ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಓಲಾ ಸಂಸ್ಥೆಗೆ ಸಾರಿಗೆ ಇಲಾಖೆಯು ಬಿಗ್ ಶಾಕ್ ನೀಡಿದ್ದು, ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿದ್ದ ಓಲಾಗೆ ನೀಷೇಧದ ಬರೆ ಎಳೆದಿದೆ.

ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ಹೌದು, ಕರ್ನಾಟಕ ಮೋಟಾರ್ ವಾಹನ ನಿಯಮಾವಳಿಗಳನ್ನು ಗಾಳಿಗೆ ತೂರಿ ಪ್ರತಿ ತಿಂಗಳು ನೂರಾರು ಕೋಟಿ ವ್ಯವಹಾರ ನಡೆಸುತ್ತಿರುವ ಓಲಾ ಸಂಸ್ಥೆಯು ಅಕ್ರಮವಾಗಿ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿದ್ದು, ಕಾನೂನು ಬಾಹಿರವಾಗಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಬರೋಬ್ಬರಿ ಆರು ತಿಂಗಳು ಕಾಲ ಓಲಾ ಸೇವೆಗಳನ್ನು ನಿಷೇಧಗೊಳಿಸಿರುವ ಸಾರಿಗೆ ಇಲಾಖೆಯು ತತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ಸುತ್ತೋಲೆ ಹೊರಡಿಸಿದೆ.

ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

02-04-2016ರಿಂದ ಜಾರಿಗೆ ಬರುವಂತೆ ಅನಿ ಟೆಕ್ನಾಲಜಿಸ್ ಪ್ರೈ. ಲಿಮಿಟೆಡ್(ಓಲಾ) ಸಂಸ್ಥೆಯು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗಾಗಿ ಸಾರಿಗೆ ಇಲಾಖೆಯಿಂದ ಅನುಮತಿ ಪಡೆದಿತ್ತು. ಆದ್ರೆ ನಿಯಮ ಮೀರಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿರುವ ಓಲಾ ಲೈಸೆನ್ಸ್ ರದ್ದುಗೊಳಿಸಲಾಗಿದೆ.

ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ಲೈಸೆನ್ಸ್ ಪಡೆದ ನಂತರ ಸಾರಿಗೆ ನಿಯಮಾವಳಿಗಳಲ್ಲಿ ನಿಗದಿಪಡಿಸಿದ ನಿಬಂಧನೆಗಳನ್ವಯ ಕಾರ್ಯಾಚರಣೆ ಮಾಡಬೇಕಿದ್ದ ಓಲಾ ಸಂಸ್ಥೆಯು ಕ್ಯಾಬ್ ಸೇವೆಗಳನ್ನು ಹೊರತುಪಡಿಸಿ ಅಕ್ರಮವಾಗಿ ವೈಟ್ ಬೋರ್ಡ್ ಹೊಂದಿರುವ ಬೈಕ್ ಟ್ಯಾಕ್ಸಿ ಸೇವೆಯನ್ನು ಸಹ ಶುರು ಮಾಡಿದ್ದೆ ಇಷ್ಟೆೇಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ.

ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ಕಳೆದ ಮೂರು ನಾಲ್ಕು ತಿಂಗಳಿನಿಂದ ಬೆಂಗಳೂರು, ಮೈಸೂರಿನಲ್ಲಿ ಓಲಾ ಬೈಕ್ ಟ್ಯಾಕ್ಸಿ ಸೇವೆಗಳ ಹಾವಳಿ ಹೆಚ್ಚಾಗಿದ್ದು, ಬೈಕ್ ಟ್ಯಾಕ್ಸಿಯಿಂದಾಗಿ ಆಟೋ ಚಾಲಕರ ಆದಾಯದ ಭಾರೀ ಹೊಡೆತ ಬಿದ್ದಿತ್ತು. ಈ ಕುರಿತು ಓಲಾ ವಿರುದ್ಧ ಪ್ರತಿಭಟಿಸಿದ್ದ ಆಟೋ ಚಾಲಕರ ಸಂಘಗಳು, ವೈಟ್ ಬೋರ್ಡ್ ಹೊಂದಿರುವ ಬೈಕ್ ಟ್ಯಾಕ್ಸಿಗಳ ನಿಯಂತ್ರಿಸಿ ಎಂದು ಮನವಿ ಮಾಡಿದ್ದರು.

ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ಈ ಕುರಿತು ಕಾರ್ಯಚರಣೆ ನಡೆಸಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳು ಓಲಾ ಸಂಸ್ಥೆಯು ಅಕ್ರಮವಾಗಿ ನಡೆಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಲ್ಲೇ ಬೈಕ್ ಟ್ಯಾಕ್ಸಿಗೆ ಬಳಸಲಾಗುತ್ತಿದ್ದ ಕೆಎ-05, ಜೆಜೆ 6702, ಕೆಎ-51, ಕೆ 8134, ಕೆಎ-04, ಹೆಚ್‌ಡಿ 1756, ಕೆಎ-16, ಇಜೆ 9055 ನೋದಂಣಿಯ ಬೈಕ್‌ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗಿತ್ತು.

MOST READ: ಬೆಂಕಿಯಲ್ಲಿ ಸುಟ್ಟು ಕರಕಲಾದವು ಸಾವಿರಾರು ಕೋಟಿ ಮೌಲ್ಯದ 2 ಸಾವಿರ ಐಷಾರಾಮಿ ಕಾರುಗಳು

ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ತದನಂತರ ಆರೋಪದ ಕುರಿತು ಓಲಾ ಸಂಸ್ಥೆಗೆ ನೋಟಿಸ್ ನೀಡಿದ್ದ ಸಾರಿಗೆ ಇಲಾಖೆಯು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಟ್ಯಾಕ್ಸಿ ಆರಂಭಿಸಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿತ್ತು. ಆದ್ರೆ ನೋಟಿಸ್‌ಗೆ ಉತ್ತರಿಸಲು ಸಾಧ್ಯವಾಗದಾಗ ಓಲಾ ಮೇಲೆ 6 ತಿಂಗಳು ಕಾಲ ನಿಷೇಧ ಹೇರಲಾಗಿದೆ.

ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

2010ರಲ್ಲಿ ಕೇವಲ ರೂ.10 ಕೋಟಿ ಬಂಡವಾಳದೊಂದಿಗೆ ಆರಂಭವಾಗಿದ್ದ ಓಲಾ ಸಂಸ್ಥೆಯು ಸದ್ಯದ ಮಾರುಕಟ್ಟೆಯ ಮೌಲ್ಯದ ಪ್ರಕಾರ ರೂ. 29 ಸಾವಿರ ಕೋಟಿಯಷ್ಟು ಬೆಲೆಬಾಳುವ ದೇಶದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ರೂ. 758 ಕೋಟಿ ವಾರ್ಷಿಕ ಆದಾಯವನ್ನು ಅಧಿಕೃತವಾಗಿ ಘೋಷಣೆ ಮಾಡಿಕೊಂಡಿತ್ತು.

MOST READ: ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನಾಯ್ತು ಅಂತ ನೀವೆ ನೋಡಿ...

ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ಆದ್ರೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಕೋಟಿ ಕೋಟಿ ಸಂಪಾದನೆ ಮಾಡಲು ಹೋದ ಓಲಾ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನೇ ನಂಬಿಕೊಂಡಿರುವ ಸಾವಿರಾರು ಕ್ಯಾಬ್ ಚಾಲಕನ ಜೀವನಕ್ಕೂ ಹೊಡೆತ ನೀಡಿರುವುದು ಸುಳ್ಳಲ್ಲ.

Most Read Articles

Kannada
English summary
bengaluru transport department suspends ola's aggregator licence. Read in Kannada.
Story first published: Friday, March 22, 2019, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X