ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಕಳೆದ ನವೆಂಬರ್ ತಿಂಗಳಿನಲ್ಲಿ ಮಹೀಂದ್ರಾ ಸಂಸ್ಥೆಯು ತಮ್ಮ ಐಷಾರಾಮಿ ಎಯ್‍ಯುವಿ ಕಾರಾದ ಆಲ್ಟುರಾಸ್ ಜಿ4 ಕಾರನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಹೊಸ ಕಾರಿನ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರಿಗೆ ಡೆಲಿವರಿ ಮಾದುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಯು, ಆಲ್ಟುರಾಸ್ ಜಿ4 ಕಾರನ್ನು ಸಂಸ್ಥೆಯ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರಿಗು ಕಾರನ್ನು ನೀಡಲಾಗಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಹೊಸದಾಗಿ ಆಲ್ಟುರಾಸ್ ಜಿ4 ಕಾರನ್ನು ಡೆಲಿವರಿ ಪಡೆದ ಆನಂದ್ ಮಹೀಂದ್ರಾರವರು ಈಗಾಗಲೆ ತವು ಬಳಸುತ್ತಿರುವ ಟಿಯುವಿ300 ಕಾರಿಗೆ 'ಗ್ರೇ ಗೋಸ್ಟ್' ಎಂಬ ಹೆಸರನ್ನು ಇಟ್ಟಿದ್ದು, ಆಲ್ಟುರಾಸ್ ಜಿ4 ಕಾರಿಗು ಸಹ ಒಂದು ಒಳ್ಳೆಯ ಹೆಸರನ್ನು ನೀಡಲು ನೆಟ್ಟಿಗರನ್ನು ಕೇಳುತ್ತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. ಉತ್ತಮವಾದ ಹೆಸರನ್ನು ನೀಡಿದವರಿಗೆ ಊಹಿಸಲಾಗದ ಒಂದು ಬಹುಮಾನವನ್ನು ಕೂಡಾ ನೀಡುವುದಾಗಿ ಆನಂದ್ ಮಹೀಂದ್ರಾ ಹೇಳಿಕೊಂಡಿದ್ದಾರೆ.

ಆನಂದ್ ಮಹೀಂದ್ರಾರವರು ಕೇವಲ ಆಲ್ಟುರಾಸ್ ಜಿ4 ಕಾರು ಮಾತ್ರವಲ್ಲದೇ, ಟಿಯುವಿ 300 ಪ್ಲಸ್ ಮತ್ತು ಕಸ್ಟಮೈಸ್ಡ್ ಮಾದರಿಯ ಟಿಯುವಿ300 ಕಾರುಗಳನ್ನು ಒಳಗೊಂಡಂತೆ ಇನ್ನು ಹಲವಾರು ಮಹೀಂದ್ರಾ ಸಂಸ್ಥೆಯ ಕಾರುಗಳನ್ನು ತಮ್ಮ ಕಾರ್ ಕಲೆಕ್ಷನ್‍‍ನಲ್ಲಿ ಇರಿಸಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್‌ ಆಟೋ ಉತ್ಪಾದನಾ ಸಂಸ್ಥೆಯೊಂದಿಗೆ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ಭಾರತದಲ್ಲಿ ಸುಧಾರಿತ ಮಾದರಿಯ ಎಸ್‌ಯುವಿ ಕಾರುಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದು, ಸ್ಯಾಂಗ್‌ಯ್ಯಾಂಗ್ ಸಂಸ್ಥೆಯ ಜಿ4 ಕಾರಿನ ಪ್ರೇರಣೆಯೊಂದಿಗೆ ಅಲ್ಟುರಾಸ್ ಜಿ4 ಎಸ್‌ಯುವಿ ಕಾರನ್ನು ನಿರ್ಮಾಣ ಮಾಡಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಿರುವ ಅಲ್ಟುರಾಸ್ ಜಿ4 ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ 2 ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಕಾರುಗಳಲ್ಲಿ ಒದಗಿಸಲಾಗಿರುವ ತಾಂತ್ರಿಕ ಸೌಲಭ್ಯಗಳ ಆಧಾರ ಮೇಲೆ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 26.95 ಲಕ್ಷಕ್ಕೆ ಹಾಗೂ ಟಾಪ್ ಎಂಡ್ ಮಾದರಿಯನ್ನು ರೂ. 29.95 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಡಿಸೈನ್ ಮತ್ತು ಸ್ಟೈಲ್

