ವಾಹನ ಮಾಲೀಕರೇ ಹುಷಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಹೊಸ ವಾಹನ ಖರೀದಿಸಿದ ನಂತರ ಆ ವಾಹನದ ಲುಕ್ ಅನ್ನು ಹೆಚ್ಚಿಸಲು ಅಥವಾ ಶೋಕಿಗಾಗಿ ಮಾಡಿಫೈ ಮಾಡಿಸಿಕೊಂಡು ಮೆರೆದಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಲ್ಲಿ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ಅಳವಡಿಸುವುದು ಮತ್ತು ಕಾರಿಗೆ ಹೆಚ್ಚಿನ ಗಾತ್ರದ ಟೈರ್‍‍ಗಳನ್ನು ಅಳವಡಿಸಿಕೊಳ್ಳುವುದು. ಆದರೆ ಇನ್ಮುಂದೆ ಹಾಗೆ ಮಾಡುವ ಮುನ್ನ ಈ ಲೇಖನವನ್ನು ಓದಿರಿ.

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ದೇಶಾದ್ಯಂತ ಮಾಡಿಫೈಡ್ ವಾಹನಗಳ ಹಾವಳಿ ಹೆಚ್ಚುತ್ತಿದ್ದು, ವಾಹನ ಮಾಲೀಕರು ಹೆಚ್ಚು ಹಣ ನೀಡಿ ತಮಗಿಷ್ಟವಾಗುವ ಹಾಗೆ ಮಾಡಿಫೈ ಮಾಡಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಬೈಕ್‍ಗಳಲ್ಲಿ ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್‍‍ಗಳನ್ನು ಅಳವಡಿಸಿ ಮಾಲಿನ್ಯ ಮತ್ತು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಚಾಲಕರನ್ನು ಹಿಡಿಯಲು ಪ್ರಮುಖ ನಗರಗಳಲ್ಲಿನ ಪೊಲೀಸರು ಮುಂದಾಗಿದ್ದಾರೆ.

Image Courtesy: Sunenterprises

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಮಾಡಿಫಿಕೇಷನ್ ವಾಹನಗಳನ್ನು ಹೆಚ್ಚಾಗಿ ನಾವು ಕೇರಳದಲ್ಲಿ ಮಾತ್ರ ನೋಡಲು ಸಾಧ್ಯ ಈ ನಿಟ್ಟಿನಲ್ಲಿ ಅಲ್ಲಿನ ಆರ್ಟಿಒ ಅಧಿಕಾರುಗಳು ಮಾಡಿಫೈ ವಾಹನಗಳ ಬಗ್ಗೆ ಮತ್ತು ಅವುಗಳ ಮಾಲೀಕರ ಬಗ್ಗೆ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಹೌದು, ಕಳೆದ ಶುಕ್ರವಾರ ಮತ್ತು ಶನಿವಾರ (ಮಾರ್ಚ್ 22 ಹಾಗು 23) ಮಾಡಿಫೈಡ ವಾಹನಗಳ ಬಗ್ಗೆ ತನಿಕ್ಖೆಯನ್ನು ಶುರು ಮಾಡಲಾಗಿದ್ದು, ತನಿಖೆ ಮಾಡುವಾಗ ಸಿಕ್ಕಿಕೊಂಡ ವಾಹನಗಳನ್ನು ಸೀಜ್ ಮಾಡಲಾಗಿದೆ ಮತ್ತು ಅವುಗಳ ಮಾಲೀಕರ ಮನೆಗೆ ನೋಟಿಸ್ ಅನ್ನು ಕಳುಹಿಸಲಾಗಿದೆ.

