ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಯಾವುದಾದರು ರಸ್ತೆ ಅಪಘಾತವಾದರೆ ಗಾಯಗೊಂಡವರನ್ನು ಆಸ್ಪತ್ರೆಗೆ ಆಗಲಿ ಅಥವಾ ಸಮಯಕ್ಕೆ ಬೇಕಾದ ಸಹಾಯ ಮಾದುವುದನ್ನು ಬಿಟ್ಟು ಸೆಲ್ಫಿ ತೆಗೆದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಲೈವ್ ಹೋಗುವ ಜನಗಳಿರುವ ಈ ಸಮಾಜದಲ್ಲಿ ಸಹಾಯ ಮಾಡುವವರೆ ಕಡಿಮೆ.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ವೃತ್ತಿಪರರಾಗಿ ಆಟೋ ಚಾಲಕರು ದಿನನಿತ್ಯ ಪ್ರಯಾಣಿಕರು ಮಾಡಿರುವ ತಪ್ಪಿಗೆ ತಾವು ಬೈಗುಳವನ್ನು ಸ್ವೀಕರಿಸಿ, ಅದೇಷ್ಟೊ ಕಂಪ್ಲೈಂಟ್‍ಗಳನ್ನು ಕೇಳಿಸಿಕೊಂಡರೂ, ಅವರು ತಾವು ಮಾಡುವ ಕೆಲಸವನ್ನು ಶ್ರದ್ದೆಯಿಂದಲೇ ಮಾಡುತ್ತಾರೆ. ಇಂತಹ ಜನರ ನಡುವೆ ಆಟೋ ಚಾಲಕರಿಬ್ಬರು ತಾವು ಮಾಡುತ್ತಿರುವ ವೃತ್ತಿಯಿಂದಲೇ ಹಲವರಿಗೆ ಉಚಿತ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರೇ ನೀವು ನಂಬಲೇಬೇಕು.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಮದುವೆಯಾಗದೆಯೆ ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗಾಗಿಯೆ ಮುಡಿಪಾಗಿಟ್ಟಿರುವ ಹಲವರು ನಮ್ಮ ದೇಶದಲ್ಲಿ ಹೆಚ್ಚು ಮಂದಿ ಇದ್ದಾರೆ. ಆದರೆ ತಾವು ಮಾಡುವ ಕೆಲಸದಲ್ಲಿಯೆ ಸಮಾಜ ಸೇವೆಯನ್ನು ಕೂಡಾ ಮಾಡುವವರು ಸಿಗುವುದು ಬಹಳ ಕಡಿಮೆ ಅಂತಾನೆ ಹೆಳ್ಬೋದು. ಅಂತಹ ವ್ಯಕ್ತಿಯ ಬಗ್ಗೆ ಈ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಹಾಗಾದರೆ ಆ ವ್ಯಕ್ತಿ ಯಾರು ಮತ್ತು ಆತನ ಸೇವೆ ಎಂತದ್ದು ಎಂದು ತಿಳಿಯಲು ಮುಂಡಕ್ಕೆ ಓದಿರಿ...

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಕಲಬುರ್ಗಿ ಮೂಲದ ಮಲ್ಲಿಕಾರ್ಜುನ್ ಎಂಬಾತ ಹಲವಾರು ವರ್ಷಗಳಿಂದ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಈತ ಕಳೆದ 5 ವರ್ಷಗಳಿಂದ ಉಚಿತವಾಗಿ ಗರ್ಭಿಣಿ ಸ್ತ್ರೀಯರು ತಮ್ಮ ತುರ್ತು ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಸೇವೆಯನ್ನು ಸಹ ಮಾಡುತ್ತಿದ್ದಾರೆ.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಈಗಾಗಲೆ ಆಟೋ ಡ್ರೈವರ್ ಮಲ್ಲಿಕಾರ್ಜುನ್‍ರವರು ಕಳೆದ ಐದು ವರ್ಷಗಳಿಂದ ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಆಟೊ ರೈಡಿಂಗ್ ಅನ್ನು ನೀಡುತ್ತಾ ಬಂದಿದ್ದು, ಇಲ್ಲಿಯವರೆಗು ಈ ಸೇವೆಯನ್ನು ಸುಮಾರು 100ಕ್ಕು ಹೆಚ್ಚು ಮಂದಿ ಗರ್ಭಿಣಿಯರಿಗೆ ನೀಡಿದ್ದಾರೆ.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ ಮಲ್ಲಿಕಾರ್ಜುನ್‍ರವರು ಒಟ್ಟು ನಾಲ್ಕು ಆಟೋಗಳ ಮಾಲೀಕರಾಗಿದ್ದು, ಆ ನಾಲ್ಕು ಆಟೋಗಳಲ್ಲಿ 24/7 ಗರ್ಭಿಣಿ ಸ್ತ್ರೀಯರ ತುರ್ತು ಪರಿಸ್ಥಿಯ ಸಂಧರ್ಭದಲ್ಲಿ ಉತ್ಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಮಲ್ಲಿಕಾರ್ಜುನ್‍ರವರಿಗೆ ಈ ಆಲೋಚನೆ ಬಂದಿದ್ದೆ ಅವರ ತಂಗಿಯ ಜೀವನದಲ್ಲಿ ನಡೆದ ದುಖಕರ ಘಟನೆ ಇಂದ. ಮಲ್ಲಿಕಾರ್ಜುನ್‍ರವರ ತಂಗಿ ಕಳೆದ ಐದು ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದಾರು. ತಂಗಿಯ ತುರ್ತು ಪರಿಸ್ಥಿತಿಯಲಿ ಯಾವುದೇ ಆಂಬ್ಯೂಲೆನ್ಸ್ ಆಗಲಿ ಅವರ ಸ್ಥಳಕ್ಕೆ ಬರಲು ತಿರಸ್ಕರಿಸಿದರು.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಈ ಘಟನೆಯಿಂದಾಗಿ ಮಲ್ಲಿಕಾರ್ಜುನ್‍ರವರು ಈ ತೀರ್ಮಾನವನ್ನು ತೆಗೆದುಕೊಂಡಿದ್ದು, ಕಲಬುರ್ಗಿಯಲ್ಲಿನ ಶಾಂತಿ ನಗರ್ ನಿವಾಸಿಯಾದ ಆತ ತನ್ನ ಫೋನ್ ನಂಬರ್ ಅನ್ನು ತಮ್ಮ ನಾಲ್ಕೂ ಆಟೋಗಳ ಹಿಂದೆ ಹಾಕಿಕೊಂಡು, ಗರ್ಭಿಣಿ ಸ್ತ್ರೀಯರಿಗೆ ತುರ್ತು ಪರ್ಸ್ಥಿತಿಯಲ್ಲಿ ಉಚಿತವಾದ ಸಂಚಾರವನ್ನು ನೀಡಲು ಮುಂದಾದರು.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಇದು ಮಲ್ಲಿಕಾರ್ಜುನ್‍ರವರ ಸಮಾಜ ಸೇವೆಯ ಕಥೆಯಾದರೆ ಬೆಳಗಾಂ ಜಿಲ್ಲೆಯಲ್ಲಿನ ಆಟೋ ಚಾಲಕನೊಬ್ಬ ಕೇವಲ ಗರ್ಭಿಣಿ ಸ್ರ್ತೀಯರಿಗೆ ಮಾತ್ರವಲ್ಲದೇ, ಅಂಗವಿಕಲರಿಗೆ ಮತ್ತು ಯೋಧರಿಗೆ ಉಚಿತ ರೈಡ್ ಅನ್ನು ನೀಡುತ್ತಿದ್ದಾರೆ.

MOST READ: ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಹೌದು, ಬೆಳಗಾಂ ತಾಲೂಕಿನವರಾದ ಮುನೇಸಾ ಮನಗುಲಿ ಬಿಎ ಪದವೀದರರಾಗಿದ್ದು, ವೃತ್ತಿಯಲ್ಲಿ ತಾವು ಆಟೋ ಚಾಲಕರಾಗಿದ್ದಾರೆ, ಸುಮಾರು 42 ವಯಸ್ಕರಾದ ಇವರು 2015ರಿಂದ ಈ ಸಮಾಜ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ. ಇವರು ಚಲಾಯಿಸುತ್ತಿರುವ ಆಟೋವಿನ ದಿನದ ಬಾಡಿಗೆ 250 ಆದರೂ ಸಹ ಇವೆಲ್ಲವನ್ನು ಪಕ್ಕಕಿಟ್ಟು ಇಂತಹ ಸಮಾಜ ಸೇವೆಯನ್ನು ಮಾಡುತ್ತಿರುವುದನ್ನು ಮೆಚ್ಚಲೇಬೇಕು.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಮೇಲೆ ಹೇಳಿರುವ ಹಾಗೆ ಮುನೇಸಾ ಮನಗುಲಿಯವರು 2015ರಿಂದ ಈ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಈ ಸೇವೆಯನ್ನು ಈತ ಶುರು ಮಾಡಲು ಪ್ರೇರೆಪಿಸಿದ ಘಟನೆಯೊಂದನ್ನು ತಾವು ಹಂಚಿಕೊಂಡಿದ್ದಾರೆ. ಅದೇನೆಂದರೆ, 1992ರಲ್ಲಿ ನಾರಾಯಣಪುರ ಎಂಬ ಹಳ್ಳಿಯಲ್ಲಿ ಗರ್ಭಿಣಿ ಸ್ತ್ರೀ ತನ್ನ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಆಂಬ್ಯೂಲೆನ್ಸ್ ಬಾರದಿದ್ದನ್ನು ಕಂಡ ಇವರಿಗೆ ಈ ಸೇವೆಯನ್ನು ಮಾಡಲು ಪ್ರೇರೇಪಣೆ ಮಾಡಿತಂತೆ.

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಮುನೇಸಾ ಮನಗುಲಿಯವರು ತಮ್ಮ ಆಟೋ ಹಿಂಭಾಗದಲ್ಲಿ ತಾವು ಯಾರಿಗೆ ಉಚಿತ ಸೇವೆಯನ್ನು ನೀಡುತ್ತೇನೆ ಎಂದು ಉಲ್ಲೇಖಿಸಿರುವುದಾಗಿ, ಅವರಲ್ಲಿ ಯಾರೊಬ್ಬರು ನಾನು ನೀಡಿದ ಸಂಖ್ಯೆಗೆ ಕರೆ ಮಾಡುತ್ತಾರೆಯೊ ಅವರನ್ನು ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಅವರ ಮನೆಗೆ ಉಚಿತವಾಗಿ ಕರೆದೊಯ್ಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Image courtesy: India Times

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಮನಗುಲಿಯವರು ತಮ್ಮ ವೃತ್ತಿಪರ ಜೀವನದಲ್ಲಿ ಇಲ್ಲಿಯವರೆಗು ಸುಮಾರು 2000ಕ್ಕು ಹೆಚ್ಚು ಮಂದಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದ್ದು, ತಾನು ಎಷ್ಟು ಮಂದಿಗೆ ಸಹಾಯ ಮಾಡಿದ್ದೇನೆ ಎಂಬುದನ್ನು ಸಹ ಅವರು ಲೆಕ್ಕ ಹಾಕಿಕೊಂಡಿದ್ದಾರಂತೆ.

MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಸಮಾಜ ಸೇವೆ ಮಾಡುತ್ತಿರುವ ಈ ಆಟೋ ಚಾಲಕರಿಗೊಂದು ಸಲಾಂ

ಏನೇ ಹೇಳಿ ನಗರ ಪ್ರದೇಶಗಳಲ್ಲಿ ತಪ್ಪು ತಮ್ಮದಾದರೂ, ಆಟೋ ಚಾಲಕರನ್ನು ಬೈಯುತ್ತಾ ಬಾಳುತ್ತಿರುವ ಸಮಾಜದಲ್ಲಿ ತಮ್ಮ ಜೀವನದಲ್ಲಿ ತಾವು ಕಂಡ ಘಟನೆಯಿಂದ ಪ್ರೇರಿತರಾಗಿ ಸಾಮಾಜ ಸೇವೆಯನ್ನು ಮಾಡಲು ಮುಂಡಾಗಿರುವ ಆಟೋ ಚಾಲಕರು, ಇನ್ನು ಹಲವಾರು ಆಟೋ ಚಾಲಕರಿಗೆ ಮತ್ತು ಇನ್ನಿತರರಿಗೆ ಮಾರ್ಗದರ್ಶಿಯಾಗಿದ್ದಾರೆ. ಮತ್ತು ಇವರ ಈ ಸೇವೆಯನ್ನು ಹಲವರು ಶ್ಲಾಘಿಸಿದ್ದಾರೆ.

Most Read Articles

Kannada
English summary
These Karnataka Auto Drivers Gives Free Ride For Pregnant Womens, Handicapped People And Soldiers. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more