ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಹೆದ್ದಾರಿಗಳಲ್ಲಿ ಕ್ಯೂ ನಿಂತು ಟೋಲ್‌ ಕಟ್ಟುವ ತಾಪತ್ರಯವನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಲಭವಾಗಿ ರಸ್ತೆ ಶುಲ್ಕವನ್ನು ಪಾವತಿಸಲು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿದ್ದು, ಫಾಸ್ಟ್‌ಟ್ಯಾಗ್ ಖರೀದಿಸಲು ಗ್ರಾಹಕರಿಗೆ ಸುಲಭವಾಗುವಂತೆ ಇದೀಗ ಅಮೆಜಾನ್‌ ಡಾಟ್‌ ಕಾಮ್‌ನಲ್ಲಿ ಹೊಸ ಶುಲ್ಕು ಪಾವತಿ ವಿಧಾನವನ್ನು ಖರೀದಿಸುವ ವ್ಯವಸ್ಥೆ ಮಾಡಿದೆ.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಹೌದು, ಇಷ್ಟು ದಿನ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪಡೆದುಕೊಳ್ಳಲು ಬಯಸುವ ವಾಹನ ಮಾಲೀಕರು ಟೋಲ್ ಬೂತ್‌ಗಳ ಬಳಿ ಇರುವ ಫಾಸ್ಟ್‌ಟ್ಯಾಗ್ ಕೇಂದ್ರಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ನೀಡಬೇಕಾಗಿತ್ತು. ಇದರಿಂದ ವಾಹನ ಮಾಲೀಕರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಇದನ್ನು ಸುಲಭವಾಗಿಸಲು ಆನ್‌ಲೈನ್ ಮೂಲಕವೇ ಫಾಸ್ಟ್‌ಟ್ಯಾಗ್ ಮಾರಾಟಕ್ಕೆ ಚಾಲನೆ ನೀಡಿದ್ದು, ಅಮೆಜಾನ್‌ನಲ್ಲಿ ಆಸಕ್ತ ವಾಹನ ಮಾಲೀಕರು ಅಗತ್ಯ ದಾಖಲೆಗಳನ್ನು ಪೂರೈಸಿ ಸುಲಭವಾಗಿ ಫಾಸ್ಟ್‌ಟ್ಯಾಗ್ ಸದಸ್ಯರಾಗಬಹುದು.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಫಾಸ್ಟ್ ಟ್ಯಾಗ್‌ಗಳಿಗೆ ಮೊಬೈಲ್ ಮಾದರಿಯಲ್ಲೇ ಕರೆನ್ಸಿ ಹಾಕಿಸಿಕೊಳ್ಳುವ ಮೂಲಕ ಟೋಲ್ ಪಾವತಿ ಮಾಡುವ ಒಂದು ವಿಧಾನವಾಗಿದ್ದು, ಹೊಸ ವ್ಯವಸ್ಥೆಯಿಂದ ಹಲವಾರು ಲಾಭಗಳಿವೆ.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಇಂಧನ ಮತ್ತು ಸಮಯ ಉಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 'ಫಾಸ್ಟ್‌ಟ್ಯಾಗ್' ಎಂಬ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, 2016ರ ಎಪ್ರಿಲ್‌ನಲ್ಲಿ ಜಾರಿಗೆ ಬಂದಿರುವ ಫಾಸ್ಟ್‌ಟ್ಯಾಗ್, ವ್ಯವಸ್ಥೆಯನ್ನು ಡಿಸೆಂಬರ್ 01ರಿಂದ ರಸ್ತೆಗಿಳಿಯುವ ಎಲ್ಲ ನೂತನ ನಾಲ್ಕು ಚಕ್ರದ ವಾಹನಗಳಲ್ಲೂ ಕಡ್ಡಾಯಗೊಳಿಸಲಾಗಿದೆ.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಎಲ್ಲೆಲ್ಲಿ ಫಾಸ್ಟ್‌ಟ್ಯಾಗ್ ಖರೀದಿಗೆ ಲಭ್ಯ?

ಟೋಲ್ ಪ್ಲಾಜ್‌ಗಳಲ್ಲೇ ಫಾಸ್ಟ್ ಟ್ಯಾಗ್ ಖರೀದಿ ಮಾಡಬಹುದಾಗಿದ್ದು, ಇಲ್ಲವೇ ಫಾಸ್ಟ್ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿ ಮಾಡಬಹುದು. ಜೊತೆಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲೂ ಫಾಸ್ಟ್‌ಟ್ಯಾಗ್ ವಿತರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಇದೀಗ ಅಮೆಜಾನ್ ಡಾಟ್ ಕಾಮ್‌ ಮೂಲಕ ಫಾಸ್ಟ್‌ಟ್ಯಾಗ್ ಪಡೆಯಬಹುದಾಗಿದೆ.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಫಾಸ್ಟ್‌ಟ್ಯಾಗ್ ಪಡೆಯಲು ಬೇಕಾದ ಅಗತ್ಯ ದಾಖಲೆ ಪತ್ರಗಳು..!

*ವಾಹನದ ಆರ್‌ಸಿ ಬುಕ್

*ವಾಹನ ಮಾಲೀಕರ ಒಂದು ಪಾಸ್‌ಫೋರ್ಟ್ ಸೈಜ್ ಫೋಟೋ

*ವಾಹನದ ಕೆವೈಸಿ ದಾಖಲೆ

*ವಿಳಾಸ ಮತ್ತು ID ಪ್ರೂಫ್ (ಆಧಾರ್, ಓಟರ್ ಐಡಿ, ಪಾರ್ಸ್‌ಫೋರ್ಟ್, ಪಾನ್ ಕಾರ್ಡ್)

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಫಾಸ್ಟ್ ಟ್ಯಾಗ್‌ನಿಂದ ಏನು ಪ್ರಯೋಜನ?

