ಬಿಡುಗಡೆಯಾಯ್ತು ಪೋರ್ಷೆ ಮಕಾನ್ ನವೀಕೃತ ಕಾರು

ಪೋರ್ಷೆ ಇಂಡಿಯಾ 2019ರ ಮಕಾನ್ ನವೀಕೃತ ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 2019ರ ಪೋರ್ಷೆ ಮಕಾನ್ ನವೀಕೃತ ಎಸ್‍‍ಯು‍‍ವಿಯನ್ನು ಮಕಾನ್ ಹಾಗೂ ಮಕಾನ್ ಎಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಸ್ಟ್ಯಾಂಡರ್ಡ್ ಮಾದರಿಯ ಮಕಾನ್ ಕಾರಿನ ಆರಂಭಿಕ ಬೆಲೆಯನ್ನು ರೂ.69.98 ಲಕ್ಷಗಳಿಗೆ ನಿಗದಿಪಡಿಸಲಾಗಿದೆ.

ಬಿಡುಗಡೆಯಾಯ್ತು ಪೋರ್ಷೆ ಮಕಾನ್ ನವೀಕೃತ ಕಾರು

ಟಾಪ್ ಮಾದರಿಯ ಮಕಾನ್ ಎಸ್ ಮಾದರಿಯ ಬೆಲೆಯು ರೂ.85.03 ಲಕ್ಷಗಳಾಗಲಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ. ಈ ಎಸ್‌ಯುವಿಯ ಬುಕ್ಕಿಂಗ್ ಅನ್ನು ಜೂನ್‌ ತಿಂಗಳಿನಲ್ಲಿ ಮತ್ತೆ ಆರಂಭಿಸಲಾಗಿತ್ತು. ಈ ಕಾರಿನ ಡೆಲಿವರಿಯನ್ನು ಮುಂದಿನ ವಾರಗಳಲ್ಲಿ ಶುರು ಮಾಡುವ ನಿರೀಕ್ಷೆಯಿದೆ. ಸ್ಟೈಲಿಂಗ್ ವಿಷಯದ ಬಗ್ಗೆ ಹೇಳುವುದಾದರೆ, 2019ರ ಪೋರ್ಷೆ ಮಕಾನ್ ಹಲವಾರು ನವೀಕರಣಗಳನ್ನು ಪಡೆದಿದೆ.

ಬಿಡುಗಡೆಯಾಯ್ತು ಪೋರ್ಷೆ ಮಕಾನ್ ನವೀಕೃತ ಕಾರು

ಬಹುತೇಕ ನವೀಕೃತಗಳು ಹೊಸ ಪೀಳಿಗೆಯ ಕೇಯೆನ್‍‍ನಿಂದ ಪ್ರೇರಿತವಾಗಿವೆ. ಮುಂಭಾಗವು ಹಲವಾರು ನವೀಕರಣಗಳನ್ನು ಹೊಂದಿದ್ದು, ಹಳೆಯ ಕಾರಿಗಿಂತ ಅಗಲವಾಗಿ ಕಾಣುತ್ತದೆ. ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು, ಫಾಗ್ ಲ್ಯಾಂಪ್‍‍ಗಳು, ಟೇಲ್‍‍ಲೈಟ್‌ಗಳು ಹಾಗೂ ಟರ್ನ್ ಇಂಡಿಕೇಟರ್‍‍ಗಳು ಸೇರಿದಂತೆ ಹಲವಾರು ಎಸ್‌ಯುವಿ ಎಲ್‌ಇಡಿ ದೀಪಗಳಿವೆ. 2019ರ ಪೋರ್ಷೆ ಮಕಾನ್ ನವೀಕೃತ ಕಾರ್ ಅನ್ನು ಮಿಯಾಮಿ ಬ್ಲೂ, ಮಾಂಬಾ ಗ್ರೀನ್ ಮೆಟಾಲಿಕ್, ಡಾಲಮೈಟ್ ಸಿಲ್ವರ್ ಮೆಟಾಲಿಕ್ ಹಾಗೂ ಕ್ರಯೋನ್ ಎಂಬ ನಾಲ್ಕು ಹೊಸ ಬಾಹ್ಯ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬಿಡುಗಡೆಯಾಯ್ತು ಪೋರ್ಷೆ ಮಕಾನ್ ನವೀಕೃತ ಕಾರು

ನವೀಕೃತ ಎಸ್‍‍ಯು‍‍ವಿ 20 ಇಂಚಿನ ವ್ಹೀಲ್‍‍ಗಳನ್ನು ಹೊಂದಿದೆ. 21 ಇಂಚುಗಳ ವ್ಹೀಲ್‍‍ಗಳನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುತ್ತದೆ. ಇವೆರಡನ್ನೂ ಸಹ ಕಸ್ಟಮೈಸ್ ಮಾಡಬಹುದಾಗಿದೆ. 2019ರ ಮಕಾನ್ ನವೀಕೃತ ಕಾರಿನ ಇಂಟಿರಿಯರ್‍‍ನಲ್ಲಿ ಹಲವಾರು ಅಪ್‍‍ಡೇಟ್‍‍ಗಳನ್ನು ಮಾಡಲಾಗಿದೆ. ಇವುಗಳಲ್ಲಿ 11 ಇಂಚಿನ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಸಹ ಸೇರಿದೆ.

