ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಫೋಕ್ಸ್‌ವ್ಯಾಗನ್ ಗ್ರೂಪ್‌ನ ಅಂಗಸಂಸ್ಥೆಯಾದ ಸ್ಕೋಡಾ ಸಂಸ್ಥೆಯು ಭಾರತದಲ್ಲಿ ಹೊಸ ಯೋಜನೆಯೊಂದಕ್ಕೆ ಒಪ್ಪಿಗೆ ಸೂಚಿಸಿದ್ದು, ಹೊಸ ಯೋಜನೆಯ ಮಾರ್ಗಸೂಚಿಯೆಂತೆ ಸ್ಕೋಡಾ ಸಂಸ್ಥೆಯೇ ಫೋಕ್ಸ್‌ವ್ಯಾಗನ್ ಕಾರುಗಳನ್ನು ಅಭಿವೃದ್ಧಿ ಮಾಡುವ ಹೊಣೆ ಹೊತ್ತಿದೆ.

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತೀಯ ಮಾರುಕಟ್ಟೆ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗಾಗಿ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, 'ಇಂಡಿಯಾ 2.0 ಪ್ರೋಜೆಕ್ಟ್' ಎನ್ನುವ ಬೃಹತ್ ಯೋಜನೆ ಒಂದನ್ನು ಸಿದ್ದಪಡಿಸಿದೆ. ಇದರ ಜವಾಬ್ದಾರಿಯನ್ನು ಸ್ಕೋಡಾ ಸಂಸ್ಥೆಗೆ ವಹಿಸಿಕೊಟ್ಟಿದ್ದು, ಮುಂಬರುವ ಫೋಕ್ಸ್‌ವ್ಯಾಗನ್ ಸಂಸ್ಥೆಯ ಪ್ರತಿಯೊಂದು ಕಾರು ಮಾದರಿಯು ಸಹ ಸ್ಕೋಡಾ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಸ್ಕೋಡಾ ಸಂಸ್ಥೆಯು ಭಾರತದಲ್ಲಿ ತನ್ನ ಕಾರು ಉತ್ಪನ್ನಗಳ ಬೆಲೆ ತಗ್ಗಿಸಿ ಮಾರಾಟ ಹೆಚ್ಚಿಸುವ ಉದ್ದೇಶದಿಂದ MQB ಎನ್ನುವ ಪ್ಲ್ಯಾಟ್‌ಫಾರ್ಮ್ ಒಂದನ್ನು ತೆರಿದಿದ್ದು, ಇಲ್ಲಿ ನಿರ್ಮಾಣವಾಗುವ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಕಾರುಗಳಿಂತ ಕಡಿಮೆ ಬೆಲೆ ಮತ್ತು ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಸಹಕಾರಿಯಾಗಲಿದೆ.

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಇದೇ ಕಾರಣಕ್ಕೆ ಸ್ಕೋಡಾ ಸಂಸ್ಥೆಗೆ ತನ್ನ ಹೊಸ ಕಾರು ಮಾದರಿಗಳ ಅಭಿವೃದ್ಧಿ ಯೋಜನೆಯನ್ನು ವಹಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಕಾರುಗಳನ್ನು ತಯಾರಿಸಿ ಭಾರೀ ಪ್ರಮಾಣದ ಆದಾಯ ಗಳಿಕೆಯ ತವಕದಲ್ಲಿದ್ದು, ಇದು ಸ್ಕೋಡಾ ಸಂಸ್ಥೆಗೂ ಸಾಕಷ್ಟು ಮನ್ನಣೆ ಸಿಗಲಿದೆ.

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಇದಲ್ಲದೇ ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ಕಾರುಗಳನ್ನು ಸ್ಥಳೀಯವಾಗಿಯೇ ಅಭಿವೃದ್ಧಿ ಮಾಡಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಈಗಾಗಲೇ ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಆರಂಭಿಕ ಕಾರು ಆವೃತ್ತಿಗಳನ್ನು ಸಣ್ಣ ಗಾತ್ರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಟಾಟಾ ಮೋಟಾರ್ಸ್ ಜೊತೆಗೂ ಸಹ ಕೈ ಜೋಡಿಸಿದೆ.

