ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

By Praveen

ಟ್ರಾಫಿಕ್ ಮುಂತಾದ ಪರಿಸ್ಥಿತಿ ಎದುರಾದಾಗ ಕಾರು ಎಂಜಿನ್ ಅನ್ನು ಐಡ್ಲಿಂಗ್‌ನಲ್ಲಿ ಇಟ್ಟುಕೊಳ್ಳುವುದು ಹೆಚ್ಚು ಸೂಕ್ತ ಎಂಬುವುದು ಅನೇಕರ ನಂಬಿಕೆಯಾಗಿದೆ. ಈ ಸಂದರ್ಭದಲ್ಲಿ ಗಾಡಿ ಮರು ಸ್ಟಾರ್ಟ್ ಮಾಡಿದರೆ ಹೆಚ್ಚಿನ ಇಂಧನ ವ್ಯಯವಾದಿತು ಎಂಬುದು ಅವರ ಇರಾದೆಯಾಗಿದೆ. ಇದೇ ಕಾರಣಕ್ಕಾಗಿ ಎಂಜಿನ್ ಐಡ್ಲಿಂಗ್‌ನಲ್ಲಿಟ್ಟುಕೊಳ್ಳಲು ಬಯಸುತ್ತಾರೆ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ನಿಜಕ್ಕೂ ಸಿಗ್ನಲ್ ಮುಂತಾದ ಟ್ರಾಫಿಕ್ ಪರಿಸ್ಥಿತಿಯಲ್ಲಿ ನಿಮ್ಮ ಗಾಡಿಯನ್ನು ಐಡ್ಲಿಂಗ್‌ನಲ್ಲಿಟ್ಟುಕೊಳ್ಳುವುದು ಸೂಕ್ತವೇ? ಅಥವಾ ಐಡ್ಲಿಂಗ್ ಮಾಡುವ ಮೂಲಕ ಇಂಧನ ಉಳಿಸಬಹುದೇ? ಇಲ್ಲಿದೆ ಓದಿ ನಮ್ಮ ವಿಶ್ಲೇಷಕರ ಉತ್ತರಗಳು...

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಐಡ್ಲಿಂಗ್ ಅಥವಾ ಐಡಲಿಂಗ್ ಎಂದರೇನು?

ಮೊದಲು ಐಡ್ಲಿಂಗ್ ಅಥವಾ ಐಡಲಿಂಗ್ (ನಿಧಾನ ಓಡುವಿಕೆ) (Idling) ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅತ್ಯಾವಶ್ಯಕ. ಸಿಗ್ನಲ್ ಮುಂತಾದ ರಸ್ತೆ ಪರಿಸ್ಥಿತಿಯಲ್ಲಿ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ ಎದುರಾದಾಗ ಮೋಟಾರು ವಾಹನದ ಎಂಜಿನ್‌ ಅನ್ನು ನಿಧಾನವಾಗಿ ಚಲಿಸಬಿಡುವುದೇ ಎಂಜಿನ್ ಐಡ್ಲಿಂಗ್ ಆಗಿದೆ. ಈ ಸಂದರ್ಭದಲ್ಲಿ ವಾಹನಗಳು ವೈಬ್ರೇಷನ್ ಆಗುವುದು ಸಾಮಾನ್ಯವಾಗಿದೆ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಕಾರಣ 1

ಅಷ್ಟಕ್ಕೂ ಎಂಜಿನ್ ಐಡ್ಲಿಂಗ್‌ನಲ್ಲಿ ಚಲಿಸಬಿಡುವುದು ಸೂಕ್ತವೇ? ಇಲ್ಲಿದೆ ಉತ್ತರ ನೋಡಿ. ಇದು ಬಹಳ ನಿರ್ಣಾಯಕವೆನಿಸುತ್ತದೆ. ಕಾರು ಎಂಜಿನ್ ಐಡ್ಲಿಂಗ್ ವೇಳೆ ಹೆಚ್ಚು ಇಂಧನ ಉಳಿತಾಯವಾಗಲಿದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಯಾಕೆಂದರೆ ಹೆಚ್ಚು ಹೊತ್ತು ಎಂಜಿನ್ ಐಡ್ಲಿಂಗ್‌‌ನಲ್ಲಿ ಚಲಿಸ ಬಿಟ್ಟರೆ ಹೆಚ್ಚಿನ ಇಂಧನ ವ್ಯಯವಾಗಲಿದೆ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

10 ನಿಮಿಷಕ್ಕೂ ಹೆಚ್ಚು ಕಾಲ ಎಂಜಿನ್ ಐಡ್ಲಿಂಗ್ ಮಾಡಿಟ್ಟರೆ ಮೂರನೇ ಒಂದರಷ್ಟು (1/3) ಅಥವಾ ಎರಡನೇ ಒಂದರಷ್ಟು (1/2) ಪೆಟ್ರೋಲ್ ವ್ಯಯವಾಗಲಿದೆ ಎಂದು ವರದಿಗಳು ತಿಳಿಸಿವೆ. ಅಂದರೆ ಕಾರನ್ನು ಆಫ್ ಮಾಡಿಟ್ಟು ಆನ್ ಮಾಡುವುದಕ್ಕಿಂತಲೂ ಹೆಚ್ಚು ಇಂಧನ ಐಡ್ಲಿಂಗ್‌ನಿಂದ ನಷ್ಟವಾಗುತ್ತದೆ.

