ಫೋಕ್ಸ್‌ವ್ಯಾಗನ್ ಪೊಲೊ ಫೇಸ್, ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಿಡುಗಡೆ

Written By: Rahul TS

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ತನ್ನ ಪೋಲೊ ಫೇಸ್ ಮತ್ತು ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಕಾರಿನ ವಿನ್ಯಾಸಗಳ ಹೊರತಾಗಿ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ತಂದಿಲ್ಲ.

ಫೋಕ್ಸ್‌ವ್ಯಾಗನ್ ಪೊಲೊ ಫೇಸ್, ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಭಾರತದ ಮಾರುಕಟ್ಟೆಯಲ್ಲಿ ವೆಂಟೊ ಸ್ಪೋರ್ಟ್ಸ್ ಮತ್ತು ಪೋಲೊ ಫೇಸ್ ಕಾರುಗಳು ಬಿಡುಗಡೆಗೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದು, ಈ ಹಿನ್ನೆಲೆ ಗ್ರಾಹಕರಿಗೆ ಹೊಸ ಚಾಲನಾ ಅನುಭವವನ್ನು ನೀಡಲು ಸ್ಪೋರ್ಟ್ ಆವೃತ್ತಿಯೊಂದಿಗೆ ಬಿಡುಗಡೆಗೊಳಿಸಿದ್ದಾಗಿ ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾ ನಿರ್ದೇಶಕ ಸ್ಟೀಫನ್ ಕ್ನಾಪ್ ಹೇಳಿಕೊಂಡಿದ್ದಾರೆ.

ಫೋಕ್ಸ್‌ವ್ಯಾಗನ್ ಪೊಲೊ ಫೇಸ್, ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಿಡುಗಡೆ

ವೆಂಟೋ ಸ್ಪೋರ್ಟ್ಸ್ ಹೊಸದಾಗಿ ಗ್ಲಾಸಿ ರೂಫ್ ಮತ್ತು ಸ್ಪಾಯ್ಲರ್, ಬ್ಲಾಕ್ ಕಾರ್ಬನ್ ಫಿನಿಷ್ ORVMs, ಸ್ಟೈಲಿಶ್ ಸೈಡ್ ಫಾಯಿಲ್ಸ್ ಮತ್ತು ಸ್ಪೋರ್ಟ್ಸ್ ಬ್ಯಾಡ್ಜ್ ಅನ್ನು ಫೆಂಡರ್‍‍ಗಳಲ್ಲಿ ಪಡೆದಿದ್ದು, ಹಾಗೆಯೇ 16 ಇಂಚಿನ ಅಲಾಯ್ ಚಕ್ರಗಳನ್ನು ಪಡೆದಿದೆ.

ಫೋಕ್ಸ್‌ವ್ಯಾಗನ್ ಪೊಲೊ ಫೇಸ್, ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಪೋಲೊ ಫೇಸ್ 15 ಡೈಮಂಡ್ ಕಟ್ ರೇಜರ್ ಅಲಾಯ್ ವೀಲ್‍ಗಳನ್ನು ಹೊಸದಾಗಿ ಪಡೆದಿದ್ದು, ಬೇರಾವ ಮಾರ್ಪಾಡುಗಳನ್ನು ಪಡೆದಿಲ್ಲಾ ಎನ್ನಲಾಗಿದೆ. ಇನ್ನು ಈ ಕಾರು 1.0 ಲೀಟರ್ ಎಮ್‍ಪಿಐ ಯೂನಿಟ್ 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸನ್ನು ಪಡೆದಿದೆ.

ಫೋಕ್ಸ್‌ವ್ಯಾಗನ್ ಪೊಲೊ ಫೇಸ್, ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ವೆಂಟೊ ಸ್ಪೋರ್ಟ್ಸ್ 5 ವೇರಿಯಂಟ್‍ಗಳಲ್ಲಿ ಲಭ್ಯವಿದ್ದು, 1.2 ಲೀಟರ್ ಪೆಟ್ರೋಲ್ ಅಥವಾ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದ್ದು, ಡೀಸೆಲ್ ಅವೃತ್ತಿಯು ಮ್ಯಾನುವಲ್ ಹಾಗು ಡಿಎಸ್‍ಜಿ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಲಭ್ಯವಿರಲಿದೆ.

ಫೋಕ್ಸ್‌ವ್ಯಾಗನ್ ಪೊಲೊ ಫೇಸ್, ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಿಡುಗಡೆ

ಹೊಸ ವೆಂಟೋ ಸ್ಪೋರ್ಟ್ ಮತ್ತು ಪೋಲೊ ಫೇಸ್ ಲಿಮಿಟೆಡ್ ಎಡಿಷನ್ ಕಾರುಗಳು ಎಲ್ಲಾ ಡೀಲರ್‍‍ಗಳ ಹತ್ತಿರ ಖರೀದಿಗೆ ಲಭ್ಯವಿದ್ದು, ವೆಂಟೋ ಸ್ಪೋರ್ಟ್ಸ್ ರೂ. 8.19 ಲಕ್ಷ ಹಾಗು ಪೋಲೊ ಫೇಸ್ ರೂ. 5.42 ಲಕ್ಷಕ್ಕೆ ಖರೀದಿಸಬಹುದಾಗಿದೆ.

ಫೋಕ್ಸ್‌ವ್ಯಾಗನ್ ಪೊಲೊ ಫೇಸ್, ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಿಡುಗಡೆ

ರೆಗ್ಯುಲರ್ ಆವೃತ್ತಿಗಳು ಬಿಡುಗಡೆಗೊಂಡ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಕಂಡುಕೊಂಡಿದ್ದು, ಹೊಸ ಲಿಮಿಟೆಡ್ ಎಡಿಷನ್ ಕಾರುಗಳು ಹಳೆಯ ಮಾದರಿಯಂತೆಯೇ ಬೆಲೆಯನ್ನು ಪಡೆದಿರುವುದು ವಿಶೇಷವಾಗಿದೆ.

Read more on volkswagen four wheelers
English summary
Volkswagen Launches New Limited Edition Polo Pace And Vento Sport.
Story first published: Tuesday, March 13, 2018, 10:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark