ರೆನಾಲ್ಟ್ ಇಂಡಿಯಾ ಸಂಸ್ಥೆಯು ಕ್ವಿಡ್ ಕಾರುಗಳ ಖರೀದಿ ಮಾಡುವ ಗ್ರಾಹಕರಿಗಾಗಿ ವಿಶೇಷ ಆಫರ್ ಒಂದನ್ನು ಘೋಷಣೆ ಮಾಡಿದ್ದು, ಕಾರು ಉತ್ಪಾದಕರು ಇದುವರೆಗೆ ನೀಡುತ್ತಿರುವ ಆಫರ್‌ಗಳಲ್ಲೇ ಇದು ಮಹತ್ವದ ನಿರ್ಧಾರ ಎನ್ನಬಹುದು.
ಬಿಡುಗಡೆಯಾದ ನಂತರ ಇದುವರೆಗೆ 2.2 ಲಕ್ಷ ಮಾರಾಟ ದಾಖಲಿಸಿರುವ ಕ್ವಿಡ್ ಕಾರುಗಳ ಗ್ರಾಹಕರಿಗೆ ರೆನಾಲ್ಟ್ ಸಂಸ್ಥೆಯು ಹಿಂದೆಂದೂ ಯಾವುದೇ ಕಾರು ಉತ್ಪಾದಕರು ನೀಡಿರದ ಆಫರ್ ಒಂದನ್ನು ನೀಡಿದ್ದು, 1 ಲಕ್ಷ ಕಿ.ಮಿ ತನಕ ರೋಡ್ ಸೈಡ್ ಅಸಿಸ್ಟಂಟ್ ಒದಗಿಸಲು ನಿರ್ಧರಿಸಿದೆ.
ಅಂದರೇ, ಕ್ವಿಡ್ ಕಾರುಗಳ ಮೇಲೆ ಸುಮಾರು ವರ್ಷಗಳ ಕಾಲ ವಾರಂಟಿ ದೊರಲಿದ್ದು, ಇದು ಈವರೆಗಿನ ಬೆಸ್ಟ್ ಆಫರ್ ಎಂದು ಹೇಳಬಹುದು. ಇದು ಕೇವಲ ಕ್ವಿಡ್ ಕಾರುಗಳ ಮೇಲೆ ಅಷ್ಟೇ ಅಲ್ಲದೇ ಇನ್ನುಳಿದ ರೆನಾಲ್ಟ್ ಕಾರುಗಳಿಗೂ ನಿರ್ದಿಷ್ಟ ಅವಧಿಗೆ ಹೆಚ್ಚುವರಿ ವಾರಂಟಿ ದೊರೆಯಲಿದೆ.
ಸದ್ಯ ರೆನಾಲ್ಟ್ ಕಾರುಗಳ ಖರೀದಿಸುವ ಗ್ರಾಹಕರಿಗೆ 2 ವರ್ಷಗಳ ಕಾಲ ಉಚಿತವಾಗಿ ರೋಡ್ ಸೈಡ್ ಅಸಿಸ್ಟಂಟ್ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಇದೀಗ ಅದೇ ಸೌಲಭ್ಯವನ್ನು 4 ವರ್ಷಕ್ಕೆ ಹೆಚ್ಚಿಸಲಾಗಿದೆ.
ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಹೆಚ್ಚುವರಿಯಾಗಿ 2 ವರ್ಷಗಳ ರೋಡ್ ಸೈಡ್ ಅಸಿಸ್ಟಂಟ್ ಸೌಲಭ್ಯಕ್ಕಾಗಿ ಗ್ರಾಹಕರು ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲಾ. ಜೊತೆಗೆ ರೋಡ್ ಸೈಡ್ ಅಸಿಸ್ಟಂಟ್ ಹೆಚ್ಚುವರಿಗಾಗಿ ರೆನಾಲ್ಟ್ ಸಂಸ್ಥೆಯು ಕಾರುಗಳ ಬೆಲೆಯಲ್ಲೂ ಯಾವುದೇ ಬದಲಾವಣೆ ತಂದಿಲ್ಲ.
ಇನ್ನು ಹ್ಯಾಚ್‌ಬ್ಯಾಕ್ ಕ್ವಿಡ್ ಕಾರುಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದಲೇ ಈ ಆಫರ್ ಅನ್ನು ನೀಡಲಾಗುತ್ತಿದ್ದು, ಕ್ಯಾಪ್ಟರ್, ಡಸ್ಟರ್ ಮತ್ತು ಲೊಡ್ಜಿ ಕಾರುಗಳಿಗೂ ಈ ಹೊಸ ಆಫರ್ ಅನ್ವಯವಾಗಲಿದೆ.
ಜೊತೆಗೆ ಕಾರುಗಳ ಮರುಮಾರಾಟ ನಂತರವೂ ಉಚಿತವಾಗಿ ರೋಡ್ ಸೈಡ್ ಅಸಿಸ್ಟಂಟ್ ಸೌಲಭ್ಯಗಳನ್ನು ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ರೆನಾಲ್ಟ್, ಕಾರುಗಳ ಗುಣಮಟ್ಟ, ಎಂಜಿನ್ ಕಾರ್ಯಕ್ಷಮತೆ ಮತ್ತು ರೀ ಸೆಲ್ ಮೌಲ್ಯವನ್ನು ಹೆಚ್ಚಿಸಲು ಸಹಕರಿಸಲಿದೆ.
ಅದರಲ್ಲೂ ಕ್ವಿಡ್ ಕಾರುಗಳ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿರುವ ರೆನಾಲ್ಟ್ ಸಂಸ್ಥೆಯು ಹೊಸ ಆಫರ್ ನಂತರ ಭಾರೀ ಬೇಡಿಕೆ ಸೃಷ್ಠಿಸುವ ತವಕದಲ್ಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಆಫರ್ ಯಾವ ರೀತಿ ವರ್ಕೌಟ್ ಆಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark