ಒಂದು ಬಾರಿಯ ಚಾರ್ಜ್‍ಗೆ ಸುಮಾರು 230ಕಿ.ಮೀ ರೇಂಜ್ ಹೊಂದಿರಲಿದೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಟಾಟಾ ಮೋಟಾರ್ಸ್ ಸಂಸ್ಥೆಯು ಜೆನೆವಾ ಮೋಟಾರ್ ಶೋನಲ್ಲಿ ಮಾರುತಿ ಇಗ್ನಿಸ್ ಮತ್ತು ಮಹೀಂದ್ರಾ ಕೆಯುವಿ100 ಕಾರುಗಳುಗೆ ಪೈಪೋಟಿ ನೀಡಲು ಹಾರ್ನ್‍ಬಿಲ್ ಎಂಬ ಹೊಸ ಕಾರನ್ನು ಪ್ರದರ್ಶಿಸಲಾಗಿದ್ದು, ಈ ಕಾರು ಟಾಟಾ ಟಿಯಾಗೊ ಕಾರಿನಲ್ಲಿ ಅಳವಡಿಸಲಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊತ್ತು ಬರಲಿದೆ.

ಸುಮಾರು 230ಕಿ.ಮೀ ರೇಂಜ್ ನೀಡುತ್ತಂತೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಆಧೂನಿಕ ಪ್ಲಾಟ್‍‍ಪಾರ್ಮ್‍ನ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಹಾರ್ನ್‍ಬಿಲ್ ಮೈಕ್ರೋ ಎಸ್‍ಯುವಿ ಐಸಿಇ ಮತ್ತು ಎಲೆಕ್ಟ್ರಿಕ್ ಪವರ್‍‍ಟ್ರೈನ್ ಅನ್ನು ಪಡೆದುಕೊಳ್ಳಲಿದೆ. ಈ ಆಯ್ಕೆಗಳನ್ನು ನೀವು ಟಾಟಾ ಮೋಟಾರ್ಸ್ ನಿರ್ಮಾಣ ಮಾಡುತ್ತಿರುವ ಹೊಸ ಆಲ್‍ಟ್ರೋಜ್ ಕಾರಿನಲ್ಲಿಯು ಸಹ ಕಾಣಬಹುದಾಗಿದೆ.

ಸುಮಾರು 230ಕಿ.ಮೀ ರೇಂಜ್ ನೀಡುತ್ತಂತೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಎಲೆಕ್ಟ್ರಿಕ್ ಮಾದರಿಯ ಟಾಟಾ ಹಾರ್ನ್‍ಬಿಲ್ ಕಾರುಗಳು ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ, ಇನ್ನಿತರೆ ಫೀಚರ್‍‍ಗಳಾದ ಎಸಿ, ಪವರ್ ವಿಂಡೋಸ್ ಮತ್ತು ಲೈಟ್ಸ್ ಹಾಗು ಸ್ಮಾರ್ಟ್‍‍ಫೋನ್ ಅಪ್ಲಿಕೆಷನ್‍ಗಳನ್ನು ಪಡೆದಿರುವುದಲ್ಲದೆಯೆ ಇನ್ನಿತರೆ ಆಧೂನಿಕ ಕಾರುಗಳಲ್ಲಿ ನೀಡಲಾಗುತ್ತಿರುವ ಇಂಟರ್‍‍‍ನೆಟ್ ಕನೆಕ್ಟಿವಿಟಿಯನ್ನು ಸಹ ಪಡೆದುಕೊಳ್ಳಲಿದೆ.

ಸುಮಾರು 230ಕಿ.ಮೀ ರೇಂಜ್ ನೀಡುತ್ತಂತೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಹಾರ್ನ್‌ಬಿಲ್ ಕಾರು ಮಾದರಿಯನ್ನು ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಗ್ರಾಹಕರ ಬೇಡಿಕೆಯ ಅನುಸಾರವಾಗಿ ನಿರ್ಮಾಣ ಮಾಡಲಾಗಿದ್ದು, ನೆಕ್ಸಾನ್ ಕಾರು ಮಾದರಿಯಿಂದ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆಯಲಾಗಿದೆ.

