ಹೊಸ ಸುರಕ್ಷಾ ಸೌಲಭ್ಯದೊಂದಿಗೆ ಬಿಡುಗಡೆಯಾದ ಟಾಟಾ ಹೊಸ ಏಸ್ ಗೋಲ್ಡ್

Written By:

ಹೊಸ ಎಂಜಿನ್ ಆಯ್ಕೆ ಮತ್ತು ಸುಧಾರಿತ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಹೊತ್ತು ಬಂದಿರುವ ಏಸ್ ಗೋಲ್ಡ್ ವಾಹನದ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 3.75 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಪ್ರಿಮಿಯಂ ಲುಕ್‌ನೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಹೊಸ ಸುರಕ್ಷಾ ಸೌಲಭ್ಯದೊಂದಿಗೆ ಬಿಡುಗಡೆಯಾದ ಟಾಟಾ ಹೊಸ ಏಸ್ ಗೋಲ್ಡ್

ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿರುವ ಏಸ್ ಗೋಲ್ಡ್ ವಾಹನಗಳು ವಿವಿಧ ಬಣ್ಣಗಳಲ್ಲಿ ಆಯ್ಕೆಗೆ ಲಭ್ಯವಿದ್ದು, ಚಾಲಕರಿಗೆ ಅರಾಮದಾಯಕ ಪ್ರಯಾಣಕ್ಕಾಗಿ ಈ ಬಾರಿ ವಿಸ್ತರಿತ ಇಂಟಿರಿಯರ್ ಮತ್ತು ಹೊಸ ಸುರಕ್ಷಾ ಸೌಲಭ್ಯಗಳವನ್ನು ಒದಗಿಸಲಾಗಿದೆ. ಈ ಮೂಲಕ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮತ್ತಷ್ಟು ಹೊಸ ಫೀಚರ್ಸ್‌ಗಳ ಬಗೆಗಿನ ಮಾಹಿತಿ ಇಲ್ಲಿದೆ.

ಹೊಸ ಸುರಕ್ಷಾ ಸೌಲಭ್ಯದೊಂದಿಗೆ ಬಿಡುಗಡೆಯಾದ ಟಾಟಾ ಹೊಸ ಏಸ್ ಗೋಲ್ಡ್

ಟಾಟಾ ಏಸ್ ಗೋಲ್ಡ್ ಮಾದರಿಗಳು ಈ ಹಿಂದಿನ ಸಾಮಾನ್ಯ ಏಸ್ ವಾಹನಗಳಿಂತ ತಾಂತ್ರಿಕವಾಗಿ ಒಂದೇ ಆಗಿದ್ದರು ಹೊರ ಮತ್ತು ಒಳವಿನ್ಯಾಸದಲ್ಲಿ ಗುರುತರ ಬದಲಾವಣೆ ತರಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಹೊಸ ವಾಹನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಹೊಸ ಸುರಕ್ಷಾ ಸೌಲಭ್ಯದೊಂದಿಗೆ ಬಿಡುಗಡೆಯಾದ ಟಾಟಾ ಹೊಸ ಏಸ್ ಗೋಲ್ಡ್

ಎಂಜಿನ್ ಸಾಮರ್ಥ್ಯ

702ಸಿಸಿ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿರುವ ಟಾಟಾ ಏಸ್ ಗೋಲ್ಡ್ ವಾಹನಗಳು, ವಾಣಿಜ್ಯ ಚಟುವಟಿಕೆಗಳಿಗೆ ಅನುಕೂಲಕರವಾಗುವಂತೆ ವಿನ್ಯಾಸ ಕೈಗೊಳ್ಳಲಾಗಿದೆ. ಜೊತೆಗೆ ಗ್ರಾಹಕರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಎಂಜಿನ್ ಕಾರ್ಯಕ್ಷಮತೆಯಲ್ಲಿ ದಕ್ಷತೆ ತರಲಾಗಿದ್ದು, ಇದು ಉತ್ತಮ ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಲಿವೆ.