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಈ ಕುರಿತಾದ ತನಿಖೆಯನ್ನು ಕೇರಳಾದ ಮೋಟಾರ್ ವೆಹಿಕಲ್ ಡಿಪಾರ್ಟ್ಮೆಂಟ್‍ನವರು ಇನ್ನು ಮುಂದೇ ಕೂಡಾ ನಡೆಸಲಾಗಿದ್ದು, ಈಗಾಗಲೆ ಹಲವಾರು ಎಸ್‍ಯುವಿ, ಹ್ಯಾಚ್‍ಬ್ಯಾಕ್ ಮತ್ತು ದ್ವಿಚಕ್ರ ವಾಹನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಡಿಫಿಕೇಷನ್ ಮಾಡಿಸಿಕೊಂಡ ಸಲುವಾಗಿ ಮಾಲೀಕರಿಗೆ ಸ್ಥಳದಲ್ಲಿಯೆ ರೂ.2000 ದಂಡವನ್ನು ಸಹ ವಿಧಿಸಲಾಗುವುದು.

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ವಾಹನವನ್ನು ಖರೀದಿ ಮಾಡಿದಾಗ ನೀಡಲಾದ ರಿಜಿಸ್ಟ್ರೇಷನ್ ಶೀಟ್‍ನಲ್ಲಿ ಯಾವ ಯಾವ ಉಪಕರಣವನ್ನು ಆ ವಾಹದಲ್ಲಿ ಬಳಸಲಾಗಿರುತ್ತದೆಯೊ, ಅವುಗಳನ್ನು ಹೊರತು ಪಡಿಸಿ ಮಾಡಿಫೈಡ್ ಸೈಲೆನ್ಸರ್, ದೊಡ್ಡ ಟೈರ್‍ಗಳು ಮತ್ತು ಇನ್ನಿತರೆ ಉಪಕರಣಗಳನ್ನು ಬಳಸಿದ್ದೆ ಆದಲ್ಲಿ ಅವುಗಳ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದೆ ಎಂದು ಕೇರಳಾದ ಆರ್ಟಿಒ ಅಧಿಕಾರಿಯಾದ ಕೆ. ಮನೋಜ್ ಕುಮಾರ್‍‍ರವರು ಹೇಳಿದ್ದಾರೆ.

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಇವುಗಳ ಜೊತೆಗೆ ಕೇರಳ ಮೋಟಾರ್ ವೆಹಿಕಲ್ ಡಿಪಾರ್ಟ್‍‍ಮೆಂಟ್ ಇಂತಹ ಮಾಡಿಫೈಡ್ ಹೆಡ್‍‍ಲೈಟ್‍‍ಗಳನ್ನು ಅಳವಡಿಸಿ ವಾಹನ ಚಾಲನೆ ಮಾಡುವವರಿಗೆ ಪಾಠ ಕಲಿಸಲು ಹೊಸ ಉಪಕರಣವನ್ನು ಉಪಯೋಗಿಸಲು ಮುಂದಾಗಿದ್ದು, ಲಕ್ಸ್ ಮೀಟರ್ ಎಂಬ ಉಪಕರಣದಿಂದ ಮಾಡಿಫೈಡ್ ಹೆಡ್‍‍ಲೈಟ್‍‍ಗಳ ಹಾವಳಿ ತಡೆಗಟ್ಟಲು ಮುಂದಾಗಿದ್ದಾರೆ.

MOST READ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತಕ್ಕೀಡಾದ ಮಹೀಂದ್ರಾ ಮರಾಜೊ. ಪ್ರಯಾಣಿಕರು ಸೇಫ್

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಲಕ್ಸ್ ಮೀಟರ್ ಮಾಡಿಫೈ ಮಾಡಲಾದ ಹೆಡ್‍‍ಲೈಟ್‍‍ಗಳಿಂದ ಬರುವ ಪ್ರಕಾಶಮಾನತೆಯನ್ನು ಕಂಡು ಹಿಡಿಯಲು ಪೊಲೀಸರಿಗೆ ಸಹಾಯಕವಾಗಿದೆ. ಎಂವಿಡಿ ಈಗಾಗಲೆ ಈ ಲಕ್ಸ್ ಮೀಟರ್‍‍ಗಳನ್ನು 14 ಜಿಲ್ಲೆಯಲ್ಲಿನ ಪೊಲೀಸರಿಗೆ ನೀಡಲಾಗಿದ್ದು, ಮಾಡಿಫೈ ಹೆಡ್‍‍ಲೈಟ್‍ ಅಳವಡಿಸಿರುವ ವಾಹನ ಮಾಲೀಕರಿಗೆ ತಕ್ಕ ದಂಡವನ್ನು ವಿಧಿಸಲು ಸಹಾಯಕವಾಗಿದೆ.