ಸುಮಾರು 230ಕಿ.ಮೀ ರೇಂಜ್ ನೀಡುತ್ತಂತೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಮತ್ತೊಂದು ವಿಚಾರ ಅಂದ್ರೆ, ಹ್ಯಾರಿಯರ್ ಮಾದರಿಯಲ್ಲೇ ಹೊಸ ಹಾರ್ನ್‌ಬಿಲ್ ಕೂಡಾ ಇಂಪ್ಯಾಕ್ಟ್ 2.0 ಡಿಸೈನ್ ಲಾಂಗ್ವೆಜ್ ಅಡಿ ನಿರ್ಮಾಣವಾಗಿದ್ದು, ಟಾಟಾ ಮುಂಬರುವ ಬಹುತೇಕ ಕಾರುಗಳು ಇದೇ ಪ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿರುವುದು ಕಾರಿನ ವಿನ್ಯಾಸಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗುತ್ತಿವೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಸುಮಾರು 230ಕಿ.ಮೀ ರೇಂಜ್ ನೀಡುತ್ತಂತೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಒಟ್ಟಿನಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತಿರುವ ಟಾಟಾ ಸಂಸ್ಥೆಯು ಎಸ್‌ಯುವಿ ಮತ್ತು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಮತ್ತಷ್ಟು ಹೊಸ ಆಯ್ಕೆ ನೀಡುವ ತವಕದಲ್ಲಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಸುಮಾರು 230ಕಿ.ಮೀ ರೇಂಜ್ ನೀಡುತ್ತಂತೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಹೀಗಾಗಿ ಹಾರ್ನ್‌ಬಿಲ್ ಕಾರು ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವ ಸಾಧ್ಯತೆಗಳಿದ್ದು, ನೆಕ್ಸಾನ್ ಕಾರಿನಲ್ಲಿ ಬಳಕೆ ಮಾಡಲಾಗಿರುವ 1.2-ಲೀಟರ್ ರೆವೆಟ್ರೊನ್ ಪೆಟ್ರೋಲ್ ಎಂಜಿನ್ ಮತ್ತು 1.05-ಲೀಟರ್ ರಿವೊಟ್ರೊಕ್ ಡೀಸೆಲ್ ಎಂಜಿನ್ ಅನ್ನು ಹಾರ್ನ್‌ಬಿಲ್‌ನಲ್ಲೂ ಜೋಡಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

MOST READ: ದಿನಂಪ್ರತಿ ಲಿಫ್ಟ್ ಕೇಳುತ್ತಿದ್ದವನಿಗೆ ಅವನ ಸ್ನೇಹಿತರ ಗುಂಪು ಮಾಡಿದ್ದೇನು ಗೊತ್ತಾ?

ಸುಮಾರು 230ಕಿ.ಮೀ ರೇಂಜ್ ನೀಡುತ್ತಂತೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಆದರೆ ವರದಿಗಳ ಪ್ರಕಾರ ಇವಿ ಮಾದರಿಯ ಟಾಟಾ ಹಾರ್ನ್‍ಬಿಲ್ ಕಾರುಗಳು ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಸಹಕರಿಸುವ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಹ್ಯಾರಿಯರ್ ಕಾರಿನಲ್ಲಿ ಕಾಣಬಹುದಾದ ಡಿಜಿಟಲ್ ಅನಾಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಳ್ಳಲಿದೆ. ಹಾಗೆಯೆ ಈ ಕಾರನ್ನು ಮೊದಲಿಗೆ ಮುಂದಿನ ವರ್ಷ ಅಂದರೆ 2020ರಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ ಮೇಳದ ನಂತರವೇ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಸುಮಾರು 230ಕಿ.ಮೀ ರೇಂಜ್ ನೀಡುತ್ತಂತೆ ಟಾಟಾ ಹಾರ್ನ್‍ಬಿಲ್ ಇವಿ ಕಾರು

ಟಾಟಾ ಹಾರ್ನ್‍ಬಿಲ್ ಇವಿ ಕಾರಿನ ಬೆಲೆ

ಈ ಮೂಲಕ ಮಹೀಂದ್ರಾ ಸಂಸ್ಥೆಯ ಕೆಯುವಿ100 ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿರುವ ಹಾರ್ನ್‌ಬಿಲ್ ಇವಿ ಕಾರು ಮಾದರಿಯು ರೂ. 10 ಲಕ್ಷದಿಂದ ರೂ.12 ಲಕ್ಷ ಬೆಲೆಗಳೊಂದಿಗೆ ರಸ್ತೆಗಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Source: GaadiWaadi

Most Read Articles

Kannada
English summary
Upcoming Tata Hornbill Electric Car Gives 230 Kilometer Range For Every Single Charge. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X