ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ಹ್ಯುಂಡೈ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ಕ್ರೆಟಾ ಎಸ್‍ಯುವಿ ಕಾರನು 2019ರ ಶೆಂಘೈ ಮೋಟಾರ್ ಶೋನಲ್ಲಿ ಐಎಕ್ಸ್25 ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗಿತ್ತು. ಬಿಡುಗಡೆಗೂ ಮುನ್ನವೇ ಚೀನಾ ಸೇರಿದಂತೆ ಚೆನ್ನೈ ನಗರದ ಹೊರವಲಯದಲ್ಲಿ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವಾಗ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ಸಧ್ಯ ಹ್ಯುಂಡೈ ಸಂಸ್ಥೆಯಲ್ಲಿ ಸದ್ದು ಮಾಡುತ್ತಿರುವ ವೆನ್ಯೂ ಕಾರು ಮಾರುಕಟ್ಟೆಯಲ್ಲಿ ಉತ್ತಮ ಬೇಡೀಕೆಯನ್ನು ಪಡೆಯುತ್ತಿದ್ದು, ಇದೀಗ ವೆನ್ಯೂ ಬರುವುದಕ್ಕು ಮುನ್ನ ಸಂಸ್ಥೆಯ ಮಾರಾಟವನ್ನು ಕಾಪಾಡುತ್ತಾ ಬಂದ ಕ್ರೆಟಾ ಕಾರಿನ ಮುಂದಿನ ತಲೆಮಾರನ್ನು ಬಿಡುಗಡೆಗೊಳಿಸುವ ಕಾರ್ಯದಲ್ಲಿದೆ. ಈ ನಿಟ್ಟಿನಲ್ಲಿ ಇದೀಗ ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರಿನ ಎಂಜಿನ್ ಮತ್ತು ಉದ್ದಳತೆಯೆ ಮಾಹಿತಿಗಳು ಬಹಿರಂಗಗೊಂಡಿದ್ದು, ಈ ಲೇಖನದಲ್ಲಿ ಸಂಪೂರ್ಣ ವಿವರವನ್ನು ಪಡೆಯಿರಿ.

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ಉದ್ದಳತೆ

ಬಿಡುಗಡೆಗೊಳ್ಳಲಿರುವ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍ಯುವಿ ಕಾರು 4300ಎಂಎಂ ಉದ್ದ, 1790ಎಂಎಂ ಅಗಲ, 1622ಎಂಎಂ ಎತ್ತರ ಮತ್ತು 2610ಎಂಎಂ ವ್ಹೀಲ್‍‍ಬೇಸ್ ಅನ್ನು ಹೊಂದಿರಲಿದೆ. ಇನ್ನು ಪ್ರಸ್ತುತ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರು 4270ಎಂಎಂ ಉದ್ದ, 1780ಎಂಎಂ ಅಗಲ, 1630ಎಂಎಂ ಎತ್ತರ ಮತ್ತು 2590ಎಂಎಂ ವ್ಹೀಲ್‍‍ಬೇಸ್ ಅನ್ನು ಪಡೆದುಕೊಂಡಿದೆ.

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ಎಂಜಿನ್ ವೈಶಿಷ್ಟ್ಯತೆಗಳು

ಈ ಮೊದಲೇ ಹೇಳಿರುವ ಹಾಗೆ ಬಿಡುಗಡೆಯಾಗಲಿರುವ ನೆಕ್ಸ್ಟ್ ಜೆನರೇಷನ್ ಹ್ಯುಂಡೈ ಕ್ರೆಟಾ ಕಾರು ಬಿಎಸ್-6 ಹೊರಸೂಸುವಿಕೆಯನ್ನು ಹೊಂದಿರಲಿದೆ. ಈ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಕ್ರೆಟಾ ಕಾರು ದೊರೆಯಲಿದೆ. 1.5 ಲೀಟರ್ ಅಥವಾ 1.4 ಲೀಟರ್ ಮಾದರಿಯ ಕಾರುಗಳು 4 ಸಿಲೆಂಡರ್, ನ್ಯಾಚುರಲ್ಲಿ ಆಸ್ಪಿರೇಟೆಡ್ ಅಥವಾ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 115ಬಿಹೆಚ್‍ಪಿ/140ಬಿಹೆಚ್‍ಪಿ ಮತ್ತು 144ಎನ್ಎಂ ಟಾರ್ಕ್/242ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದೆ.

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ಇನ್ನು ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ 4 ಸಿಲೆಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 115 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದೆ. ಪೆಟ್ರೋಲ್ ಮಾದರಿಯ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಸಿವಿಟಿ ಅಥವಾ ಡಿಸಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಣೆ ಹೊಂದಿರಲಿದೆ. ಇನ್ನು ಡೀಸೆಲ್ ಎಂಜಿನ್‍ಗಳು 6 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಣೆ ಪಡೆಯಲಿದೆ.

