ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಹೋಂಡಾ ಕಾರ್ಸ್ ಇಂಡಿಯಾ ಬಹುನೀರಿಕ್ಷಿತ 5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಥೈಲ್ಯಾಂಡ್‌ನಲ್ಲಿ ಅನಾವರಣಗೊಂಡಿದ್ದು, ಮುಂಬರುವ 2020ರ ಆರಂಭದಲ್ಲಿ ಭಾರತದಲ್ಲೂ ಹೊಸ ಸಿಟಿ ಸೆಡಾನ್ ಕಾರು ರಸ್ತೆಗಿಳಿಯಲಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

2019ರ ಒಳಗಾಗಿ ಹೊಸ ಸಾರಿಗೆ ನಿಯಮಗಳನ್ನು ಪಾಲನೆ ಮಾಡಬೇಕಾದ ಹಿನ್ನಲೆಯಲ್ಲಿ ಮೊದಲು ಥೈಲ್ಯಾಂಡ್‌ನಲ್ಲಿಯೇ ಹೊಸ ತಲೆಮಾರಿನ ಸಿಟಿ ಸೆಡಾನ್ ಆವೃತ್ತಿಯನ್ನು ಅನಾವರಣಗೊಳಿಸಿರುವ ಹೋಂಡಾ ಸಂಸ್ಥೆಯು ತದನಂತರವಷ್ಟೇ ಭಾರತ ಸೇರಿದಂತೆ ಯುರೋಪಿನ್ ಮಾರುಕಟ್ಟೆಗಳಲ್ಲೂ ಹೊಸ ಕಾರು ಬಿಡುಗಡೆಯಾಗಲಿದೆ. ಥೈಲ್ಯಾಂಡ್ ಅನಾವರಣಗೊಳಿಸಲಾದ ಕಾರು ಆವೃತ್ತಿಯೇ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಸಿಟಿ ಸೆಡಾನ್ ಆವೃತ್ತಿ ಮಾತ್ರವೇ ತುಸು ಬದಲಾವಣೆ ಪಡೆದುಕೊಳ್ಳಲಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಎಂಜಿನ್ ಆಯ್ಕೆ ಮತ್ತು ಕೆಲವು ಹೊರ ಭಾಗದ ಫೀಚರ್ಸ್‌ಗಳನ್ನು ಹೊರತುಪಡಿಸಿ ಇನ್ನುಳಿದಂತೆ ಬಹುತೇಕ ತಾಂತ್ರಿಕ ಅಂಶಗಳು ಒಂದೇ ಆಗಿರಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರಿಗಿಂತಲೂ ಹೊಸ ಕಾರು ಉದ್ದಳತೆಯಲ್ಲಿ ಸೆಡಾನ್ ಪ್ರಿಯರ ಗಮನಸೆಳೆಯಲಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಹಳೆಯ ಸಿಟಿ ಆವೃತ್ತಿಗಿಂತಲೂ ಹೊಸ ಕಾರು 100-ಎಂಎಂ ಉದ್ದ, 53-ಎಂಎಂ ಅಗಲವಾದ ವಿಸ್ತರಣೆ ಹೊಂದಿದ್ದು, ಅನಕೂಲಕರ ಆಸನ ಸೌಲಭ್ಯ ಜೋಡಣೆಗಾಗಿ 11-ಎಂಎಂ ನಷ್ಟು ಕಡಿಮೆ ವೀಲ್ಹ್ ಬೇಸ್ ಮತ್ತು 28-ಎಂಎಂ ಎತ್ತರವನ್ನು ತಗ್ಗಿಸಲಾಗಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಹಾಗೆಯೇ ಹೊಸ ಕಾರಿನ ಮುಂಭಾಗ ಗ್ರೀಲ್ ಡಿಸೈನ್ ಕೂಡಾ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಸಿವಿಕ್ ಮತ್ತು ಅಮೆಜ್ ಕಾರಿನ ಡಿಸೈನ್ ಮಾದರಿಯನ್ನು ಸಮ್ಮಿಶ್ರಗೊಳಿಸಿ ಹೊಸ ಲುಕ್ ನೀಡಲಾಗಿದೆ. ಈ ಮೂಲಕ ಮಷ್ಟಷ್ಟು ಶಾರ್ಪ್ ಲುಕಿಂಗ್ ಪಡೆದುಕೊಂಡಿರುವ ಹೊಸ ಸಿಟಿ ಕಾರಿನಲ್ಲಿ ಎಲ್ಇಡಿ ಫ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್, ಗಮನಸೆಳೆಯುವ ಸ್ಪೋರ್ಟಿ ಸ್ಟೈಲ್ ಬಂಪರ್ ಪಡೆದುಕೊಂಡಿರುವುದು ಬೆಲೆ ತುಸು ದುಬಾರಿಯಾಗಿರಲಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಹೊಸ ಕಾರಿನ ಒಳಭಾಗದ ಡಿಸೈನ್‌ಗಳು ಹಳೆಯ ಆವೃತ್ತಿಗಿಂತಲೂ ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ವಿವಿಧ ಪ್ರೀಮಿಯಂ ಸೌಲಭ್ಯಗಳೊಂದಿಗೆ ಆಲ್ ಬ್ಲ್ಯಾಕ್ ಇಂಟಿರಿಯರ್, 8.0-ಇಂಚಿನ ಟಚ್ ಸ್ಕ್ರೀನ್, ಲೆದರ್ ಹೊದಿಕೆಯುಳ್ಳ ಮಲ್ಟಿ ಫಂಕ್ಷನಲ್ ತ್ರಿ ಸ್ಪೋಕ್ ಸ್ಟಿರಿಂಗ್ ವೀಲ್ಹ್ ನೀಡಲಾಗಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಜೊತೆಗೆ ಹೊಸ ಕಾರಿನಲ್ಲಿ ಅಲ್ಯುನಿಯಂ ಪೆಡಲ್, ಇಕೋ ಡ್ರೈವ್ ಮೋಡ್, ಆಟೋಮ್ಯಾಟಿಕ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ, ಮಲ್ಟಿ ಇನ್‌ಫಾರ್ಮೆಷನ್ ಡಿಸ್ಪೈ, 17-ಇಂಚಿನ ಟೈರ್‌ನೊಂದಿಗೆ ಗಮನಸೆಳೆಯಲಿದ್ದು, 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ಎಂಜಿನ್ ಹೊಂದಿರಲಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

