ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ನಂತರ ಟಾಟಾ ನೆಕ್ಸಾನ್ ಲಕ್ ಬದಲಾಯ್ತು..!

ಕೆಲವೇ ವರ್ಷಗಳ ಹಿಂದಷ್ಟೇ ಬಹುತೇಕ ವಾಹನ ಖರೀದಿದಾರರು ಸುರಕ್ಷತೆಗಿಂತ ಬೆಲೆ ಮತ್ತು ಮೈಲೇಜ್ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ರು. ಆದ್ರೆ ಇದೀಗ ಕಾಲ ಬದಲಾಗಿದೆ. ಬೆಲೆ ಮತ್ತು ಮೈಲೇಜ್ ಜೊತೆಗೆ ಹೊಸ ವಾಹನದಲ್ಲಿರುವ ಸುರಕ್ಷತೆ ಕುರಿತಂತೆ ಹೆಚ್ಚು ಆಲೋಚನೆ ಮಾಡುತ್ತಿರುವುದು ಇಂದು ಆಟೋ ಉದ್ಯಮದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ.

ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ನಂತರ ಟಾಟಾ ನೆಕ್ಸಾನ್ ಲಕ್ ಬದಲಾಯ್ತು..!

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಯ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಹಾಟ್ ಚೀಪ್ಸ್‌ನಂತೆ ಮಾರಾಟವಾಗುತ್ತಿರುವ ಬಹುತೇಕ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಕಾರುಗಳಿಗೆ ಮಾತ್ರವೇ ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದರಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿರುವ ನೆಕ್ಸಾನ್ ಕಾರು ಇದೀಗ ಮಾರುಕಟ್ಟೆಯಲ್ಲಿ ಗ್ರಾಹಕರ ನೆಚ್ಚಿನ ಮಾದರಿಯಾಗಿ ಹೊರಹೊಮ್ಮಿದೆ.

5 ಸ್ಟಾರ್ ರೇಟಿಂಗ್ ನಂತರ ಟಾಟಾ ನೆಕ್ಸಾನ್ ಲಕ್ ಬದಲಾಯ್ತು..!

ಹೊಸ ಕಾರುಗಳು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಮಾದರಿ ಎಂದು ಕರೆಯಲಾಗುತ್ತದೆ. ಇದರಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿರುವ ಟಾಟಾ ನೆಕ್ಸಾನ್ ಕಾರು ಸದ್ಯ ಸುರಕ್ಷಾ ವಿಚಾರವಾಗಿ ಸದ್ದು ಮಾಡುತ್ತಿರುವುದಲ್ಲದೇ ಮಾರಾಟದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

5 ಸ್ಟಾರ್ ರೇಟಿಂಗ್ ನಂತರ ಟಾಟಾ ನೆಕ್ಸಾನ್ ಲಕ್ ಬದಲಾಯ್ತು..!

ಇದಕ್ಕೆ ಸಾಕ್ಷಿ ಎಂಬಂತೆ, 2017ರ ಸೆಪ್ಟೆಂಬರ್ ಅವಧಿಯಲ್ಲಿ ಪ್ರಥಮ ಬಾರಿಗೆ ಬಿಡುಗಡೆಯಾದಾಗ ನೆಕ್ಸಾನ್ ಕಾರಿಗೆ ಇದ್ದ ಬೇಡಿಕೆ ಪ್ರಮಾಣಕ್ಕಿಂತ 2018ರ ಡಿಸೆಂಬರ್ ಅವಧಿಯಲ್ಲಿ ಘೋಷಣೆಯಾದ 5 ಸ್ಟಾರ್ ರೇಟಿಂಗ್ ನಂತರದ ನೆಕ್ಸಾನ್ ಕಾರು ಮಾರಾಟ ಪ್ರಮಾಣದಲ್ಲಿ ಶೇ.20ರಷ್ಟು ಏರಿಕೆಯಾಗಿದ್ದು, ರೇಟಿಂಗ್ ಸಿಗುವುದಕ್ಕೂ ಮುನ್ನ ತಿಂಗಳಿಗೆ 3 ರಿಂದ 4 ಸಾವಿರ ಕಾರು ಮಾರಾಟವಾಗಿದ್ದರೆ ರೇಟಿಂಗ್ ನಂತರ ತಿಂಗಳಿಗೆ ಸರಾಸರಿಯಾಗಿ 5 ಸಾವಿರಕ್ಕಿಂತೂ ಹೆಚ್ಚು ಕಾರುಗಳು ಮಾರಾಟವಾಗಿವೆ.

5 ಸ್ಟಾರ್ ರೇಟಿಂಗ್ ನಂತರ ಟಾಟಾ ನೆಕ್ಸಾನ್ ಲಕ್ ಬದಲಾಯ್ತು..!

ಇದು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡುತ್ತಿರುವ ಟಾಟಾ ಸಂಸ್ಥೆಯು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ದೇಶಿಯವಾಗಿ ತಯಾರಿಯಾದ ಅಗ್ಗದ ಬೆಲೆಯ ಕಾರುಗಳಲ್ಲೂ 5 ಸ್ಟಾರ್ ರೇಟಿಂಗ್ ಒದಗಿಸುತ್ತಿರುವ ಏಕೈಕ ಆಟೋ ಉತ್ಪಾದನಾ ಸಂಸ್ಥೆಯಾಗಿದ್ದು, ಮುಂಬರುವ ದಿನಗಳಲ್ಲಿ ಪ್ರತಿ ಕಾರು ಕೂಡಾ 5 ಸ್ಟಾರ್ ರೇಟಿಂಗ್ ಹೊಂದಿರುವುದಾಗಿ ರತನ್ ಟಾಟಾ ಅವರೇ ಭರವಸೆ ನೀಡಿರುವುದು ಟಾಟಾ ಕಾರುಗಳ ಆಯ್ಕೆಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

5 ಸ್ಟಾರ್ ರೇಟಿಂಗ್ ನಂತರ ಟಾಟಾ ನೆಕ್ಸಾನ್ ಲಕ್ ಬದಲಾಯ್ತು..!

ಇನ್ನು #SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೊಸ ಕಾರುಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಸಂಸ್ಥೆಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ. ಪ್ರತಿ ಹೊಸ ಕಾರು ಮಾದರಿಗಳಿಗೂ ಸುರಕ್ಷೆ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ಟಾಟಾ ನೆಕ್ಸಾನ್ ಕಾರು ಪಡೆದುಕೊಂಡಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ.

Most Read Articles

Kannada
English summary
Tata Nexon Sales Up By 20% After Global NCAP 5-Star Rating Announcement. Read in Kannada.
Story first published: Wednesday, March 13, 2019, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X