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

14 ಜಿಲ್ಲೆಗಳಲ್ಲಿನ ಪೊಲೀಸರಿಗೆ ಎಷ್ಟು ಲಕ್ಸ್ ಮೀಟರ್‍‍ಗಳನ್ನು ನೀಡಲಾಗಿದೆ ಎಂಬ ಮಾಹಿತಿಯು ಇನ್ನು ಲಭ್ಯವಿಲ್ಲವಾಗಿದ್ದು, ಒಂದೊಂದು ಲಕ್ಸ್ ಮೀಟರ್ ಸುಮಾರು ರೂ.15,000 ವೆಚ್ಚದಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ.

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಮೊದಲಿಗೆ ಲಕ್ಸ್ ಮೀಟರ್‍‍ನ ಬಳಕೆಯನ್ನು ಕೇರಳದ ದಕ್ಷಿಣ ಭಾಗದ ಜಿಲ್ಲೆಗಳಿಗೆ ನೀಡಲಾಗಿತ್ತದೆ. ತಿರುವನಂತಪುರಂ, ಕೊಲ್ಲಮ್, ಪಾಥನಂತಿಟ್ಟ ಮತ್ತು ಅಲಪುಳ್ಳ ಎಂಬ ಜಿಲ್ಲೆಗಳಲ್ಲಿ ಮೊದಲಿಗೆ ಇವುಗಳನ್ನು ಅನುಷ್ಠಾನ ಮಾಡಿ ನಂತರ ಇನ್ನಿತರೆ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ.

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಈ ನಿಟ್ಟಿನಲ್ಲಿ ಪೊಲೀಸರು ತಮಗೆ ಅನುಮಾನ ಬಂದ ವಾಹನವನ್ನು ನಿಲ್ಲಿಸಿ ಹೆಡ್‍‍ಲೈಟ್‍‍ನ ಪ್ರಕಾಶಮಾನವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ನಿಗದಿಸಲಾದ ಪ್ರಕಾಶಮಾನಕ್ಕಿಂತ ಹೆಚ್ಚಿನದನ್ನು ಹೊರಸೂಸಿದರೆ ಅಂತವರಿಗೆ ಬರೊಬ್ಬರಿ ರೂ.1000 ದಂಡವನ್ನು ವಿಧಿಸಲಾಗುತ್ತದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ವಾಹನ ಮಾಲೀಕರೇ ಹುಶಾರ್ - ಮಾಡಿಫೈಡ್ ವಾಹನ ಮಾಲೀಕರ ಮನೆಗೆ ನೋಟಿಸ್

ಇಂತಹ ಪ್ರಕರಣಗಳನ್ನು ನಮ್ಮ ಕರ್ನಾಟಕದಲ್ಲಿಯು ಸಹ ನಾವು ಕಾಣಬಹುದಾಗಿದೆ, ಆದದ್ರೆ ಇನ್ನಶ್ತು ತನಿಖೆಯನ್ನು ಮಾಡಿದರೆ ದೊರೆಯುವ ಮಾಡಿಫಿಕೇಶನ್ ವಾಹನಗಳು ಇನ್ನೆಷ್ಟೊ.? ಅಸಲಿಗೆ ಮಾಡಿಫಿಕೆಷನ್ ಮಾಡಿಸಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ. ಆದುದರಿಂದ ನೀವು ನಿಮ್ಮ ವಾಹನವನ್ನು ಮಾಡಿಫಿಕೇಶನ್ ಮಾಡಿಸಿಕೊಳ್ಳಬೇಕು ಎಂಬ ಆಲೋಚನೆ ಇದ್ದಲ್ಲಿ ಹತ್ತು ಬಾರಿ ಯೋಚನೆ ಮಾಡಿ.

Source: ETAuto

Most Read Articles

Kannada
English summary
Kerala RTO starts sending notice to modified car and bike owners. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more