ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

By Praveen Sannamani

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಸದ್ಯ ಅತ್ಯುತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದ್ದು, ಗ್ರಾಹಕರ ಆಕರ್ಷಣೆಗಾಗಿ ಇದೀಗ ಮತ್ತೊಂದು ವಿನೂತನ ಮಾದರಿಯ ಬಣ್ಣದ ಆಯ್ಕೆಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ಟಾಟಾ ಮೋಟಾರ್ಸ್ ಸಂಸ್ಥೆಯು ಈಗಾಗಲೇ ವಿವಿಧ ಮಾದರಿಯ ಸ್ಪೆಷಲ್ ಎಡಿಷನ್ ನೆಕ್ಸಾನ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ರೋಸ್ ಗೋಲ್ಡ್ ಎನ್ನುವ ಹೊಸ ಬಣ್ಣದ ಆಯ್ಕೆಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವುದು ಬಹಿರಂಗವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ದೇಶದ ಪ್ರಮುಖ ಟಾಟಾ ಡೀಲರ್ಸ್ ಬಳಿ ಈಗಾಗಲೇ ರೋಸ್ ಗೋಲ್ಡ್ ಎಡಿಷನ್ ಮಾದರಿಯನ್ನ ಪ್ರದರ್ಶನ ಮಾಡುತ್ತಿರುವುದು ಮುಂದಿನ ಕೆಲವೇ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದೆ.

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ರೋಸ್ ಗೋಲ್ಡ್ ಬಣ್ಣದಂತೆ ಪ್ರತಿ ಹಂತದಲ್ಲೂ ವಿಶೇಷ ಬಣ್ಣದ ಆಯ್ಕೆಯನ್ನು ಹೊಂದಿರುವ ಹೊಸ ಕಾರು ಎಂಜಿನ್ ವಿಭಾಗವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಅಂಶಗಳಲ್ಲೂ ಬದಲಾವಣೆ ಪಡೆದಿದೆ ಎನ್ನಬಹುದು.

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ಕಾರಿನ ಒಳಭಾಗದಲ್ಲೂ ರೋಸ್ ಗೋಲ್ಡ್ ಬಣ್ಣ ಲೇಪಿತ ಒಳವಿನ್ಯಾಸವನ್ನು ಕಾಣಬಹುದಾಗಿದ್ದು, ಸಾಮಾನ್ಯ ಆವೃತ್ತಿಗಳಿಂತ ತುಸು ದುಬಾರಿ ಎನ್ನಸಿಲಿದೆ ಎನ್ನವ ಮಾಹಿತಿಗಳನ್ನು ಲಭ್ಯವಾಗಿದೆ. ಹೀಗಾಗಿ ಗ್ರಾಹಕರ ಆಕರ್ಷಣೆ ಮಾಡಲು ಬೆಲೆ ಏರಿಕೆ ಮಾಡದೇ ಹೊಸ ಆವೃತ್ತಿ ಬಿಡುಗಡೆಗೊಳಿಸುವ ಬಗ್ಗೆ ಟಾಟಾ ಹೊಸ ಯೋಜನೆ ರೂಪಿಸುತ್ತಿದೆ ಎನ್ನುವ ಮಾಹಿತಿಗಳು ಸಹ ಇವೆ.

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ಅದರ ಹೊರತಾಗಿ ಕಂಪ್ಯಾಕ್ಟ್ ಕಾರುಗಳ ಬೇಡಿಕೆಯಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ನೆಕ್ಸಾನ್ ಕಾರುಗಳು ವಿಶೇಷ ಸೌಲಭ್ಯಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಕಳೆದ ತಿಂಗಳ ಹಿಂದಷ್ಟೇ 50 ಸಾವಿರ ನೆಕ್ಸಾನ್ ಕಾರುಗಳ ಉತ್ಪಾದನೆ ಗುರಿತಲುಪಿರುವುದು ಹೊಸ ಹೆಗ್ಗಳಿಕೆ ಕಾರಣವಾಗಿದೆ.

Most Read: ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಮರಾಜೊ ಹೊಸ ಎಂಪಿವಿ

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ಟಾಟಾ ನೆಕ್ಸಾನ್ ಕಾರುಗಳಲ್ಲಿ ಕ್ರೋಮ್ ಗಾರ್ನಿಶ್ಡ್ ಒಆರ್‍‍ವಿಎಂಎಸ್, ಬಂಪರ್, ಫ್ರಂಟ್ ಗ್ರಿಲಿ ಉಪಕರಣಗಳನ್ನು ಸೇರಿಸಲಾಗಿದ್ದು ಇದೀಗ ಸಂಸ್ಥೆಯು ಹೊಸದಾಗಿ ಈ ಕಾರುಗಳಿಗೆ ಮ್ಯಾನುವನ್ ಸನ್‍‍ರೂಫ್ ಅನ್ನು ಬಳಸಿಕೊಳ್ಳುವ ಆಫರ್ ನೀಡಿದೆ.

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ಇದಷ್ಟೇ ಅಲ್ಲದೇ ಟಾಟಾ ಮೋಟಾರ್ಸ್ ಮೊನ್ನೆಯಷ್ಟೆ ತಮ್ಮ ನೆಕ್ಸಾನ್ ಕಾರಿನ ಎಎಮ್‍‍ಟಿ ಕಾರಿನ ಮಾದರಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ನೆಕ್ಸಾನ್ ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ. 9.41 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಡೀಸೆಲ್ ಮಾದರಿಯ ಕಾರುಗಳ ಬೆಲೆಯು ರೂ 10.3 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಆದ್ರೆ ಈ ಹೊಸ ಕಾರಿನ ಬೆಲೆ ಮಾಹಿತಿ ಇನ್ನು ಲಭ್ಯವಾಗಿಲ್ಲ.

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ನೆಕ್ಸಾನ್ ಎಎಮ್‍ಟಿ ಪೆಟ್ರೋಲ್ ಮಾದರಿಯ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಅನ್ನು ಉಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ಇನ್ನು ನೆಕ್ಸಾನ್ ಎಎಮ್‍ಟಿ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍ಪಿ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದನ್ನು ಕೂಡ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read: ಕ್ಲಾಸಿಕ್ 500 ಪೆಗಾಸಸ್ ಖರೀದಿಸಿದವರಿಗೆ ಪಂಗನಾಮ ಹಾಕ್ತಾ ರಾಯಲ್ ಎನ್‌ಫೀಲ್ಡ್?

ಬಿಡುಗಡೆಗೆ ಸಿದ್ದವಾಗಿದೆ ಟಾಟಾ ನೆಕ್ಸಾನ್ ರೋಸ್ ಗೋಲ್ಡ್ ಎಡಿಷನ್

ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೆಕ್ಸಾನ್ ಸ್ಪೆಷಲ್ ಮಾದರಿಯನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಇದು ಯುವ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ. ಇದಲ್ಲದೇ ಈ ಹಿಂದೆ ಇಂತಹ ಪ್ರಯೋಗಗಳು ಯಶಸ್ವಿಯಾಗಿದ್ದು, ಬಿಡುಗಡೆಗೊಂಡ ಕೇವಲ 12 ತಿಂಗಳಲ್ಲಿ ಕಾರು ಮಾರಾಟವು 50 ಸಾವಿರ ಗಡಿ ದಾಟುತ್ತಿದ್ದು ಸಾಮಾನ್ಯ ವಿಚಾರವಲ್ಲ.

Most Read Articles

Kannada
Read more on tata motors suv
English summary
Tata Nexon Rose Gold Edition Showcased At A Dealership In Coimbatore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X