ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಫೋಕ್ಸ್​ ವ್ಯಾಗನ್ ಅತಿ ಶೀಘ್ರದಲ್ಲಿ ತನ್ನ ಹೊಸ ಟಿಗ್ವಾನ್ ಆಲ್ ಸ್ಪೇಸ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಫೋಕ್ಸ್​ ವ್ಯಾಗನ್ ನ ಹೊಸ ಟಿಗ್ವಾನ್ ಆಲ್ ಸ್ಪೇಸ್ ಈ ವರ್ಷದ ಕೊನೆಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಕಾರ್ ಅಂಡ್ ಬೈಕ್ ಸುದ್ದಿ ಮೂಲದ ಪ್ರಕಾರ, ಫೋಕ್ಸ್​ ವ್ಯಾಗನ್ ಸಂಸ್ಥೆಯು ಟಿಗ್ವಾನ್ ಆಲ್ ಸ್ಪೇಸ್ ಲಾಂಗ್ ವ್ಹೀಲ್‍ಬೇಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಆದರೆ ಜರ್ಮನ್ ಕಾರು ತಯಾರಕ ಸಂಸ್ಥೆಯು ಟಿಗ್ವಾನ್ ಎಲ್‍ಡಬ್ಲ್ಯೂಬಿ ಕಾರನ್ನು ಹೆಚ್ಚುವರಿಯಾಗಿ ನೀಡುವುದೇ ಅಥವಾ ಈಗಿರುವ ಟಿಗ್ವಾನ್ ಎಸ್‍ಯುವಿ ಯ ಬದಲಾಗಿ ನೀಡುವುದೇ ಎಂಬ ಬಗ್ಗೆ ಇನ್ನೂ ಖಚಿತಪಡಿಸಬೇಕಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಎರಡನೇ ತಲೆಮಾರಿನ ಫೋಕ್ಸ್​ ವ್ಯಾಗನ್ ಟಿಗ್ವಾನ್ ಕಾರನ್ನು ಮೊದಲ ಬಾರಿಗೆ 2016ರಲ್ಲಿ ಶಾರ್ಟ್ ವ್ಹೀಲ್‍ಬೇಸ್ ಮತ್ತು ಲಾಂಗ್ ವ್ಹೀಲ್‍ಬೇಸ್ ಮಾದರಿಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆಗೊಳಿಸಲಾಯಿತು.

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಜಗತ್ತಿನ ಬಹುತೇಕ ರಾಷ್ಟ್ರಗಳು ಯಾವುದಾದರೂ ಒಂದು ಮಾದರಿಯನ್ನು ಮಾತ್ರ ಪಡೆಯುತ್ತಿದ್ದವು. ಎರಡೂ ಮಾದರಿಯನ್ನು ಪಡೆದ ರಾಷ್ಟ್ರಗಳು ಎಲ್‍ಡಬ್ಲ್ಯೂಬಿ ಮಾದರಿಯನ್ನು ಟಿಗ್ವಾನ್ ಆಲ್‍ಸ್ಪೇಸ್ ಎಂದು ಕರೆದವು. ಫೋಕ್ಸ್​ ವ್ಯಾಗನ್ ಟಿಗ್ವಾನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ 2017ರಲ್ಲಿ ಬಿಡುಗಡೆ ಮಾಡಲಾಯಿತು.

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಸ್ಕೋಡಾ ಕಂಪನಿಯು ಇದೇ ಸಮಯದಲ್ಲಿಯೇ ಕೋಡಿಯಾಕ್ ಮಾದರಿಯನ್ನು ಬಿಡುಗಡೆ ಮಾಡಿತು. ಕೋಡಿಯಾಕ್ ಮತ್ತು ಟಿಗ್ವಾನ್ ಎಲ್‍ಡಬ್ಲ್ಯೂಬಿ ಬಹುತೇಕ ಒಂದೇ ಫೀಚರ್ ಮತ್ತು ಎಕ್ವಿಪ್ ಮೆಂಟ್‍ಗಳನ್ನು ಹೊಂದಿದ್ದವು. ಸ್ಕೋಡಾ ಕೊಡಿಯಾಕ್ ಕಾರನ್ನು ಪ್ರಿಮಿಯಂ ಸೆವೆನ್ ಸೀಟರ್ ಎಸ್‍ಯುವಿ ಯಾಗಿ ನೀಡಿದರೆ, ಟಿಗ್ವಾನ್ ಆಲ್ ಸ್ಪೇಸ್ ಅನ್ನು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಇನ್ನೂ ಅಧಿಕ ಫೀಚರ್ ಗಳನ್ನ ನೀಡಲಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಭಾರತದಲ್ಲಿನ ಟಿಗ್ವಾನ್ ಎಲ್‍ಡಬ್ಲ್ಯೂಬಿ ಯ ಮಾದರಿಯಾದ 2 ಡಬ್ಲ್ಯೂಡಿ ಬೆಲೆಯನ್ನು ಈಗಾಗಲೇ ಚಾಲ್ತಿಯಲ್ಲಿರುವ ಟಿಗ್ವಾನ್ ನ ಬೆಲೆಯಲ್ಲಿ ನೀಡಲಾಗುವುದು ಆದರೆ 4 ಡಬ್ಲ್ಯೂಡಿ ಬೆಲೆಯು ಅಧಿಕ ಫೀಚರ್ ಗಳನ್ನು ಒಳಗೊಂಡಿರುವ ಕಾರನ ಸ್ವಲ್ಪ ಅಧಿಕ ಬೆಲೆಯನ್ನು ಮಾರಾಟ ಮಾಡಲಾಗುವುದು.

