ಹೆದ್ದಾರಿಯ ಪ್ರತೀ 25ಕಿ.ಮೀಗೆ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಅಧಿಕವಾಗುತ್ತಿದ್ದು, ಇನ್ನೇನು ಕೇಂದ್ರ ಸರ್ಕಾರವು ಸಹ ರಸ್ತೆಯಲ್ಲಿ ಎಲೆಕ್ಟ್ರಿಕ್ ವಾಹನಗಳೆ ಓಡಾಡಬೇಕು ಎಂಬ ಉದ್ದೇಶದಿಂದ ಹೊಸ ಯೋಜನೆಗಳನ್ನು ತರುತ್ತಲೇ ಇವೆ. ಆದರೆ ಇನ್ನು ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಇದಕ್ಕೆ ಕಾರಣ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ.

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಆದುದರಿಂದ ಕೇಂದ್ರ ಸರ್ಕಾರವು ಹೆದ್ದಾರಿಯಲ್ಲಿನ ಪ್ರತೀ ಕಿಲೋಮೀಟರ್‍‍ಗೆ ಒಂದು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಅನ್ನು ಅಳವಡಿಸಲು ಮುಂದಾಗಿದೆ. ಈ ಯೋಜನೆಯು ಸಂಪೂರ್ಣವಾದಲ್ಲಿ ಭಾರತೀಯ ರಸ್ತೆಗಳಲ್ಲಿ ಅಧಿಕವಾಗಿ ಎಲೆಕ್ಟ್ರಿಕ್ ವಾಹನಗಳು ಓಡಾಡುವುದಂತು ಖಚಿತ. ಹಾಗು ಇಂಧನ ಆಧಾರಿತ ವಾಹನಗಳಿಂದ ಆಗುತ್ತಿರುವ ಮಾಲಿನ್ಯವನ್ನು ಕೂಡಾ ಕಡಿಮೆ ಮಾಡಬಹುದಾಗಿದೆ.

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮೂಲಸೌಕರ್ಯದ ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಯುಟಿ ಆಡಳಿತಗಳಿಗೆ ತಮ್ಮ ಕಟ್ಟಡ ಬೆಳವಣಿಗೆ ಮತ್ತು ಮಾಸ್ಟರ್ ಪ್ಲಾನ್ ರೆಗ್ಯುಲೇಶನ್ಸ್ ಅನ್ನು ತಿದ್ದುಪಡಿ ಮಾಡುವ ಪ್ರತಿಗಳನ್ನು ರವಾನಿಸಲಾಗಿದೆ. ಎಂದು ನಗರ ವ್ಯವಹಾರಗಳ ಸಚಿವಾಲಯವು ಹೇಳಿಕೊಂಡಿದೆ.

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಮಾರ್ಗ ಸೂಚಿಗಳ ಪ್ರಕಾರ ಹೆದ್ದಾರಿಗಳಲ್ಲಿ ಓಡಾಡುವ ಹೆವು ಡ್ಯುಟಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್‍ಗಳ ಸೌಲಭ್ಯವನ್ನು ನೀಡುವ ಸಲುವಾಗಿ ಹೆದ್ದಾರಿಯ ಪ್ರತೀ 25 ಕಿಲೋಮೀಟರ್‍‍ಗೆ ಎರಡೂ ಕಡೆಯಲ್ಲಿ ಚಾರ್ಜಿಂಗ್ ಸ್ಟೇಷನ್ ಅನ್ನು ಅಳವಡಿಸಲಿವೆ.

Source: CarToq

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಇನ್ಸ್ಟಾಲ್ ಮಾಡುವ ಯೋಜನೆಯ ಜೊತೆಗೆಯೆ ಕೇಂದ್ರ ಸರ್ಕಾರವು ಮತ್ತೊಂದು ಮಹತ್ವದ ಯೋನೆಯನ್ನು ಸಹ ಜಾರಿ ಮಾಡಲಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮತ್ತಷ್ಟು ಬಲ ತುಂಬುವುದಲ್ಲದೇ ಮಾರಾಟವನ್ನು ಸಹ ಉತ್ತೇಜಿಸಲು ಈ ಯೋಜನೆಯು ಭಾರೀ ಪ್ರಾಮುಖ್ಯತೆ ಪಡೆಯಲಿದ್ದು, ಈ ಹಿಂದೆ ಪರಿಚಯಿಸಲಾಗಿದ್ದ ಫೇಮ್ ಯೋಜನೆಯ ಎರಡನೇ ಹಂತದ ಅಭಿವೃದ್ದಿಗಾಗಿ ಬರೋಬ್ಬರಿ ರೂ.10 ಸಾವಿರ ಕೋಟಿ ಮೀಸಲು ಇರಿಸಲಾಗಿದೆ.

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಫೇಮ್ ಮೊದಲ ಹಂತದ ಯೋಜನೆಗಾಗಿ ಈಗಾಗಲೇ ರೂ. 795 ಕೋಟಿ ಖರ್ಚು ಮಾಡಿರುವ ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ರೂ.10 ಸಾವಿರ ಕೋಟಿ ಮೀಸಲು ಇರಿಸಿದ್ದು, ಎಲೆಕ್ಟ್ರಿಕ್ ಕಾರುಗಳ ಸಬ್ಸಡಿ ಸೇರಿದಂತೆ ವಿವಿಧ ಯೋಜನೆಗಾಗಿ ಪ್ರತಿ ವರ್ಷ ರೂ.3,300 ಕೋಟಿ ಹಣ ನೀಡಲಿದೆ.

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರವು ಈಗಾಗಲೇ ಕೆಲವು ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡಿದ್ದು, ಇದೀಗ ಎಲೆಕ್ಟ್ರಿಕ್ ಕಾರುಗಳ ಖರೀದಿಸುವ ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವುದಲ್ಲದೇ ಪ್ರತಿ ಎಲೆಕ್ಟ್ರಿಕ್ ಕಾರಿನ ಮೇಲೂ ರೂ.50 ಸಾವಿರ ತೆರಿಗೆ ವಿನಾಯ್ತಿ ನೀಡುವುದಾಗಿ ಅಧಿಕೃತ ಸುತ್ತೋಲೆ ಹೊರಡಿಸಿದೆ.

MOST READ: ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಶೀಘ್ರವೇ ಬಿಡುಗಡೆಯಾಗಲಿರುವ ಜನಪ್ರಿಯ ಕಾರುಗಳ ಎಲೆಕ್ಟ್ರಿಕ್ ಮಾದರಿಗಳಿವು

ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ವ್ಯಾಗನ್ ಆರ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು 2020ರ ವೇಳೆಗೆ ಬಿಡುಗಡೆಗೊಳಿಸಲಿದ್ದು, ಈಗಾಗಲೆ ಭಾರತೀಯ ರಸ್ತೆಗಳಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದೆ. ಈ ಕಾರಿನಲ್ಲಿ ವಿಚಾರ ಏನಪ್ಪಾ ಅಂದ್ರೆ ಈ ಕಾರು ರತೀ ಚಾರ್ಜಿಗೆ ಸುಮಾರು 150ರಿಂದ 180 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿರಲಿದೆ.

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ರೆನಾಲ್ ಕ್ವಿಡ್

ಇನ್ನು ರೆನಾಲ್ಟ್ ಸಂಸ್ಥೆಯು ಕೂಡಾ ತಮ್ಮ ಜನಪ್ರಿಯ ಕ್ವಿಡ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆಗೊಳಿಸಲಿದ್ದು, ಈ ಕಾರು ಸಹ ಹೆಚ್ಚು ಕುತೂಹಲವನ್ನು ಹುಟ್ಟುಹಾಕಿದೆ. ಕೆ-ಜೆಡ್ಇ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ವೈಶಿಷ್ಟ್ಯತೆಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಪ್ರತಿ ಚಾರ್ಜ್‌ಗೆ ಬರೋಬ್ಬರಿ 250ಕಿ.ಮಿ ಮೈಲೇಜ್ ರೇಂಜ್ ಹೊಂದಿರುವ ಈ ಎಲೆಕ್ಟ್ರಿಕ್ ಕಾರನ್ನು ನಿಸ್ಸಾನ್ ಜೊತೆಗೂಡಿ ಅಭಿವೃದ್ಧಿ ಮಾಡಲಾಗುತ್ತಿದೆ.

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಹೋಂಡಾ ಜಾಝ್

ಹೋಂಡಾ ಸಂಸ್ಥೆಯು ಸಹ ಫಿಟ್ ಕಾರು ಮಾದರಿಯಲ್ಲೇ ಜಾಝ್ ಎಲೆಕ್ಟ್ರಿಕ್ ಕಾರುಗಳು ಸಹ 331-ವೋಲ್ಟ್, 20kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವನ್ನು ಪಡೆದುಕೊಂಡಿದ್ದು, ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠವಾಗಿ 225ಕಿ.ಮಿ ಮೈಲೇಜ್ ನೀಡಲಿದೆಯಂತೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಹೆದ್ದಾರಿಯ ಪ್ರತೀ 25ಕಿ.ಮೀ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ..!

ಮಹೀಂದ್ರಾ ಎಕ್ಸ್‌ಯುವಿ300

ಇವುಗಳ ಜೊತೆಗೆ ಈ ಹಿಂದೆ ಹೊಸ ಎಸ್201 ಹೆಸರಿನ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಮಾಹಿತಿಯನ್ನು ಹಂಚಿಕೊಂಡಿದ್ದ ಮಹೀಂದ್ರಾ ಸಂಸ್ಥೆಯು 380ವಿ ಬ್ಯಾಟರಿ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 250ಕಿ.ಮಿ ಮೈಲೇಜ್ ರೇಂಜ್ ನೀಡುವುದಾಗಿ ಭರವಸೆ ನೀಡಿತ್ತು. ಇದೀಗ ಮತ್ತೊಮ್ಮೆ ಹೊಸ ಕಾರಿನ ಬ್ಯಾಟರಿ ಬಳಕೆ ಕುರಿತಾಗಿ ಮತ್ತಷ್ಟು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, 250ಕಿ.ಮಿ ಬದಲಾಗಿ 350ಕಿ.ಮಿ ಮತ್ತು400 ಕಿ.ಮಿ ಮೈಲೇಜ್ ಸಾಮರ್ಥ್ಯದ ಬ್ಯಾಟರಿ ಒದಗಿಸುವ ಬಗ್ಗೆ ಸುಳಿವು ನೀಡಿದೆ.

Most Read Articles

Kannada
English summary
Electric Charging Stations Will Be Installed In Highways For Every 25 Kilometers. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X