ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಮಾರುತಿ ಸುಜುಕಿ ಸಂಸ್ಥೆಯಲ್ಲಿ ಲಭ್ಯವಿರುವ ಎಂಟ್ರಿ ಲೆವೆಲ್ ಪೀಮಿಯಂ ಹ್ಯಾಚ್‍ಬ್ಯಾಕ್ ಆದ ಇಗ್ನಿಸ್ ಕಾರುಗಳು ಗುರುಗ್ರಾಂ ಪ್ಲಾಂಟ್‍ನಲ್ಲಿ ಉತ್ಪಾದನೆಗೊಂಡು ಕೇವಲ ನಮ್ಮ ಮಾರುಕಟ್ಟೆಯಲ್ಲಿ ಮತ್ರವಲ್ಲದೆಯೆ ಜಗತ್ತಿನಲ್ಲಿರುವ ಇನ್ನಿತರೆ ದೇಶಗಳ ಮಾರುಕಟ್ಟೆಗೆ ಸಹ ರವಾನಿಸಲಾಗುತ್ತಿದೆ. ಹಾಗೆಯೆ ಈ ಕಾರು ಮಾರುಕಟ್ಟೆಯಲ್ಲಿರುವ ಹ್ಯುಂಡೈ ಗ್ರಾಂಡ್ ಐ10 ಮತ್ತು ಮಹೀಂದ್ರಾ ಕೆಯುವಿ100 ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ವಿಷಯ ಏನಪ್ಪ ಅಂದ್ರೆ ಹಿಂದಿನ ದಿನಗಳಲ್ಲಿ ಹೊಸ ವಾಹನ ಖರೀದಿ ಮಾಡುವ ಮುನ್ನ ಕೆವಲ ಬೆಲೆ ಮತ್ತು ಈ ವಾಹನ ಎಷ್ಟು ಮೈಲೇಜ್ ನೀಡುತ್ತೆ ಎಂದು ನೋಡುತ್ತಿದ್ದರು. ಆದರೆ ಇದೀಗ ಗ್ರಾಹಕರು ಬುದ್ದಿವಂತರಾಗಿದ್ದು, ಕಾರಿನಲ್ಲಿ ಯಾವ ಮಟ್ಟದ ಸುರಕ್ಷಾ ಸಾಧನಗಳನ್ನು ಮತು ವಾಹನ ನಿರ್ಮಾಣದ ಗುಣಮಟ್ಟದ ಬಗ್ಗೆ ಆಲೋಚಿಸಲು ಶುರು ಮಾಡಿದ್ದಾರೆ. ಹೀಗಾಗಿ ಬಹು ಹಿಂದಿನಿಂದ ಯಾವುದಾದ್ರು ವಾಹನ ಬಿಡುಗಡೆಗೊಂಡಲ್ಲಿ ಅವುಗಳನ್ನು ಕ್ರ್ಯಾಶ್ ಟೆಸ್ಟಿಂಗ್‍ಗಾಗಿ ಕಳುಹಿಸಲಾಗುತ್ತದೆ. ಅದರಲ್ಲಿ 5 ಕ್ಕೆ 3ಕಿಂತಲೂ ಹೆಚ್ಚಿನ ಅಂಕವನ್ನು ಪಡೆದ ಕಾರುಗಳು ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದರ್ಥ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಹೀಗಾಗಿ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆಯೆ ಜಗತ್ತಿನ ಇನ್ನಿತರೆ ದೇಶಗಳಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜಿಕಿ ಇಗ್ನಿಸ್ ಕಾರನ್ನು ಗ್ಲೋಬಲ್ ಎನ್‍ಸಿಎಪಿಗೆ ಕ್ರ್ಯಾಶ್ ಟೆಸ್ಟಿಂಗ್‍‍ಗಾಗಿ ಕಳುಹಿಸಲಾಗಿದ್ದು, ಕ್ರ್ಯಾಶ್ ಟೆಸ್ತಿಂಗ್ ವೇಳೆ 5ಕ್ಕೆ 3 ಅಂಕವನ್ನು ಪಡೆದುಕೊಂಡಿದೆ. ಅಂದರೆ ಪ್ರಯಾಣಿಕರ ಸುರಕ್ಷತೆಯಲ್ಲಿ ಉತ್ತಮವಾದ ಅಂಕ ಪಡೆದಿಲ್ಲ ಎಂದರ್ಥ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಕ್ರ್ಯಾಶ್ ಟೆಸ್ಟಿಂಗ್‍‍ಗಾಗಿ ಕಳುಹಿಸಲಾದ ಮಾರುತಿ ಸುಜುಕಿ ಇಗ್ನಿಸ್ ಕಾರು ಆಫ್ರಿಕನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಯಾಗಿದ್ದು, ಇಲ್ಲಿ ಮಾರಟವಾಗುತ್ತಿರುವ ಕಾರಿನ ವೈಶಿಷ್ಟ್ಯತೆಗಳನ್ನೆ ಅಲ್ಲಿನ ಕಾರುಗಳಿಗು ಸಹ ನೀಡಲಾಗಿದೆ. ಹೀಗಿರುವಾಗ ಹಿರಿಯದ ಸುರಕ್ಷತೆಯಲ್ಲಿ 5ಕ್ಕೆ ಮೂರು ಅಂಕವನ್ನು ಪಡೆದಿದ್ದರೆ ಇನ್ನು ಮಕ್ಕಳ ಸುರಕ್ಷಣೆಯ ವಿಚಾರದಲ್ಲಿ ಕೇವಲ 5ಕ್ಕೆ 1 ಅಂಕವನ್ನು ಮಾತ್ರ ಪಡೆದುಕೊಂಡಿದೆ.

ಕೆಲ ದಿನಗಳ ಹಿಂದಷ್ಟೆ ಮಾರುತಿ ಸುಜುಕಿ ಸಂಸ್ಥೆಯು ತನ್ನ ಪ್ರಮುಖ ಕಾರು ಆವೃತ್ತಿಗಳನ್ನು ವಿನೂತನ ಸೌಲಭ್ಯಗಳೊಂದಿಗೆ ಮರು ಬಿಡುಗಡೆಗೊಳಿಸುತ್ತಿದ್ದು, ಇದೀಗ ಇಗ್ನಿಸ್ ಫೇಸ್‌ಲಿಫ್ಟ್ ಆವೃತ್ತಿ ಕೂಡಾ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇಗ್ನಿಸ್ ಫೇಸ್‌ಲಿಫ್ಟ್ ಆವೃತ್ತಿಯು ಹಳೆಯ ಮಾದರಿಗಿಂತ ಫೇಸ್‌ಲಿಫ್ಟ್ ಮಾದರಿಯು ಅತಿ ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.4.79 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೈ ಎಂಡ್ ಮಾದರಿಗೆ ರೂ.7.14 ಲಕ್ಷ ಬೆಲೆ ನಿಗದಿಗೊಳಿಸಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಇಗ್ನಿಸ್ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಒಟ್ಟು ನಾಲ್ಕು ವೆರಿಯೆಂಟ್‌ಗಳು ಖರೀದಿಗೆ ಲಭ್ಯವಿದ್ದು, ಕಾರಿನ ಬೆಲೆಗಳಿಗೆ ಅನುಗುಣವಾಗಿ ಫೀಚರ್ಸ್‌ಗಳಲ್ಲೂ ಸಹ ತುಸು ಬದಲಾವಣೆ ಹೊಂದಿರುತ್ತವೆ. ಇದರಲ್ಲಿ ಸಿಗ್ಮಾ ವೆರಿಯೆಂಟ್ ಆರಂಭಿಕವಾಗಿ ಮತ್ತು ಆಲ್ಫಾ ಆವೃತ್ತಿಯು ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಹೊಸ ಕಾರಿನಲ್ಲಿ ಈ ಬಾರಿ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಬಿಎಸ್ ಜೊತೆ ಇಬಿಡಿ, ಹೈ ಸ್ಪೀಡ್ ಅಲರ್ಟ್, ಸೀಟ್ ಬೇಲ್ಟ್ ರಿಮೆಂಡರ್ ಸಿಸ್ಟಂ, ಡ್ಯುಯಲ್ ಏರ್‌ಬ್ಯಾಗ್, ISOFIX ಚೈಲ್ಡ್ ಸೀಟ್ ಮೌಂಟ್ಸ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಜೋಡಿಸಲಾಗಿದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಜೊತೆಗೆ ಎಲ್ಲಾ ವೆರಿಯೆಂಟ್‌ಗಳನ್ನು ಪ್ರಮುಖ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಈ ಬಾರಿ ಜೆಟಾ ಮತ್ತು ಅಲ್ಫಾ ಆವೃತ್ತಿಗಳಲ್ಲಿ ರೂಫ್ ರೈಲ್ ಸೌಲಭ್ಯ ಒದಗಿಸಿರುವುದು ಇಗ್ನಿಸ್ ಕಾರು ಮತ್ತಷ್ಟು ಪ್ರೀಮಿಯಂ ಮಾದರಿಯಾಗಿ ಹೊರಹೊಮ್ಮಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಎಂಜಿನ್ ಸಾಮರ್ಥ್ಯ

ಇಗ್ನಿಸ್ ಫೇಸ್‌ಲಿಫ್ಟ್ ಆವೃತ್ತಿಯು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 89-ಬಿಎಚ್‌ಪಿ ಮತ್ತು 113-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ರೂಪದಲ್ಲಿ ಆಟೋಮ್ಯಾಟಿಕ್ ಗೇರ್ ಶಿಫ್ಟ್ ಆವೃತ್ತಿಯನ್ನು ಸಹ ಖರೀದಿ ಮಾಡಬಹುದಾಗಿದೆ.

MOST READ: ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಕೇವಲ ಬಿಎಸ್-4 ಎಂಜಿನ್ ಆಧಾರಿತ ಇಗ್ನಿಸ್ ಕಾರುಗಳು ಮಾರಾಟವಾಗುತ್ತಿದ್ದು, ಭವಿಷ್ಯದಲ್ಲಿ ಬಿಎಸ್-6 ಎಂಜಿನ್ ಆಧಾರಿತ ಮಾರುತಿ ಸುಜುಕಿ ಇಗ್ನಿಸ್ ಕಾರುಗಳನು ನಿರ್ಮಾಣ ಮಾಡಲಿದೆ ಎಂದು ಹೇಳಿಕೊಂಡಿದೆ. ಈಗಾಗಲೆ ಸಂಸ್ಥೆಯು ತಮ್ಮ ಅಪ್ಡೇಟೆಡ್ ಆಲ್ಟೋ ಮತ್ತು ಬಲೆನೊ ಕಾರುಗಳಿಗೆ ಬಿಎಸ್-6 ಎಂಜಿನ್ ಅನ್ನು ಅಳವಡಿದಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಪಡೆದ ಅಂಕ ಎಷ್ಟು ಗೊತ್ತಾ.?

ಖರೀದಿಗೆ ಲಭ್ಯವಿರುವ ಬಣ್ಣಗಳು

ಈ ಹಿಂದೆ ಖರೀದಿಗೆ ಲಭ್ಯವಿದ್ದ ನೆಕ್ಸಾ ಬ್ಲೂ, ಸಿಲ್ಕಿ ಸಿಲ್ವರ್, ಟಿನ್‌ಸೆಲ್ ಬ್ಲ್ಯೂ, ಅಪ್‌ಟೌನ್ ರೆಡ್ ಮತ್ತು ಪರ್ಲ್ ಆರ್ಟಿಕ್ ವೈಟ್ ಎನ್ನುವ ನಾಲ್ಕು ಬಣ್ಣಗಳೊಂದಿಗೆ ಈ ಬಾರಿ ಟಿನ್‌ಸೆಲ್ ಬ್ಲ್ಯೂ/ಮಿಡ್‌ನೈಟ್ ಬ್ಲಾಕ್, ಟಿನ್‌ಸೆಲ್ ಬ್ಲ್ಯೂ/ಪರ್ಲ್ ಆರ್ಟಿಕ್ ವೈಟ್ ಮತ್ತು ಅಪ್‌ಟೌನ್ ರೆಡ್/ಮಿಡ್‌ನೈಟ್ ಬ್ಲಾಕ್ ಎಂಬ ಮೂರು ಡ್ಯುಯಲ್ ಟೋನ್ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

Most Read Articles

Kannada
English summary
Maruti Suzuki Ignis Scores 3 Star Rating In Global NCAP Crash Test. Read In Kannada
Story first published: Thursday, May 30, 2019, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X