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಹಲವು ಪ್ರಯೋಜನಗಳಿದ್ದು, ಸುಲಭವಾಗಿ ಟೋಲ್ ಶುಲ್ಕ ಪಾವತಿ ಮಾಡಬಹುದಲ್ಲದೇ ಆನ್‌ಲೈನ್ ರೀಚಾರ್ಜಿಂಗ್, ಎಸ್ಎಂಎಸ್ ಅಲರ್ಟ್ ಸೌಲಭ್ಯವಿರುತ್ತದೆ.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಇದರಿಂದ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿರುವ ಮೊತ್ತ ಮತ್ತು ನೀವು ಹೊರಟಿರುವ ಸ್ಥಳಗಳಲ್ಲಿನ ಟೋಲ್ ಸಂಗ್ರಹ ಕೇಂದ್ರಗಳ ಮಾಹಿತಿ, ಶುಲ್ಕುಗಳ ಮಾಹಿತಿ ಸಂದೇಶಗಳನ್ನು ಪಡೆಯಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ಸಹ ಪಡೆಯುವ ಅವಕಾಶವಿರುತ್ತೆ.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೇಗೆ?

ಕ್ರೇಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಕಿಂಗ್ ಇಲ್ಲವೇ ಚೆಕ್ ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ರೂ.100 ರಿಂದ 1 ಲಕ್ಷ ತನಕ ರೀಚಾರ್ಜ್ ಮಿತಿ ಹೊಂದಿರುತ್ತೆ.

MOST READ: ರೂ. 56 ಟೋಲ್ ಸುಂಕ ಕಟ್ಟದೆ ಸಿಬ್ಬಂದಿ ಮೇಲೆ ದರ್ಪ ತೋರಿದ ಸಚಿವರ ಪತ್ನಿ..!

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಫ್ಯಾಸ್ಟ್ ಟ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತೆ?

ಆರ್‌ಎಫ್ಐಡಿ ಎನ್ನುವ ತಂತ್ರಜ್ಞಾನ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಫಾಸ್ಟ್ ಟ್ಯಾಗ್‌ಗಳು ಕಾರಿನ ವಿಂಡ್‌ಸ್ಕೀನ್ ಬಳಿ ಅಳವಡಿಸಲಾಗಿರುತ್ತದೆ. ಇದು ಟೋಲ್ ಪ್ಲಾಜ್‌ದಲ್ಲಿರುವ ಫಾಸ್ಟ್ ಟ್ಯಾಗ್ ಲೈನ್ ಮೂಲಕ ಹಾಯ್ದುಹೋಗುವಾಗ ಆಟೋಮ್ಯಾಟಿಕ್ ಆಗಿ ನಿಮ್ಮ ಫಾಸ್ಟ್ ಟ್ಯಾಗ್ ಅಕೌಂಟ್‌ನಿಂದ ಶುಲ್ಕ ಸಂದಾಯವಾಗುತ್ತೆ.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಶುಲ್ಕ ಸಂದಾಯವಾದ ಕೆಲವೇ ಸೇಕೆಂಡುಗಳಲ್ಲಿ ಶುಲ್ಕ ಪಾವತಿಯಾದ ಸಂದೇಶವು ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಬರಲಿದ್ದು, ಟ್ರೋಲ್ ಪ್ಲಾಜಾ ಮಾಹಿತಿ ಮತ್ತು ಕಡಿತವಾದ ಶುಲ್ಕದ ಮೊತ್ತ ಮತ್ತು ಉಳಿದ ಕರೆನ್ಸಿ ಮಾಹಿತಿಯು ನಿಮಗೆ ಲಭ್ಯವಾಗಲಿದೆ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಇದಕ್ಕಾಗಿಯೇ ಫಾಸ್ಟ್ ಟ್ಯಾಗ್ ಆಪ್ ಕೂಡಾ ಲಭ್ಯವಿದ್ದು, ಈ ಮೂಲಕವು ನೀವು ಮತ್ತಷ್ಟು ಮಾಹಿತಿ ಪಡೆಯಬಹದು. ಫಾಸ್ಟ್ ಟ್ಯಾಗ್ ನೋಂದಣಿ ಮಾಡುವಾಗ ಆ್ಯಪ್‌ಗೆ ಸಂಬಂಧಿಸಿ ನಿಮಗೆ ಕೆಲವು ಪಾಸ್‌ವರ್ಡ್ ನೀಡಲಾಗುತ್ತೆ. ಆ್ಯಪ್ ಬಳಸುವಾಗ ನೀವು ನಿಮ್ಮ ಪರ್ಸನಲ್ ಪಾಸ್‌ವರ್ಡ್ ಬಳಕೆ ಮಾಡಬೇಕಾಗುತ್ತೆ. ಯಾಕೆಂದ್ರೆ ವ್ಯಯಕ್ತಿಕ ಮಾಹಿತಿ ಇದಲ್ಲಿರುತ್ತದೆ.

ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಒಂದು ಫಾಸ್ಟ್ ಟ್ಯಾಗ್ ಅನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಫಾಸ್ಟ್ ಟ್ಯಾಗ್ ಬೇಡ ಎನ್ನಿಸಿದಲ್ಲಿ ವಾಹನ ಮಾಲೀಕರು ಕಸ್ಟಮರ್ ಕೇರ್ ಮೂಲಕ ಬ್ಲ್ಯಾಕ್ ಕೂಡಾ ಮಾಡಬಹುದು.

Most Read Articles

Kannada
English summary
FASTag Goes Online — Now Purchase FASTag Through Amazon. Read in Kannada.
Story first published: Friday, May 31, 2019, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X