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಆದ ಕಾರಣ ಫೋಕ್ಸ್​ ವ್ಯಾಗನ್ 4 ಡಬ್ಲ್ಯೂಡಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಬೇಕೇ ಅಥವಾ ಈಗ ಇರುವ 2 ಡಬ್ಲ್ಯೂಡಿ ಮಾದರಿಯನ್ನೇ ಮುಂದುವರಿಸಬೇಕೆ ಎಂದು ತೀರ್ಮಾನಿಸಬೇಕಿದೆ. ಫೋಕ್ಸ್​ ವ್ಯಾಗನ್ ಟಿಗ್ವಾನ್ ಆಲ್ ಸ್ಪೇಸ್ ಕಾರನ್ನು ಔರಂಗಬಾದ್ ನಲ್ಲಿರುವ ವಿಡಬ್ಲ್ಯೂ ಫೆಸಿಲಿಟಿಯಲ್ಲಿ ಉತ್ಪಾದಿಸಲಾಗುವುದು.

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಫೋಕ್ಸ್​ ವ್ಯಾಗನ್ ಟಿಗ್ವಾನ್ ಆಲ್ ಸ್ಪೇಸ್ ನ ಬಿಡುಗಡೆಯು ಜರ್ಮನ್ ಕಾರು ತಯಾರಕ ಕಂಪನಿಯ ಇಂಡಿಯಾ 2.0 ಪ್ರಾಜೆಕ್ಟ್ ನ ಅಂಗವಾಗಿ ಬಿಡುಗಡೆ ಮಾಡಲಾಗುವುದು. ಟಿಗ್ವಾನ್ ಆಲ್ ಸ್ಪೇಸ್ ನ ಬಿಡುಗಡೆಯು ಫೋಕ್ಸ್​ ವ್ಯಾಗನ್ ನ ಭಾರತೀಯ ಮಾರುಕಟ್ಟೆಯೆಡೆಗಿನ ಯೋಜನೆಗಳನ್ನು ಸೂಚಿಸುತ್ತದೆ. ಫೋಕ್ಸ್​ ವ್ಯಾಗನ್ ಈಗಾಗಲೇ ಟಿ ರಾಕ್ ಕಾರನ್ನು 2020ರ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಖಚಿತಪಡಿಸಿದೆ.

MUST READ: ಡಿಜಿಟಲ್ ಕೀ ತಂತ್ರಜ್ಞಾನದೊಂದಿಗೆ ಬರಲಿದೆ ಹ್ಯುಂಡೈ ಸೊನಾಟಾ..!

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಫೋಕ್ಸ್​ ವ್ಯಾಗನ್ ನ ಟಿಗ್ವಾನ್ ಆಲ್ ಸ್ಪೇಸ್ ನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿರದೇ ಇದ್ದರೂ ಎಸ್‍ಯುವಿ ಸ್ಕೋಡಾ ಕೊಡಿಯಾಕ್ ನಷ್ಟೇ ಎಂಜಿನ್ ಹೊಂದಿರಲಿದೆ ಎಂಬ ನಿರೀಕ್ಷೆಯಿದೆ. ಅದರ 2.0 ಲೀಟರಿನ ಡೀಸೆಲ್ ಎಂಜಿನ್148 ಬಿಹೆಚ್‍ಪಿ ಮತ್ತು 340 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 7 ಸ್ಪೀಡ್ ಡಿಎಸ್‍ಜಿ ಗೇರ್ ಬಾಕ್ಸ್ ಹೊಂದಿರಲಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಲಾಂಗ್ ವ್ಹೀಲ್‍ಬೇಸ್ ಫೋಕ್ಸ್ ವ್ಯಾಗನ್ ಟಿಗ್ವಾನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್​ ವ್ಯಾಗನ್ ಟಿಗ್ವಾನ್ ಆಲ್ ಸ್ಪೇಸ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಕುರಿತ ದಿನಾಂಕ ಮತ್ತು ವಿವರಗಳ ಬಗ್ಗೆ ಇನ್ನಷ್ಟೆ ಅಧಿಕೃತವಾಗಿ ಪ್ರಕಟಿಸಬೇಕಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಫೋಕ್ಸ್​ ವ್ಯಾಗನ್ ಟಿಗ್ವಾನ್ ಆಲ್ ಸ್ಪೇಸ್ ನ ಬೆಲೆಯು ಎಕ್ಸ್ ಶೋ ರೂಂ ದರದಂತೆ ರೂ. 28 ಲಕ್ಷ ಎಂದು ಅಂದಾಜಿಸಲಾಗಿದೆ. ಬಿಡುಗಡೆಯ ನಂತರ ಸ್ಕೋಡಾ ಕೊಡಿಯಾಕ್, ಟೊಯೋಟಾ ಫಾರ್ಚುನರ್ ಮತ್ತು ಫೋರ್ಡ್ ಎಂಡಿವರ್ ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Volkswagen Tiguan AllSpace Long Wheelbase Coming To India — Launch Expected By End-2019 - Read in Kannada
Story first published: Monday, April 22, 2019, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X