ಬಿಡುಗಡೆಯಾಯ್ತು ಪೋರ್ಷೆ ಮಕಾನ್ ನವೀಕೃತ ಕಾರು

ಇದು ಪೋರ್ಷೆ ಕಮ್ಯುನಿಕೇಷನ್ ಮ್ಯಾನೇಜ್‍‍ಮೆಂಟ್ (ಪಿಸಿಎಂ) ಹಾಗೂ ಕನೆಕ್ಟ್ ಪ್ಲಸ್ ಮಾಡ್ಯೂಲ್‌ಗಳನ್ನು ಹೊಂದಿದೆ. ಪೋರ್ಷೆಯ ಈ ವಾಹನವನ್ನು ಕಂಪನಿಯು ಅಭಿವೃದ್ಧಿಪಡಿಸಿರುವ ಆಫ್-ರೋಡ್ ಪ್ರೆಸಿಷನ್ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಮಾಡಲಾಗುತ್ತದೆ. ಇದು ಎಸ್‍‍ಯು‍‍ವಿಯ ಚಾಲನಾ ಅನುಭವವನ್ನು ದಾಖಲಿಸಿ, ವಿಶ್ಲೇಷಿಸುತ್ತದೆ. ಪೋರ್ಷೆ ಕಂಪನಿಯು, ಮಕಾನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಮಕಾನ್ ಮತ್ತು ಮಕಾನ್ ಎಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡುತ್ತದೆ.

ಬಿಡುಗಡೆಯಾಯ್ತು ಪೋರ್ಷೆ ಮಕಾನ್ ನವೀಕೃತ ಕಾರು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಸ್ಟ್ಯಾಂಡರ್ಡ್ ಮಾದರಿಯ ಮಕಾನ್ 2.0ಲೀಟರ್ ಟರ್ಬೋಚಾರ್ಜ್ಡ್ ಇನ್ ಲೈನ್ 4 ಎಂಜಿನ್ ಹೊಂದಿದ್ದು, ಈ ಎಂಜಿನ್ 245 ಬಿಹೆಚ್‌ಪಿ ಹಾಗೂ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮಕಾನ್ ಎಸ್ 3.0 ಲೀಟರ್ ಟ್ವಿನ್ ಟರ್ಬೊ ವಿ6 ಎಂಜಿನ್ ಹೊಂದಿರಲಿದೆ. ಈ ಎಂಜಿನ್ 348 ಬಿಹೆಚ್‌ಪಿ ಹಾಗೂ 450 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳೂ 7 ಸ್ಪೀಡ್‍‍ನ ಪಿಡಿಕೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯೂನಿಟ್ ಹೊಂದಿದ್ದು, ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೂ ಪವರ್ ಕಳುಹಿಸುತ್ತವೆ.

ಬಿಡುಗಡೆಯಾಯ್ತು ಪೋರ್ಷೆ ಮಕಾನ್ ನವೀಕೃತ ಕಾರು

ಮಕಾನ್‌ನ ಎರಡೂ ಮಾದರಿಗಳು ಪೋರ್ಷೆ ಕಂಪನಿಯ ಕ್ರೊನೊ ಪ್ಯಾಕ್‍ ಹೊಂದಿರಲಿದೆ. ನವೀಕರಿಸಿದ ಗೇರ್‌ಬಾಕ್ಸ್‌, ವೇಗವಾದ ಗೇರ್‌ಶಿಫ್ಟ್‌ಗಳು, ಲಾಂಚ್ ಕಂಟ್ರೋಲ್, ಹೆಚ್ಚುವರಿ ಡ್ರೈವಿಂಗ್ ಮೋಡ್ ಹಾಗೂ ಸ್ಪೋರ್ಟಿಯರ್ ರೆಸ್ಪಾನ್ಸ್ ಗಳಂತಹ ಹೆಚ್ಚುವರಿ ಚಾಲನಾ ಹಾಗೂ ಪರ್ಫಾಮೆನ್ಸ್ ಸಾಧನಗಳನ್ನು ನವೀಕೃತ ಮಕಾನ್ ಎಸ್‍‍ಯು‍‍ವಿ ಹೊಂದಿದೆ.

ಬಿಡುಗಡೆಯಾಯ್ತು ಪೋರ್ಷೆ ಮಕಾನ್ ನವೀಕೃತ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2019ರ ಪೋರ್ಷೆ ಮಕಾನ್ ನವೀಕೃತ ಕಾರು, ಈ ಸೆಗ್‍‍ಮೆಂಟಿನಲ್ಲಿರುವ ಪ್ರಮುಖವಾದ ಎಸ್‍‍ಯು‍‍ವಿಯಾಗಿದೆ. ಈ ಎಸ್‍‍ಯು‍‍ವಿ ಹಲವಾರು ಫೀಚರ್‍, ಸ್ಪೋರ್ಟಿ ಸ್ಟೈಲಿಂಗ್, ಪರ್ಫಾಮೆನ್ಸ್ ಹಾಗೂ ವಿಶಿಷ್ಟವಾದ ಪೋರ್ಷೆ ಸ್ಟೈಲಿಂಗ್‍‍ಗಳನ್ನು ಹೊಂದಿದೆ. ಈ ಸ್ಪೋರ್ಟಿ ಎಸ್‍‍ಯು‍‍ವಿ ದೇಶಿಯ ಮಾರುಕಟ್ಟೆಯಲ್ಲಿ ಆಡಿ ಕ್ಯೂ5 ಹಾಗೂ ಜಾಗ್ವಾರ್ ಎಫ್-ಪೇಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2019 Porsche Macan Facelift Launched In India — Prices Start At Rs 69.98 Lakh - Read in kannada
Story first published: Monday, July 29, 2019, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X