ಸುಧಾರಿತ ತಂತ್ರಜ್ಞಾನ ಪ್ರೇರಿತ ವಿಶ್ವದರ್ಜೆ ಸೌಲಭ್ಯಗಳನ್ನು ಹೊಂದಿರುವ ಅಲ್ಟುರಾಸ್ ಜಿ4 ಕಾರುಗಳು ಮುಂಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಮಹೀಂದ್ರಾ ಸಂಸ್ಥೆಯ ಆಕರ್ಷಕ ವರ್ಟಿಕಲ್ ಸಿಕ್ಸ್ ಸ್ಲಾಟ್ ಗ್ರಿಲ್ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಕಾರಿನ ಡಿಸೈನ್‌ನಲ್ಲಿ ಈ ಹಿಂದಿನ ಸ್ಯಾಂಗ್‌ಯಾಂಗ್ ರೆಕ್ಸ್‌ಸ್ಟಾನ್ ಜಿ4 ಕಾರಿನ ಕೆಲವು ವಿನ್ಯಾಸಗಳನ್ನು ಎರವಲು ಪಡೆಯಲಾಗಿದ್ದು, ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಬೀಮ್ ಮತ್ತು ಲೋ ಬೀಮ್ ಲೈಟ್ಸ್, 18-ಇಂಚಿನ ಫೈವ್ ಸ್ಪೋಕ್ ಅಲಾಯ್ ವೀಲ್ಹ್‌ಗಳು, ಫಾಗ್ ಲ್ಯಾಂಪ್ ಜೊತೆ ಕಾರ್ನರ್ ಲೈಟಿಂಗ್ ಸೌಲಭ್ಯ ಪಡೆದಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಹೊಸ ಕಾರಿನಲ್ಲಿ ಪ್ರಕಾಶಿತ ಹಿಂಬದಿಯ ನಂಬರ್ ಪ್ಲೇಟ್, ಬಿಸಿಯಾಗುವ ಒಆರ್‌ವಿಎಂಗಳು, ವಿಂಡ್ ಷೀಲ್ಡ್ ಮತ್ತು ಕಾರ್ನರಿಂಗ್ ಲೈಟ್ಸ್ ಸೌಲಭ್ಯವು ಕೂಡಾ ಮಹತ್ವ ಪಡೆದಿದ್ದು, ಪ್ರತಿ ಹಂತದಲ್ಲೂ ಕ್ರೋಮ್ ಬಳಿಕೆ ಮಾಡಿರುವುದು ಕಾರಿನ ಹೊರ ಭಾಗದ ಲುಕ್‌ ಹೆಚ್ಚಿಸುವಲ್ಲಿ ಪ್ಲಸ್ ಪಾಯಿಂಟ್ ಆಗಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಇನ್ನು ಕಾರಿನ ಹಿಂಭಾಗದ ಡಿಸೈನ್ ಕೂಡಾ ನೋಡಲು ಆಕರ್ಷಕವಾಗಿದ್ದು, ಎಲ್ಇಡಿ ಟೈಲ್ ಲ್ಯಾಂಪ್ಸ್, ಮಹೀಂದ್ರಾ ಲೊಗೊ ಜೊತೆಗೆ ಬೂಟ್‌ಸ್ಪೆಸ್ ಮಧ್ಯದಲ್ಲಿ ಜೋಡಣೆ ಮಾಡಲಾಗಿರುವ 'ALTURAS G4' ಬ್ಯಾಡ್ಜ್, ಬಂಪರ್ ಕ್ಲ್ಯಾಡಿಂಗ್ ಸೇರಿಸಲಾಗಿದೆ.

MOST READ: ಪಾರ್ಟಿ ಮಾಡಕ್ಕೆ ಗೋವಾನಲ್ಲಿ ಹಣ ಸಾಕಾಗಿಲ್ಲಾಂದ್ರೆ ಹೀಗೆ ಮಾಡಿ ಹಣ ಸಂಪಾದಿಸಿ...

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಕಾರಿನ ಒಳಾಂಗಣ

ವಿನ್ಯಾಸ ಅಲ್ಟುರಾಸ್ ಜಿ4 ಕಾರಿನ ಒಳಭಾಗದ ವಿನ್ಯಾಸವು ನಿಜಕ್ಕೂ ಎಸ್‌ಯುವಿ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯದೆ ಇರಲಾರವು. ಯಾಕೆಂದ್ರೆ ಪ್ರೀಮಿಯಂ ಸೌಲಭ್ಯಗಳಾದ ಸ್ಟೀರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ 7-ಇಂಚಿನ ಟಿಎಫ್‌ಟಿ ಡಿಸ್‌ಪ್ಲೈ ಗಮನ ಸೆಳೆಯುತ್ತವೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಸಾಫ್ಟ್-ಟಚ್ ಮೆಟೀರಿಯಲ್ ಪ್ರೇರಿತ ಪ್ರೀಮಿಯಂ ಸೌಲಭ್ಯದ ಒಳಾಂಗಣದಲ್ಲಿ ಕಾರು ಚಾಲನೆಯು ಮತ್ತಷ್ಟು ಐಷಾರಾಮಿತನ ನೀಡಲಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೆೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಸೌಲಭ್ಯ ಪ್ರೇರಿತ ಆ್ಯಪಲ್ ಕಾರ್‌ಪ್ಲೇ ಮತ್ತು ನ್ಯಾವಿಗೇಷನ್, ಮುಂಭಾಗದ ಆಸನಗಳಲ್ಲಿ ತಾಪಮಾನ ಏರಿಳಿತದ ಸೌಲಭ್ಯವಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಪ್ರಮುಖವಾಗಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, 8 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ಎರಡನೇ ಸಾಲಿನಲ್ಲಿರುವ ಮಧ್ಯದ ಆಸನದಲ್ಲಿ ಆರ್ಮ್‌ರೆಸ್ಟ್ ಮತ್ತು ಕಪ್-ಹೋಲ್ಡ್ ಸೌಲಭ್ಯವು ಅಲ್ಟುರಾಸ್ ಜಿ4 ಕಾರಿನ ಆಯ್ಕೆಯ ಮಹತ್ವವನ್ನು ಹೆಚ್ಚಿಸುತ್ತವೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಎಂಜಿನ್ ಸಾಮರ್ಥ್ಯ

ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 178-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ. ಇವುಗಳಲ್ಲಿ ಪೆಟ್ರೋಲ್ ವರ್ಷನ್ ಮುಂದಿನ ಒದಗಿಸುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಅಲ್ಟುರಾಸ್ ಜಿ4 ಕಾರುಗಳು ಕೇವಲ ಪ್ರೀಮಿಯಂ ಎಸ್‌ಯುವಿ ಮಾದರಿಯಷ್ಟೇ ಅಲ್ಲದೇ ಆಫ್ ರೋಡ್ ವೈಶಿಷ್ಟ್ಯತೆಯನ್ನು ಸಹ ಹೊಂದಿರುವ ಈ ಕಾರುಗಳಲ್ಲಿ ಹಿಂಬದಿ ಚಕ್ರಗಳಿಗೂ ಗೇರ್‌ಬಾಕ್ಸ್ ಶಕ್ತಿ ಪೂರೈಕೆಯ ಸೌಲಭ್ಯವಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಬಲಿಷ್ಠ ಕಾರು ಮಾದರಿಯಾಗಲಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಸುರಕ್ಷಾ ಸೌಲಭ್ಯಗಳು

ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್, ಐಎಸ್ಒಎಫ್ಐಎಕ್ಸ್ ಚೈಲ್ಡ್-ಸೀಟ್ ಮೌಂಟ್ ಸೀಟ್, ಹಿಲ್ ಕ್ಲೈಮ್ / ಡಿಸೆಂಟ್ ಅಸಿಸ್ಟ್ಸ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಲಭ್ಯವಿರುವ ಬಣ್ಣಗಳು

ಅಲ್ಟುರಾಸ್ ಜಿ4 ಕಾರುಗಳು ಒಟ್ಟು 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ನ್ಯೂ ಪರ್ಲ್ ವೈಟ್, ನಪೊಲಿ ಬ್ಯಾಕ್, ಲೆಕ್ ಸೈಡ್ ಬ್ರೌನ್, ಡಸಾಟ್ ಸಿಲ್ವರ್ ಮತ್ತು ರಿಗಾಲ್ ಬ್ಲ್ಯೂ ಬಣ್ಣದಲ್ಲಿ ಖರೀದಿಸಬಹುದು.

MOST READ: ಜಾವಾ, ಯಜ್ಡಿ, ಯಮಹಾ ಆರ್‌ಎಕ್ಸ್100 ಬೈಕ್‍ ಹೊಂದಿರುವ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!

ಆನಂದ್ ಮಹೀಂದ್ರಾ ಕೈ ಸೇರಿದ ಆಲ್ಟುರಾಸ್ ಜಿ4 ಕಾರಿಗೆ ಒಂದು ಹೊಸ ಹೆಸರು ಬೇಕಂತೆ

ಅಲ್ಟುರಾಸ್ ಜಿ4 ಪ್ರತಿಸ್ಪರ್ಧಿಗಳು

ಸದ್ಯ ಮಾರುಕಟ್ಟೆಯಲ್ಲಿ ಅಲ್ಟುರಾಸ್ ಜಿ4 ಕಾರಿಗೆ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳು ತೀವ್ರ ಪೈಪೋಟಿ ನೀಡಲಿದ್ದು, ಎಂಜಿನ್ ಸಾಮರ್ಥ್ಯದಲ್ಲಿ ಫಾರ್ಚೂನರ್ ಮತ್ತು ಎಂಡೀವರ್‌ಗಿಂತ ಕಡಿಮೆ ಸಾಮರ್ಥ್ಯವಿದ್ದರೂ ಸಹ ಅಲ್ಟುರಾಸ್ ಜಿ4 ಕಾರುಗಳು ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯಲ್ಲಿ ಗಮನಸೆಳೆಯಲಿವೆ.

Kannada
English summary
Can You Suggest A Good Name For Anand Mahindra's News Alturas G4 Car. Read In Kannada
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more