ಸೆಡಾನ್ ಸೆಗ್‍ಮೆಂಟ್‍ನಲ್ಲಿ ಮಾರುತಿ ಸುಜುಕಿ ಡಿಜೈರ್ ಪಾರುಪತ್ಯ
ದೇಶಿಯ ಮಾರುಕಟ್ಟೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಸೆಡಾನ್‍ಗಳ ಪಟ್ಟೆಯನ್ನು ಬಿಡುಗಡೆ ಮಾಡಲಾಗಿವೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್ ಮತ್ತು ಹೋಂಡಾ ಅಮೇಜ್ ಕಳೆದ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಸೆಡಾನ್‍ಗಳಲ್ಲಿ ಅಗ್ರಸ್ಥಾನವನ್ನು ವಶಪಡಿಸಿಕೊಂಡಿವೆ.

ಮಾರುತಿ ಸುಜುಕಿ ಡಿಜೈರ್ ಕಳೆದ ಸೆಪ್ಟಂಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಆಗಿದೆ. ಮಾರುತಿ ಸುಜುಕಿಯಿಂದ ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಹಿಂದಿನ ತಿಂಗಳು 15,662 ಯುನಿಟ್ ಮಾರಾಟವಾಗಿದೆ. ಮಾರುತಿ ಆಲ್ಟೋ ಮತ್ತು ಸ್ವಿಫ್ಟ್ ಹ್ಯಾಚ್‍ಬ್ಯಾಕ್‍ಗಳನ್ನು ಹಿಂದಿಕ್ಕಿ ಡಿಜೈರ್ ಸೆಡಾನ್ ಹೆಚ್ಚು ಮಾರಾಟವಾದ ಕಾರುಗಳ ಪಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ.

ಮಾರುತಿ ಡಿಜೈರ್ ನಂತರದ ಎರಡನೇ ಸ್ಥಾನವನ್ನು ಹೋಂಡಾ ಅಮೇಜ್ ಪಡೆದುಕೊಂಡಿದೆ. ಹೋಂಡಾ ಅಮೇಜ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 4,823 ಯುನಿಟ್‍ಗಳು ಮಾರಾಟವಾಗುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಆಗಸ್ಟ್ ತಿಂಗಳಲ್ಲಿ 4,534 ಯುನಿಟ್‍ಗಳು ಮಾರಾಟವಾಗಿವೆ. ಆಗಸ್ಟ್ ತಿಂಗಳನ್ನು ಸೆಪ್ಟಂಬರ್ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆಯಾಗಿದೆ.

ಅಗ್ರ ಎರಡು ಸ್ಥಾನಗಳಲ್ಲಿ ಬದಲಾಗದೆ ಇದ್ದರೂ ನಂತರದ ಸ್ಥಾನದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಪಟ್ಟಿಯಲ್ಲಿ ಮೂರನೇಯ ಸ್ಥಾನವನ್ನು ಹೋಂಡಾ ಸಿಟಿ ಪಡೆದುಕೊಂಡಿದೆ. ಹೋಂಡಾ ಸಿಟಿ ಆಗಸ್ಟ್ ತಿಂಗಳಲ್ಲಿ ಐದನೇ ಸ್ಥಾನದಲ್ಲಿತ್ತು. ಹೋಂಡಾ ಸಿಟಿ ಸೆಪ್ಟೆಂಬರ್ ತಿಂಗಳಲ್ಲಿ 1,819 ಯುನಿಟ್‍ಗಳ ಮಾರಾಟವಾಗಿವೆ. ಹೋಂಡಾ ಸಿಟಿ ಸೆಡಾನ್, ಹ್ಯುಂಡೈ ವರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್‍ಗಿಂತ ಮುಂದಿದೆ.

ಹ್ಯುಂಡೈ ವರ್ನಾ ಮತ್ತು ಮಾರುತಿ ಸಿಯಾಜ್ ಸೆಡಾನ್‍ಗಳ ನಾಲ್ಕನೇ ಸ್ಥಾನಕ್ಕೆ ಪೈಪೋಟಿಯನ್ನು ನೀಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹ್ಯುಂಡೈ ವರ್ನಾ 1,738 ಯುನಿಟ್‍ಗಳು ಮಾರಾಟಗಿವೆ. ಮಾರುತಿ ಸುಜುಕಿ ಸಿಯಾಜ್ ಸೆಪ್ಟೆಂಬರ್ ತಿಂಗಳಲ್ಲಿ 1,715 ಯುನಿಟ್‍ಗಳು ಮಾರಾಟವಾಗಿವೆ. ವಿಭಾಗದ ಎಲ್ಲಾ ಮೂರು ಮಾದರಿಗಳಿಗೆ ಆಗಸ್ಟ್ ತಿಂಗಳಿಂದ ಸುಧಾರಣೆಯಾಗಿದೆ.