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ಡಿಸೈನ್

ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರುಗಳು ಈ ಬಾರಿ ವೃತ್ತಾಕಾರದ ಡಿಸೈನ್ ಅನ್ನು ಪಡೆಯಲಿದೆ. ಈ ಬಾರಿ ಈ ಕಾರಿನಲ್ಲಿ ಪ್ರಮುಖ ಹೆಡ್‍‍ಲ್ಯಾಂಪ್ಸ್ ಮೇಲೆ, ಎಲ್ಇಡಿ ಲ್ಯಾಂಪ್ಸ್ ಅನ್ನು ಸೆಪರೇಟ್ ಯೂನಿಟ್ ಆಗಿ ನೀಡಲಾಗಿದೆ. ಹೆಡ್‍ಲ್ಯಾಂಪ್ಸ್ ಮಾದರಿಯಲ್ಲಿಯೇ ಸ್ಪ್ಲಿಟ್ ಟೈಲ್‍‍ಲ್ಯಾಂಪ್ಸ್ ಅನ್ನು ಸಹ ಪಡೆದುಕೊಳ್ಳಲಿದ್ದು, ಕಾರಿನ ಉದ್ದಳತೆಗೆ ತಕ್ಕ ಹಾಗೆ ಎಲ್ಇಡಿ ಲೈಟ್ಸ್ ಅನ್ನು ಮತ್ತು ಬ್ರೇಕ್ ಹಾಗು ಟರ್ನ್ ಇಂಡಿಕೇಟರ್‍‍ಗಳನ್ನು ಒದಗಿಸಲಾಗಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ಇನ್ನು ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍ಯುವಿ ಕಾರಿನ ಒಳಭಾಗದಲ್ಲಿ ಪ್ರೀಮಿಯಂ ಕ್ಯಾಬಿನ್ ಅನ್ನು ನೀಡಲಾಗಿದ್ದು, ಎಂಜಿನ್ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಟಕ್ಕರ್ ನೀಡುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಎಂಜಿನ್ ಹೆಕ್ಟರ್ ಕಾರಿನಲ್ಲಿ ನೀಡಿದ ಹಾಗೆಯೆ ಕ್ರೆಟಾ ಕಾರು ಕೂಡಾ ಅಗಲವಾದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆಯಲಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ಬಿಡುಗಡೆಯಾಗಲಿರುವ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍ಯುವಿ ಕಾರು ಈ ಬಾರಿ ಎರಡೂ ಆಸನ ವಿಧಾನದಲ್ಲಿ ದೊರೆಯಲಿದ್ದು, 5 ಮತ್ತು 7 ಆಸನಗಳ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರುಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲವಾದೂ, ಈ ಕಾರು ಎಕ್ಸ್ ಶೋರುಂ ಪ್ರಕಾರ ಪ್ರಸ್ತುತ ಇರುವ ಕ್ರೆಟಾ ಕಾರಿಗಿಂತಲೂ ಸುಮಾರು ರೂ. 1.50 ಲಕ್ಷದ ಅಧಿಕ ಬೆಲೆಯನ್ನು ಹೊಂದಿರಲಿದೆ.

MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

ದೇಶಿಯ ಮಾರುಕಟ್ಟೆ ಸೇರಿದಂತೆ ಇನ್ನು ಹಲವಾರು ದೇಶದ ಮಾರುಕಟ್ಟೆಯಲ್ಲಿ 5 ವರ್ಷವನ್ನು ಪೂರೈಸಿರುವ ಹ್ಯುಂಡೈ ಕ್ರೆಟಾ ಕಾರುಗಳು ಇಲ್ಲಿಯವರೆಗೂ ಸುಮಾರು 5 ಲಕ್ಷಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಾ ಸೆಗ್ಮೆಂಟ್‍ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂದಿದೆ. ಇನ್ನು ಬಿಡುಗಡೆಯಾಗುವ ಎರಡನೆಯ ತಲೆಮಾರಿನ ಹ್ಯುಂಡೈ ಕ್ರೆಟಾ ಕಾರುಗಳು ಯಾವ ರೀತಿ ಗ್ರಾಹಕರನ್ನು ಸೆಳೆಯಲಿದೆ ಎಂದು ಕಾಯ್ದು ನೋಡಬೇಕಿದೆ.

Most Read Articles

Kannada
English summary
Next Generation Hyundai Creta Dimensions And Engine Details Revelaed. Read In Kannada
Story first published: Friday, August 16, 2019, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X