ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

ಟಾಟಾ ಮೋಟಾರ್ಸ್ ತನ್ನ ಮೊದಲ ಆವೃತ್ತಿಯ ಎಸ್ಒಯುಎಲ್ (ಎಸ್‍ಯುವಿ ಓನರ್ಸ್ ಯುನೈಟೆಡ್ ಲೀಗ್) ಅಥವಾ ಸೋಲ್ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಗೆ ಇತ್ತೀಚಿಗೆ ಭೂತಾನ್ ನಲ್ಲಿ ಚಾಲನೆ ನೀಡಲಾಯಿತು. ಈ ಯೋಜನೆಯ ಮುಖಾಂತರ ಟಾಟಾ ಕಂಪನಿಯ ಎಸ್‍ಯುವಿ ಮಾದರಿಯಾದ ಹ್ಯಾರಿಯರ್, ಈ ಯೋಜನೆಯಲ್ಲಿ ಸೇರಿಕೊಂಡಿದೆ.

ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

ಟಾಟಾ ಮೋಟಾರ್ಸ್ ನ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಯೂನಿಟ್ ನ ಸೇಲ್ಸ್ ಮಾರ್ಕೆಟಿಂಗ್ ಮತ್ತು ಕಸ್ಟಮರ್ ಸಪೋರ್ಟ್ ನ ಉಪಾಧ್ಯಕ್ಷರಾದ ಎಸ್ ಎನ್ ಬರ್ಮನ್ ರವರು ಮಾತನಾಡಿ, ಪ್ರಾರಂಭವಾದಾಗಿನಿಂದ, ಸೋಲ್ ಜನಪ್ರಿಯವಾಗುತ್ತಿದ್ದು, ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದೆ. ಇದು ಟಾಟಾ ಎಸ್‍ಯುವಿ ಮಾಲೀಕರ ಜೀವನ ಶೈಲಿಯಾಗಲಿದ್ದು, ಈ ಯಾತ್ರೆಯನ್ನು ನಮ್ಮ ಸೋಲ್ ಸದಸ್ಯರಿಗಾಗಿ ಅವರ ಅಡ್ವೆಂಚರ್ ಸ್ಪಿರಿಟ್ ಗಾಗಿ ನೀಡಲಾಗಿದೆ. ಭೂತಾನ್ ನಂತಹ ಸುಂದರ ಕಣಿವೆಯಲ್ಲಿಒಂದೇ ರೀತಿಯ ಮನಸ್ಥಿತಿ ಹೊಂದಿರುವ ಜನಗಳ ಜೊತೆ ಬೆರೆಯಲು ನಮ್ಮ ಗ್ರಾಹಕರಿಗೆ ಅವಕಾಶ ನೀಡಲಾಗಿದೆ.

ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

ಇದೇ ಮೊದಲ ಬಾರಿಗೆ ಈ ರೀತಿಯ ಅವಕಾಶವನ್ನು ನೀಡಲಾಗುತ್ತಿದ್ದು, ಹೊಸದಾಗಿ ಬಿಡುಗಡೆ ಮಾಡಿರುವ ಟಾಟಾ ಹ್ಯಾರಿಯರ್ ಎಸ್‍ಯುವಿಯ ಜೊತೆ ಸೋಲ್ ಅಂತರ್ ರಾಷ್ಟ್ರಿಯ ಆವೃತ್ತಿಯು ಹೊಸ ಅನುಭವವನ್ನು ನೀಡಲಿದ್ದು, ಎಸ್‍ಯುವಿ ವಾಹನಗಳ ಬಗ್ಗೆ ಆಸಕ್ತಿಯನ್ನು ಹೊಂದಿರುವವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ.

ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

ಈ ಪಯಣವು ಸೋಲ್ ಸದಸ್ಯರಿಗೆ ಮರೆಯಲಾರದ ಅನುಭವವನ್ನು ನೀಡಲಿದ್ದು, ಸದಸ್ಯರು ಭೂತಾನ್ ಸುತ್ತ ಮುತ್ತಲಿರುವ ಅನೇಕ ಸುಂದರ ತಾಣಗಳನ್ನು ನೋಡಲಿದ್ದಾರೆ ಎಂದು ತಿಳಿಸಿದರು. ಸೋಲ್ ಎಸ್‍ಯುವಿ ಮಾಲೀಕರುಗಳ ಸಮುದಾಯದ ಯೋಜನೆಯಾಗಿದ್ದು, ಟಾಟಾ, ಎಸ್‍ಯುವಿಗಳ ಮಾಲೀಕರನ್ನು ಒಂದೆಡೆ ಸೇರಿಸುತ್ತದೆ.

ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

ಸೋಲ್ ತನ್ನ ಎಸ್‍ಯುವಿ ಗ್ರಾಹಕರಿಗಾಗಿ ಭಾರತ ಮತ್ತು ಸುತ್ತ ಮುತ್ತಲ ದೇಶಗಳಲ್ಲಿ ಅಡ್ವೆಂಚರ್ ಪಯಣಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಯೋಜನೆಯನ್ನು 2012ರಲ್ಲಿ ಜಾರಿಗೆ ತರಲಾಯಿತು ಮತ್ತು ಸುಮಾರು 13,000 ಸದಸ್ಯರನ್ನು ಹೊಂದಿದೆ. ಸೋಲ್ ಈ ಪಯಣದ ಜೊತೆಗೆ, ಇದರಲ್ಲಿ ಪಾಲ್ಗೊಳುವ ಎಸ್‍ಯುವಿ ವಾಹನಗಳ ಮಾಲೀಕರಿಗಾಗಿ ನಾಣ್ಯಗಳನ್ನು ಮತ್ತು ರೀ-ಡೀಮ್ ಪಾಯಿಂಟ್ ಗಳನ್ನುಬಹುಮಾನದ ರೂಪದಲ್ಲಿ ನೀಡುತ್ತದೆ.

ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

ಇದರ ಜೊತೆಯಲ್ಲಿ ಸೋಲ್ ಸದಸ್ಯರಿಗೆ ಕಾರಿನಲ್ಲಿ ಉಚಿತವಾಗಿ ಪಿಕ್ ಅಪ್, ಡ್ರಾಪ್ ಸೌಲಭ್ಯ ಮತ್ತು ಕಾರನ್ನು ತೊಳೆಯುವ ಸೌಲಭ್ಯಗಳನ್ನು ನೀಡುತ್ತದೆ. ಟಾಟಾ ಮೋಟಾರ್ಸ್ ನ ಸೋಲ್ ಸದಸ್ಯರಿಗಾಗಿ, ಟಾಟಾ ಪ್ರಾಡಕ್ಟ್ ಗಳ ಮೇಲೆ ಆಕರ್ಷಕ ಆಫರ್ ಗಳನ್ನು ನೀಡಲಾಗುವುದು. ಅವುಗಳೆಂದರೆ ಆಕ್ಸೆ ಸರೀಸ್ ಗಳ ಮೇಲೆ 7% ನ ರಿಯಾಯಿತಿ , ಇನ್ಶೂರೆನ್ಸ್ ನವೀಕರಣಗಳ ಮೇಲೆ 10% ಹಾಗೂ ವಾರ್ಷಿಕ ಮೆಂಟೆನೆಸ್ ಮೇಲೆ ಸೌಲಭ್ಯಗಳನ್ನು ನೀಡಲಾಗುವುದು.

ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

ಎಕ್ಸ್ ಟೆಂಡ್ ವಾರಂಟಿ ಮೇಲೆ ಅನೇಕ ಆಫರ್ ಗಳನ್ನು ನೀಡಲಾಗುವುದು. ಸೋಲ್ ರೆಫೆರಲ್ ಬೆನಿಫಿಟ್ ಯೋಜನೆಯಡಿ ಅಮೆಜಾನ್ ನಿಂದ ಗಿಫ್ಟ್ ವೋಚರ್ ಗಳನ್ನು ಸಹ ಪಡೆಯಬಹುದು.

MOST READ: ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಅಂತರ್‍‍ರಾಷ್ಟ್ರೀಯ ಸೋಲ್ ಆವೃತ್ತಿಗೆ ಚಾಲನೆ ನೀಡಿದ ಟಾಟಾ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಹುತೇಕ ವಾಹನಗಳ ತಯಾರಕರು ಎಸ್‍ಯುವಿ ಮಾಲೀಕರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ನೀಡುತ್ತಾರೆ. ಟಾಟಾ ಕಂಪನಿಯು ಸಹ ಅದನ್ನು ಮುಂದುವರಿಸಿದ್ದು, ತನ್ನ ಎಸ್‍ಯುವಿ ಗ್ರಾಹಕರಿಗಾಗಿ ಈಶಾನ್ಯ ಭಾರತದ ಮೂಲಕ ಭೂತಾನ್ ಗೆ ಕರೆದೊಯ್ಯಲಿದೆ. ಈಶಾನ್ಯಭಾರತದ ರಸ್ತೆಗಳಲ್ಲಿ ಓಡಾಡುವುದು ಒಂದು ಸುಂದರ ಅನುಭವ.

Most Read Articles

Kannada
English summary
Tata Flags Off SOUL International First Edition — Bhutan Via The North East - Read in Kannada
Story first published: Thursday, May 2, 2019, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X