ವಿಲೀನವಾಗಲಿವೆ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್...!

ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ (ಎಫ್‍ಸಿಎ) ಮತ್ತು ಪ್ಯೂಜೊ ಸಿಟ್ರೊಯೆನ್ (ಪಿಎಸ್‍ಎ) ಗ್ರೋಪ್‍‍ನೊಂದಿಗೆ ವಿಲೀನದ ಬಗ್ಗೆ ಮಾತುಕತೆ ನಡೆಸುತ್ತಿವೆ, ಈ ಎರಡೂ ಗ್ರೂಪ್‍‍ಗಳು ವಿಲೀನವಾದರೆ ವಿಶ್ವದ ಅತಿದೊಡ್ಡ ಕಾರು ಗ್ರೂಪ್‍‍ಗಳಲ್ಲಿ ಒಂದು ರಚನೆಯಾಗಲಿದೆ.

ವಿಲೀನವಾಗಲಿವೆ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್...!

ಫೈನಾನ್ಷಿಯಲ್ ಟೈಮ್ಸ್, ಎರಡು ಸಂಸ್ಥೆಗಳು ವಿಲೀನದ ಬಗ್ಗೆ ಹಲವಾರು ತಿಂಗಳುಗಳಿಂದ ಚರ್ಚಿಸುತ್ತಿವೆ ಎಂದು ವರದಿ ಮಾಡಿದೆ. ಎರಡೂ ಕಂಪನಿಗಳು ವಿಲೀನದ ಬಗ್ಗೆ ಮಾತುಕತೆ ನಡೆಸಿರುವುದರ ಬಗ್ಗೆ ಇದೀಗ ಖಚಿತಪಡಿಸಿದೆ. ಫಿಯೆಟ್ ಕ್ರಿಸ್ಲರ್ ಗ್ರೂಪ್ ಮತ್ತು ಪಿಎಸ್ಎ ಗ್ರೂಪ್ ವಿಲೀನವಾಗುವ ಪ್ರಯತ್ನಗಳು ಬಹಳ ಹಿಂದಿನಿಂದಲೂ ನಡೆಯುತಿತ್ತು.

ವಿಲೀನವಾಗಲಿವೆ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್...!

ಫಿಯೆಟ್ ಕ್ರೈಸ್ಲರ್ ಗ್ರೂಪ್‍‍ನೊಂದಿಗೆ ವಿಲೀನಗೊಂಡರೆ, ಈ ಗ್ರೂಪ್‍‍ನ ಮೌಲ್ಯವು 50 ಬಿಲಿಯನ್ ಆಗುತ್ತದೆ ಎಂದು ಅಂದಾಜಿಸಲಾಗಿದೆ. ವಿಲೀನದ ನಂತರ ಪ್ರಸ್ತುತ ಪಿಎಸ್ಎ ಸಂಸ್ಥೆಯ ಸಿಇ‍ಒ ಆಗಿರುವ ಕಾರ್ಲೊಸ್ ತವಾರೆಸ್ ಅವರು ಹೊಸ ಗ್ರೂಪ್‍‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ವಿಲೀನವಾಗಲಿವೆ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್...!

ಫಿಯೆಟ್ ಕೈಸ್ಲರ್ ಗ್ರೂಪ್‍‍ನ ಮುಖ್ಯಸ್ಥರಾಗಿರುವ ಜಾನ್ ಎಲ್ಕೆನ್ ವಿಲೀನದ ನಂತರ ಹೊಸ ಗ್ರೂಪ್‍‍ನ ಅಧ್ಯಕ್ಷರಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಎರಡು ಕಂಪನಿಗಳು ಈ ವಿಚಾರಗಳನ್ನು ಒಪ್ಪುವ ಹಂತದಲ್ಲಿದೆ.

ವಿಲೀನವಾಗಲಿವೆ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್...!

ಈ ವಿಲೀನದ ಮೂಲಕ ಆಲ್ಫಾ ರೋಮಿಯೋ, ಕ್ರೈಸ್ಲರ್, ಸಿಟ್ರಾನ್, ಡಾಡ್ಜ್, ಟಿಎಸ್, ಜೀಪ್, ಲ್ಯಾನ್ಸಿಯಾ, ಒಪೆಲ್, ಪ್ಯೂಜೊ ಮತ್ತು ವೋಕ್ಸ್ಹಾಲ್ ಅನ್ನು ಹೊಸ ಗ್ರೂಪ್‍ನಲ್ಲಿ ಅಡಿಯಲ್ಲಿ ಇರುತ್ತದೆ.

ವಿಲೀನವಾಗಲಿವೆ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್...!

ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್‍‍ಗಳ ನಡುವೆ ನಡೆದ ಮಾತುಕತೆಯು ಸುಗಮವಾಗಿ ಕೊನೆಗೊಂಡರೆ ಮುಂದಿನ ವರ್ಷ ವಿಲೀನವಾಗುವ ಸಾಧ್ಯತೆಗಳಿವೆ. ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್‍‍ನಿಂದ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಿಲೀನವಾಗಲಿವೆ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್...!

ಎರಡು ಗ್ರೂಪ್‍‍ಗಳು ವಿಲೀನದ ಬಗ್ಗೆ ಒಪ್ಪಿಕೆಯನ್ನು ಸೂಚಿಸಿ ಒಪಂದಕ್ಕೆ ಸಹಿ ಮಾಡಿದರೆ ಮಾತ್ರ ವಿಲೀನವಾಗಲಿದೆ. ಕೆಲವು ವರದಿಗಳ ಪ್ರಕಾರ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್‍‍ಗಳ ನಡುವೆ ನಡೆದ ಮಾತುಕತೆಗಳು ಯಶ್ವಸಿಯಾಗಿದೆ. ಎರಡು ಕಂಪನಿಗಳು ವಿಲೀನಕ್ಕೆ ಒಪ್ಪುವ ಸಾಧ್ಯತೆಗಳಿವೆ. ಆದರೆ ಒಪ್ಪಂದಕ್ಕೆ ಸಹಿ ಮಾಡಿದ ನಂತರವೇ ಖಚಿತಪಡಿಸಬಹುದು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ವಿಲೀನವಾಗಲಿವೆ ಫಿಯೆಟ್ ಕ್ರೈಸ್ಲರ್ ಮತ್ತು ಪಿಎಸ್ಎ ಗ್ರೂಪ್...!

ಫಿಯೆಟ್ ಕ್ರೈಸ್ಲರ್ ಆಟೋಮೊಬೈಲ್ (ಎಫ್‍ಸಿಎ) ಗ್ರೂಪ್ ಕೆಲವು ವರ್ಷಗಳಿಂದ ವಿಲೀನ ಮಾಡಲು ಪ್ರಯತ್ನಿಸುತ್ತಿವೆ. ಈ ವರ್ಷದ ಆರಂಭದಲ್ಲಿ ವಿಲೀನದ ಕುರಿತು ರೆನಾಲ್ಟ್ ಅವರೊಂದಿಗೆ ಮಾತುಕತೆ ನಡೆಸಿದರು. ಆದರೆ ಅದು ಯಾವುದೇ ಕಾರಣಕ್ಕೆ ಮಾತುಕತೆ ಮುರಿದು ಬಿದ್ದವು.

Most Read Articles

Kannada
English summary
FCA and PSA Group confirm merger talks - Read in Kannada
Story first published: Wednesday, October 30, 2019, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X