ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

By Praveen Sannamani

ದೇಶದಲ್ಲಿ ದಿನಂಪ್ರತಿ ಸಂಭವಿಸುತ್ತಿರುವ ನೂರಾರು ಅಪಘಾತಗಳಲ್ಲಿ ಗುಣಮಟ್ಟವಿಲ್ಲದ ಕಾರುಗಳಿಂದಲೇ ಹಲವಾರು ಜನ ಬಲಿಯಾಗುತ್ತಿರುವುದು ಬಹುತೇಕ ವಾಹನ ಪ್ರಿಯರಿಗೆ ತಿಳಿದಿರುವ ವಿಚಾರ. ಆದ್ರೆ ಕೆಲವೇ ಕೆಲವು ಕಾರು ಸಂಸ್ಥೆಗಳು ಮಾತ್ರ ಗುಣಮಟ್ಟದ ಕಾರುಗಳನ್ನು ಒದಗಿಸುವ ಮೂಲಕ ಗ್ರಾಹಕರನ್ನು ಸೆಳೆದಿವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ರಾಜಸ್ತಾನದ ಜೋಧಪುರ್‌ನಲ್ಲಿ ಮೊನ್ನೆಯಷ್ಟೇ ಫೋಕ್ಸ್‌ವ್ಯಾಗನ್ ವೆಂಟೋ ಸೆಡಾನ್ ಕಾರು ಒಂದರ ಮೇಲೆ ಕಬ್ಬಿಣದ ಪಿಲ್ಲರ್ ಮೊಗಚಿ ಬಿದ್ದಿದ್ದು, ಕಾರಿನ ರೂಫ್ ಸಂಪೂರ್ಣ ಜಖಂಗೊಂಡಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಒಂದೇ ಒಂದು ಸಣ್ಣ ಗಾಯ ಕೂಡಾ ಆಗಿಲ್ಲಾ ಅಂದ್ರೆ ನೀವು ನಂಬಲೇಬೇಕು.

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ಕಾರು ಚಾಲನೆಯಲ್ಲಿದ್ದಾಗಲೇ ಈಗ ಘಟನೆ ನಡೆದಿದ್ದು, ರೈಲ್ವೆ ಹಳಿ ಬಳಿ ನಿಲ್ಲಿಸಲಾಗಿದ್ದ ಕಬ್ಬಿಣದ ಪಿಲ್ಲರ್ ಒಂದು ಆಯತಪ್ಪಿ ಫೋಕ್ಸ್‌ವ್ಯಾಗನ್ ವೆಂಟೋ ಸೆಡಾನ್ ಕಾರಿನ ಮೇಲೆ ಬಿದ್ದಿದೆ.

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ಕಾರಿನ ಮೇಲೆ ರಭಸವಾಗಿ ಬಿದ್ದ ಪರಿಣಾಮ ಕೆಲ ಹೊತ್ತು ಕಾರಿನ ಬಾಗಿಲು ತೆರೆಯಲು ಕಾರಿನ ಚಾಲಕ ಪರದಾಡಿದಲ್ಲದೇ ಕಾರಿನ ಹಿಂಬದಿ ಆಸನದಲ್ಲಿ ಕುಳಿತಿದ್ದ ಮಹಿಳೆಯನ್ನು ಕೂಡಾ ಸುರಕ್ಷಿತವಾಗಿ ಹೊರ ತಂದಿದ್ದಾನೆ.

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಕೂಡಾ ಕಾರಿನಲ್ಲಿನದ್ದವರ ರಕ್ಷಣೆಗೆ ದೌಡಾಯಿಸಿದಲ್ಲದೇ, ಕಾರಿನ ಮೇಲೆ ಬಿದ್ದಿದ್ದ ಕಬ್ಬಿಣ ಪಿಲ್ಲರ್ ತೆಗೆದುಹಾಕುವ ಮೂಲಕ ಮಾನವಿಯತೆ ಮೆರೆದಿದ್ದಾರೆ.

