ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

Written By:

ದೇಶಿಯ ಮಾರುಕಟ್ಟೆಯಲ್ಲಿ ಪ್ರಿಮಿಯಂ ಸ್ಕೂಟರ್ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಯೆ ಬ್ರಿಟಿಷ್ ಸ್ಕೂಟರ್ ಉತ್ಪಾದನಾ ಸ್ಕೊಮಾಡಿ ಸಂಸ್ಥೆಯು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶ ಮಾಡುತ್ತಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಯುಕೆ ಮತ್ತು ಯುರೋಪಿನ್ ಮಾರುಕಟ್ಟೆಗಳಲ್ಲಿ ಈಗಾಗಲೇ ವಿವಿಧ ಸ್ಕೂಟರ್ ಉತ್ಪನ್ನಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಭಾರತದಲ್ಲೂ ಹೊಸ ನಮೂನೆ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ಮುಂದಾಗಿರುವ ಸ್ಕೊಮಾಡಿ ಸಂಸ್ಥೆಯು ಗ್ರಾಹಕರ ಸೆಳೆಯುವ ತಂತ್ರ ರೂಪಿಸುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ನಿಯಮಾವಳಿಗಳ ಪ್ರಕಾರ, ವಿದೇಶಿ ಸಂಸ್ಥೆಯೊಂದು ಭಾರತದಲ್ಲಿ ವಾಣಿಜ್ಯ ವಹಿವಾಟು ನಡೆಸಲು ಸ್ಥಳೀಯ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಬೇಕಿದ್ದು, ಇದಕ್ಕಾಗಿ ಪುಣೆ ಮೂಲದ ಎಜೆ ಪರ್ಫಾಮೆನ್ಸ್ ಎನ್ನುವ ಸಂಸ್ಥೆಯೊಂದಿಗೆ ಸ್ಕೊಮಾಡಿ ಸಂಸ್ಥೆಯು ಕೈಜೋಡಿಸಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಸ್ಕೂಟರ್ ಉತ್ಪಾದನೆಯಲ್ಲಿ ಸುಮಾರು 60 ವರ್ಷಗಳ ಅನುಭವ ಹೊಂದಿರುವ ಸ್ಕೊಮಾಡಿ ಸಂಸ್ಥೆಯ ಸ್ಕೂಟರ್‌ಗಳಿಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಭರವಸೆಯಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಸ್ಕೂಟರ್ ಮಾದರಿಗಳನ್ನು ಅಭಿವೃದ್ಧಿ ಮಾಡಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಸದ್ಯ ಸ್ಕೊಮಾಡಿ ಉತ್ಪಾದನೆಯ ಟಿಟಿ125 ಎನ್ನುವ ಸ್ಕೂಟರ್ ಮಾದರಿಯು ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯ ಹೊಂದಿದ್ದು, ಅದೇ ಮಾದರಿಯನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ಬಗ್ಗೆ ಸ್ಕೊಮಾಡಿ ಸಂಸ್ಥೆಯು ಯೋಜನೆ ರೂಪಿಸುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಭಾರತದಲ್ಲಿ ಈಗಾಗಲೇ ಸಿಬಿಯು ಮುಖಾಂತರ ಸಾವಿರಾರು ಗ್ರಾಹಕರು ದುಬಾರಿ ಬೆಲೆ ಪಾವತಿಸಿ ಸ್ಕೊಮಾಡಿ ಟಿಟಿ125 ಸ್ಕೂಟರ್‌ಗಳನ್ನು ಆಮದು ಮಾಡಿಕೊಂಡಿದ್ದು, ಆಕರ್ಷಕ ಹೊರನೋಟ ಮತ್ತು ಉತ್ತಮ ಎಂಜಿನ್ ಕಾರ್ಯಕ್ಷಮತೆಯು ಸ್ಕೂಟರ್ ಪ್ರಿಯರನ್ನು ಸೆಳೆಯುತ್ತಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಎಂಜಿನ್ ಸಾಮರ್ಥ್ಯ

