ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

2019ರ ಲೋಕಸಭಾ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳ ಸಮಯವಿದ್ದು, ಈಗಾಗಲೆ ರಾಜಕೀಯ ಅಧಿಕಾರಿಗಳು ಚುನಾವಣೆಗೆ ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಿಕೊಳ್ಳಿತ್ತಿದ್ದಾರೆ. ಹೀಗೆಯೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡುರವರು ಅಲ್ಲಿನ ಯುವ ಸಮುದಾಯವನ್ನು ಸೆಳೆಯಲು ಹೊಸ ಪ್ಲಾನ್ ಅನ್ನು ಮಾಡಿದ್ದಾರೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಮೊದಲ ಭಾಗವಾಗಿ ಶುಕ್ರವಾರದಂದು (ಜನವರಿ 4) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂವತ್ತು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರುಗಳನ್ನು ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ವಿತರಿಸಿದ್ದು, ಇದು ಸ್ವಯಂ ಉದ್ಯೋಗ ಯೋಜನೆಯ ಅಡಿಯಲ್ಲಿ ಮಾಡಿರುವ ವಿತರಣೆ. ಈ ಕಾರು ಪಡೆದ ನಿರುದ್ಯೋಗಿಗಳಿಗೆ ಸಬ್ಸಿಡಿ ಎರಡು ಲಕ್ಷ ರುಪಾಯಿ ದೊರೆಯುತ್ತದೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಕಾರಿನ ಬೆಲೆಯ ಹತ್ತು ಪರ್ಸೆಂಟ್ ಮೊತ್ತವನ್ನು ಫಲಾನುಭವಿಗಳು ಪಾವತಿಸಿದರೆ ಸಾಕು. ಬಾಕಿ ಮೊತ್ತವನ್ನು ಆಂಧ್ರಪ್ರದೇಶ ಬ್ರಾಹ್ಮಣ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಇಎಂಐನಂತೆ ತೀರಿಸಲು ಸಾಲ ನೀಡುತ್ತದೆ. ಮೊದಲ ಹಂತವಾಗಿ ಐವತ್ತು ಕಾರುಗಳನ್ನು ವಿತರಿಸಲಾಗುವುದು.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಬ್ರಾಹ್ಮಣ ಪ್ರಾಧಿಕಾರವು ಆರಂಭವಾಗಿ, ಈವರೆಗೆ ಒಂದೂವರೆ ಲಕ್ಷ ಮಂದಿ ಇದರಿಂದ ಅನುಕೂಲ ಪಡೆದಿದ್ದಾರೆ. ಈ ಕಾರುಗಳ ಮೂಲಕ ಸ್ವತಃ ಚಾಲಕರಾಗಿ ವೃತ್ತಿ ಆರಂಭಿಸಬಹುದು. ಅಥವಾ ಓಲಾ, ಉಬರ್ ನಂಥ ಕಡೆ ಸೇರಿ ಕಾರ್ಯ ನಿರ್ವಹಿಸಬಹುದು. ಇದಕ್ಕೂ ಮುನ್ನ ಒಂದು ಕೋಟಿ ನಲವತ್ತು ಲಕ್ಷ ಸ್ಮಾರ್ಟ್ ಫೋನ್ ವಿತರಣೆ ಮಾಡುವ ಬಗ್ಗೆ ಘೋಷಣೆ ಮಾಡಲಾಗಿತ್ತು.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಯುವಜನರಿಗೆ ನೀಡಿದ ಕಾರಿನ ಬಳಕೆಯ ಕುರಿತಾಗಿ ನಿರ್ದಿಷ್ಟಪಡಿಸಲಾಗಿಲ್ಲವಾದರೂ. ಆದಾಗ್ಯೂ, ಕುಟುಂಬಗಳ ಕಲ್ಯಾಣಕ್ಕಾಗಿ ಇದನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಯುವಕರಿಗೆ ನೀಡಿದ ವಾಹನಗಳು ಕ್ಯಾಬ್‍ಗಳಂತೆ ವುಗಳನ್ನು ಬಳಸಲು ಸಹಾಯ ಮಾಡುತ್ತದೆ ಮತ್ತು ಮಾಸಿಕ ಜೀವನವನ್ನು ಪಡೆದುಕೊಳ್ಳುತ್ತದೆ ಮತ್ತು ಅವರಿಗೆ ಆರ್ಥಿಕವಾಗಿ ಅನುಕೂಲಕರವಾಗಲಿದೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಇನ್ನು ಈ ಕಾರನ್ನೆ ಏಕೆ ನಿರುದ್ಯೋಗಿ ಬ್ರಾಹ್ಮಣರಿಗೆ ನೀಡಲಾಯಿತು.? ಇಂತಹ ವೈಶಿಷ್ಟ್ಯತೆಗಳು ಈ ಕಾರಿನಲ್ಲಿ ಏನಿದೆ ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿಯು ಮೂಡದೆಯೆ ಇರಲಾರದು. ಹೀಗಾಗಿ ಈ ಕಾರಿನ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಮೊದಲಿಗೆ ಮಾರುತಿ 800 ಕಾರು ದೇಶದಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದ್ದು, ಮತ್ತು ಆಲ್ಟೊ ಬಿಡುಗಡೆಯಾದ ನಂತರ ಕೊಮ್ಚ ದುಬಾರಿಯಾದರೂ ಸಹ ಗ್ರಾಹಕರು ಆಲ್ಟೋ ಖರೀದಿಸಲು ಮುಂದಾದರು. ಆದರೆ ಇದೀಗ ಎಲ್ಲವನ್ನು ಮೂಲೆಗೆ ತಳ್ಳಿ ಇದೀಗ ಮಾರುತಿ ಸುಜುಕಿ ಡಿಜೈರ್ ಮಾರುಕಟ್ಟೆಯಲ್ಲಿ ಮುಂಚುತ್ತಿದೆ ಎಂದರೆ ತಪ್ಪಾಗುವುದಿಲ್ಲ.

