ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಮಾರುತಿ ಸುಜುಕಿ ಸಂಸ್ಥೆಯು ಜನವರಿಯಲ್ಲಿ ತಮ್ಮ ಜನಪ್ರಿಯ ವ್ಯಾಗನ್ ಆರ್ ಕಾರನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಯ ಸಮಯದಲ್ಲಿ ಸಂಸ್ಥೆಯು ವ್ಯಾಗನ್ ಆರ್ ಕಾರಿನ ಸಿಎನ್‍ಜಿ ಮಾದರಿಯನ್ನು ಪರಿಚಯಿಸುವುದಾಗಿ ಹೇಳಿಕೊಂಡಿತ್ತು. ಹೇಳಿದ ಹಾಗೆಯೆ ಸಂಸ್ಥೆಯು ಇದೀಗ ವ್ಯಾಗನ್ ಆರ್ ಕಾರಿನ ಸಿಎನ್‍ಜಿ ಮಾದರಿಯನ್ನು ಬಿಡಗಡೆ ಮಾಡಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಮೊದಲ ತಲೆಮಾರಿನ ವ್ಯಾಗನ್ ಆರ್ ಕಾರುಗಳು 1999ರಲ್ಲಿ ಬಿಡುಗಡೆಗೊಂಡಿದ್ದು, ಇದೀಗ ಸುಮಾರು 20 ವರ್ಷಗಳಲ್ಲಿ 22 ಲಕ್ಷಕ್ಕ್ಕು ಅಧಿಕವಾಗಿ ಮಾರಾಟಗೊಂಡಿದೆ. ಬಿಡುಗಡೆಯ ಅವಧಿಯಲ್ಲಿ ಸಂಸ್ಥೆಯು ಈ ಕಾರಿನ ಸಿಎನ್‍ಜಿ ವೇರಿಯಂಟ್ ಅನ್ನು ಶೀಘ್ರವೇ ಪರಿಚಯಿಸುವುದಾಗಿ ಹೇಳಿಕೊಂಡಿದ್ದು, ಇದೀಗ ಸಿಎನ್‍ಜಿ ಕಾರಿನ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ...

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಒಟ್ಟು ಎರಡು ವೇರಿಯಂಟ್‍ಗಳಲ್ಲಿ ಲಭ್ಯ

ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆಗೊಳಿಸಲಿರುವ ವ್ಯಾಗನ್ ಆರ್ ಕಾರಿನ ಸಿಎನ್‍ಜಿ ಆವೃತ್ತಿಯು ಕಾರಿನ ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ (O) ವೇರಿಯಂಟ್‍‍ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಶೀಘ್ರವೇ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರರಂಭಿಸಲಾಗಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಬೆಲೆ

ಸಿಎನ್‍ಜಿ ಆಧಾರಿತ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ರೂ. 4.84 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಲೆಕ್ಕ ಹಾಕಿದರೆ ತನ್ನ ಎದುರಾಳಿಯಾದ ಹ್ಯುಂಡೈ ಸ್ಯಾಂಟ್ರೋ ಸಿಎನ್‍ಜಿ ಕಾರಿಗಿಂತಲೂ ಕಡಿಮೆ ಎನ್ನಬಹುದು.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಬೆಲೆಯಲ್ಲಿ ಹ್ಯುಂಡೈ ಸ್ಯಾಂಟ್ರೋಗಿಂತಲೂ ಕಡಿಮೆ

ಹೌದು, ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಸಿಎನ್‍ಜಿ ಆವೃತ್ತಿಗಳು ಮಾರುಕಟ್ಟೆಯಲ್ಲಿ ತನ್ನ ಎದುರಾಳಿ ಹ್ಯುಂಡೈ ಸ್ಯಾಂಟ್ರೋ ಕಾರಿಗಿಂತಲೂ ಕಡಿಮೆ ಇರಲಿದೆ. ಏಕೆಂದರೆ ಸಿಎನ್‍ಜಿ ಆವೃತ್ತಿಯ ಹ್ಯುಂಡೈ ಸ್ಯಾಂಟ್ರೋ ಕಾರು ರೂ. 5.23 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಮೈಲೇಜ್

ಎಸ್‍-ಸಿಎನ್‍ಜಿ ಟೆಕ್ನಾಲಜಿ ಅಧಾರಿತ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳು ಪ್ರತೀ ಕಿಲೋಗ್ರಾಂಗೆ ಸುಮಾರು 33.54 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಸಿಎನ್‍ಜಿ ಆವೃತ್ತಿಯ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಕೇವಲ ಒಂದೇ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಕೆ10ಬಿ 1.0 ಲೀಟರ್, 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 67ಬಿಹೆಚ್‍ಪಿ 90ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, ಸಿಎನ್‍ಜಿ ಆಧಾರಿತ ವ್ಯಾಗನ್ ಆರ್ ಕಾರು ಪೆಟ್ರೋಲ್ ಆವೃತ್ತಿಗಳಿಗಿಂಗಲೂ ಕಡಿಮೆ ಸಾಮರ್ಥ್ಯವನ್ನು ಹೊರಹಾಕಲಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಸಂಸ್ಥೆಯ ಸ್ವಿಫ್ಟ್, ಎರ್ಟಿಗಾ ಮತ್ತು ಇಗ್ನಿಸ್ ಕಾರುಗಳಲ್ಲಿ ಬಳಸಲಾದ ಹಾರ್ಟ್‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದ್ದು, ಹಳೆಯ ವ್ಯಾಗನ್ ಆರ್ ಕಾರಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಹೊಸ ವ್ಯಾಗನ್ ಆರ್ ವಿನ್ಯಾಸ ಬಿಡುಗಡೆಯಾದ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಮುಂಭಾಗದಲ್ಲಿ ಈ ಬಾರಿ ಹೊಸ ಗ್ರಿಲ್ ಡಿಸೈನ್, ನವೀಕರಿಸಲಾದ ಬಂಪರ್ ಮತ್ತು ಫಾಗ್ ಲ್ಯಾಂಪ್ ಅನ್ನು ಪಡೆದುಕೊಂಡಿದೆ. ಇದಲ್ಲದೇ ಅಪ್ಡೇಟೆಡ್ ವರ್ಟಿಕಲ್ ಟೈಲ್‍ಲೈಟ್ಸ್, ಕ್ರೋಮ್ ಸ್ಟ್ರಿಪ್ ಅನ್ನು ನೀಡಲಾಗಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಈ ಕಾರು 14 ಇಂಚಿನ ಅಲಾಯ್ ವ್ಹೀಲ್ಸ್, ಪ್ಲೋಟಿಂಗ್ ರೂಫ್ ಡಿಸೈನ್, ಮತ್ತು ಒಆರ್‍‍ವಿಎಂನ ಮೇಲೆ ಇಂಟಿಗ್ರೇಟೆಡ್ ಇಂಡಿಕೇಟರ್‍‍ಗಳನ್ನು ನೀಡಲಾಗಿದೆ. ಕಾರಿನ ಹಿಂಭಾಗದಲ್ಲಿರುವ ನಂಬರ್ ಪ್ಲೇಟ್‍ನ ಮೇಲೆ ಕ್ರೋಮ್ ಸ್ಟ್ರಿಪ್ ಹಾಗು 'Wagon R' ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ವೇರಿಯಂಟ್‍ಗಳು ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮಾರುಕಟ್ಟೆಯಲ್ಲಿರುವ ಹ್ಯುಂಡಾಯ್ ಸ್ಯಾಂಟ್ರೋ, ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್ ಮತ್ತು ದಟ್ಸನ್ ಗೋ ಕಾರುಗಳಿಗೆ ಪೈಪೋಟಿ ನೀಡಲಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ವೈಶಿಷ್ಟ್ಯತೆಗಳು

ಹೊಸ ವ್ಯಾಗನ್ ಆರ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7 ಇಂಚಿನ ಟಚ್‍ಸ್ಕ್ರೀನ್ ಒನ್ಫೋಟೈನ್ಮೆಂಟ್ ಸಿಸ್ಟಂ, ಮ್ಯಾನುವಲ್ ಎಸಿ ಕಂಟ್ರೋಲ್ಸ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ಪವರ್ ಮೀಟರ್ ಮತ್ತು ಅನಾಲಾಗ್ ಸ್ಪೀಡೊಮೀಟರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಸಿಎನ್‍ಜಿ ಕಾರು. ಮೈಲೇಜ್ ಎಷ್ಟು ಗೊತ್ತಾ.?

ಸುರಕ್ಷಾ ಸಾಧನಗಳು

ಮಾರುತಿ ಸುಜುಕಿ ವ್ಯಾಗನ್ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು, ಎಬಿಎಸ್‍ನೊಂದಿಗೆ ಇಬಿಡಿ, ಡ್ಯುಯಲ್ ಏರ್‍‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Maruti Suzuki launches WagaonR CNG at Rs 4.84 lakh. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X