124.6 ಸಿಸಿ ಸಿಂಗಲ್ ಸಿಲಿಂಡರ್, 2 ವೆವ್ ಎಂಜಿನ್ ಹೊಂದಿರುವ ಸ್ಕೊಮಾಡಿ ಸ್ಕೂಟರ್‌ಗಳು ಎಪ್ರಿಲಿಯಾ ಹಾಗೂ ವೆಸ್ಪಾ ಮಾದರಿಯಲ್ಲಿ ಇವು ಸಿದ್ದಗೊಂಡಿವೆ. ಈ ಮೂಲಕ 11 ಬಿಎಚ್‌ಪಿ ಮತ್ತು 15 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಸ್ಟೈಲಿಶ್ ಲುಕ್ ಜೊತೆಗೆ ಪರ್ಫಾಮೆನ್ಸ್‌ಗೂ ಹೇಳಿಮಾಡಿಸಿದಂತಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಇದರ ಜೊತೆಗೆ ಸ್ಕೂಮಾಡಿ ಸ್ಕೂಟರ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತುನೀಡಲಾಗಿದ್ದು, ಡಬಲ್ ಹೈಡ್ರೊಲಿಕ್ ಫ್ರಿಲೋಡ್ ಅಡ್ಜೆಸ್ಟೆಬಲ್ ಶಾರ್ಕ್ ಹೊಂದಿರಲಿವೆ. ಇದಲ್ಲದೇ 12-ಇಂಚಿನ ಅಲಾಯ್ ಚಕ್ರಗಳನ್ನು ಮತ್ತು ದುಬಾರಿ ಬೆಲೆಯ ಪೇರೆಲಿ ಟ್ಯೂಬ್‌ಲೆಸ್ ಟೈರ್ ಪಡೆದುಕೊಂಡಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಸ್ಕೂಟರ್ ವಿನ್ಯಾಸ

ಸುಮಾರು 100 ಕೆಜಿ ತೂಕ ಹೊಂದಿರುವ ಸ್ಕೊಮಾಡಿ ಟಿಟಿ125 ಸ್ಕೂಟರ್‌ಗಳು ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರಲಿದ್ದು, 11 ಲೀಟರ್ ಫ್ಯೂಲ್ ಟ್ಯಾಂಕ್, ಕಸ್ಟಮೈಜ್ಡ್ ಬಣ್ಣದ ಆಯ್ಕೆ, ಮುಂಭಾಗದ ಚಕ್ರದಲ್ಲಿ 220ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಚಕ್ರದಲ್ಲಿ 200ಎಂಎಂ ಡಿಸ್ಕ್ ಬ್ರೇಕ್ ವ್ಯವಸ್ಥೆ ಅಳವಡಿಕೆ ಇದೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಸ್ಕೊಮಾಡಿ ಸ್ಕೂಟರ್‌ಗಳ ಬೆಲೆಗಳು (ಎಕ್ಸ್ ಶೋರಂ ಪ್ರಕಾರ)

ಸುಧಾರಿತ ಎಂಜಿನ್ ಹಾಗೂ ಐಷಾರಾಮಿ ಗುಣಲಕ್ಷಣಗಳನ್ನು ಹೊಂದಿರುವ ಸ್ಕೂಮಾಡಿ ಸ್ಕೂಟರ್‌ಗಳು ಇತರೆ ಪ್ರಿಮಿಯಂ ಸ್ಕೂಟರ್‌ಗಳಿಂತಲೂ ತುಸು ದುಬಾರಿಯಾಗಿರಲಿದ್ದು, ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 1.98 ಲಕ್ಷಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಸ್ಕೊಮಾಡಿ ಹೊಸ ಸ್ಕೂಟರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರ್ಡನ್ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ಪ್ರಿಮಿಯಂ ಸ್ಕೂಟರ್ ಪ್ರಿಯರನ್ನು ಸೆಳೆಯಲಿರುವ ಸ್ಕೊಮಾಡಿ ಸ್ಕೂಟರ್‌ಗಳು ತುಸು ದುಬಾರಿ ಎನ್ನಿಸಿದರೂ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಂಡುಕೊಳ್ಳುವ ಸಾಧ್ಯತೆಗಳಿದ್ದು, ಕ್ಲಾಸ್ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ರೈಲು ತಡೆ ವೇಳೆ ಅವಘಡ- ಹೈ ಟೆನ್ಷನ್ ವೈರ್ ತಾಗಿ ಸುಟ್ಟುಹೋದ ಯುವಕ

ನಟ ಹೃತಿಕ್ ರೋಷನ್‍ನ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

Read more on auto news scooter
English summary
Scomadi Scooters To Enter India — To Introduce 125cc Scooter.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark