ಟ್ಯಾಂಪರ್ ನಂಬರ್ ಪ್ಲೇಟ್‍ ವಿರುದ್ಧ ಕಾರ್ಯಾಚರಣೆ - 940 ಪ್ರಕರಣ ದಾಖಲು

ಹೈದರಾಬಾದ್ ಟ್ರಾಫಿಕ್ ಪೊಲೀಸರು ನಂಬರ್‍‍ಪ್ಲೇಟ್‍‍ಗಳನ್ನು ಬೇಕಾಬಿಟ್ಟಿಯಾಗಿ ಟ್ಯಾಂಪರ್ ಹೈದರಾಬಾದ್‍ ನಗರದಲ್ಲಿ ಚಲಿಸುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಇದುವರೆಗೂ 940 ವಾಹನ ಮಾಲೀಕರಗಳಿಗೆ ದಂಡ ವಿಧಿಸಿದ್ದಾರೆ. ಇದರ ಜೊತೆಗೆ ಈ ವಾಹನಗಳ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಫೋರ್ಜರಿ ಹಾಗೂ ಚೀಟಿಂಗ್ ಪ್ರಕರಣಗಳನ್ನು ದಾಖಲಿಸಲಾಗಿದೆ.

ಟ್ಯಾಂಪರ್ ನಂಬರ್ ಪ್ಲೇಟ್‍ ವಿರುದ್ಧ ಕಾರ್ಯಾಚರಣೆ - 940 ಪ್ರಕರಣ ದಾಖಲು

ಇದರ ಜೊತೆಗೆ ನಂಬರ್ ಪ್ಲೇಟ್ ಇಲ್ಲದೇ ವಾಹನಗಳನ್ನು ಚಲಾಯಿಸುತ್ತಿದ್ದ 363 ಜನರ ವಿರುದ್ಧ ಸಂಚಾರಿ ನಿಯಮಗಳ ಉಲ್ಲಂಘನೆಯ ಕೇಸ್‍‍ಗಳನ್ನು ದಾಖಲಿಸಲಾಗಿದೆ. ಈ ಅಭಿಯಾನವನ್ನು ಕಳೆದ ಎರಡು ದಿನಗಳಿಂದ ನಡೆಸಲಾಗುತ್ತಿದ್ದು, ಇನ್ನೂ ಕೆಲವು ದಿನಗಳವರೆಗೆ ಮುಂದುವರೆಯುವ ಸಾಧ್ಯತೆಗಳಿವೆ. ವಾಹನ ಚಾಲಕರಿಗೆ ಸೂಚನೆ ನೀಡಿರುವ ಪೊಲೀಸರು, ನಂಬರ್ ಪ್ಲೇಟ್‍‍ಗಳನ್ನು ಟ್ಯಾಂಪರ್ ಮಾಡಿ ವಾಹನ ಚಲಾಯಿಸಿದರೆ ಬಂಧಿಸುವುದಾಗಿ ತಿಳಿಸಿದ್ದಾರೆ.

ಟ್ಯಾಂಪರ್ ನಂಬರ್ ಪ್ಲೇಟ್‍ ವಿರುದ್ಧ ಕಾರ್ಯಾಚರಣೆ - 940 ಪ್ರಕರಣ ದಾಖಲು

ಕಳೆದ ಒಂದು ವರ್ಷದಿಂದ ಹೈದರಾಬಾದ್ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಭಾರಿ ಪ್ರಮಾಣದಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಿಸಿಟಿವಿಗಳು ವಿವಿಧ ರೀತಿಯ ಉಲ್ಲಂಘನೆಗಳನ್ನು ಮಾಡುವವರ ಚಿತ್ರಗಳನ್ನು ಸೆರೆಹಿಡಿಯುತ್ತಿದ್ದು, ನಿಯಮಗಳನ್ನು ಉಲ್ಲಂಘಿಸುವ ವಾಹನ ಮಾಲೀಕರಿಗೆ ನೇರವಾಗಿ ದಂಡ ವಿಧಿಸಿರುವ ನೋಟಿಸನ್ನು ಕಳುಹಿಸಲಾಗುತ್ತಿದೆ. ಅನೇಕ ವಾಹನ ಮಾಲೀಕರಿಗೆ ಕಳೆದ ಕೆಲವು ತಿಂಗಳುಗಳಲ್ಲಿ ರೂ.50,000ಗಳವರೆಗೆ ದಂಡ ವಿಧಿಸಲಾಗಿದೆ.

ಟ್ಯಾಂಪರ್ ನಂಬರ್ ಪ್ಲೇಟ್‍ ವಿರುದ್ಧ ಕಾರ್ಯಾಚರಣೆ - 940 ಪ್ರಕರಣ ದಾಖಲು

ಸಿಸಿಟಿವಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವು ವಾಹನ ಮಾಲೀಕರು ನಂಬರ್ ಪ್ಲೇಟ್‍‍ಗಳನ್ನು ಟ್ಯಾಂಪರ್ ಮಾಡಿ ವಾಹನಗಳನ್ನು ಚಲಾಯಿಸುತ್ತಿದ್ದರು. ಇದರಿಂದಾಗಿ ಹೈದರಾಬಾದ್ ಪೊಲೀಸರು ಟ್ಯಾಂಪರ್ ಮಾಡಲಾದ ನಂಬರ್ ಪ್ಲೇಟ್‍‍ಗಳನ್ನು ಹೊಂದಿರುವ ವಾಹನಗಳ ವಿರುದ್ಧ ಭಾರಿ ಅಭಿಯಾನವನ್ನು ಕೈಗೊಂಡಿದ್ದಾರೆ. ಈ ಬಗ್ಗೆ ಇಟಿ‍ಆಟೊ ಜೊತೆಗೆ ಮಾತನಾಡಿದ ಟ್ರಾಫಿಕ್ ಇನ್ಸ್‌ಪೆಕ್ಟರ್ ಕೆವಿಪಿ ರಾಜುರವರು, ಹಲವಾರು ವಾಹನ ಚಾಲಕರು ಸರಿಯಾಗಿಲ್ಲದ ನಂಬರ್ ಪ್ಲೇಟ್‍‍ಗಳೊಂದಿಗೆ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ.

ಟ್ಯಾಂಪರ್ ನಂಬರ್ ಪ್ಲೇಟ್‍ ವಿರುದ್ಧ ಕಾರ್ಯಾಚರಣೆ - 940 ಪ್ರಕರಣ ದಾಖಲು

ಇನ್ನೂ ಕೆಲವರು ದಂಡ ವಿಧಿಸುವುದನ್ನು ತಪ್ಪಿಸಿಕೊಳ್ಳಲು ತಮ್ಮ ನಂಬರ್‌ ಪ್ಲೇಟ್‌ಗಳನ್ನು ಟ್ಯಾಂಪರ್ ಮಾಡುತ್ತಿದ್ದಾರೆ. ಅನೇಕರು ನಕಲಿ ನಂಬರ್ ಪ್ಲೇಟ್‌ಗಳನ್ನು ಬಳಸುತ್ತಿದ್ದಾರೆ. ಈ ಎಲ್ಲಾ ರೀತಿಯ ಪ್ರಕರಣಗಳನ್ನು ನಗರದಲ್ಲಿ ನಡೆಸಲಾಗುತ್ತಿರುವ ವಿಶೇಷ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. ಈ ರೀತಿಯ ಉಲ್ಲಂಘನೆಗಳಿಗಾಗಿ ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದರೂ, ಈಗ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಟ್ಯಾಂಪರ್ ನಂಬರ್ ಪ್ಲೇಟ್‍ ವಿರುದ್ಧ ಕಾರ್ಯಾಚರಣೆ - 940 ಪ್ರಕರಣ ದಾಖಲು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೈದರಾಬಾದ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಅನಿಲ್ ಕುಮಾರ್‍‍ರವರು ಮಾತನಾಡಿ, ಈ ರೀತಿಯ ಉಲ್ಲಂಘನೆಗಳನ್ನು ತಡೆಗಟ್ಟಲು, ವಾಹನ ಮಾಲೀಕರಿಗೆ ದಂಡ ವಿಧಿಸುವುದರ ಜೊತೆಗೆ ಫೋರ್ಜರಿ ಹಾಗೂ ಚೀಟಿಂಗ್ ಕೇಸ್‍‍ಗಳನ್ನು ದಾಖಲಿಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಸಿಕ್ಕಿ ಬಿದ್ದ ಬಹುಪಾಲು ವಾಹನ ಚಾಲಕರ ಪೈಕಿ ಹೆಚ್ಚಿನವರು ಯುವಕರು. ಇವರಲ್ಲಿ ಹೆಚ್ಚಿನವರು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‍‍ಗಳನ್ನು ಮಡಚಿದ್ದು, ದಂಡ ವಿಧಿಸುವುದನ್ನು ತಪ್ಪಿಸಲು ಗ್ರೀಸ್ ಅಥವಾ ಬಣ್ಣದ ಸಂಖ್ಯೆಗಳನ್ನು ಅಳವಡಿಸಿದ್ದಾರೆ.

ಟ್ಯಾಂಪರ್ ನಂಬರ್ ಪ್ಲೇಟ್‍ ವಿರುದ್ಧ ಕಾರ್ಯಾಚರಣೆ - 940 ಪ್ರಕರಣ ದಾಖಲು

ನಂಬರ್ ಪ್ಲೇಟ್ ಉಲ್ಲಂಘನೆಯ ಜೊತೆಗೆ, ವಾಹನಗಳಲ್ಲಿ ಸರಿಯಾದ ದಾಖಲೆಗಳಿವೆಯೇ ಎಂಬುದನ್ನು ಸಹ ಪರಿಶೀಲಿಸುತ್ತಿದ್ದು, ಚಾಲಕನು ಮಾನ್ಯತೆ ಹೊಂದಿರುವ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾನೆಯೇ ಎಂಬುದನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು. ಕಳೆದ ಕೆಲವು ವರ್ಷಗಳಿಂದ ಹೈದರಾಬಾದ್‌ನಲ್ಲಿ ಅತಿವೇಗದ ಕಾರಣಕ್ಕಾಗಿ ಹಲವಾರು ರಸ್ತೆ ಅಪಘಾತಗಳಾಗುತ್ತಿವೆ. ಗಣ್ಯ ವ್ಯಕ್ತಿಗಳು ಸಹ ಇಂತಹ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಟ್ಯಾಂಪರ್ ನಂಬರ್ ಪ್ಲೇಟ್‍ ವಿರುದ್ಧ ಕಾರ್ಯಾಚರಣೆ - 940 ಪ್ರಕರಣ ದಾಖಲು

ವೇಗವಾಗಿ ವಾಹನ ಚಲಾಯಿಸುವುದು ಸಹ ಹೈದರಾಬಾದ ನಗರದ ಪ್ರಮುಖ ಸಂಚಾರ ಅಪರಾಧಗಳಲ್ಲಿ ಒಂದಾಗಿರುವುದರಿಂದ, ಪೊಲೀಸ್ ಅಧಿಕಾರಿಗಳು ಅತಿ ವೇಗವಾಗಿ ವಾಹನ ಚಲಾಯಿಸುವವರ ವಿರುದ್ಧ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

Most Read Articles

Kannada
English summary
CRIMINAL cases against 940 vehicle owners in Hyderabad for number plate tampering - Read in kannada
Story first published: Monday, July 15, 2019, 13:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X