ಕೆನೆಟಿಕ್ ಸಫರ್ ಸ್ಟಾರ್ ಎಲೆಕ್ಟ್ರಿಕ್ ತ್ರೀ ವೀಲ್ಹರ್ ವಾಣಿಜ್ಯ ವಾಹನ ಬಿಡುಗಡೆ

ಸರಕು ಸಾಗಾಟ ವೆಚ್ಚಗಳನ್ನು ಕಡಿತಗೊಳಿಸುವುದಲ್ಲದೇ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಕೆನೆಟಿಕ್ ಸಂಸ್ಥೆಯು ಮೊದಲ ಪ್ರಯತ್ನದಲ್ಲಿ ವಿನೂತನ ಎಲೆಕ್ಟ್ರಿಕ್ ತ್ರೀ ವೀಲ್ಹರ್ ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡಿದ್ದು, ಸಾಗಾಣಿಕೆ ವೆಚ್ಚಗಳನ್ನು ಕಡಿತಗೊಳಿಸುವಲ್ಲಿ ಈ ತ್ರೀ ವೀಲ್ಹರ್ ವಾಹನವು ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.

ಕೆನೆಟಿಕ್ ಸಫರ್ ಸ್ಟಾರ್ ಎಲೆಕ್ಟ್ರಿಕ್ ವಾಹನವು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ.2.20 ಲಕ್ಷ ಬೆಲೆ ಹೊಂದಿದ್ದು, 400 ಕೆ.ಜಿ ಸರಕು ಸಾಗಾಣಿಕಾ ಸಾಮಾರ್ಥ್ಯವನ್ನು ಹೊಂದಿರುವ ಹೊಸ ಎಲೆಕ್ಟ್ರಿಕ್ ವಾಹನವು ಅತ್ಯುತ್ತಮ ಬ್ಯಾಟರಿ ಸೌಲಭ್ಯವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಫೇಮ್ 2 ಯೋಜನೆ ಅಡಿ ಕೆನೆಕಿಟ್ ಸಂಸ್ಥೆಯು ಸಫರ್ ಸ್ಟಾರ್ ಎಲೆಕ್ಟ್ರಿಕ್ ವಾಹನವನ್ನು ಸಿದ್ದಪಡಿಸಿದ್ದು, ಈ ವಾಹನದ ಖರೀದಿ ಮೇಲೆ ಸಬ್ಸಡಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ಕೆನೆಟಿಕ್ ಸಫರ್ ಸ್ಟಾರ್ ಎಲೆಕ್ಟ್ರಿಕ್ ತ್ರೀ ವೀಲ್ಹರ್ ವಾಣಿಜ್ಯ ವಾಹನ ಬಿಡುಗಡೆ
ಹೊಸ ವಾಹನವು ಕೇಂದ್ರ ಸರ್ಕಾರದ ವಾಹನ ಸುರಕ್ಷಾ ನಿಯಮದಡಿಯಲ್ಲೇ ಅತ್ಯುತ್ತಮ ಬಿಡಿಭಾಗಗಳ ಸೌಲಭ್ಯದೊಂದಿಗೆ ಸಿದ್ದಗೊಂಡಿದ್ದು, ಗುಣಮಟ್ಟದ ಸ್ಟೀಲ್‌ ಬಾಡಿ ಮತ್ತು ಟ್ಯೂಬ್ಲಾರ್ ಚಾರ್ಸಿಯಿಂದಾಗಿ ಸರಕು ಸಾಗಾಣಿಕೆಗೆ ಅನುಕೂಲಕರ ಸೌಲಭ್ಯವನ್ನು ಹೊಂದಿದೆ.

ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್
ಕೆನೆಟಿಕ್ ಸಫರ್ ಸ್ಟಾರ್ ಎಲೆಕ್ಟ್ರಿಕ್ ವಾಹನವು 48 ವಿ ಲೀಥಿಯಂ ಅಯಾನ್ ಬ್ಯಾಟರಿದೊಂದಿಗೆ 150 ಎಹೆಚ್ ಪವರ್ ಒದಗಿಸಲಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 130ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹಾಗೆಯೇ ಹೊಸ ವಾಹನದಲ್ಲಿ ನೀಡಲಾಗಿರುವ ರೀ ಜನರೇಟ್ 2 ಸ್ಪೀಡ್ ಬ್ರೇಕಿಂಗ್ ಸಿಸ್ಟಂ ಕೂಡಾ ಮೈಲೇಜ್ ಹೆಚ್ಚಳಕ್ಕೆ ಕಾರಣವಾಗಿದೆ.
ಕೆನೆಟಿಕ್ ಸಂಸ್ಥೆಯು ಸಫರ್ ಸ್ಟಾರ್ ಎಲೆಕ್ಟ್ರಿಕ್ ವಾಹನದ ಖರೀದಿ ಮೇಲೆ 3 ವರ್ಷಗಳ ವಾರಂಟಿ ಘೋಷಿಸಿದ್ದು, ತೆಗೆದುಹಾಕಬಹುದಾದ ಬ್ಯಾಟರಿ ವ್ಯವಸ್ಥೆ ಮತ್ತು ವೆದರ್ ಪ್ರೂಫ್ ಕಲರ್ ಕೊಟಿಂಗ್ ವಿಶೇಷತೆಯನ್ನು ಹೊಂದಿದೆ.

ಕಡಿಮೆ ಖರ್ಚು ಅಧಿಕ ಲಾಭ
ಸಫರ್ ಸ್ಟಾರ್ ಎಲೆಕ್ಟ್ರಿಕ್ ವಾಹನ ಬಿಡುಗಡೆ ಕುರಿತಾಗಿ ಮಹತ್ವದ ವಿಚಾರಗಳನ್ನು ಹಂಚಿಕೊಂಡಿರುವ ಕೆನೆಟಿಕ್ ಗ್ರಿನ್ ಎನರ್ಜಿ ಆ್ಯಂಡ್ ಪವರ್ ಸಲ್ಯೂಷನ್ ಅಧ್ಯಕ್ಷ ಎಸ್ಎಫ್ ಮೊಟ್ವಾನಿ ಅವರು, ಡೀಸೆಲ್ ವಾಹನಗಳಿಂತಲೂ ಅತಿ ಕಡಿಮೆ ಖರ್ಚಿನಲ್ಲಿ ಈ ವಾಹನವನ್ನು ನಿರ್ವಹಣೆ ಮಾಡಬಹುದು ಎಂದಿದ್ದಾರೆ.
ಸಾಮಾನ್ಯವಾಗಿ ಡೀಸೆಲ್ ವಾಣಿಜ್ಯ ವಾಹನಗಳು ಪ್ರತಿ ಕಿ.ಮೀ ಗೆ ರೂ.3 ಖರ್ಚು ಹೊಂದಿದ್ದು, ಅದೇ ಸಫರ್ ಸ್ಟಾರ್ ಎಲೆಕ್ಟ್ರಿಕ್ ವಾಹನವನ್ನು ಬಳಕೆ ಮಾಡಿದ್ದಲ್ಲಿ ಪ್ರತಿ ಕಿ.ಮೀ ಗೆ ಕೇವಲ 50 ಪೈಸೆ ಮಾತ್ರವೇ ಖರ್ಚು ತಗುಲಿದೆ ಎನ್ನುವುದೇ ಈ ವಾಹನದ ಪ್ರಮುಖ ಆಕರ್ಷಣೆಯಾಗಲಿದೆ.

Most Read Articles

Kannada
English summary
Kinetic Safar Star Electric Three-Wheeler Launched In India. Read in Kannada.
Story first published: Friday, October 11, 2019, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X