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಭಾರತದಲ್ಲಿ ಜನಪ್ರಿಯವಾಗುತ್ತಿರುವ ಹ್ಯುಂಡೈ ಕ್ರೇಟಾಗೆ ಪ್ರತಿಸ್ಪರ್ಧಿಯಾಗಿ ವಿಷನ್ ಎಕ್ಸ್ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಟಿ-ಕ್ರಾಸ್ ಎಸ್‌ಯುವಿ ಮಾದರಿಯನ್ನು ಹಾಗೂ ಹೋಂಡಾ ಸಿಟಿಗೆ ಪ್ರತಿಸ್ಪರ್ಧಿಯಾಗಿ ವರ್ಚಸ್ ಸೆಡಾನ್ ಮತ್ತು ಪೊಲೊ ಕಾರಿಗೆ ಬದಲಾಗಿ ಮತ್ತೊಂದು ಹೊಸ ಕಾರು ಹೊರತರವುದಾಗಿ ಫೋಕ್ಸ್‌ವ್ಯಾಗನ್ ಹೇಳಿಕೊಂಡಿದೆ.

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಇದರಲ್ಲಿ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಸಂಸ್ಥೆಗಳು ವಿಷನ್ ಎಕ್ಸ್ ಮತ್ತು ಟಿ-ಕ್ರಾಸ್ ಕಾರುಗಳ ಉತ್ಪಾದನಾ ಮಾದರಿಯನ್ನು ಪ್ರದರ್ಶಿಸಿದ್ದು, ಇವು ಮುಂದಿನ 2019ರ ಎರಡನೇ ತ್ರೈಮಾಸಿಕ ವೇಳೆಗೆ ಬಿಡುಗಡೆಗೊಳ್ಳುವುದು ಖಚಿತವಾಗಿದೆ.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ತದನಂತರವಷ್ಟೇ ಇನ್ನೆರಡು ಸೆಡಾನ್ ಕಾರುಗಳನ್ನು 2020ರ ಹೊತ್ತಿಗೆ ಬಿಡುಗಡೆ ಮಾಡುವುದಾಗಿ ಸುಳಿವು ನೀಡಿರುವ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಸಂಸ್ಥೆಗಳು ಹೊಸ ಕಾರು ಉತ್ಪನ್ನಗಳ ಬಗೆಗೆ ಮತ್ತಷ್ಟು ಮಾಹಿತಿ ಬಿಡುಗಡೆ ಮಾಡಲಿವೆ.

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಹೀಗಾಗಿ ಫೋಕ್ಸ್‌ವ್ಯಾಗನ್ ಜೊತೆಗಿನ 'ಇಂಡಿಯಾ 2.0 ಪ್ರೋಜೆಕ್ಟ್' ಸಹ ಭಾರತೀಯ ಗ್ರಾಹಕರನ್ನು ಗುರಿಯಾಗಿಸಿ ಅಗ್ಗದ ಬೆಲೆಯ ಕಾರುಗಳನ್ನು ಅಭಿವೃದ್ಧಿ ಮಾಡಲು ಒಪ್ಪಿಗೆ ಸೂಚಿಸಿರುವ ಸ್ಕೋಡಾ, ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ MQB ಪ್ಲ್ಯಾಟ್‌ಫಾರ್ಮ್ ಆಧರಿಸಿ ಕಾರು ಅಭಿವೃದ್ಧಿ ಮಾಡುತ್ತಿರುವ ಉತ್ತಮ ಬೆಳವಣಿಗೆ ಎನ್ನಬಹುದು.

MOST READ: ಹೆದ್ದಾರಿ ದರೋಡೆಕೋರರ ಹೆಡೆಮುರಿ ಕಟ್ಟಲು ಡಿಸಿಪಿ ಅಣ್ಣಾಮಲೈ ಮಾಡಿದ ಪ್ಲ್ಯಾನ್ ಹೇಗಿತ್ತು ಗೊತ್ತಾ?

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ಸುಧಾರಿತ ಸಣ್ಣ ಕಾರುಗಳ ಉತ್ಪಾದನೆಗೆ MQB ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಿರುವ ಸ್ಕೋಡಾ ಯೋಜನೆಯು ಸಫಲಗೊಳ್ಳುವ ಎಲ್ಲಾ ಲಕ್ಷಣಗಳಿದ್ದು, ಬೃಹತ್ ಮಾರುಕಟ್ಟೆಗಾಗಿ ಫೋಕ್ಸ್‌ವ್ಯಾಗನ್ ಜೊತೆ ಕೈ ಜೋಡಿಸಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

Source: Autocarindia

Most Read Articles

Kannada
English summary
Volkswagen group to introduce four new models under India 2.0 project.
Story first published: Saturday, December 1, 2018, 21:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X