ತಪ್ಪದೇ ಓದಿ-ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಕಾರಣ 2

ಬಹುತೇಕರು ಪದೇ ಪದೇ ಕಾರನ್ನು ಆಫ್-ಆನ್ ಮಾಡುವುದರಿಂದ ಎಂಜಿನ್‌ಗೆ ಪೆಟ್ಟು ಬೀಳಲಿದೆ ಎಂದು ಅಂದುಕೊಳ್ಳುತ್ತಾರೆ. ಇದರಿಂದಾಗಿ ಕಾರನ್ನು ಐಡ್ಲಿಂಗ್‌ನಲ್ಲಿಡಲು ಬಯಸುತ್ತಾರೆ.

ತಪ್ಪದೇ ಓದಿ-ಹಾಫ್ ಹೆಲ್ಮೆಟ್ ವಿರುದ್ಧ ಭರ್ಜರಿ ಕಾರ್ಯಚರಣೆ- ಬೈಕ್ ಸವಾರರಿಗೆ ಬಿಗ್ ಶಾಕ್....

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಆದರೆ ಇದು ಕೂಡಾ ತಪ್ಪಾದ ಕಲ್ಪನೆಯಾಗಿದ್ದು, ಬಹುತೇಕ ಆಧುನಿಕ ಕಾರುಗಳು ಫ್ಲೂಯಲ್ ಇಂಜೆಕ್ಟಡ್ ತಂತ್ರಗಾರಿಕೆಯಿಂದ ಆಗಮನವಾಗುತ್ತಿದೆ ಎಂಬುದನ್ನು ನೀವು ಮರೆಯಬಾರದು. ಇಲ್ಲಿ ಎಂಜಿನ್‌ಗಳು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಅಷ್ಟೇ ಯಾಕೆ ಹಾಗೇನಾದರೂ ಎಂಜಿನ್‌ಗೆ ತೊಂದರೆ ಸಂಭವಿಸಿದರೂ ಐಡ್ಲಿಂಗ್‌ನಿಂದಾಗಿ ವ್ಯಯವಾಗುವ ಇಂಧನ ವೆಚ್ಚಗಿಂತಲೂ ಕಡಿಮೆ ಖರ್ಚಿನಲ್ಲಿ ಎಂಜಿನ್ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.

ತಪ್ಪದೇ ಓದಿ- ವೇಗದಲ್ಲಿದ್ದ ಕಾರಿಗೆ ಅಡ್ಡ ಬಂದ ಬಾಲಕಿ- ಬಚಾವ್ ಮಾಡಲು ಹೋಗಿ ಒಂದೇ ಕುಟುಂಬದ ಐವರು ದುರ್ಮರಣ

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಇಲ್ಲಿ ಗಮನ ವಹಿಸಬೇಕಾದ ಮಗದೊಂದು ವಿಷಯವೆಂದರೆ ಐಡ್ಲಿಂಗ್ ವೇಳೆ ಎಂಜಿನ್ ತಾಪಮಾನ ಕೆಳ ಮಟ್ಟದಲ್ಲಿರುತ್ತದೆ. ಇದು ನಿಮ್ಮ ಇಂಧನ ಕ್ಷಮತೆಯ ಮೇಲೂ ಪರಿಣಾಮ ಬೀರಲಿದೆ. ಅಂದರೆ ಐಡ್ಲಿಂಗ್‌ ಮಾಡುವುದರಿಂದ ಕಡಿಮೆ ಮೈಲೇಜ್ ಸಿಗಲಿದೆ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಕಾರಣ 3

ಆರೋಗ್ಯಕರ ಪರಿಸರದ ನಿಟ್ಟಿನಲ್ಲಿ ಎಂಜಿನ್ ಆಫ್ ಮಾಡಿಟ್ಟುಕೊಳ್ಳುವುದು ಅನಿವಾರ್ಯ. ಏಕೆಂದರೆ ನಿಮ್ಮ ವಾಹನವನ್ನು ಐಡ್ಲಿಂಗ್‌ನಲ್ಲಿಟ್ಟರೆ ಎಕ್ಸಾಸ್ಟ್‌ನಲ್ಲಿ ಹೊರಸೂಸುವ ಹೊಗೆಯಿಂದಾಗಿ ವಾಯು ಮಾಲಿನ್ಯವಾಗುವ ಸಾಧ್ಯತೆಯಿದೆ. ಇದು ನೇರವಾಗಿ ಜಾಗತಿಕ ತಾಪಮಾನಕ್ಕೂ ಕಾರಣವಾಗಲಿದೆ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಪರಿಸರದ ಬಗ್ಗೆ ಸುದ್ದಿ ಬರೆಯುವ ಇಕೊವಾಚ್ ಜಾಲತಾಣದ ವರದಿಯ ಪ್ರಕಾರ, ಚಾಲಕರೊರ್ವರು 10 ನಿಮಿಷಗಳಷ್ಟು ಸಮಯ ಐಡ್ಲಿಂಗ್ ಕಡಿಮೆ ಮಾಡುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಒಂದು ಪೌಂಡ್‌ನಷ್ಟು ಕಾರ್ಬನ್ ಡೈಓಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಕಾರಣ 4