5ನೇ ತಲೆಮಾರಿನ ಸಿಟಿ ಕಾರು ಈ ಹಿಂದಿನಂತೆಯೇ 1.5-ಲೀಟರ್ ಟರ್ಬೋ ಡೀಸೆಲ್ ಮತ್ತು 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನೇ ಹೊಂದಿದ್ದು, ಹೊಸ ಕಾರಿನಲ್ಲಿ ಸ್ಮಾರ್ಟ್ ಹೈಬ್ರಿಡ್ ವರ್ಷನ್ ಪರಿಚಯಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಥೈಲ್ಯಾಂಡ್‌ನಲ್ಲಿ ಮಾರಾಟವಾಗುವ ಹೋಂಡಾ ಸಿಟಿ ಕಾರಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ 123-ಬಿಎಚ್‌ಪಿ ಪ್ರೇರಿತ 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಮಾರಾಟ ಮಾಡಲಾಗುತ್ತಿದ್ದು, ಭಾರತದಲ್ಲಿ ಈ ಎಂಜಿನ್ ಆಯ್ಕೆ ನೀಡುವುದಿಲ್ಲ ಎನ್ನಲಾಗಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಆದರೆ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಹೈಬ್ರಿಡ್ ತಂತ್ರಜ್ಞಾನ ಅಳವಡಿಕೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದರೂ ಸಹ ಈ ಬಗ್ಗೆ ಯಾವುದೇ ಪ್ರಕ್ರಿಯೆ ನೀಡದ ಹೋಂಡಾ ಸಂಸ್ಥೆಯು ಹೊಸ ಕಾರಿನ ಅಧಿಕೃತ ಬಿಡುಗಡೆಯ ದಿನದಂದೆ ಮಾಹಿತಿ ಹಂಚಿಕೊಳ್ಳಲು ಮುಂದಾಗಿದೆ.

ಹೊಸ ಬದಲಾವಣೆಯೊಂದಿಗೆ 2020ರ ಹೋಂಡಾ ಸಿಟಿ ಸೆಡಾನ್ ಅನಾವರಣ

ಇನ್ನು ಹೊಸ ಸಿಟಿ ಕಾರು ಮೊದಲು ಥೈಲ್ಯಾಂಡ್ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದ್ದು, ತದನಂತರಷ್ಟೇ ಭಾರತಕ್ಕೆ ಪ್ರವೇಶಿಸಲಿರುವ ಹೊಸ ಕಾರು ಮಾರ್ಚ್ ಹೊತ್ತಿಗೆ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಳಿಂತಲೂ ಪೆಟ್ರೋಲ್ ಮಾದರಿಯು ರೂ.15 ಸಾವಿರದಿಂದ 20 ಸಾವಿರ ಮತ್ತು ಡೀಸೆಲ್ ಎಂಜಿನ್ ಮಾದರಿಯು ರೂ.80 ಸಾವಿರದಿಂದ ರೂ.2 ಲಕ್ಷದ ತನಕ ದುಬಾರಿಯಾಗಲಿವೆ.

Most Read Articles

Kannada
Read more on ಹೋಂಡಾ honda
English summary
Honda has globally unveiled the all-new fifth-generation City sedan in Thailand.
Story first published: Monday, November 25, 2019, 16:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X