮಾರಾಟಗೊಳ್ಳಲಿದೆ.
ಪೋರ್ಷೆ ಭಾರತಕ್ಕೆ ಜಿಟಿ2 ಆರ್‍ಎಸ್ ಒಂದಕ್ಕಿಂತ ಹೆಚ್ಚು ಘಟಕಗಳನ್ನು ಹಂಚಿಕೊಂಡಿದೆ ಮತ್ತು ಗ್ರಾಹಕರಿಂದ ಕಾರಿನ ಕುರಿತು ಬಹಳಷ್ಟು ಪ್ರಶ್ನೆಗಳನ್ನು ಸ್ವೀಕರಿಸಿದೆ ಎಂದು ವರದಿ ಹೇಳುತ್ತದೆ. ಜಿಟಿ3 ಆರ್‍ಎಸ್ ಮತ್ತು ಜಿಟಿ3 ಆರ್‍ಎಸ್ ಕ್ರಮವಾಗಿ 2017 ಮತ್ತು 2018 ರಲ್ಲಿ ಕ್ರಮವಾಗಿ 911 ರ ಪ್ರದರ್ಶನ ಆವೃತ್ತಿಯನ್ನು ಪೋರ್ಷೆ ಪರಿಚಯಿಸಿದೆ.
ಮೊದಲಬಾರಿಗೆ ಪೋರ್ಷೆ ಜಿಟಿ2 ಆರ್‍ಎಸ್ ಕಾರು 2017ರಲ್ಲಿ ನಡೆದ ಗುಡ್‍ವುಡ್ ಫೆಸ್ಟಿವಲ್ ಆಫ್ ಸ್ಪೀಡ್‍ನಲ್ಲಿ ಕಾಣಿಸಿಕೊಂಡಿದ್ದು, ಪೋರ್ಷೆ ಕಾರುಗಳ ಲೈನ್‍ಅಪ್‍ನಲ್ಲಿ ತನ್ನ ಸಾಮರ್ಥ್ಯದಿಂದ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಇದಲ್ಲದೆ ಈ ಕಾರು ಎರಡನೆಯ ತಲೆಮಾರಿನದಾಗಿದ್ದು, ಸಂಸ್ಥೆಯು ನಿರ್ಮಾಣಿಸಿದ ಉತ್ತಮ ಕಾರಾಗಿದೆ.
ಎಂಜಿನ್ ಸಾಮರ್ಥ್ಯ
ಪೋರ್ಷೆ ಜಿಟಿ2 ಆರ್‍ಎಸ್ 3.8 ಲೀಟರ್ ಫ್ಲಾಕ್ಸ್-ಸಿಕ್ಸ್, ಟ್ವಿನ್ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 686ಬಿಹೆಚ್‍ಪಿ ಮತ್ತು 750ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು ಜೆಡ್‍ಎಫ್ ಅಧಾರಿತ 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಗಂಟೆಗೆ 340 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.
ಪೋರ್ಷೆ ಜಿಟಿ2 ಆರ್‍ಎಸ್ ಸ್ಟ್ಯಾಂಡರ್ಡ್ ಮಾದರಿಯ 911 ಕಾರಿಗಿಂತ ತೂಕದಲ್ಲಿ ಕಡಿಮೆಯಿರಲಿದ್ದು, ಇದಕ್ಕೆ ಕಾರಣ ಕಾರ್ಬನ್ ಫೈಬರ್ ಬೊನೆಟ್, ಫ್ರಂಟ್ ವಿಂಗ್ಸ್, ಒಆರ್‍ವಿಎಮ್ ಮತ್ತು ಡಕ್ಟ್ ಸರ್ರೌಂಡ್ಸ್ ಅನ್ನು ಅಳದವಡಿಸಿರುವುದು. ಟ್ರ್ಯಾಕ್-ಕೇಂದ್ರಿತ ಕಾರ್ ಕೂಡ ಟೈಟಾನಿಯಂ ಎಕ್ಸಾಸ್ಟ್ ಸಿಸ್ಟಮ್ ಅನ್ನು ಪಡೆದಿದ್ದು,ಅದು 7kg ಹಗುರವಾದ ಮತ್ತು ಮೆಗ್ನೀಶಿಯಮ್ ಮೇಲ್ಛಾವಣಿ ಸ್ಟ್ಯಾಂಡರ್ಡ್ ಆಗಿರಲಿದೆ.
ಪೋರ್ಷೆ ಜಿಟಿ2 ಆರ್‍ಎಸ್ ಒಟ್ತು ತೂಕ 1,470 ಕೆಜಿ ಇದ್ದು, ಹಾರ್ಡ್ಕೋರ್ 911 ಅನ್ನು ವೆಸಚ್ ಪ್ಯಾಕೇಜ್ನೊಂದಿಗೆ ನೀಡಲಾಗಿದ್ದು, ಒಟ್ಟಾರೆ ತೂಕವನ್ನು ಮತ್ತೊಂದು 30 ಕಿಲೋಗ್ರಾಂ ಕಡಿಮೆಗೊಳಿಸುತ್ತದೆ.
ಈ ಪ್ಯಾಕೇಜ್ ಕಾರ್ಬನ್ ಫೈಬರ್ ರೋಫ್, ರೋಲ್ ಬಾರ್ಸ್ ಮತ್ತು ಮ್ಯಾಗ್ನೀಸಿಯಮ್ ಅಲಾಯ್ ವ್ಹೀಲ್ ಅನ್ನು ಪಡೆಯಲಿದ್ದು, ಪೋರ್ಷೆ 911 ಜಿಟಿ 2 ಆರ್‍ಎಸ್ ನೂರ್ಬರ್ಗ್ರಿಂಗ್ ಸುತ್ತ 6: 47.30 ರಷ್ಟು ಲ್ಯಾಪ್ ಸಮಯದೊಂದಿಗೆ ವೇಗವಾಗಿ ಚಲಿಸಬಲ್ಲದು.
ಪೋರ್ಷೆ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಹಲವಾರು ಫರ್ಫಾರ್ಮೆನ್ಸ್ ಕಾರುಗಳನ್ನು ಪರಿಚಯಿಸಿದ್ದು, ಇದೀಗ ಹೊಸದಾಗಿ ಹೆಚ್ಚು ಸಾಮರ್ಥ್ಯವುಳ್ಳ 911 ಜಿಟಿ2 ಆರ್‍ಎಸ್ ಕಾರನ್ನು ಪರಿಚಯಿಸಲು ಮುಂದಾಗಿದೆ. ಆದರೆ ಸಂಸ್ಥೆಯು ಈ ಕಾರಿನ ಪರ್ಫಾರ್ಮೆನ್ಸ್ ಅನ್ನು ಹೆಚ್ಚಿಸಲು ಬಳಸುವ ವೀಸಾಕ್ ಪ್ಯಾಕೇಜ್ ಅನ್ನು ಭಾರತದಲ್ಲಿ ಬಿಡುಗಡೆಗೊಳ್ಳುವ ಕಾರಿನ ಜೊತೆಗೆ ನೀಡಲಿದೆಯೆ ಎಂದು ಕಾಯ್ದು ನೋಡಬೇಕಿದೆ.