MOST READ: ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಏಕೆಂದರೆ ಮಾರುತಿ ಆಲ್ಟೋ ಸತತ 13 ವರ್ಷಗಳ ಕಾಲ ಬೆಸ್ಟ್ ಸೆಲ್ಲಿಂಗ್ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿಕೊಂಡಿದ್ದು, ಇದೀಗ ಡಿಜರ್ ಸೆಡಾನ್ ಕಾರು ಆಲ್ಟೋವನ್ನು ಹಿಂದಿಕ್ಕಿದೆ. 2018ರ ಜನವರಿ ಇಂದ ನವೆಂಬರ್‍‍ನ ವರೆಗು ಅಲ್ಟೋ ಕಾರು 2,31,540 ಯೂನಿಟ್ ಮಾರಾಟವಾದರೆ ಇನ್ನು ಡಿಜರ್ ಕಾರು 2,47,815 ಯೂನಿಟ್ ಕಾರುಗಳು ಮಾರಾಟವಾಗಿದೆಯಂತೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ರೂ. 2.7 ಲಕ್ಷದ ಪ್ರಾರಂಭಿಕ ಬೆಲೆಯನ್ನು ಹೊಂದಿರುವ ಮಾರುತಿ ಆಲ್ಟೋ ಕಾರಿಗೆ ಹೋಲಿಸಿದರೆ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ರೂ. 5.6 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ, ಇದರಿಂದಲೇ ತಿಳಿಯುತ್ತದೆ ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರು ಹೊಸ ಸೆಗ್ಮೆಂಟ್ ಕಾರುಗಳ ಕಡೆಗೆ ಒಲವು ತೋರುತ್ತಿದಾರೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಡಿಜೈರ್ ಕಾರುಗಳು ಸ್ವಂತ ಬಳಕೆಗೆ ಮಾತ್ರವಲ್ಲದೆ ಕ್ಯಾಬ್ ಆಪರೇಟರ್‍‍ಗಳು ಕೂಡಾ ಹೆಚ್ಚು ಬಳಸುವ ಕಾರಾಗಿದ್ದು, ಓಲಾ ಮತ್ತು ಊಬರ್ ಕ್ಯಾಬ್ ಸರ್ವಿಸ್‍‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕೆಲ ದಿನಗಳ ನಂತರ ಎರಡನೆಯ ತಲೆಮಾರಿನ ಡಿಜೈರ್ ಟೂರ್ ಕಾರನ್ನು ಬಿಡುಗಡೆಗೊಳಿಸಿ ಕೇವಲ ಕ್ಯಾಬ್ ಚಾಲಕರಿಗೆ ಸಹಾಯವಾಗುವಂತೆ ತಯಾರು ಮಾಡಲಾಗಿದೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಇದಲ್ಲದೆ ಸಂಸ್ಥೆಯು ಮೂರನೆಯ ತಲೆಮಾರಿನ ಡಿಜೈರ್ ಕಾರುಗಳನ್ನು ಕೂಡ ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ. ಮೂರನೆಯ ತಲೆಮಾರಿನ ಡಿಜೈರ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 5.56 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಎಂಜಿನ್ ಸಾಮರ್ಥ್ಯ

ಮೂರನೆಯ ತಲೆಮಾರಿನ ಡಿಸೈರ್ ಕಾರುಗಳು 1.2 ಲೀಟರ್ ಕೇ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82 ಬಿಹೆಚ್‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಇನ್ನು ಡೀಸೆಲ್ ಮಾದರಿಯ ಡಿಜೈರ್ ಕಾರುಗಳು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್ ಸಹಾಯದಿಂದ 74ಬಿಹೆಚ್‍ಪಿ ಮತ್ತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮಾದರಿಗಳಂತೆಯೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‍ಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಇಲ್ಲಿ ಸ್ವಿಫ್ಟ್ ಡಿಜೈರ್ ಕಾರು ನೀಡಲಾಗುತ್ತಿದೆ...

ಡಿಜೈರ್ ಕಾರಿನ ಎಲ್ಲಾ ವೇರಿಯಂಟ್‍‍ಗಳಲ್ಲಿಯು ಟ್ವಿನ್ ಏರ್‍‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಟಾಪ್ ಎಂಡ್ ವೇರಿಯಂಟ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಸ್ಮಾರ್ಟ್‍ ಫೋನ್ ಕನೆಕ್ಟಿವಿಯನ್ನು ಹೊಂದಿರುವ ಸ್ಮಾರ್ಟ್‍‍‍‍ಪ್ಲೇ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ.

Most Read Articles

Kannada
English summary
Andhra Pradesh CM Chandrababu Naidu Distributed Maruti Suzuki Dzire Cars To Unemployed Brahmin Youth. Read In Kannada
Story first published: Saturday, January 5, 2019, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X