ಹೊಸ ಸುರಕ್ಷಾ ಸೌಲಭ್ಯದೊಂದಿಗೆ ಬಿಡುಗಡೆಯಾದ ಟಾಟಾ ಹೊಸ ಏಸ್ ಗೋಲ್ಡ್

ಇನ್ನು ಟಾಟಾ ಏಸ್‌ ವಾಹನಗಳು 2005ರಲ್ಲಿ ಮೊದಲ ಬಾರಿಗೆ ಬಿಡುಗಡೆ ಆದ ಬಳಿಕ ಇದುವರೆಗೆ ಹತ್ತು ಹಲವು ಬದಲಾವಣೆಗಳನ್ನು ಕಾಣುತ್ತಲೇ ಗ್ರಾಹಕರ ಬೇಡಿಕೆಯಲ್ಲಿ ಸಮತೋಲನ ಕಾಯ್ದುಕೊಂಡಿದ್ದು, ಏಸ್ ಫ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಅಭಿವೃದ್ಧಿಗೊಂಡಿರುವ ಜಿಪ್, ಮೆಗಾ, ಮಿಂಟ್, ಮಂತ್ರಾ, ಐರಿಷ್ ಮತ್ತು ಮ್ಯಾಜಿಕ್ ವಾಣಿಜ್ಯಗಳು ಸಹ ಬೇಡಿಕೆಯಲ್ಲಿ ಹಿಂದೆ ಬಿದ್ದಿಲ್ಲ.

ಹೊಸ ಸುರಕ್ಷಾ ಸೌಲಭ್ಯದೊಂದಿಗೆ ಬಿಡುಗಡೆಯಾದ ಟಾಟಾ ಹೊಸ ಏಸ್ ಗೋಲ್ಡ್

ಇದಕ್ಕೆ ಕಾರಣ, ಟಾಟಾ ವಾಣಿಜ್ಯ ವಾಹನಗಳ ಎಂಜಿನ್ ಕಾರ್ಯಕ್ಷಮತೆ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಟಾಟಾ ಸಂಸ್ಥೆ ಕಡೆಯಿಂದ 24x7 ಬ್ರೇಕ್ ಡೌನ್ ಅಸಿಸ್ಟಂಟ್ ಸೌಲಭ್ಯಗಳು ಏಸ್ ವಾಹನಗಳ ಆಯ್ಕೆ ಮೌಲ್ಯವನ್ನು ಹೆಚ್ಚಿಸಿದ್ದು, ರೀ ಸೇಲ್ ಮೌಲ್ಯವು ಸಹ ಉತ್ತಮವಾಗಿದೆ.

ಹೊಸ ಸುರಕ್ಷಾ ಸೌಲಭ್ಯದೊಂದಿಗೆ ಬಿಡುಗಡೆಯಾದ ಟಾಟಾ ಹೊಸ ಏಸ್ ಗೋಲ್ಡ್

ಇದರಿಂದಾಗಿಯೇ ದೇಶಿಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಮಾರಾಟ ಪ್ರಮಾಣದಲ್ಲಿ ಶೇ.68ರಷ್ಟು ಪಾಲು ಟಾಟಾ ಹೊಂದಿದ್ದು, ಮಿನಿ ಟ್ರಕ್ ವಿಭಾಗದಲ್ಲಿನ ಏಸ್ ವಾಹನಗಳು ಮಾರಾಟವು ಟಾಟಾ ಸಂಸ್ಥೆಗೆ ಹೊಸ ಬಲ ತಂದಿದೆ ಎನ್ನಬಹುದು.

ಹೊಸ ಸುರಕ್ಷಾ ಸೌಲಭ್ಯದೊಂದಿಗೆ ಬಿಡುಗಡೆಯಾದ ಟಾಟಾ ಹೊಸ ಏಸ್ ಗೋಲ್ಡ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಸ ಫೋರ್ಡ್ ಎಂಡೀವರ್...

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ 7 ಸೀಟರ್ ಕಾರುಗಳಿವು..

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು...

English summary
Tata Ace Gold Launched In India; Priced At Rs 3.75 Lakh.
Story first published: Friday, April 13, 2018, 11:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark