ವೇಗದಲ್ಲಿ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಹಿಂದಿಕ್ಕಿದ ಬೆಂಟ್ಲಿ ಬೆಂಟೈಗಾ ಸ್ಪೀಡ್ ಕಾರು

ಬೆಂಟ್ಲಿ ಬೆಂಟೈಗಾ ಸ್ಪೀಡ್ ಎಸ್‍ಯುವಿ ವೆಂಟ್ಲಿ ಸಂಸ್ಥೆಯ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುವಾ ಕಾರಾಗಿದ್ದು, ಇದೀಗ ಫಾಸ್ಟೆಸ್ಟ್ ಎಸ್‍ಯುವಿ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಮುನ್ನ ಲ್ಯಾಂಬೋರ್ಗಿನಿಯ ಉರುಸ್ ಕಾರು ಗಂಟೆಗೆ 304.970 ಕಿಲೋಮೀಟರ್ ವೇಗವನ್ನು ಪಡೆದು ವೇಗದ ಎಸ್‍ಯುವಿ ಕಾರೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು, ಆ ಸ್ಥಾನದಲ್ಲಿ ಬೆಂಟ್ಲಿ ಬೆಂಟೈಗಾ ಸ್ಪೀಡ್ ಕಾರು ಗಂಟೆಗೆ 305.775 ಕಿಲೋಮೀಟರ್ ವೇಗದಲ್ಲಿ ಚಲಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಬೆಂಟ್ಲಿ ಬೆಂಟೈಗಾ ಸ್ಪೀಡ್ ಎಸ್‍ಯುವಿ ಕಾರು ಬೆಂಟ್ಲಿ ಸಂಸ್ಥೆಯಲ್ಲಿರುವ ಒಂದಾನೊಂದು ಸ್ಪೀದ್ ವೇರಿಯಂಟ್ ಆಗಿರಲಿದ್ದು, ಇದು ಜೆನೆವಾನಲ್ಲಿ ನಡೆಯಲಿರುವ 2019ರ ಜೆನೆವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗುತ್ತದೆ ಎನ್ನಲಾಗಿದೆ. ತದನಂತವಷ್ಟೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಭಾರತೀಯ ರೂ ಪ್ರಕಾರ ಇದು ರೂ. 1.6 ರಿಂದ 1.8 ಕೋಟಿಯ ಬೆಲೆಯನ್ನು ಪಡೆದುಕೊಂಡಿರಲಿದೆ.

ಬೆಂಟ್ಲಿ ಬೆಂಟೈಗಾ ಕಾರಿನಲ್ಲಿ ಈ ಬಾರಿ ಹಲವಾರು ಅಪ್ಗ್ರೇಡೆಡ್ ಉಪಕರಣಗಳನ್ನು ಒದಗಿಸಲಾಗಿದ್ದು, ಇದರಲ್ಲಿ ಈ ಬಾರಿ ಟಿಂಟೆಡ್ ಹೆಡ್‍ಲ್ಯಾಂಒಸ್, ಪ್ರಾಮಿನೆಂಟ್ ಟೈಲ್ ಗೇಟ್ ಸ್ಪಾಯ್ಲರ್, ಹೊಸ ಸೈಡ್ ಸ್ಕರ್ಟ್ಸ್, ಟಿಂಟೆಡ್ 22 ಇಂಚಿನ ಅಲಾಯ್ ವ್ಹೀಲ್ಸ್ ಅನ್ನು ಪಡೆದುಕೊಂಡಿದೆ.

ಇನ್ನು ಕಾರಿನ ಒಳಭಾಗದಲ್ಲಿ ಕೂಡಾ ಅಪ್ಡೇಟ್ ಅನ್ನು ಪಡೆದುಕೊಂಡಿದ್ದು, ಹೊಚ್ಚಹೊಸ ಎಲಾಂಟ್ರಾ ಹೊದಿಕೆಯನ್ನು ನೀಡಲಾಗಿದೆ. ಸ್ಪೀಡ್ ಬ್ಯಾಡ್ಜಿಂಗ್ ಹಾಗು ಇಲ್ಯುಮಿನೇಟೆಡ್ ಸ್ಪೀಡ್ ಟ್ರೆಡ್‍ಪ್ಲೆಡ್ ಹಾಗು ಒಟ್ಟು 22 ವಿಧದಲ್ಲಿ ಅಡ್ಜಸ್ಟ್ ಮಾದಿಕೊಳ್ಳಬಹುದಾದ ಡ್ರೈವರ್ ಸೀಟ್ ಅನ್ನು ಈ ಕಾರು ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
ಬೆಂಟ್ಲಿ ಬೆಂಟೈಗಾ ಸ್ಪೀಡ್ ಕಾರು 6.0 ಲೀಟರ್, ಟ್ವಿನ್ ಟರ್ಬೋ W12 ಎಂಜಿನ್ ಸಹಾಯದಿಂದ 626 ಬಿಹೆಚ್‍ಪಿ ಮತ್ತು 900ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಅತೀ ವೇಗವಾದ ಎಲೆಕ್ಟ್ರಿಕ್ ಕರು ಎಂಬ ಖ್ಯಾತಿಯನ್ನು ಸಹ ಈ ಕಾರು ಪಡೆದುಕೊಂಡಿದೆ.

Most Read Articles

Kannada
English summary
New Bentley Bentayga Replaces Fastest SUV Lamborghini Urus. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X