ಆಗಸ್ಟ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಹ್ಯುಂಡೈ ಎಕ್ಸ್‌ಸೆಂಟ್ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಹ್ಯುಂಡೈ ಎಕ್ಸ್‌ಸೆಂಟ್ ಸೆಪ್ಟೆಂಬರ್ ತಿಂಗಳಲ್ಲಿ 1,164 ಯುನಿಟ್‍ಗಳು ಮಾರಾಟವಾಗಿವೆ. ಈ ಸೆಡಾನ್ ಆಗಸ್ಟ್ ತಿಂಗಳಲ್ಲಿ 1,316 ಯುನಿಟ್‍ಗಳು ಮಾರಾಟವಾಗಿತ್ತು, ಈ ಕಾಂಪ್ಯಾಕ್ಟ್ ಸೆಡಾನ್‍ನ ಮಾಸಿಕ ಮಾರಾಟದಲ್ಲಿ ಕುಸಿತವಾಗಿವೆ.
| ಸ್ಥಾನ | ಮಾದರಿಗಳು | ಮಾರಾಟ ಪ್ರಮಾಣ |
| 1 | ಮಾರುತಿ ಸುಜುಕಿ ಡಿಜೈರ್ | 15,662 |
| 2 | ಹೋಂಡಾ ಅಮೇಜ್ | 4,823 |
| 3 | ಹೋಂಡಾ ಸಿಟಿ | 1,819 |
| 4 | ಹ್ಯುಂಡೈ ವರ್ನಾ | 1,738 |
| 5 | ಮಾರುತಿ ಸಿಯಾಜ್ | 1,715 |
| 6 | ಹ್ಯುಂಡೈ ಎಕ್ಸ್‌ಸೆಂಟ್ | 1,164 |
| 7 | ಸ್ಕೋಡಾ ರಾಪಿಡ್ | 816 |
| 8 | ಟಾಟಾ ಟೀಗೊರ್ | 737 |
| 9 | ಫೋರ್ಡ್ ಆಸ್ಪೈರ್ | 483 |
| 10 | ಫೋಕ್ಸ್ ವ್ಯಾಗನ್ ವೆಂಟೊ | 455 |

ಹ್ಯುಂಡೈ ಎಕ್ಸ್‌ಸೆಂಟ್ ನಂತರ ಸ್ಥಾನವನ್ನು ಸ್ಕೋಡಾ ರಾಪಿಡ್ ಪಡೆದುಕೊಂಡಿದೆ. ಹಿಂದಿನ ಸೆಪ್ಟೆಂಬರ್ ತಿಂಗಳಲ್ಲಿ ಸ್ಕೋಡಾ ರಾಪಿಡ್ 816 ಯುನಿಟ್‍ಗಳ ಮಾರಾಟವಾಗಿದೆ. ನಂತರದ ಸ್ಥಾನಗಳನ್ನು ಕ್ರಮವಾಗಿ ಟಾಟಾ ಟಿಗೋರ್, ಫೋರ್ಡ್ ಆಸ್ಪೈರ್ ಮತ್ತು ಪೋಕ್ಸ್ ವ್ಯಾಗನ್ ವೆಂಟೊ ಪಡೆದುಕೊಂಡಿವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಟಾಟಾ ಟಿಗೋರ್ 737 ಯುನಿಟ್‍ಗಳು ಮಾರಾಟವಾಗಿವೆ, ಫೋರ್ಡ್ ಅಸ್ಪೈರ್ 483 ಯುನಿಟ್‍ಗಳು ಮಾರಾಟವಾಗಿದ್ದರೆ ಪೋಕ್ಸ್ ವ್ಯಾಗನ್ ವೆಂಟೊ ಸೆಡಾನ್‍ನ 455 ಯುನಿಟ್‍ಗಳು ಮಾರಾಟವಾಗಿವೆ. ವಿಶೇಷವೆಂದರೆ ಟಾಪ್-10 ಪಟ್ಟಿಯಲ್ಲಿ ಹೊಸ ಸೇರ್ಪಡೆಯಾಗಿವೆ. ಆಗಸ್ಟ್ ತಿಂಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಟೊಯೋಟಾ ಎಟಿಯೋಸ್ ಅನ್ನು ಬದಲಿಸುವ ಮೂಲಕ ಪಟ್ಟೆಯಲ್ಲಿ ಹೊಸ ಸೇರ್ಪಡೆಯಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಸೆಡಾನ್‍ಗಳ ಪಟ್ಟಿಯಲ್ಲಿ ಆಗ್ರಸ್ಥಾನದಲ್ಲಿ ಯಾವುದೇ ಬದಲಾವಣೆಗಳಗಿಲ್ಲ ಆದರೆ ನಂತರದ ಸ್ಥಾನದಲ್ಲಿ ಬದಲಾವಣೆಗಳಾಗಿವೆ. ಆಟೋಮೊಬೈಲ್ ಉದ್ಯಮವು ಮಂದಗತಿಯಿಂದಾಗಿ ಎರಡೂ ಕಂಪನಿಗಳು ಭಾರಿ ಕುಸಿತವನ್ನು ಎದುರಿಸುತ್ತಿದ್ದರೂ, ಮಾರುತಿ ಸುಜುಕಿ ಡಿಜೈರ್ ಮತ್ತು ಹೋಂಡಾ ಅಮೇಜ್ ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಗಳಲ್ಲಿ ಅತ್ಯಂತ ಜನಪ್ರಿಯ ಆಯ್ಕೆಯಾಗಿ ಮುಂದುವರೆದಿವೆ.


Click it and Unblock the Notifications