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ಸದ್ಯ ಜಖಂಗೊಂಡಿರುವ ವೆಂಟೋ ಸೆಡಾನ್ ಕಾರನ್ನು ಸ್ಥಳೀಯ ಫೋಕ್ಸ್‌ವ್ಯಾಗನ್ ಸರ್ವಿಸ್ ಸೆಂಟರ್‌ ಒಂದಕ್ಕೆ ಸಾಗಿಸಲಾಗಿದ್ದು, ಕಾರಿನ ಎ ಪಿಲ್ಲರ್ ಮತ್ತು ಬಿ ಪಿಲ್ಲರ್‌ಗಳು ಗುಟ್ಟಿಮುಟ್ಟಾಗಿರುವ ಹಿನ್ನೆಲೆ ಯಾವುದೇ ಪ್ರಾಣಹಾನಿಯಾಗಿಲ್ಲ ಎನ್ನಬಹುದು.

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ಒಂದು ವೇಳೆ ಇದೇ ಘಟನೆಯಲ್ಲಿ ಬೇರೊಂದು ಕಾರು ಮಾದರಿ ಇದ್ದಿದ್ದರೇ ಅದರ ಕಥೆ ಬೇರೆಯೇ ಆಗಿರುತ್ತಿತ್ತು. ಆದ್ರೆ ಗುಣಮಟ್ಟದ ಕಾರುಗಳ ಉತ್ಪಾದನೆಯಲ್ಲಿ ತನ್ನದೇ ಆದ ಮಾನದಂಡಗಳನ್ನು ಕಾಯ್ದುಕೊಂಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಗೆ ಧನ್ಯವಾದ ಹೇಳಲೇಬೇಕು.

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ಇನ್ನು ಘಟನೆ ಬಗ್ಗೆ ಜೋಧಪುರ್ ಫೋಕ್ಸ್‌ವ್ಯಾಗನ್ ಕಾರು ಡೀಲರ್ಸ್ ಒಬ್ಬರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ಅವಘಡದಲ್ಲಿ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದಿದ್ದಾರೆ.

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ಹೀಗಾಗಿ ಕಾರುಗಳ ಗುಣಮಟ್ಟದ ಬಗ್ಗೆ ವಿಶೇಷ ಗಮನಹರಿಸಿರುವ ಫೋಕ್ಸ್‌ವ್ಯಾಗನ್‌ಗೆ ಕಾರು ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇತರೆ ಕಾರುಗಳಿಂತ ಭಿನ್ನವಾಗಿರುವ ಫೋಕ್ಸ್‌ವ್ಯಾಗನ್ ಕಾರುಗಳ ಬಗ್ಗೆ ಪ್ರತಿಯೊಬ್ಬರಿಗೂ ಒಳ್ಳೆಯ ಅಭಿಪ್ರಾಯ ಕೂಡಾ ಇದೆ.

Picture Credit: Volkswagen Technicians Shakun Motors Jodhpur - Rajsthan

ಫೋರ್ಕ್ಸ್‌ವ್ಯಾಗನ್ ಕಾರುಗಳ ಖದರ್ ಅಂದ್ರೆ ಇದಪ್ಪಾ...

ಇದು ಈ ಹಿಂದಿನ ಹಲವು ಕ್ರ್ಯಾಶ್ ಟೆಸ್ಟಿಂಗ್‌ನಲ್ಲೂ ಸಹ ಸಾಬೀತಾಗಿದ್ದು, ಒಂದು ವೇಳೆ ನೀವು ಕೂಡಾ ಫೋಕ್ಸ್‌ವ್ಯಾಗನ್ ಕಾರುಗಳ ಗುಣಮಟ್ಟದ ಬಗ್ಗೆ ಅಭಿಪ್ರಾಯಗಳಿದ್ದಲ್ಲಿ ಹಂಚಿಕೊಳ್ಳಬಹುದಾಗಿದೆ.

Kannada
Read more on accident auto news
English summary
Volkswagen Vento Built Quality Proved Again.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more