ಇವೆಲ್ಲಕ್ಕೂ ಮಿಗಿಲಾಗಿ ವಾಹನಗಳು ಹೊರಹಾಕುವ ದಹನಕಾರಿ ಎಂಜಿನ್ ಹೊಗೆಗಳು ಮೆದುಳು ಜೀವಕೋಶಗಳಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ಮಾರಕ ನರ ಕಾಯಿಲೆಗೂ (Autism) ಎಡೆ ಮಾಡಿಕೊಡುವ ಭೀತಿಯಿದೆ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಈ ಸಂಬಂಧ ನ್ಯೂಯಾರ್ಕ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಅತಿ ಹೆಚ್ಚು ಹೊಗೆ ಸೇವಿಸುವುದರಿಂದ 5ರ ಹರೆಯದ ಮಕ್ಕಳಲ್ಲಿ ಬುದ್ದಿವಂತಿಕೆ ಸಮಸ್ಯೆ ಕಾಡುತ್ತದೆ. ಅಷ್ಟೇ ಯಾಕೆ ಇದರಿಂದಾಗಿ ಶ್ವಾಸಕೋಶ, ಅಸ್ತಮಾ, ಹೃದ್ರೋಗ ಅಲ್ಲದೆ ಕ್ಯಾನ್ಸರ್‌ಗಳಂತಹ ಕಾಯಿಲೆ ಕಾಡುವ ಅಪಾಯವಿದೆ.

ತಪ್ಪದೇ ಓದಿ-ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಇನ್ನು ಶಾಲಾ ಪರಿಸರದಲ್ಲಿ ಎಂಜಿನ್ ಐಡ್ಲಿಂಗ್‌‌ನಲ್ಲಿಟ್ಟುಕೊಳ್ಳುವುದು ಸಹ ಅಪಾಯಕಾರಿಯಾಗಿದೆ. ಈ ಮೊದಲೇ ತಿಳಿಸಿರುವಂತೆಯೇ ಇದು ಮಕ್ಕಳಲ್ಲಿ ಅಡ್ಡ ಪರಿಣಾಮ ಬೀರುವ ಅಪಾಯವಿದೆ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಕಾರಣ 5

ಇಂಧನ ಉಳಿತಾಯವಾದರೆ ಸಹಜವಾಗಿಯೇ ನಿಮ್ಮ ಜೇಬಲ್ಲಿ ದುಡ್ಡು ಉಳಿದುಕೊಳ್ಳಲಿದೆ. ಇಲ್ಲಿ ಇನ್ನೊಂದು ಸರ್ವೇ ವರದಿ ಬಹಿರಂಗಪಡಿಸಿದ್ದಲ್ಲಿ ನಿಮ್ಮಲ್ಲಿ ಅಚ್ಚರಿಯನ್ನುಂಟು ಮಾಡುವುದು ಖಂಡಿತ.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಅದೇನೆಂದರೆ ಐಡ್ಲಿಂಗ್‌ನಿಂದಾಗಿ ಅಮೆರಿಕನ್ನರು ದಿನಂಪ್ರತಿ 13 ಮಿಲಿಯನ್ ಅಮೆರಿಕ ಡಾಲರ್ ( ಸರಿ ಸುಮಾರು 80,30,75,000 ರು.ಗಳಿಗೆ ಸಮಾನ) ವ್ಯಯ ಮಾಡುತ್ತಿದ್ದಾರೆ. ಇಲ್ಲಿ ಎಂಜಿನ್ ಆಫ್ ಮಾಡಿಟ್ಟಿದ್ದರೆ ಈ ಎಲ್ಲ ವೆಚ್ಚವನ್ನು ಕಾರಿನ ಮೂಲಭೂತ ನಿರ್ವಹಣೆಗೆ ಬಳಕೆ ಮಾಡಬಹುದಿತ್ತು.

ಎಂಜಿನ್ ಐಡ್ಲಿಂಗ್ ಮಾಡುವುದು ಕಾರಿಗೆ ಮಾರಕವೇ? ಇಲ್ಲಿದೆ ನೋಡಿ ಕಂಪ್ಲಿಟ್ ಮಾಹಿತಿ....

ಇದೀಗ ಐಡ್ಲಿಂಗ್ ಬಳಕೆಯಿಂದಾಗುವ ತೊಂದರೆಯ ಬಗ್ಗೆ ನಿಮ್ಮಲ್ಲಿ ಅರಿವು ಮೂಡಿರಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

ತಪ್ಪದೇ ಓದಿ-ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

Trending DriveSpark YouTube Videos

Subscribe To DriveSpark Kannada YouTube Channel - Click Here

Kannada
English summary
Main Reasons Why You Shouldn't Let Your Car's Engine Idle.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more